logo
ಕನ್ನಡ ಸುದ್ದಿ  /  ಮನರಂಜನೆ  /  Seetha Rama Serial: ಶ್ಯಾಮನಿಗೆ ಸಾಥ್‌ ನೀಡಲು ಹೋಗಿ ಸೀತಾಳ ವಿರುದ್ಧವೇ ನಿಂತ ರಾಮ್! ಸೀತೆಗೆ ಸಂಕಷ್ಟ ತಂದೊಡುತ್ತಾ ಸಿಹಿ ಹುಟ್ಟಿನ ರಹಸ್ಯ?

Seetha Rama Serial: ಶ್ಯಾಮನಿಗೆ ಸಾಥ್‌ ನೀಡಲು ಹೋಗಿ ಸೀತಾಳ ವಿರುದ್ಧವೇ ನಿಂತ ರಾಮ್! ಸೀತೆಗೆ ಸಂಕಷ್ಟ ತಂದೊಡುತ್ತಾ ಸಿಹಿ ಹುಟ್ಟಿನ ರಹಸ್ಯ?

Sep 06, 2024 06:20 PM IST

google News

ಸೀತಾ ರಾಮ ಧಾರಾವಾಹಿಯಲ್ಲಿ ಸಿಹಿ ಹುಟ್ಟಿನ ವಿಚಾರಕ್ಕೆ ಟ್ವಿಸ್ಟ್‌ಗಳು ಎದುರಾಗುತ್ತಿವೆ. ಡಾ. ಮೇಘಶ್ಯಾಮನೇ ಸಿಹಿಯ ಅಪ್ಪ ಅನ್ನೋ ಸತ್ಯ ಸೀತಾಗೂ ಗೊತ್ತಾಗಿದೆ

    • ಸೀತಾ ರಾಮ ಧಾರಾವಾಹಿಯಲ್ಲಿ ಸಿಹಿ ಹುಟ್ಟಿನ ವಿಚಾರಕ್ಕೆ ಟ್ವಿಸ್ಟ್‌ಗಳು ಎದುರಾಗುತ್ತಿವೆ. ಡಾ. ಮೇಘಶ್ಯಾಮನೇ ಸಿಹಿಯ ಅಪ್ಪ ಅನ್ನೋ ಸತ್ಯ ಸೀತಾಗೂ ಗೊತ್ತಾಗಿದೆ. ಆ ಮಗುವನ್ನು ಹುಡುಕಿಕೊಡುವ ಕೆಲಸ ನನ್ನದು ಎಂದಿದ್ದಾನೆ ರಾಮ್.‌
ಸೀತಾ ರಾಮ ಧಾರಾವಾಹಿಯಲ್ಲಿ ಸಿಹಿ ಹುಟ್ಟಿನ ವಿಚಾರಕ್ಕೆ ಟ್ವಿಸ್ಟ್‌ಗಳು ಎದುರಾಗುತ್ತಿವೆ. ಡಾ. ಮೇಘಶ್ಯಾಮನೇ ಸಿಹಿಯ ಅಪ್ಪ ಅನ್ನೋ ಸತ್ಯ ಸೀತಾಗೂ ಗೊತ್ತಾಗಿದೆ
ಸೀತಾ ರಾಮ ಧಾರಾವಾಹಿಯಲ್ಲಿ ಸಿಹಿ ಹುಟ್ಟಿನ ವಿಚಾರಕ್ಕೆ ಟ್ವಿಸ್ಟ್‌ಗಳು ಎದುರಾಗುತ್ತಿವೆ. ಡಾ. ಮೇಘಶ್ಯಾಮನೇ ಸಿಹಿಯ ಅಪ್ಪ ಅನ್ನೋ ಸತ್ಯ ಸೀತಾಗೂ ಗೊತ್ತಾಗಿದೆ

Seetha Rama Serial: ಸೀತಾ ರಾಮ ಸೀರಿಯಲ್‌ನಲ್ಲೀಗ ಸಿಹಿ ಹುಟ್ಟಿನ ರಹಸ್ಯವೇ ಕಗ್ಗಂಟಾಗಿ ಪರಿಣಮಿಸಿದೆ. ವೀಕ್ಷಕರಿಗೆ ಡಾ. ಮೇಘಶ್ಯಾಮನೇ ಸಿಹಿಯ ಅಪ್ಪ ಅನ್ನೋ ವಿಚಾರ ಗೊತ್ತಾಗಿದೆ. ಆದರೆ, ಸೀತಾ ಮೇಘಶ್ಯಾಮನ ಪತ್ನಿ ಅಲ್ಲ ಎಂಬುದೂ ತಿಳಿದಿದೆ. ಈ ನಡುವೆಯೇ ತನಗೆ ಓರ್ವ ಮಗಳಿದ್ದಳು, ಅವಳು ಇನ್ನೂ ಬದುಕಿದ್ದಾಳೆ ಅನ್ನೋ ವಿಚಾರವೀಗ ಮೇಘಶ್ಯಾಮ್‌ಗೂ ಅರಿವಿಗೆ ಬಂದಿದೆ. ಅದನ್ನು ರಾಮನ ಮುಂದೆಯೂ ಹೇಳಿಕೊಂಡು ಕಣ್ಣೀರಾಗಿದ್ದಾನೆ.

ತಂದೆಯ ಅನಾರೋಗ್ಯ ಸಮಸ್ಯೆ ನಿವಾರಣೆಗೆ, ಹಣಪಡೆದು ಬಾಡಿಗೆ ತಾಯ್ತನದ ಮೂಲಕ ಮಗು ಮಾಡಿಕೊಳ್ಳುತ್ತಾಳೆ ಸೀತಾ. ಆದರೆ, ಅದೇ ಬಾಡಿಗೆ ತಾಯ್ತನವೇ ಆಕೆ ಪಾಲಿಗೆ ಮುಳ್ಳಾಗುತ್ತದೆ. ಅಪ್ಪನಿಂದಲೂ ಕಡೆಗಣಿಸಲ್ಪಟ್ಟು, ತನ್ನದಲ್ಲದಿದ್ದರೂ ಕರುಳ ಬಳ್ಳಿಯನ್ನು ಜತೆಗಿಟ್ಟುಕೊಂಡು, ಜೋಪಾನ ಮಾಡಿ ಸಿಹಿಯನ್ನು ಬೆಳೆಸಿದ್ದಾಳೆ ಸೀತಾ. ಇದೀಗ ಇದೇ ತಾಯಿಗೆ ಒಂದಾದ ಮೇಲೊಂದು ಕಂಟಕಗಳು ಎದುರಾಗುತ್ತಿವೆ.

ಯಾವ ವಿಚಾರವನ್ನು ಇಲ್ಲಿಯವರೆಗೂ ಸೀತಾ ಮುಚ್ಚಿಟ್ಟಿದ್ದಳೋ ಇದೀಗ ಅದೇ ವಿಚಾರ ಬಹಿರಂಗವಾಗಿ ಗೊತ್ತಾಗುವ ಕಾಲ ಹತ್ತಿರ ಬಂದಿದೆ. ಡಾ. ಅನಂತಲಕ್ಷ್ಮೀಗೆ ಈ ವಿಚಾರ ನಮ್ಮಲ್ಲಿಯೇ ಇರಲಿ ಎಂದು ಸೀತಾ ಮನವಿ ಮಾಡಿದ್ದಾಳೆ. ಆದರೆ, ಮೇಘಶ್ಯಾಮ್‌ಗೆ ಈ ಸತ್ಯ ಗೊತ್ತಾಗಿದೆಯಾದರೂ ಸಿಹಿಯೇ ತನ್ನ ಮಗಳೆಂದು ಗೊತ್ತಾಗಿಲ್ಲ. ಈ ಸಂಕಟವನ್ನೇ ರಾಮ್‌ ಬಳಿಯೂ ಮೇಘಶ್ಯಾಮ್‌ ಹೇಳಿಕೊಂಡಿದ್ದಾನೆ. ನನ್ನ ಮಗಳು ಬದುಕಿದ್ದಾಳೆ ಎಂದಿದ್ದಾನೆ.

ರಾಮ್‌ ಮುಂದೆ ಮೇಘಶ್ಯಾಮ್‌ ಮನದಾಳ

ಸರೋಗಸಿಯಲ್ಲಿ ನಮ್ಮ ಮಾಹಿತಿಯನ್ನು ಮಗು ಹೆರೋರಿಗಾಗಲಿ, ನಮಗಾಗಲಿ ರಿವೀಲ್‌ ಮಾಡಲ್ಲ. ಒಟ್ಟಿನಲ್ಲಿ ಆ ಮಗು ಬದುಕಿದೆ. ಅದು ನನ್ನ ಮಗು ಕಣೋ. ಆ ಮಗು ನನಗೆ ಬೇಕು. ಮಗು ಮಾಡಿಕೊಳ್ಳುವ ವಿಚಾರಕ್ಕೆ ಶಾಲಿನಿಗೂ ಕನ್ವಿನ್ಸ್‌ ಮಾಡಿದ್ದೆ ಆದರೆ ಅವಳಿಂದ ಯಾವುದೇ ಉತ್ತರ ಸಿಕ್ಕಿರಲಿಲ್ಲ. ಈಗ ಮಗು ಬದುಕಿದೆ ಅಂದರೆ ಅದರಿಂದ ನಾನು ಹೇಗೋ ದೂರವಿರಲಿ ಎಂದಿದ್ದಾನೆ ಮೇಘಶ್ಯಾಮ. ಇದಕ್ಕೆ ಶ್ಯಾಮ ನಾನು ನಿನಗೆ ಸಹಾಯ ಮಾಡ್ತಿನಿ ಕಣೋ ಎಂದಿದ್ದಾನೆ.

ಮಗು ಹುಡುಕಿ ಕೊಡುವ ಪಣ ತೊಟ್ಟ ರಾಮ್‌

ಆ ಮಗು ಬದುಕಿದೆ, ಆ ವಿಚಾರ ನಿನ್ನ ಗಮನಕ್ಕಿದೆ ಎಂದಾದರೆ ಇದರ ಅರ್ಥ ಆ ಮಗು ನಿನಗೆ ಸಿಕ್ಕೇ ಸಿಗುತ್ತೆ ಅಂತ ಅರ್ಥ. ಲೀಗಲ್‌ ಆಗಿ ವಿಚಾರ ಮಾಡಿದರೂ, ಆ ತಾಯಿ ಆ ಮಗುವನ್ನು ಇಟ್ಟುಕೊಳ್ಳಲು ಆಗಲ್ಲ. ಕಾನೂನಿನ ರೀತಿ ಹೋದರೆ ಸರೋಗಸಿ ಎಂಬುದು ಕಾನೂನುಬಾಹಿರ. ಬಯೋಲಾಜಿಕಲ್‌ ಆಗಿ ನೋಡದರೆ ನೀನು ಮತ್ತು ಶಾಲಿನಿ ಆ ಮಗುವಿನ ಅಪ್ಪ ಅಮ್ಮ. ಇದೆಲ್ಲ ನೋಡಿದರೆ ಆ ಮಗು ನಿನಗೆ ಸೇರಬೇಕಾಗಿದ್ದು. ನಿನ್ನ ಮಗು ನಿನಗೇ ಸೇರುವಂತೆ ನಾನು ಮಾಡ್ತಿನಿ ಎಂದಿದ್ದಾನೆ ರಾಮ್.

ಸಂಕಷ್ಟದಲ್ಲಿ ಸೀತಾ

ಇದೇ ವಿಚಾರವನ್ನು ಸೀತಾಳ ಮುಂದೆ ಬಂದು ಮಾತನಾಡಿದ್ದಾನೆ ರಾಮ್. ಈ ಸರೋಗಸಿ ಅಮ್ಮಂದಿರನ್ನು ನಂಬೋದು ಎಷ್ಟು ಕಷ್ಟ ಅಲ್ವಾ? ಬಾಡಿಗೆ ತಾಯಿ ಮೇಘಶ್ಯಾಮ್‌ಗೆ ಮೋಸ ಮಾಡಿದ್ದಾರೆ‌. ಮಗು ತೀರಿಕೊಂಡಿದೆ ಅಂತ ಹೇಳಿ ಅವರೇ ಮಗುವನ್ನು ಇರಿಸಿಕೊಂಡಿದ್ದಾರೆ ಎಂದು ಸೀತಾ ಬಳಿ ಹೇಳಿಕೊಂಡಿದ್ದಾನೆ ರಾಮ್.‌ ಇದಕ್ಕೆ ಉತ್ತರವಾಗಿ, ಆ ತಾಯಿ ಗತಿ ಏನಾಗಿರಬೇಡ. ನನ್ನದೇ ಮಗು ಅಂತ ಸಾಕಿದ ಆ ತಾಯಿಯ ಸ್ಥಿತಿ ವಿಚಾರ ಮಾಡಿದ್ದೀರಾ? ಎಂದ ಸೀತಾಗೆ, ಸರೋಗೇಟ್‌ ಅಮ್ಮ ನಿಜವಾದ ಅಮ್ಮ ಆಗಲು ಸಾಧ್ಯನಾ ಎಂದೂ ರಾಮ್‌ ಹೇಳಿದ್ದಾನೆ.

ಸೀತಾ ರಾಮ ಧಾರಾವಾಹಿ ಪಾತ್ರವರ್ಗ

ನಿರ್ದೇಶಕ: ಮಧುಸೂಧನ್‌

ಗಗನ್‌ ಚಿನ್ನಪ್ಪ: ಶ್ರೀರಾಮ (ನಾಯಕ)

ವೈಷ್ಣವಿ ಗೌಡ: ಸೀತಾ (ನಾಯಕ)

ರೀತು ಸಿಂಗ್: ಸಿಹಿ (ಸೀತಾ ಮಗಳು)

ಅಶೋಕ ಶರ್ಮಾ: ಅಶೋಕ (ಶ್ರೀರಾಮನ ಪ್ರಾಣ ಸ್ನೇಹಿತ)

ಭಾರ್ಗವಿ: ಪೂಜಾ ಲೋಕೇಶ್‌ (ಶ್ರೀರಾಮನ ಚಿಕ್ಕಮ್ಮ)

ಮುಖ್ಯಮಂತ್ರಿ ಚಂದ್ರು: ಸೂರ್ಯ ಪ್ರಕಾಶ್‌ ದೇಸಾಯಿ (ಶ್ರೀರಾಮನ ತಾತ)

ಶ್ವೇತಾ ಶಂಕರಪ್ಪ: ಪ್ರಿಯಾ (ಸೀತಾಳ ಸ್ನೇಹಿತೆ)

ವಿಕಾಸ್‌ ಕಾರ್‌ಗೋಡ್:‌ ಲಾಯರ್‌ ರುದ್ರಪ್ರತಾಪ್

ಸತೀಶ್‌ ಚಂದ್ರ: ಚರಣ್‌. ಡಿ

ಪೂರ್ಣಚಂದ್ರ ತೇಜಸ್ವಿ: ವಿಶ್ವಜೀತ್‌ (ಶ್ರೀರಾಮನ ಚಿಕ್ಕಪ್ಪ)

ಜಯದೇವ್‌ ಮೋಹನ್:‌ ಸತ್ಯಜೀತ್‌ (ಶ್ರೀರಾಮನ ಚಿಕ್ಕಪ್ಪ)

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ