ಉಪ್ಪಿಲ್ಲ, ರುಚಿಯಿಲ್ಲ, ಅಪೇಕ್ಷಾ ಕೈಯಡುಗೆ ರುಚಿನೋಡಿ ಗೌತಮ್‌ ಮಾಡಿದ್ರು ಮಹಾತ್ಯಾಗ- ಅಮೃತಧಾರೆ ಸೀರಿಯಲ್‌
ಕನ್ನಡ ಸುದ್ದಿ  /  ಮನರಂಜನೆ  /  ಉಪ್ಪಿಲ್ಲ, ರುಚಿಯಿಲ್ಲ, ಅಪೇಕ್ಷಾ ಕೈಯಡುಗೆ ರುಚಿನೋಡಿ ಗೌತಮ್‌ ಮಾಡಿದ್ರು ಮಹಾತ್ಯಾಗ- ಅಮೃತಧಾರೆ ಸೀರಿಯಲ್‌

ಉಪ್ಪಿಲ್ಲ, ರುಚಿಯಿಲ್ಲ, ಅಪೇಕ್ಷಾ ಕೈಯಡುಗೆ ರುಚಿನೋಡಿ ಗೌತಮ್‌ ಮಾಡಿದ್ರು ಮಹಾತ್ಯಾಗ- ಅಮೃತಧಾರೆ ಸೀರಿಯಲ್‌

ಅಮೃತಧಾರೆ ಧಾರಾವಾಹಿ ಸೋಮವಾರ ಸೆ. 9 ಸಂಚಿಕೆ: ಜೀ ಕನ್ನಡ ವಾಹಿನಿಯ ಅಮೃತಧಾರೆ ಧಾರಾವಾಹಿಯಲ್ಲಿ ಅಪೇಕ್ಷಾ ಅಡುಗೆಮನೆ ಸೇರಿದ್ದಾಳೆ. ಪಾರ್ಥನಿಗೆ ತನ್ನ ಕೈರುಚಿಯ ಅಡುಗೆ ಮಾಡಿದ್ದಾಳೆ. ಉಪ್ಪಿಲ್ಲ, ಖಾರ ಸರಿ ಇಲ್ಲ... ಕೆಟ್ಟ ಟೇಸ್ಟ್‌ ನೋಡಿದ ಗೌತಮ್‌ ಪಾರ್ಥನಿಗೆ ಈ ವಿಚಾರ ತಿಳಿಯದಂತೆ ಒಂದು ಐಡಿಯಾ, ಮಹಾತ್ಯಾಗ ಮಾಡಿದ್ದಾರೆ.

ಉಪ್ಪಿಲ್ಲ, ರುಚಿಯಿಲ್ಲ, ಅಪೇಕ್ಷಾ ಕೈಯಡುಗೆ ರುಚಿನೋಡಿ ಗೌತಮ್‌ ಮಾಡಿದ್ರು ಮಹಾತ್ಯಾಗ
ಉಪ್ಪಿಲ್ಲ, ರುಚಿಯಿಲ್ಲ, ಅಪೇಕ್ಷಾ ಕೈಯಡುಗೆ ರುಚಿನೋಡಿ ಗೌತಮ್‌ ಮಾಡಿದ್ರು ಮಹಾತ್ಯಾಗ

ಅಮೃತಧಾರೆ ಧಾರಾವಾಹಿ ಸೋಮವಾರ ಸೆ. 9 ಸಂಚಿಕೆ: ಅಪೇಕ್ಷಾ ದಿವಾನ್‌ ಮನೆಯ ಕಿಚನ್‌ಗೆ ಬಂದಿದ್ದಾಳೆ. ಪಾರ್ಥನಿಗೆ ಇಷ್ಟದ ಅಡುಗೆ ಮಾಡಿಕೊಟ್ಟು ಆತನ ಮನಸ್ಸು ಸೆಳೆಯುವ ತಂತ್ರ ಮಾಡಲು ಯೋಜಿಸಿದ್ದಾಳೆ. ಇದು ಭೂಮಿಕಾ ಮಾಡಿದ ಐಡಿಯಾ. ಇವರಿಬ್ಬರ ನಡುವೆ ಮತ್ತೆ ಪ್ರೀತಿ ಉಂಟಾಗಲು ಭೂಮಿಕಾ ಮತ್ತು ಗೌತಮ್‌ ಬಹಿರಂಗವಾಗಿ ಒಲವಧಾರೆಯ ನಾಟಕವಾಡಿದ್ದಾರೆ. ಇದು ಅಪೇಕ್ಷಾ ಕಣ್ಣಿಗೆ ಬಿದ್ದು, ಆಕೆಗೂ ಇದೇ ರೀತಿ ಪಾರ್ಥನ ಪ್ರೀತಿ ಸಂಪಾದಿಸಬೇಕೆಂಬ ಮನಸ್ಸಾಗಿದೆ. ಕಿಚನ್‌ಗೆ ಬಂದು ಅಡುಗೆಯವರಲ್ಲಿ ಪಾರ್ಥನಿಗೆ ಏನು ಇಷ್ಟ ಎಂದು ಕೇಳುತ್ತಾಳೆ. ಅದಕ್ಕೆ ಅಲ್ಲೇ ಇದ್ದ ಭೂಮಿಕಾ "ಪಾರ್ಥನಿಗೆ ಏನು ಇಷ್ಟವೋ ಅದು ನಿನಗೆ ಗೊತ್ತಿರಬಹುದು. ಲವ್‌ ಮಾಡುವ ಸಂದರ್ಭದಲ್ಲಿ ತಿಳಿದುಕೊಂಡಿಲ್ವ" ಎಂದು ಕೇಳುತ್ತಾಳೆ. "ನಾನು ಏನು ಮಾಡಿಕೊಟ್ಟರೂ ತಿನ್ನುತ್ತಾರೆ" ಎಂದು ಹೇಳುತ್ತಾಳೆ. "ಎಷ್ಟಾದರೂ ನನ್ನ ತಂಗಿ ಅಲ್ವಾ?" ಎಂದು ಹೇಳುತ್ತಾಳೆ ಭೂಮಿಕಾ. "ತಂಗಿ ಮಾತ್ರ ಅಲ್ಲ. ಈ ಮನೆಯ ಸೊಸೆಯೂ ಹೌದು" ಎಂದು ಅಡುಗೆ ಮಾಡಲು ಮುಂದಾಗುತ್ತಾಳೆ. ಈರುಳ್ಳಿ ಕತ್ತರಿಸುವಾಗ ಕಣ್ಣಲ್ಲಿ ನೀರು ಬರುತ್ತದೆ. "ನಿನಗೆ ಇದೆಲ್ಲ ರೂಢಿ ಇಲ್ಲ ಅಲ್ವ. ನಾನು ಮಾಡಿಕೊಡುವೆ" ಎಂದು ಭೂಮಿಕಾ ಹೇಳಿದಾಗ "ನನ್ನ ಗಂಡನಿಗಾಗಿ ಅಲ್ಲ ಅಲ್ವ. ನಾನೇ ಮಾಡ್ತಿನಿ" ಎಂದು ಅಡುಗೆ ಮುಂದುವರೆಸುತ್ತಾರೆ. ಅಡುಗೆ ತಯಾರಾಗುತ್ತದೆ. ಭೂಮಿಕಾ ಮತ್ತು ಅಪೇಕ್ಷಾರ ಪ್ರತ್ಯೇಕ ಟಿಫಿನ್‌ ಬಾಕ್ಸ್‌ ರೆಡಿಯಾಗುತ್ತದೆ. ಆಫೀಸ್‌ ಬಾಯ್‌ ಕೈಯಲ್ಲಿ ಕೊಟ್ಟು ಗೌತಮ್‌ ಮತ್ತು ಪಾರ್ಥನಿಗೆ ತಲುಪಿಸಲು ಹೇಳುತ್ತಾರೆ.

ಇದೇ ಸಮಯದಲ್ಲಿ ಜೈದೇವ್‌ ಕೋಪದಿಂದ ಶಕುಂತಲಾದೇವಿ ಬಳಿಗೆ ಬರುತ್ತಾನೆ. "ಏನಮ್ಮ ನನ್ನ ಸ್ಥಳದಲ್ಲಿ ಹೋಗಿ ಪಾರ್ಥನ ಅಣ್ಣ ಕೂರಿಸಿದ್ದಾನೆ. ನಾನು ಮನೆಯಲ್ಲಿ ಬಿದ್ದಿರಬೇಕಾ?" ಎಂದೆಲ್ಲ ಕೇಳುತ್ತಾನೆ. "ಎಲ್ಲದಕ್ಕೂ ನೀನೇ ಕಾರಣ. ಮಲ್ಲಿಯನ್ನು ಪ್ರೀತಿಸಿದ್ದರಿಂದ ಇಲ್ಲಿಯವರೆಗೆ ಏನೆಲ್ಲ ತಲೆತಗ್ಗಿಸುವ ಕೆಲಸ ಮಾಡಿದ್ದೀಯ... ನಿನಗೂ ಎಲ್ಲರ ರೀತಿ ಬದುಕಬೇಕು ಅನಿಸೋದಿಲ್ವ...." ಎಂದೆಲ್ಲ ಶಕುಂತಲಾದೇವಿ ಬಯ್ಯುತ್ತಾರೆ. "ಇನ್ನು ಮುಂದೆ ನಿನ್ನ ವಿಷಯಕ್ಕೆ ನಾನು ತಲೆ ಹಾಕೋದಿಲ್ಲ. ಪಾರ್ಥನೂ ನನ್ನ ಮಗನೇ. ಅವನನ್ನು ಆಫೀಸ್‌ಗೆ ಹೋಗಬೇಡ ಎಂದು ಹೇಳೋದಿಲ್ಲ." ಎಂದು ಶಕುಂತಲಾದೇವಿ ಕೋಪದಿಂದ ಹೇಳಿದಾಗ ಜೈದೇವ್‌ಗೆ ಟೆನ್ಷನ್‌.

ಆಫೀಸ್‌ನಲ್ಲಿರುವ ಗೌತಮ್‌ಗೆ ಆನಂದ್‌ ಕಾಲ್‌ ಮಾಡುತ್ತಾನೆ. ಆಪ್ತಮಿತ್ರ ಎಂದೆಲ್ಲ ಮಾತನಾಡುತ್ತಾರೆ. ಪಾರ್ಥನ ಅಪಾಯಿಂಟ್‌ಮೆಂಟ್‌ ಮಾಡಿದ ವಿಚಾರ ತಿಳಿಸುತ್ತಾನೆ. ಮಾತನಾಡಿ ಮುಗಿಸಿದ ಬಳಿಕ ಅಪರ್ಣಾಳ ಜತೆ ಆನಂದ್‌ ಮಾತನಾಡುತ್ತಾನೆ. "ಗೆಳೆಯನಿಗೆ ಸಹಾಯ ಮಾಡಲು ನಾನು ಆಫೀಸ್‌ಗೆ ಹೋಗಬೇಕು ಅನಿಸುತ್ತದೆ" ಎಂದು ಆನಂದ್‌ ಹೇಳುತ್ತಾನೆ. "ನೀನು ರೆಸ್ಟ್‌ ಮಾಡು" ಎಂದು ಅಪರ್ಣಾ ಹೇಳುತ್ತಾಳೆ. ಅವಳಿಗೆ ಆ ಆಫೀಸ್‌ಗೆ ಆನಂದ್‌ ಹೋಗೋದು ಇಷ್ಟವಿಲ್ಲ.

ಪಾರ್ಥ ಮತ್ತು ಗೌತಮ್‌ಗೆ ಎರಡು ಟಿಫಿನ್‌ ಕ್ಯಾರಿಯರ್‌ ಬಂದಿದೆ. ಅಪೇಕ್ಷಾ ನಿನಗೆ ಮೊದಲ ದಿನವೇ ಅಡುಗೆ ಮಾಡಿ ಕೊಟ್ಟಿದ್ದಾರೆ ಎಂದು ಗೌತಮ್‌ ಹೊಗಳುತ್ತಾರೆ. ಗೌತಮ್‌ ರುಚಿ ನೋಡುತ್ತಾರೆ. "ಏನಪ್ಪ ಇದು ಉಪ್ಪಿಲ್ಲ ರುಚಿ ಇಲ್ಲ. ತಿಂದ್ರೆ ಇವರ ಪ್ರೀತಿ ಇನ್ನಷ್ಟು ಕೆಟ್ಟು ಹೋಗಬಹುದು" ಎಂದು ಗೌತಮ್‌ ಮನಸ್ಸಲ್ಲಿ ಅಂದುಕೊಳ್ಳುತ್ತಾರೆ. ಪಾರ್ಥನಿಗೆ ಬಂದ ಅಡುಗೆಯನ್ನೆಲ್ಲ ಕಷ್ಟಪಟ್ಟು ತಾನೇ ತಿನ್ನುತ್ತಾರೆ. ಸುಮ್ಮನೆ ಹೊಗಳಿಹೊಗಳಿ ತಿನ್ನುತ್ತಾರೆ. ಭೂಮಿಕಾ ಮಾಡಿರುವ ರುಚಿಕರವಾದ ಅಡುಗೆಯನ್ನು ಪಾರ್ಥ ತಿನ್ನುತ್ತಾನೆ.

ಇದಾದ ಬಳಿಕ ಗೌತಮ್‌ ಭೂಮಿಕಾಳಿಗೆ ಕಾಲ್‌ ಮಾಡಿ "ಏನ್ರಿ ಅದು ಊಟ. ಊಟ ಅಲ್ಲ ಅದು ಅಮೃತ ಇದ್ದ ಹಾಗೆ ಇತ್ತು. ನನಗಂತೂ ವರ್ಣಿಸಲು ಪದಗಳೇ ಸಿಗ್ತಾ ಇಲ್ಲ" ಎಂದೆಲ್ಲ ಹೊಗಳಿದ್ದನ್ನು ಕೇಳಿ ಪಾರ್ಥನಿಗೆ ಅಚ್ಚರಿಯಾಗುತ್ತದೆ. "ನಾನು ಹೊಗಳಿದಂತೆ ಅಪೇಕ್ಷಾಳಿಗೆ ನೀನೂ ಹೇಳು" ಎಂದು ಪಾರ್ಥನಿಗೆ ಗೌತಮ್‌ ಹೇಳುತ್ತಾನೆ. ಇದೇ ರೀತಿ ಫೋನ್‌ ಮಾಡಿ ಅಪೇಕ್ಷಾಳಿಗೆ ಹೇಳುತ್ತಾನೆ. ಅವಳಿಗೂ ಖುಷಿಯಾಗುತ್ತದೆ.

 

ಅಮೃತಧಾರೆ ಸೀರಿಯಲ್‌ ಪಾತ್ರವರ್ಗ

ಛಾಯಾ ಸಿಂಗ್‌: ಭೂಮಿಕಾ (ನಾಯಕಿ)

ರಾಜೇಶ್ ನಟರಂಗ್: ಗೌತಮ್‌ ದಿವಾನ್‌ (ನಾಯಕ)

ವನಿತಾ ವಾಸು: ಶಕುಂತಳಾ (ಗೌತಮ್‌ ಮಲತಾಯಿ)

ಸಿಹಿಕಹಿ ಚಂದ್ರು: ಸದಾಶಿವ (ಭೂಮಿಕ ಮತ್ತು ಜೀವನ್‌ ತಂದೆ)

ಚೈತ್ರಾ ಶೆಣೈ: ಮಂದಾಕಿಣಿ (ಸದಾಶಿವನ ಹೆಂಡತಿ, ಭೂಮಿಕಾ ಮತ್ತು ಜೀವನ್ ತಾಯಿ)

ಅಮೃತ ನಾಯಕ್: ಅಪೇಕ್ಷಾ (ಭೂಮಿಕ ತಂಗಿ)

ಸಾರಾ ಅಣ್ಣಯ್ಯ : ಮಹಿಮಾ (ಗೌತಮ್‌ ತಂಗಿ, ಶಂಕುತಳಾ ಮಗಳು, ಜೀವನ್‌ ಹೆಂಡತಿ)

ಶಶಿ ಹೆಗ್ಗಡೆ: ಜೀವನ್‌ (ಭೂಮಿಕಾ ತಮ್ಮ, ಮಂದಕಿನಿ, ಸದಾಶಿವನ ಮಗ, ಮಹಿಮಾಳ ಗಂಡ)

ರಣವ್‌: ಜೈದೇವ್‌

ಚಂದನ್‌: ಅಶ್ವಿನಿ

ಸ್ವಾತಿ: ಅಪರ್ಣಾ (ಆನಂದ್‌ ಹೆಂಡತಿ)

ಆನಂದ್‌: ಆನಂದ್‌ (ಗೌತಮ್‌ ಸ್ನೇಹಿತ, ಅಪರ್ಣಾ ಗಂಡ)

Whats_app_banner