ಅಮೃತಧಾರೆ ಸೆಪ್ಟೆಂಬರ್ 17ರ ಸಂಚಿಕೆ: ಗಂಡ-ಹೆಂಡತಿ ಜಗಳವನ್ನು ಇನ್ನೊಬ್ಬರ ಬಳಿ ಹೇಳಿಕೊಳ್ಳಬೇಡಿ, ಮೈದುನನಿಗೆ ಅತ್ತಿಗೆಯಿಂದ ದಾಂಪತ್ಯ ಪಾಠ
Sep 17, 2024 09:51 AM IST
ಅಮೃತಧಾರೆ ಸೆಪ್ಟೆಂಬರ್ 17ರ ಸಂಚಿಕೆ: ಗಂಡ-ಹೆಂಡತಿ ಜಗಳವನ್ನು ಇನ್ನೊಬ್ಬರ ಬಳಿ ಹೇಳಿಕೊಳ್ಳಬೇಡಿ ಎಂದು ಭೂಮಿಕಾ ಪಾರ್ಥನಿಗೆ ಬುದ್ದಿ ಹೇಳಿದ್ದಾಳೆ
- ಅಮೃತಧಾರೆ ಸೆಪ್ಟೆಂಬರ್ 17ರ ಸಂಚಿಕೆ: ಜೀ ಕನ್ನಡ ವಾಹಿನಿಯ ಅಮೃತಧಾರೆ ಧಾರಾವಾಹಿಯ ಸೆಪ್ಟೆಂಬರ್ 17ರ ಸಂಚಿಕೆಯಲ್ಲಿ ಮಲ್ಲಿಗೆ ಸೀಮಂತ ನಡೆಸಲು ದಿವಾನ್ ಮನೆಯಲ್ಲಿ ಸಿದ್ಧತೆ ನಡೆದಿದೆ. ಇದೇ ಸಮಯದಲ್ಲಿ ಗಂಡ-ಹೆಂಡತಿ ಜಗಳವನ್ನು ಇನ್ನೊಬ್ಬರ ಬಳಿ ಹೇಳಿಕೊಳ್ಳಬೇಡಿ ಎಂದು ಭೂಮಿಕಾ ಪಾರ್ಥನಿಗೆ ಒಂದಿಷ್ಟು ದಾಂಪತ್ಯ ರಹಸ್ಯಗಳನ್ನು ಹೇಳಿಕೊಟ್ಟಿದ್ದಾರೆ.
ಅಮೃತಧಾರೆ ಸೆಪ್ಟೆಂಬರ್ 17ರ ಸಂಚಿಕೆ: ಗೌತಮ್ ದಿವಾನ್ ಮನೆಯಲ್ಲಿ ಸೀಮಂತ ಸಂಭ್ರಮ ಮನೆಮಾಡಿದೆ. ತಾತಾ ಪ್ರೀತಿಯಿಂದ ರವೆ ಉಂಡೆ, ಚಕ್ಕುಲಿ ಕೊಟ್ಟಾಗ ತಿನ್ನೋದು ಬೇಡ ಅಂದುಕೊಂಡ್ರೂ ತಿನ್ನುವ ಅನಿವಾರ್ಯತೆ ಜೈದೇವ್‌ಗೆ. ಮನಸ್ಸಲ್ಲಿ ಬಯ್ಯುತ್ತ ಅಲ್ಲಿ ಇರುತ್ತಾನೆ. ಅಜ್ಜ ಕೊಟ್ಟ ರವೆ ಉಂಡೆಯನ್ನು ಮಲ್ಲಿ ತುಂಬಾ ಖುಷಿಯಿಂದ ತಿನ್ನುತ್ತಾಳೆ. ಇದೇ ಸಮಯದಲ್ಲಿ ಅಪೇಕ್ಷಾ ಮತ್ತು ಪಾರ್ಥ ರೆಡಿಯಾಗುತ್ತಿದ್ದಾರೆ. "ಬನ್ನಿ ಮನೆಯವರಿಗೆ ಹೆಲ್ಪ್ ಮಾಡೋಣ" ಎಂದು ಪಾರ್ಥ ಹೇಳುತ್ತಾನೆ. "ಅದಕ್ಕೆ ಕೆಲಸದವರು ಇದ್ದರಲ್ವ" ಎನ್ನುತ್ತಾಳೆ ಅಪೇಕ್ಷಾ. ಇದನ್ನು ಕೇಳಿ ಪಾರ್ಥನಿಗೆ ಕಸಿವಿಸಿಯಾಗುತ್ತದೆ. "ಬರ್ತಾ ಬರ್ತಾ ನೀವು ಏನೋ ಬದಲಾಗ್ತಾ ಇದ್ದೀರಿ. ಮಾಮ್ ಜತೆ ಸೇರಿಕೊಂಡು ಮಾಮ್ ರೀತಿ ಆಗ್ತಾ ಇದ್ದೀರಿ. ಅದು ಮಾಮ್‌ಗೆ ಓಕೆ. ನಿಮಗೆ ಇದೆಲ್ಲ ಸೂಟ್ ಆಗೋಲ್ಲ. ಲುಕ್ ಕೂಡ ಮಾಮ್ ರೀತಿಯೇ ಕೊಡ್ತಾ ಇದ್ದೀರಿ. ನೀವು ಅಪೇಕ್ಷಾ ರೀತಿ ಇದ್ದರೆ ಚೆನ್ನ. ಮಾಮ್ ಬದಲು ನೀವು ಅತ್ತಿಗೆನಾ ಕಾಪಿ ಮಾಡಿ. ಅತ್ತಿಗೆ ನೋಡಿ ಮನೆಯಲ್ಲಿ ಹೇಗೆ ಕೆಲಸ ಮಾಡ್ತಾ ಇದ್ದಾರೆ. ಕೆಲಸ ಮಾಡಿದ್ರೆ ನಮ್ಮ ಕಾಲು ಸವೆದು ಹೋಗುತ್ತಾ?" ಎಂದು ಪಾರ್ಥ ಹೇಳಿದಾಗ ಅಪೇಕ್ಷಾಳಿಗೆ ಕೋಪ ಬರುತ್ತದೆ. "ಯಾರದ್ದೋ ಉದಾಹರಣೆ ನೀಡಿ ನನಗೆ ಕಂಪೇರ್ ಮಾಡಬೇಡಿ. ಅಕ್ಕನಿಗೆ ಒಳ್ಳೆಯವರಂತೆ ಕಾಣುವ ಚಟ. ನನಗೆ ಆಕೆಯನ್ನು ಹೋಲಿಸಬೇಡಿ" ಎಂದು ಅಪೇಕ್ಷಾ ಹೇಳುತ್ತಾಳೆ. ಇದನ್ನು ಕೇಳಿ ಪಾರ್ಥನಿಗೆ ಕೋಪ ಬರುತ್ತದೆ. "ನಾನು ಚೇಂಜ್ ಆಗಿದ್ದೇನೆ ಅಂದುಕೊಂಡರೆ ಅದು ನಿಮ್ಮ ತಪ್ಪು. ಹೆಲ್ಪ್ ಮಾಡಬೇಕೆನಿಸಿದರೆ ಹೋಗಿ ಮಾಡಿ. ನನಗೆ ಉಪದೇಶ ಮಾಡಬೇಡಿ" ಎಂದು ಹೇಳುತ್ತಾಳೆ.
ಸೀಮಂತ ಸಮಾರಂಭಕ್ಕೆ ಸಿದ್ಧವಾಗುತ್ತಿದೆ ಗೌತಮ್ ದಿವಾನ್ ಮನೆ
ಮಲ್ಲಿ ಸೀಮಂತಕ್ಕೆ ಭೂಮಿಕಾ ಗಡಿಬಿಡಿಯಲ್ಲಿ ಎಲ್ಲಾ ರೆಡಿ ಮಾಡುತ್ತಿದ್ದಾರೆ. ಆನಂದ್ ಮತ್ತು ಅಪರ್ಣಾ ಆಗಮಿಸುತ್ತಾರೆ. ಭೂಮಿಕಾ ಮಾಡಿರುವ ಡೆಕೊರೇಷನ್ ನೋಡಿ ಖುಷಿಪಡುತ್ತಾರೆ. ಅಜ್ಜಮ್ಮನ ಜತೆ ಒಂದಿಷ್ಟು ಉಭಯ ಕುಶಲೋಪರಿ ವಿಚಾರ ಇರುತ್ತದೆ. ಇದಾದ ಬಳಿಕ ಗೌತಮ್ ಜತೆ ಮಾತನಾಡಲು ಹೋಗುತ್ತಾರೆ.
ಮನೆಯ ಹೊರಗಡೆ ಕುಳಿತು ಪಾರ್ಥ ಚಿಂತೆಯಲ್ಲಿ ಹೊರಗೆ ಕುಳಿತಿದ್ದಾನೆ. ಆಗ ಅಲ್ಲಿಗೆ ಭೂಮಿಕಾ ಬರುತ್ತಾಳೆ. ಏನು ಪ್ರಾಬ್ಲಂ ಎಂದು ಕೇಳುತ್ತಾಳೆ. "ಅತ್ತಿಗೆ, ಯಾಕೋ ಗೊತ್ತಿಲ್ಲ. ಅಪೇಕ್ಷಾ ತುಂಬಾ ಬದಲಾಗಿದ್ದಾರೆ. ಅವರ ಆಟಿಟ್ಯೂಡ್, ಬಿಹೇವಿಯರ್ ಎಲ್ಲಾ ಬದಲಾಗಿದೆ. ಆಕೆ ಮುಂಚೆ ಇದ್ದ ಅಪೇಕ್ಷಾ ಅಲ್ಲ ಅನಿಸುತ್ತದೆ. ಈ ನಡುವೆ ಅವರಲ್ಲಿ ತುಂಬಾ ಚೇಂಜಸ್ ಆಗಿದೆ. ಹೇಗಿದ್ದವರು ಹೇಗೆ ಆಗಿದ್ದಾರೆ?" ಎಂದು ಹೇಳುತ್ತಾನೆ. "ನಿಜಕ್ಕೂ ಏನು ನಡೆದಿದೆ?" ಎಂದು ಭೂಮಿಕಾ ಕೇಳುತ್ತಾರೆ. "ಅವರು ಈ ಮನೆಗೆ ಬಂದ ಮೇಲೆ ತುಂಬಾನೇ ಚೇಂಜ್ ಆಗಿದ್ದಾರೆ. ಅವರು ಯಾವುದಕ್ಕೂ ಅಜೆಸ್ಟ್ ಆಗ್ತಾ ಇಲ್ಲ. ಮನೆಯವರ ಜತೆ ಮಿಂಗಲ್ ಆಗುತ್ತಿಲ್ಲ. ಸಣ್ಣಪುಟ್ಟ ವಿಚಾರಕ್ಕೆ ಇರಿಟೇಟ್ ಆಗ್ತಾರೆ. ನನ್ನ ಜತೆ ಜಗಳ ಆಡ್ತಾರೆ. ಅದ್ರಲ್ಲೂ ನಿಮ್ಮ ಹೆಸರು ಹೇಳಿದ್ರೆ ಸಾಕು, ಫುಲ್ ಉರಿದು ಬೀಳ್ತಾರೆ. ಇದನ್ನೆಲ್ಲ ನೋಡಿದಾಗ ಇದು ತಪ್ಪು ಅನಿಸುತ್ತದೆ ಅತ್ತಿಗೆ" ಎಂದೆಲ್ಲ ಮನಸ್ಸು ಬಿಚ್ಚಿ ಮಾತನಾಡುತ್ತಾನೆ ಪಾರ್ಥ. ಇದನ್ನು ಕೇಳಿ ಭೂಮಿಕಾಳಿಗೂ ಬೇಸರವಾಗುತ್ತದೆ.
ಶಕುಂತಲಾದೇವಿ ಮೌನವಾಗಿದ್ದಾರೆ. ಸಹೋದರ ಯಾವುದೇ ಐಡಿಯಾ ನೀಡಿಲ್ಲ. "ಸೀಮಂತ ನಿಲ್ಲಿಸಲು ನನಗೂ ಐಡಿಯಾ ಹೊಳೆದಿಲ್ಲ" ಎಂದು ಶಕುಂತಲಾ ಹೇಳುತ್ತಾರೆ. "ಮಲ್ಲಿ ಜತೆ ಜೈದೇವ್ ಹೋಗದಂತೆ ನೋಡಿಕೊ" ಎಂದು ಸಹೋದರ ಹೇಳುತ್ತಾನೆ. ಇದನ್ನು ಕೇಳಿ ಶಕುಂತಲಾಗೆ ಸಂಶಯ ಬರುತ್ತದೆ.
ಅಪೇಕ್ಷಾಳ ಮನಸ್ಸು ಗೆದ್ದ ಪಾರ್ಥ
ಭೂಮಿಕಾಳಿಗೆ ಬೇಸರವಾಗುತ್ತದೆ. "ಅವಳಿಗೆ ನನ್ನ ಹೆಸರು ಕೇಳಿದ್ರೆ ಬೇಸರವಾಗುತ್ತದೆ ಅನ್ನುತ್ತೀರಿ. ಅವಳ ಮುಂದೆ ಯಾಕೆ ನನ್ನ ಹೆಸರು ಎತ್ತುತ್ತೀರಿ" ಎಂದು ಭೂಮಿಕಾ ಕೇಳುತ್ತಾಳೆ. "ನಾನು ಅಪೇಕ್ಷಾ ನಿಮ್ಮ ರೀತಿ ಇರಬೇಕೆಂದು ಬಯಸುವೆ.... " ಎಂದೆಲ್ಲ ಹೇಳುತ್ತಾನೆ. "ನಿಮಗೆ ನಿಮ್ಮ ಸಂಬಂಧ ಮುಖ್ಯವಾಗಬೇಕು. ಮೊದಲಿಗೆ ಅವಳು ನಿಮ್ಮ ಪ್ರಿಯಾರಿಟಿ ಇರಬೇಕು. ಅವಳ ಸೆಂಟಿಮೆಂಟ್‌ನ ಅರ್ಥ ಮಾಡಿಕೊಳ್ಳುವುದರಲ್ಲಿ ಎಡವಿದ್ದೀರಿ ಅನಿಸುತ್ತದೆ" ಎಂದು ಭೂಮಿಕಾ ಹೇಳುತ್ತಾರೆ. "ಹೆಂಡತಿಯಾದವಳು ಗಂಡ ತನ್ನನ್ನೇ ಹೊಗಳಬೇಕು ಎಂದು ಬಯಸುತ್ತಾಳೆ. ಗಂಡಹೆಂಡಿರ ವಿಷಯವನ್ನು ಇನ್ಮುಂದೆ ಯಾರಿಗೂ ಹೇಳಬೇಡಿ. ನನ್ನ ಮುಂದೆ ಹೇಳಿದ್ರಿ, ನಾನು ತೋಚಿದ್ದನ್ನು ಹೇಳಿದೆ. ಆದರೆ, ಇನ್ನೊಬ್ಬರ ಮುಂದೆ ಹೇಳಿದರೆ ಅವರು ಅದನ್ನು ಊರಿಡಿ ಹೇಳುತ್ತಾ ಬರುತ್ತಾರೆ. ಅದಕ್ಕೆ ಗಂಡಹೆಂಡಿರ ವಿಷಯ ಹೊರಗೆ ಹೇಳಬಾರದು" ಎಂದೆಲ್ಲ ಬುದ್ದಿವಾದ ಹೇಳುತ್ತಾಳೆ. ಅತ್ತಿಗೆಯ ಮಾತುಗಳನ್ನು ಕೇಳಿ ಪಾರ್ಥನಿಗೆ ಒಂದಿಷ್ಟು ಸಮಧಾನವಾಗುತ್ತದೆ.
ರೂಂಗೆ ಬಂದವನು ಅಪೇಕ್ಷಾ ಜತೆ ಮಾತನಾಡಲು ಪ್ರಯತ್ನಿಸುತ್ತಾನೆ. "ನೀವು ಕೋಪ ಮಾಡಿಕೊಂಡ್ರೆ ತುಂಬಾ ಕ್ಯೂಟ್ ಆಗಿ ಕಾಣಿಸ್ತೀರ" ಎಂದೆಲ್ಲ ಹೊಗಳುತ್ತಾನೆ. "ಕೋಪ ಇದ್ರೆ ನ್ಯಾಚುರಲ್ ಮೇಕಪ್ ಇದ್ದ ಹಾಗೆ" ಎಂದು ಫೋಟೋ ತೆಗೆಯುತ್ತಾನೆ. ಆರಂಭದಲ್ಲಿ ಮುನಿಸಿನಲ್ಲಿದ್ದ ಅಪೇಕ್ಷಾ ಕೊನೆಗೆ ಹೊಗಳಿಕೆಗೆ ಕರಗುತ್ತಾಳೆ. ಒಟ್ಟಾರೆ, ಭೂಮಿಕಾ ಕೊಟ್ಟ ಐಡಿಯಾ ವರ್ಕೌಟ್ ಆಗಿದೆ. ಎಷ್ಟು ಸಾಧ್ಯವೋ ಅಷ್ಟು ಹೊಗಳುತ್ತಾನೆ. ಅಪೇಕ್ಷಾ ಖುಷಿಯಾಗುತ್ತಾಳೆ. "ಅತ್ತಿಗೆಗೆ ಹೆಲ್ಪ್ ಮಾಡ್ತಿನಿ ಅಂತ ಹೋದೆ. ತಪ್ಪಿನ ಅರಿವಾಗಿ ವಾಪಸ್ ಬಂದೆ. ನನಗೆ ನೀವೇ ಪ್ರಿಯಾರಿಟಿ" ಎಂದೆಲ್ಲ ಹೇಳುತ್ತಾನೆ.
ಅಮೃತಧಾರೆ ಸೀರಿಯಲ್ ಪಾತ್ರವರ್ಗ
ಛಾಯಾ ಸಿಂಗ್: ಭೂಮಿಕಾ (ನಾಯಕಿ)
ರಾಜೇಶ್ ನಟರಂಗ್: ಗೌತಮ್ ದಿವಾನ್ (ನಾಯಕ)
ವನಿತಾ ವಾಸು: ಶಕುಂತಳಾ (ಗೌತಮ್ ಮಲತಾಯಿ)
ಸಿಹಿಕಹಿ ಚಂದ್ರು: ಸದಾಶಿವ (ಭೂಮಿಕ ಮತ್ತು ಜೀವನ್ ತಂದೆ)
ಚೈತ್ರಾ ಶೆಣೈ: ಮಂದಾಕಿಣಿ (ಸದಾಶಿವನ ಹೆಂಡತಿ, ಭೂಮಿಕಾ ಮತ್ತು ಜೀವನ್ ತಾಯಿ)
ಅಮೃತ ನಾಯಕ್: ಅಪೇಕ್ಷಾ (ಭೂಮಿಕ ತಂಗಿ)
ಸಾರಾ ಅಣ್ಣಯ್ಯ : ಮಹಿಮಾ (ಗೌತಮ್ ತಂಗಿ, ಶಂಕುತಳಾ ಮಗಳು, ಜೀವನ್ ಹೆಂಡತಿ)
ಶಶಿ ಹೆಗ್ಗಡೆ: ಜೀವನ್ (ಭೂಮಿಕಾ ತಮ್ಮ, ಮಂದಕಿನಿ, ಸದಾಶಿವನ ಮಗ, ಮಹಿಮಾಳ ಗಂಡ)
ರಣವ್: ಜೈದೇವ್
ಚಂದನ್: ಅಶ್ವಿನಿ
ಸ್ವಾತಿ: ಅಪರ್ಣಾ (ಆನಂದ್ ಹೆಂಡತಿ)
ಆನಂದ್: ಆನಂದ್ (ಗೌತಮ್ ಸ್ನೇಹಿತ, ಅಪರ್ಣಾ ಗಂಡ)