Ramachari Serial: ಮನೆಯೊಡತಿ ಅನುಮಾನಕ್ಕೆ ಸರಿಯಾಗಿ ಉತ್ತರಿಸಿದ ಜಾನಕಿ; ರಾಮಾಚಾರಿ, ಮುರಾರಿ ಕೆಲಸ ಶುರು
ರಾಮಾಚಾರಿ ಧಾರಾವಾಹಿಯಲ್ಲಿ ರಾಮಾಚಾರಿ, ಮುರಾರಿ ಇಬ್ಬರೂ ಈಗ ಸ್ತ್ರೀ ವೇಷದಲ್ಲಿ ಕಾಣಿಸಿಕೊಂಡಿದ್ದಾರೆ. ರುಕ್ಕು ಮತ್ತು ಚಾರುವನ್ನು ಬಚಾವ್ ಮಾಡುವ ಸಲುವಾಗಿ ರಾಮಾಚಾರಿ ಮಾಡಿದ ಉಪಾಯ ಇದು.
ರಾಮಾಚಾರಿ ಧಾರಾವಾಹಿಯಲ್ಲಿ ಚಾರುವನ್ನು ಹಾಗೂ ರುಕ್ಕುವನ್ನು ಕಾಪಾಡಿಕೊಂಡು ಬರಲು ಹೋಗಿದ್ದಾರೆ. ಆದರೆ ಅಣ್ಣಾಜಿ ಮನೆಯಿಂದ ಅವರಿಬ್ಬರನ್ನು ಅಷ್ಟು ಸುಲಭವಾಗಿ ಕರೆದುಕೊಂಡು ಬರಲು ಸಾಧ್ಯವಿಲ್ಲ. ಆ ಕಾರಣಕ್ಕಾಗಿ ರಾಮಾಚಾರಿ ಬೇರೆ ಬೇರೆ ರೀತಿಯ ಉಪಾಯ ಮಾಡಿದ್ದಾನೆ. ಅವನು ಮಾಡಿದ ಉಪಾಯವನ್ನು ಜಾನಕಿ ಹಾಗೂ ಮುರಾರಿ ಇಬ್ಬರೂ ಮೆಚ್ಚಿಕೊಂಡು ಸಹಾಯ ಮಾಡುತ್ತಿದ್ದಾರೆ. ಅವರೆಲ್ಲರೂ ಮದುವೆಗೆ ಅಡುಗೆ ಮಾಡಲು ಬಂದವರಂತೆ ನಾಟಕ ಮಾಡುತ್ತಿದ್ದಾರೆ. ಇನ್ನು ಆ ಮನೆ ಒಡತಿ ಬಂದು ಅವರನ್ನು ಅನುಮಾನದಿಂದ ನೋಡುತ್ತಾಳೆ. ಅವಳು ಆ ರೀತಿ ನೋಡಿದರೂ ಸಹ ಇವರೆಲ್ಲರೂ ಸಹ ಮಾತಿನಲ್ಲೇ ಆ ಒಡತಿಯನ್ನು ಯಾಮಾರಿಸುತ್ತಾರೆ.
ನೀವೆಲ್ಲ ಯಾರು ಎಂದು ಪ್ರಶ್ನೆ ಮಾಡುತ್ತಾಳೆ. ಆಗ ಅವರೆಲ್ಲರೂ ಉತ್ತರಿಸುತ್ತಾರೆ. ನಾವೆಲ್ಲ ಅಡುಗೆ ಮಾಡಲು ಬಂದವರು. ಈ ಮನೆಯಲ್ಲಿ ಮದುವೆ ಇದೆ ಎಂದು ಗೊತ್ತಾಯ್ತು ಹಾಗಾಗಿ ಬರುವ ನೆಂಟರಿಗೆ ಊಟ ಮಾಡಿ ಹಾಕಲು ನಮ್ಮನ್ನು ಕರೆಸಿಕೊಂಡಿದ್ದಾರೆ ಎಂದು ಅವರು ಹೇಳುತ್ತಾರೆ. ಇನ್ನು ಮೂರೂ ಜನ ಬಂದಿರೋದು ಅಡುಗೆ ಕೆಲಸಕ್ಕಾ? ಎಂದು ಮತ್ತೊಮ್ಮೆ ಪ್ರಶ್ನೆ ಮಾಡಿದಾಗ, ಮೂವರು ತಾವು ಏನೇನು ಮಾಡುತ್ತೇವೆ ಎಂದು ಹೇಳುತ್ತಾರೆ. ಅಷ್ಟೇ ಅಲ್ಲದೆ ಮುರಾರಿ ಒಮ್ಮೆ ಮನೆಯನ್ನೆಲ್ಲ ತೋರಿಸಿಕೊಡಿ ಎಂದು ಹೇಳುತ್ತಾನೆ. ಅವನು ಮಾತನ್ನು ಕೇಳಿ ಮತ್ತೆ ಅನುಮಾನ ಬರುತ್ತದೆ.
ನೀವು ಅಡುಗೆ ಮಾಡುವವರಾದರೆ ಯಾಕೆ ನಿಮಗೆ ಮನೆಯನ್ನೆಲ್ಲ ತೋರಿಸಬೇಕು? ಎಂದು ಪ್ರಶ್ನೆ ಮೂಡುತ್ತದೆ. ಆಗ ಜಾನಕಿ ಹೇಗೋ ಮಾಡಿ ಅವಳ ವಿಚಾರವನ್ನು ಬದಲಿಸುತ್ತಾಳೆ. ನಮಗೆ ಎಲ್ಲವೂ ವಾಸ್ತು ಪ್ರಕಾರ ಇರಬೇಕಾಗುತ್ತದೆ. ಆ ಕಾರಣಕ್ಕಾಗಿ ನಾವು ಮನೆ ನೋಡಬೇಕು ಎಂದು ಹೇಳಿದ್ದು. ಮತ್ತೇನೂ ಇಲ್ಲ ಎಂದು ಹೇಳುತ್ತಾಳೆ.
ರಾಮಾಚಾರಿ ಧಾರಾವಾಹಿ
ರಾಮಾಚಾರಿ ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುವ ಧಾರಾವಾಹಿಯಾಗಿದ್ದು, ಇದರಲ್ಲಿ ರಾಮಾಚಾರಿ ಹಾಗೂ ಕಿಟ್ಟಿ ಎಂಬ ಎರಡು ಪಾತ್ರಗಳನ್ನು ಒಬ್ಬರೇ ನಿಭಾಯಿಸುತ್ತಿದ್ದಾರೆ. ದ್ವಿಪಾತ್ರದಲ್ಲಿ ಅಭಿನಯಿಸುತ್ತಿರುವ ಏಕೈಕ ಧಾರಾವಾಹಿ ಇದಾಗಿದ್ದು ಜನಮನ್ನಣೆ ಗಳಿಸಿದೆ. ಇದರಲ್ಲಿ ಗೌರವಯುತ ಕುಟುಂಬಕ್ಕೆ ಒಬ್ಬ ಶ್ರೀಮಂತರ ಮನೆ ಮಗಳು ಚಾರು ಮದುವೆ ಆಗಿ ಬರುತ್ತಾಳೆ. ನಂತರದ ದಿನಗಳಲ್ಲಿ ಅವಳು ಯಾವ ರೀತಿ ತನ್ನ ಸಂಸಾರಕ್ಕೆ ಹೊಂದಿಕೊಳ್ಳುತ್ತಾಳೆ. ಯಾವ ರೀತಿ ಮನೆತನದ ಗೌರವ ಕಾಪಾಡುತ್ತಾಳೆ ಎನ್ನುವುದೇ ಈ ಧಾರಾವಾಹಿಯ ಮೂಲ ಕಥೆಯಾಗಿದೆ.
ರಾಮಾಚಾರಿ ಧಾರಾವಾಹಿ ಪಾತ್ರವರ್ಗ
ಮೌನ ಗುಡ್ಡೆ ಮನೆ - ಚಾರು
ರಿತ್ವಿಕ್ ಕ್ರಪಾಕರ್ - ರಾಮಾಚಾರಿ
ರಿತ್ವಿಕ್ ಕ್ರಪಾಕರ್ - ಕೃಷ್ಣ (ಕಿಟ್ಟಿ)
ಚಿ ಗುರುದತ್ - ಜಯಶಂಕರ್
ಶಂಕರ್ ಅಶ್ವಥ್ - ನಾರಾಯಣಾಚಾರಿ
ಐಶ್ವರ್ಯ ವಿನಯ್ - ವೈಶಾಖ
ಅಂಜಲಿ ಸುಧಾಕರ್ - ಜಾನಕಿ