Ramachari Serial: ಅಪಾಯದಲ್ಲಿರುವ ಚಾರುವನ್ನು ಕಾಪಾಡಲು ಬಂದಿದ್ದಾನೆ ರಾಮಾಚಾರಿ; ರುಕ್ಕು ಮನೆಯಲ್ಲಿ ಏನಾಗಿದೆ ನೋಡಿ
ರಾಮಾಚಾರಿ ಧಾರಾವಾಹಿಯಲ್ಲಿ ಚಾರು ಮತ್ತು ರುಕ್ಕು ಇಬ್ಬರೂ ಒಂದಾಗಿದ್ದಾರೆ. ಆದರೆ ಇತ್ತ ಮನೆಯವರಿಗೆ ಆತಂಕ ಆಗುತ್ತಿದೆ. ಚಾರು ಅಣ್ಣಾಜಿ ಮನೆಯಲ್ಲಿ ಸಿಕ್ಕಿ ಹಾಕಿಕೊಂಡಿದ್ದಾಳೆ ಎಂದು ಮುರಾರಿಗೆ ಮಾತ್ರ ಗೊತ್ತಿದೆ. ಆದರೆ ಈಗ ಅಲ್ಲಿಗೆ ರಾಮಾಚಾರಿ ಕೂಡ ಬಂದಿದ್ದಾನೆ.
ಚಾರುವನ್ನು ಹುಡುಕಿಕೊಂಡು ಯಾವುದೋ ಹೆಂಗಸು ಬಂದಿದ್ದಾಳೆ. ನೀನ್ಯಾಕೆ ನಾಟಕ ಮಾಡ್ತಾ ಇದ್ದೀಯಾ? ಈ ಹುಡುಗಿ ಯಾರೂ ಅಂತ ನಿನಗೆ ಗೊತ್ತು ತಾನೇ ಎಂದು ಆ ಹೆಂಗಸು ರುಕ್ಕುವನ್ನು ಪ್ರಶ್ನೆ ಮಾಡಿದ್ದಾಳೆ. ಆಗ ರುಕ್ಕು ಯಾರದು ಎಂದು ಮತ್ತೆ ಪ್ರಶ್ನೆ ಮಾಡುತ್ತಾಳ. “ನೀನು ಈ ರೀತಿ ಹೇಳ್ತೀಯಾ ಅಂತ ನನಗೆ ಮೊದಲೇ ಗೊತ್ತಿತ್ತು, ಅದಕ್ಕಾಗೇ ನಾನು ಅವಳ ಫೋಟೋ ಕೂಡ ತಂದಿದಿನಿ. ಅವಳು ಎಲ್ಲಿದಾಳೆ? ಅವಳು ಯಾರು ಅನ್ನೋದನ್ನು ನೀನು ಈಗ ಹೇಳಲೇಬೇಕು” ಎಂದು ಆ ಹೆಂಗಸು ಗದರುತ್ತಾಳೆ. ಆದ್ರೆ ಇದ್ಯಾವುದೂ ನನಗೆ ಸಂಬಂಧವೇ ಇಲ್ಲ ಎನ್ನುವ ರೀತಿಯಲ್ಲಿ ರುಕ್ಕು ನಿಂತಿರುತ್ತಾಳೆ.
ಹೊರಗಿನಿಂದ ನನಗೇನೂ ಗೊತ್ತಿಲ್ಲ ಎಂದು ಅವಳು ನಾಟಕ ಮಾಡುತ್ತಾ ಇದ್ರೂ, ಒಳಗಡೆಯಿಂದ ಅವಳಿಗೆ ಭಯ ಆಗಿದೆ. ಅವಳ ಕಣ್ಣುಗಳಲ್ಲಿ ಆ ಭಯ ಎದ್ದು ಕಾಣುತ್ತಿದೆ. ಅದಾದ ನಂತರ ಚಾರು ಫೋಟೋ ತೋರಿಸುತ್ತಾಳೆ. ಆಗ ರುಕ್ಕು" ಇವಳು ಯಾರು ಅಂತ ನನಗೆ ಗೊತ್ತಿಲ್ಲ" ಎಂದು ಸುಳ್ಳು ಹೇಳಿರುತ್ತಾಳೆ. ಅಷ್ಟರಲ್ಲಿ ಚಾರು ಒಳಗಡೆಯಿಂದ ಬರುತ್ತಾಳೆ. ಅವಳು ವಾಷ್ ರೂಮ್‌ಗೆ ಹೋದಾಗ ಆ ಹೆಂಗಸು ಬಂದು ಪ್ರಶ್ನೆ ಮಾಡಿರುತ್ತಾಳೆ. ಚಾರು ಬಂದ ತಕ್ಷಣ ಆ ಹೆಂಗಸು “ಅರೇ! ಮನೆಯಲ್ಲೇ ಇವಳನ್ನು ಇಟ್ಟುಕೊಂಡು ನನ್ನ ಕಣ್ಣೆದುರೇ ಎಷ್ಟು ಸುಳ್ಳು ಹೇಳ್ತೀಯಾ. ಇರು ಅಣ್ಣಾಜಿನಾ ಕರಿತಿನಿ” ಎಂದು ಕೂಗಿತ್ತಾಳೆ. ಕೂಗಿದಾಗ ರುಕ್ಕುಗೆ ಭಯ ಆಗುತ್ತದೆ.
ಇನ್ನು ಇತ್ತ ಮುರಾರಿ ತುಂಬಾ ಭಯದಲ್ಲಿ ಇರುತ್ತಾನೆ. ಅತ್ಗೆ ಹೋಗಿ ಸಿಕ್ಕಾಕಿಕೊಂಡಿದ್ದಾಳೆ ಎನ್ನೋ ಆಲೋಚನೆಯಲ್ಲಿ ಅವನಿಗೆ ಏನು ಮಾಡಬೇಕು ಎಂದೇ ತೋಚುತ್ತಿಲ್ಲ. ಹೀಗಿರುವಾಗ ಅವನು ತುಂಬಾ ಭಯದಿಂದ ರಾಮಾಚಾರಿ ಕಾಲ್ ಪಿಕ್ ಮಾಡುತ್ತಾನೆ. ಆ ಕಡೆಯಿಂದ ರಾಮಾಚಾರಿ ಕಾಲ್ ರಿಸೀವ್ ಮಾಡಿ, ಚಾರು ಎಲ್ಲಿದ್ದಾಳೆ ಎಂದು ಹೇಳಿದ ತಕ್ಷಣ ಇವನು ಅಳತೊಡಗುತ್ತಾನೆ. ಈಗ ರಾಮಾಚಾರಿ ಹಾಗೂ ಜಾನಕಿ ಇಬ್ಬರೂ ಅಲ್ಲಿಗೆ ಬಂದಿದ್ದಾರೆ.
ರಾಮಾಚಾರಿ ಧಾರಾವಾಹಿ
ರಾಮಾಚಾರಿ ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುವ ಧಾರಾವಾಹಿಯಾಗಿದ್ದು, ಇದರಲ್ಲಿ ರಾಮಾಚಾರಿ ಹಾಗೂ ಕಿಟ್ಟಿ ಎಂಬ ಎರಡು ಪಾತ್ರಗಳನ್ನು ಒಬ್ಬರೇ ನಿಭಾಯಿಸುತ್ತಿದ್ದಾರೆ. ದ್ವಿಪಾತ್ರದಲ್ಲಿ ಅಭಿನಯಿಸುತ್ತಿರುವ ಏಕೈಕ ಧಾರಾವಾಹಿ ಇದಾಗಿದ್ದು ಜನಮನ್ನಣೆ ಗಳಿಸಿದೆ. ಇದರಲ್ಲಿ ಗೌರವಯುತ ಕುಟುಂಬಕ್ಕೆ ಒಬ್ಬ ಶ್ರೀಮಂತರ ಮನೆ ಮಗಳು ಚಾರು ಮದುವೆ ಆಗಿ ಬರುತ್ತಾಳೆ. ನಂತರದ ದಿನಗಳಲ್ಲಿ ಅವಳು ಯಾವ ರೀತಿ ತನ್ನ ಸಂಸಾರಕ್ಕೆ ಹೊಂದಿಕೊಳ್ಳುತ್ತಾಳೆ. ಯಾವ ರೀತಿ ಮನೆತನದ ಗೌರವ ಕಾಪಾಡುತ್ತಾಳೆ ಎನ್ನುವುದೇ ಈ ಧಾರಾವಾಹಿಯ ಮೂಲ ಕಥೆಯಾಗಿದೆ.
ರಾಮಾಚಾರಿ ಧಾರಾವಾಹಿ ಪಾತ್ರವರ್ಗ
ಮೌನ ಗುಡ್ಡೆ ಮನೆ - ಚಾರು
ರಿತ್ವಿಕ್ ಕ್ರಪಾಕರ್ - ರಾಮಾಚಾರಿ
ರಿತ್ವಿಕ್ ಕ್ರಪಾಕರ್ - ಕೃಷ್ಣ (ಕಿಟ್ಟಿ)
ಚಿ ಗುರುದತ್ - ಜಯಶಂಕರ್
ಶಂಕರ್ ಅಶ್ವಥ್ - ನಾರಾಯಣಾಚಾರಿ
ಐಶ್ವರ್ಯ ವಿನಯ್ - ವೈಶಾಖ
ಅಂಜಲಿ ಸುಧಾಕರ್ - ಜಾನಕಿ