Amruthadhaare Sept 6 Episode: ದಿವಾನ್‌ ಕಂಪನಿಯ ಕೆಲಸ ಬಿಡುವ ಯೋಚನೆಯಿಂದ ಆನಂದ್‌ ವಿಲವಿಲ, ಭೂಮಿಕಾ-ಗೌತಮ್‌ ನಡುವೆ ಮತ್ತೆ ಪ್ರೇಮಧಾರೆ
ಕನ್ನಡ ಸುದ್ದಿ  /  ಮನರಂಜನೆ  /  Amruthadhaare Sept 6 Episode: ದಿವಾನ್‌ ಕಂಪನಿಯ ಕೆಲಸ ಬಿಡುವ ಯೋಚನೆಯಿಂದ ಆನಂದ್‌ ವಿಲವಿಲ, ಭೂಮಿಕಾ-ಗೌತಮ್‌ ನಡುವೆ ಮತ್ತೆ ಪ್ರೇಮಧಾರೆ

Amruthadhaare Sept 6 Episode: ದಿವಾನ್‌ ಕಂಪನಿಯ ಕೆಲಸ ಬಿಡುವ ಯೋಚನೆಯಿಂದ ಆನಂದ್‌ ವಿಲವಿಲ, ಭೂಮಿಕಾ-ಗೌತಮ್‌ ನಡುವೆ ಮತ್ತೆ ಪ್ರೇಮಧಾರೆ

Amruthadhaare Sept 6 Episode: ಝೀ ಕನ್ನಡವಾಹಿನಿಯ ಅಮೃತಧಾರೆ ಧಾರಾವಾಹಿಯ ಸೆಪ್ಟೆಂಬರ್‌ 06ರ ಸಂಚಿಕೆಯಲ್ಲಿ ಆನಂದ್‌ ಚಿಂತೆಯಲ್ಲಿದ್ದಾನೆ. ದಿವಾನ್‌ ಆಫೀಸ್‌ ಕೆಲಸ ಬಿಡೆಂದು ಆನಂದ್‌ನ ಅಪರ್ಣಾ ಒತ್ತಾಯಿಸುತ್ತಿದ್ದಾಳೆ. ಇದೇ ಸಮಯದಲ್ಲಿ ಅಪೇಕ್ಷಾ ಮತ್ತು ಪಾರ್ಥರ ನಡುವಿನ ಸಮಸ್ಯೆ ಬಗೆಹರಿಸಲು ಭೂಮಿಕಾ ಮತ್ತು ಗೌತಮ್‌ ನಡುವೆ ಮತ್ತೆ ಒಲವಧಾರೆ ಸುರಿಯುತ್ತಿದೆ.

Amruthadhaare Sept 6 Episode: ಅಮೃತಧಾರೆ ಧಾರಾವಾಹಿ ಇಂದಿನ ಎಪಿಸೋಡ್‌
Amruthadhaare Sept 6 Episode: ಅಮೃತಧಾರೆ ಧಾರಾವಾಹಿ ಇಂದಿನ ಎಪಿಸೋಡ್‌

Amruthadhaare Sept 6 Episode: ಅಮೃತಧಾರೆ ಧಾರಾವಾಹಿ: ಮಲ್ಲಿಯ ಕಣ್ಣು ತಪ್ಪಿಸಿ ಹೊರಗೆ ಬಂದ ಜೈದೇವ್‌ ದಿಯಾಳಿಗೆ ಕಾಲ್‌ ಮಾಡುತ್ತಾನೆ. ಅದೇ ಸಮಯದಲ್ಲಿ ದಿಯಾಳೇ ಕಾಲ್‌ ಮಾಡುತ್ತಾಳೆ. ಆಕೆ ಕೋಪದಿಂದ "ಏನು ನನ್ನನ್ನು ಟಿಶ್ಯೂ ಪೇಪರ್‌ ಎಂದುಕೊಂಡಿದ್ದೀರ" ಎಂದು ಜೋರು ಮಾಡುತ್ತಾಳೆ. ಈ ಸಮಯದಲ್ಲಿ ಜೈದೇವ್‌ "ನನ್ನ ಪರಿಸ್ಥಿತಿ ಅರ್ಥ ಮಾಡಿಕೊ. ನನ್ನನ್ನು ಬಿಗ್‌ಬ್ರದರ್‌ ಮನೆಯಲ್ಲೇ ಮಲ್ಲಿಯನ್ನು ನೋಡಿಕೊಳ್ಳುವಂತೆ ಮಾಡಿದ್ದಾರೆ" ಎಂದು ವಿವರಿಸುತ್ತಾನೆ. "ನಾನು ನಿನ್ನನ್ನು ತುಂಬಾ ಮಿಸ್‌ ಮಾಡಿಕೊಳ್ಳುತ್ತಿದ್ದೇನೆ" ಎಂದು ಆತ ಮಾತನಾಡುವಾಗ ಅಲ್ಲಿಗೆ ಬಂದ ಗೌತಮ್‌ ಎಲ್ಲಾ ಕೇಳಿಸಿಕೊಳ್ಳುತ್ತಾರೆ. ಫೋನ್‌ ಕಟ್‌ ಮಾಡಿ ನೋಡಿದಾಗ ಅಲ್ಲಿ ಗೌತಮ್‌ ನಿಂತಿರುವುದನ್ನು ನೋಡಿ ಭಯಪಡುತ್ತಾನೆ. ಯಾರಿಗೆ ಫೋನ್‌ ಮಾಡಿದ್ದೆ ಎಂದು ಕೇಳಿದಾಗ ಏನೋ ಸುಳ್ಳು ಹೇಳುತ್ತಾನೆ. "ನೀನ್ಯಾಕೆ ಇಷ್ಟು ಲೇಟಾಗಿ ಬಂದೆ ಬ್ರೋ" ಎಂದಾಗ "ಆಫೀಸ್‌ನಲ್ಲಿ ನಿನ್ನ ಕೆಲಸವನ್ನೂ ನಾನೇ ಮಾಡ್ತಾ ಇದ್ದೇನೆ" ಎಂದು ಹೇಳುತ್ತಾರೆ ಗೌತಮ್‌. ನಾನೂ ಆಫೀಸ್‌ಗೆ ಬರ್ತಿನಿ ಬ್ರೋ ಎಂದಾಗ "ನಿನ್ನ ಫಸ್ಟ್‌ ಪ್ರಿಯಾರಿಟಿ ಮಲ್ಲಿಯೇ ಆಗಿರಬೇಕು" ಎಂದು ಹೇಳುತ್ತಾರೆ ಡುಮ್ಮ ಸರ್.‌ ಅಪೇಕ್ಷಾ ಮತ್ತು ಪಾರ್ಥ ವಿಷಯಕ್ಕೆ ನನ್ನನ್ನು ಕ್ಷಮಿಸು ಎಂದು ಕ್ಷಮಾಪಣೆ ಕೇಳುತ್ತಾನೆ ಜೈದೇವ್‌. "ಈ ಸಂದರ್ಭವನ್ನು ನಿನ್ನನ್ನು ನೀನು ಚೇಂಜ್‌ ಮಾಡಿಕೊಳ್ಳಲು ಬಳಸು" ಎಂದೆಲ್ಲ ಬುದ್ದಿವಾದ ಹೇಳುತ್ತಾರೆ.

ಬಳಿಕ ಮಲ್ಲಿ ಜತೆ ಜೈದೇವ್‌ ಮಾತನಾಡುತ್ತಾನೆ. ಎಂದಿನ ಪ್ರೀತಿಯ ನಾಟಕ ಮಾಡುತ್ತಾನೆ. ಜತೆಗೆ ಅಣ್ಣನಿಗೆ ಕೆಲಸ ಜಾಸ್ತಿ ಎಂದೆಲ್ಲ ಹೇಳುತ್ತಾನೆ. "ನೀನೇ ಒಂದು ಸಲ ಅಣ್ಣನಲ್ಲಿ ಮಾತನಾಡಿ ಆಫೀಸ್‌ಗೆ ಹೋಗಲು ಪರ್ಮಿಷನ್‌ ಕೊಡಿಸು. ನೀನೇ ಮಾತನಾಡು" ಎಂದು ಮಲ್ಲಿಯಲ್ಲಿ ವಿನಂತಿಸುತ್ತಾನೆ. "ಸರಿ ನಾನು ಭಾವನವರ ಬಳಿ ಮಾತನಾಡುತ್ತೇನೆ" ಎನ್ನುತ್ತಾಳೆ.

ಕೆಲಸ ಬಿಡುವ ಯೋಚನೆಯಿಂದ ಆನಂದ್‌ ವಿಲವಿಲ

ಇನ್ನೊಂದೆಡೆ ಆನಂದ್‌ ಯೋಚಿಸುತ್ತಾನೆ. "ನಿನ್ನ ಈ ಪರಿಸ್ಥಿತಿಗೆ ಜೈದೇವ್‌ ಕಾರಣವಾಗಿರಬಹುದು. ನಾಳೆಯೇ ಆ ಕೆಲಸಕ್ಕೆ ರಿಸೈನ್‌ ಮಾಡು" ಎಂದು ಅಪರ್ಣ ಹೇಳಿದ್ದನ್ನು ಯೋಚಿಸುತ್ತಾನೆ. "ನನ್ನ ಗೆಳೆಯನ ಬಿಟ್ಟು ಹೇಗಿರಲಿ" ಎಂಬ ಬೇಸರ ಕಾಡುತ್ತದೆ. ಆ ಸಂದರ್ಭದಲ್ಲಿ ಅಪರ್ಣಾ ಬರುತ್ತಾಳೆ. ಒಂದಿಷ್ಟು ಆತ್ಮೀಯ ಮಾತುಕತೆ ನಡೆಯುತ್ತದೆ. "ನಿನಗೆ ಫ್ಯಾಮಿಲಿಗಿಂತ ಕೆಲಸ ಮುಖ್ಯನ. ನನಗೆ ನೀನು ಬೇಕು. ನಿನ್ನ ಆರೋಗ್ಯ, ನಿನ್ನ ನೆಮ್ಮದಿ ಮುಖ್ಯ" ಎಂದು ವಿನಂತಿಸುತ್ತಾಳೆ. "ಪ್ಲೀಸ್‌ ಆನಂದ್‌ ಈ ಕೆಲಸ ಬಿಡು" ಎಂದು ಅಪರ್ಣಾ ವಿನಂತಿಸಿದಾಗ ಬೇಸರದಲ್ಲಿಯೇ ಯೋಚಿಸುತ್ತಾನೆ ಆನಂದ್‌. "ನನ್ನ ಸೆಂಟಿಮೆಂಟ್‌ ಅರ್ಥ ಮಾಡಿಕೊ. ನಾನು ಕೆಲಸ ಮಾಡುವುದು ಸಂಬಳಕ್ಕಾಗಿ ಅಲ್ಲ. ನನ್ನ ಗೆಳೆಯನಿಗಾಗಿ" ಎಂದೆಲ್ಲ ಹೇಳುತ್ತಾನೆ.

ಭೂಮಿಕಾ ಒಬ್ಬಳೇ ಯೋಚಿಸುತ್ತಿದ್ದಾಳೆ. ಅಪೇಕ್ಷಾ ಮತ್ತು ಪಾರ್ಥರ ಜಗಳ ಮಾಡುತ್ತಿರುವುದು ನೆನಪಿಗೆ ಬರುತ್ತದೆ. ಈ ಸಂದರ್ಭದಲ್ಲಿ ಗೌತಮ್‌ ಬರುತ್ತಾರೆ. ಒಂದಿಷ್ಟು ಎಂದಿನ ಮಾತಿನ ಬಳಿಕ "ಅಪೇಕ್ಷಾ ಮತ್ತು ಪಾರ್ಥರ ನಡುವೆ ಏನೋ ಸರಿ ಇಲ್ಲ. ಅವರಿಬ್ಬರು ಜಗಳ ಮಾಡುತ್ತಿದ್ದರು. ನೀವೇ ಅವರ ಜತೆ ಮಾತನಾಡಬಹುದಲ್ವ" ಎನ್ನುತ್ತಾಳೆ. "ಅವರ ಪರ್ಸನಲ್‌ ವಿಷಯಕ್ಕೆ ಜಗಳ ಆಗಿರಬಹುದು. ಇದನ್ನು ಕೇಳಲು ಆಗದು. ನಮ್ಮ ಅಪ್ರೋಚ್‌ ಚೇಂಜ್‌ ಮಾಡೋಣ. ಅವರ ಸಮಸ್ಯೆ ಏನೆಂದು ತಿಳಿಯೋಣ. ನನ್ನಲ್ಲಿ ಏನೋ ಒಂದು ಐಡಿಯಾ ಇದೆ" ಎಂದು ಹೇಳುತ್ತಾರೆ ಡುಮ್ಮ ಸರ್‌.

ಪಾರ್ಥ ಮತ್ತು ಅಪೇಕ್ಷಾ ಮಾತನಾಡುತ್ತಿದ್ದಾರೆ. ಅವರ ನಡುವಿನ ವೈಮನಸ್ಸು ಸರಿಯಾಗಿಲ್ಲ. ಅಪೇಕ್ಷಾಳ ನೋವಿನ ಚುಚ್ಚು ಮಾತು, ಪಾರ್ಥನ ವಿನಂತಿ ಎಲ್ಲವೂ ನಡೆಯುತ್ತ ಇರುತ್ತದೆ. "ಹೊರಗಡೆ ಹೋಗಿ ಬರೋಣ" ಎಂದಾಗ "ಅದಕ್ಕೂ ಬರೋಲ್ಲ" ಎಂದು ಹೇಳುತ್ತಾಳೆ. "ಲೊಕೆಷನ್‌ ಚೇಂಜ್‌ ಆದರೆ ಏನರ್ಥ, ಕ್ಯಾರೆಕ್ಟರ್‌ ಅದೇ ಇರುತ್ತದೆ ಅಲ್ವ" ಎಂದೆಲ್ಲ ಹೇಳುತ್ತಾಳೆ. "ನಿಮಗೆ ಮೊದಲಿದ್ದ ಪ್ರೀತಿ ಇಲ್ಲ. ಮೊದಲಿದ್ದ ಇಂಟ್ರೆಸ್ಟ್‌ ಇಲ್ಲ. ಮೊದಲಿನಂತೆ ನೀವು ಇಲ್ಲ. ಒಟ್ಟಿಗೆ ಇದ್ದರೂ ಬದಲಾಗಿದ್ದೀರಿ. ತುಂಬಾ ಬೋರಿಂಗ್‌ ಆಗಿದ್ದೀರಿ" ಎಂದು ಹೇಳುತ್ತಾಳೆ. ಪಾರ್ಥ ಬೇಸರದಿಂದ ಹೊರಗೆ ಹೋಗುತ್ತಾನೆ.

ಜೈದೇವ್‌ ಒಬ್ಬನೇ ರೋಷದಲ್ಲಿದ್ದಾಗ ಮಲ್ಲಿ ಬರುತ್ತಾನೆ. ನೀವು ಆನ್‌ಲೈನ್‌ನಲ್ಲಿ ಕೆಲಸ ಮಾಡಬಹುದಲ್ವ ಎನ್ನುತ್ತಾಳೆ. ತನ್ನ ಎಂದಿನ ಮಾತಿನಲ್ಲೇ ಅದನ್ನು ತಪ್ಪಿಸುತ್ತಾನೆ. ಇದೇ ಸಮಯದಲ್ಲಿ ಭೂಮಿಕಾ ಗೌತಮ್‌ ಜತೆ "ಅದೇನೋ ಐಡಿಯಾ ಇದೆ ಅಂದ್ರಲ್ವ. ಹೇಳಿ" ಎನ್ನುತ್ತಾಳೆ. "ನಾವು ಅಪೇಕ್ಷಾ ಮತ್ತು ಪಾರ್ಥನಿಗೆ ನೇರವಾಗಿ ಬುದ್ದಿ ಹೇಳುವ ಬದಲು ಅವರ ಮುಂದೆ ನಾವು ಇನ್ನಷ್ಟು ಕಲರ್‌ಫುಲ್‌ ಆಗಿರೋಣ. ಅವರಿಗೂ ನಮ್ಮಂತೆ ಇರಲು ಆಸೆಯಾಗುವಂತೆ ಇರೋಣ" ಎಂದು ಐಡಿಯಾ ನೀಡುತ್ತಾರೆ. ಮತ್ತೆ ಇವರಿಬ್ಬರ ನಡುವೆ ಪ್ರೇಮಧಾರೆ ಉಕ್ಕಿ ಹರಿಯುವ ಸೂಚನೆಯೊಂದಿಗೆ ಶನಿವಾರದ ಎಪಿಸೋಡ್‌ ಮುಂದುವರೆದಿದೆ.

ಅಮೃತಧಾರೆ ಸೀರಿಯಲ್‌ ಪಾತ್ರವರ್ಗ

ಛಾಯಾ ಸಿಂಗ್‌: ಭೂಮಿಕಾ (ನಾಯಕಿ)

ರಾಜೇಶ್ ನಟರಂಗ್: ಗೌತಮ್‌ ದಿವಾನ್‌ (ನಾಯಕ)

ವನಿತಾ ವಾಸು: ಶಕುಂತಳಾ (ಗೌತಮ್‌ ಮಲತಾಯಿ)

ಸಿಹಿಕಹಿ ಚಂದ್ರು: ಸದಾಶಿವ (ಭೂಮಿಕ ಮತ್ತು ಜೀವನ್‌ ತಂದೆ)

ಚೈತ್ರಾ ಶೆಣೈ: ಮಂದಾಕಿಣಿ (ಸದಾಶಿವನ ಹೆಂಡತಿ, ಭೂಮಿಕಾ ಮತ್ತು ಜೀವನ್ ತಾಯಿ)

ಅಮೃತ ನಾಯಕ್: ಅಪೇಕ್ಷಾ (ಭೂಮಿಕ ತಂಗಿ)

ಸಾರಾ ಅಣ್ಣಯ್ಯ : ಮಹಿಮಾ (ಗೌತಮ್‌ ತಂಗಿ, ಶಂಕುತಳಾ ಮಗಳು, ಜೀವನ್‌ ಹೆಂಡತಿ)

ಶಶಿ ಹೆಗ್ಗಡೆ: ಜೀವನ್‌ (ಭೂಮಿಕಾ ತಮ್ಮ, ಮಂದಕಿನಿ, ಸದಾಶಿವನ ಮಗ, ಮಹಿಮಾಳ ಗಂಡ)

ರಣವ್‌: ಜೈದೇವ್‌

ಚಂದನ್‌: ಅಶ್ವಿನಿ

ಸ್ವಾತಿ: ಅಪರ್ಣಾ (ಆನಂದ್‌ ಹೆಂಡತಿ)

ಆನಂದ್‌: ಆನಂದ್‌ (ಗೌತಮ್‌ ಸ್ನೇಹಿತ, ಅಪರ್ಣಾ ಗಂಡ)

Whats_app_banner