Ramachari Serial: ಅಣ್ಣಾಜಿ ಮನೆಯಲ್ಲಿ ಕಿರಿ ಸೊಸೆಯನ್ನು ನೋಡಿ ಕಣ್ತುಂಬಿಕೊಂಡ ಜಾನಕಿ; ಚಾರುಗೆ ಸಮಾಧಾನ
Nov 12, 2024 01:05 PM IST
ಅಣ್ಣಾಜಿ ಮನೆಯಲ್ಲಿ ಕಿರಿ ಸೊಸೆಯನ್ನು ನೋಡಿ ಕಣ್ತುಂಬಿಕೊಂಡ ಜಾನಕಿ
- ರಾಮಾಚಾರಿ ಧಾರಾವಾಹಿಯಲ್ಲಿ ಜಾನಕಿ ರುಕ್ಕುವನ್ನು ನೋಡಲು ಅವಳ ಕೋಣೆಗೆ ಬಂದಿದ್ದಾಳೆ. ರಾಮಾಚಾರಿ, ಮುರಾರಿ, ಚಾರು ಹೀಗೆ ಇನ್ನಷ್ಟು ಬಲ ಹೆಚ್ಚುತ್ತಲೇ ಸಾಗಿದೆ. ಹೀಗಿರುವಾಗ ಚಾರು ರುಕ್ಕುಗೆ ಸಮಾಧಾನ ಆಗುವ ರೀತಿ ನೋಡಿಕೊಂಡಿದ್ದಾಳೆ.
ರಾಮಾಚಾರಿ ಧಾರಾವಾಹಿಯಲ್ಲಿ ಈಗ ಅತ್ತೆ ಸೊಸೆ ಒಂದಾಗಿದ್ದಾರೆ. ಕೃಷ್ಣ ಇಷ್ಟು ದಿನ ಪ್ರೀತಿ ಮಾಡುತ್ತಿದ್ದ ಹುಡುಗಿ ಯಾರು ಎಂದು ಎಲ್ಲರಿಗೂ ಅನುಮಾನ ಇತ್ತು. ಆದರೆ ಅದು ಗೊತ್ತಾದಾಗಿನಿಂದ ಅವಳನ್ನು ಈ ಮನೆಯ ಸೊಸೆ ಮಾಡಿಕೊಳ್ಳಬೇಕು ಎಂದು ಸಾಕಷ್ಟು ಕಷ್ಟಪಡುತ್ತಿದ್ದಾರೆ. ಇಡೀ ಮನೆಯವ ಶ್ರಮ ಈಗ ರುಕ್ಕು ಮೇಲೆ ಇದೆ. ಕಟುಕರ ಕೈಯ್ಯಿಂದ ರುಕ್ಕುವನ್ನು ಬಚಾವ್ ಮಾಡಿಕೊಂಡು ತಂದು ಕೃಷ್ಣನಿಗೆ ಮದುವೆ ಮಾಡಿಸಬೇಕು ಎಂದು ಎಲ್ಲರೂ ಅಂದುಕೊಂಡಿದ್ದಾರೆ. ಆದರೆ ಈಗಾಗಲೇ ರುಕ್ಕು ಮದುವೆ ಬೇರೆಯವನ ಜೊತೆ ಫಿಕ್ಸ್ ಆಗಿದೆ.
ರುಕ್ಕು ಹತ್ತಿರ ನಿಂತುಕೊಂಡು ಕೆಲಸದವಳು ಇನ್ನು ಮುಂದೆ ನೀವು ಬಚಾವ್ ಆಗೋದು ಹೇಗೆ? ನಾಳೆ ಆದರ್ಶ ಬರುತ್ತಾನೆ. ಆಗ ನೀವು ಅವನು ಹೇಳಿದ ಹಾಗೇ ಕೇಳಬೇಕು. ಮದುವೆಗೆ ಇನ್ನು 2 ದಿನ ಮಾತ್ರ ಬಾಕಿ ಇದೆ. ಹೀಗಿರುವಾಗ ನೀವು ಏನು ಮಾಡೂಕೂ ಆಗೋದಿಲ್ಲ ಎಂದು ಹೇಳುತ್ತಾಳೆ. ಆದ್ರೆ ಚಾರು ಭರವಸೆ ಕಳೆದುಕೊಳ್ಳುವುದಿಲ್ಲ. ಅವಳು ಮಾತಾಡ್ತಾಳೆ. ಇಲ್ಲ ಎಲ್ಲವೂ ಆಗುತ್ತೆ ನೋಡ್ತಾ ಇರಿ ಎಂದು. ನಂತರ ಡೋರ್ ನಾಕ್ ಆಗುತ್ತದೆ. ಹೋಗಿ ನೋಡಿದರೆ ಜಾನಕಿ ಅಮ್ಮ ಬಂದಿರುತ್ತಾರೆ. ಜಾನಕಿ ಬಂದನ್ನು ನೋಡಿ ಒಳಗಡೆ ಕರೆಯುತ್ತಾರೆ.
ಆಗ ಜಾನಕಿ ಬಂದು ರುಕ್ಕುವನ್ನು ತುಂಬಾ ಪ್ರೀತಿಯಿಂದ ಮಾತಾಡಿಸುತ್ತಾಳೆ. ರುಕ್ಕು ಎಂದು ಹೇಳುತ್ತಾ ಅಪ್ಪಿಕೊಳ್ಳುತ್ತಾಳೆ. ಇವರು ಯಾರು ಎಂದು ಪ್ರಶ್ನೆ ಮಾಡಿದಾಗ ನಾವು ಪೇಟೆಯಿಂದ ಬಂದ ಅಡುಗೆಯವರು ಎಂದು ಸುಳ್ಳು ಹೇಳುತ್ತಾರೆ. ರುಕ್ಕು ಬಗ್ಗೆ ಬಹಳ ಒಳ್ಳೊಳ್ಳೆ ಮಾತುಗಳನ್ನು ಆಡುತ್ತಾ ಇರುತ್ತಾರೆ. ಆಗ ರುಕ್ಕುಗೆ ಅನುಮಾನ ಬರುತ್ತದೆ. ನಂತರ ಚಾರು ಸತ್ಯ ಹೇಳುತ್ತಾಳೆ. ಇವರು ನನ್ನ ಅತ್ತೆಮ್ಮ, ಇನ್ಮೇಲೆ ನಿನಗೂ ಇವರು ಅತ್ತೆ. ರಾಜಮಾತೆ ಕೃಷ್ಣನ ಅಮ್ಮ ಇವರು ಎಂದು ಹೇಳುತ್ತಾಳೆ. ಆ ಮಾತನ್ನು ಕೇಳಿ ರುಕ್ಕುಗೆ ತುಂಬಾ ಸಂತೋಷ ಆಗುತ್ತದೆ. ಅವಳು ಮತ್ತೊಮ್ಮೆ ಜಾನಕಿಯನ್ನು ತಬ್ಬಿಕೊಳ್ಳುತ್ತಾಳೆ.
ರಾಮಾಚಾರಿ ಧಾರಾವಾಹಿ
ರಾಮಾಚಾರಿ ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುವ ಧಾರಾವಾಹಿಯಾಗಿದ್ದು, ಇದರಲ್ಲಿ ರಾಮಾಚಾರಿ ಹಾಗೂ ಕಿಟ್ಟಿ ಎಂಬ ಎರಡು ಪಾತ್ರಗಳನ್ನು ಒಬ್ಬರೇ ನಿಭಾಯಿಸುತ್ತಿದ್ದಾರೆ. ದ್ವಿಪಾತ್ರದಲ್ಲಿ ಅಭಿನಯಿಸುತ್ತಿರುವ ಏಕೈಕ ಧಾರಾವಾಹಿ ಇದಾಗಿದ್ದು ಜನಮನ್ನಣೆ ಗಳಿಸಿದೆ. ಇದರಲ್ಲಿ ಗೌರವಯುತ ಕುಟುಂಬಕ್ಕೆ ಒಬ್ಬ ಶ್ರೀಮಂತರ ಮನೆ ಮಗಳು ಚಾರು ಮದುವೆ ಆಗಿ ಬರುತ್ತಾಳೆ. ನಂತರದ ದಿನಗಳಲ್ಲಿ ಅವಳು ಯಾವ ರೀತಿ ತನ್ನ ಸಂಸಾರಕ್ಕೆ ಹೊಂದಿಕೊಳ್ಳುತ್ತಾಳೆ. ಯಾವ ರೀತಿ ಮನೆತನದ ಗೌರವ ಕಾಪಾಡುತ್ತಾಳೆ ಎನ್ನುವುದೇ ಈ ಧಾರಾವಾಹಿಯ ಮೂಲ ಕಥೆಯಾಗಿದೆ.
ರಾಮಾಚಾರಿ ಧಾರಾವಾಹಿ ಪಾತ್ರವರ್ಗ
ಮೌನ ಗುಡ್ಡೆ ಮನೆ - ಚಾರು
ರಿತ್ವಿಕ್ ಕ್ರಪಾಕರ್ - ರಾಮಾಚಾರಿ
ರಿತ್ವಿಕ್ ಕ್ರಪಾಕರ್ - ಕೃಷ್ಣ (ಕಿಟ್ಟಿ)
ಚಿ ಗುರುದತ್ - ಜಯಶಂಕರ್
ಶಂಕರ್ ಅಶ್ವಥ್ - ನಾರಾಯಣಾಚಾರಿ
ಐಶ್ವರ್ಯ ವಿನಯ್ - ವೈಶಾಖ
ಅಂಜಲಿ ಸುಧಾಕರ್ - ಜಾನಕಿ