Bigg Boss Kannada: ಕಿಚ್ಚನ ಮೆಚ್ಚುಗೆಯ ಚಪ್ಪಾಳೆ ಗಿಟ್ಟಿಸಿಕೊಂಡ ಕ್ಯಾಪ್ಟನ್ ಹನುಮಂತ; ಆಟದಲ್ಲಿತ್ತು ಪ್ರಾಮಾಣಿಕತೆ
Nov 03, 2024 08:16 AM IST
ಕಿಚ್ಚನ ಮೆಚ್ಚುಗೆಯ ಚಪ್ಪಾಳೆ ಗಿಟ್ಟಿಸಿಕೊಂಡ ಕ್ಯಾಪ್ಟನ್ ಹನುಮಂತ
- Bigg Boss Kannada: ಬಿಗ್ ಬಾಸ್ ಆರಂಭವಾಗಿ ಕೆಲವು ವಾರಗಳೇ ಕಳೆದರೂ ಇನ್ನೂ ಕಿಚ್ಚನ ಮೆಚ್ಚುಗೆಯ ಚಪ್ಪಾಳೆ ಮಾತ್ರ ಯಾರಿಗೂ ಸಿಕ್ಕಿರಲಿಲ್ಲ. ಆದರೆ ಇದೀಗ ಕಿಚ್ಚನ ಮೆಚ್ಚುಗೆಯ ಚಪ್ಪಾಳೆ ಹನುಮಂತನಿಗೆ ಸಿಕ್ಕಿದೆ.
ಬಿಗ್ ಬಾಸ್ ವೀಕೆಂಡ್ ದಿನಗಳಲ್ಲಿ ಕಿಚ್ಚನ ಪಂಚಾಯ್ತಿ ಆಗುತ್ತದೆ. ಈ ಪಂಚಾಯ್ತಿಯ ಕೊನೆಯಲ್ಲಿ ಯಾರು ಈ ಮನೆಯಲ್ಲಿ ಹೆಚ್ಚು ಉತ್ತಮವಾಗಿ ಆಟ ಆಡಿದ್ದಾರೋ ಅವರಿಗೆ ಕಿಚ್ಚನ ಮೆಚ್ಚುಗೆಯ ಚಪ್ಪಾಳೆ ಲಭಿಸುತ್ತದೆ. ಆದರೆ ಈ ಸೀಸನ್ ಆರಂಭವಾದಾಗಿನಿಂದಲೂ ಯಾರಿಗೂ ಕಿಚ್ಚನ ಚಪ್ಪಾಳೆ ಸಿಕ್ಕಿರಲಿಲ್ಲ. ಆದರೆ ಇದೇ ಮೊದಲ ಬಾರಿಗೆ ಹನುಮಂತನಿಗೆ ಕಿಚ್ಚನ ಚಪ್ಪಾಳೆ ಸಿಕ್ಕಿದೆ. ಮನೆಯವರ ಎಲ್ಲರ ಅಭಿಪ್ರಾಯವನ್ನು ಕೇಳುತ್ತಾ ಕಿಚ್ಚ ಹೋಗುತ್ತಾರೆ. ಈ ವಾರದ ಕ್ಯಾಪ್ಟನ್ ಮತ್ತು ಕ್ಯಾಪ್ಟನ್ಸಿ ಹೇಗಿತ್ತು ಎನ್ನುವ ರೀತಿಯಲ್ಲಿ ಪ್ರಶ್ನೆ ಇರುತ್ತದೆ. ಅದಕ್ಕೆ ತಕ್ಕನಾದ ಉತ್ತರವನ್ನು ಬಿಗ್ ಬಾಸ್ ಸ್ಪರ್ಧಿಗಳು ನೀಡುತ್ತಾರೆ.
ಆ ಪ್ರಕಾರ ಎಲ್ಲರೂ ಹನುಮಂತ ತನ್ನ ಜವಾಬ್ಧಾರಿಯನ್ನು ಸರಿಯಾಗಿ ನಿಭಾಯಿಸಿದ್ದಾನೆ ಎಂದು ಎಲ್ಲರೂ ಒಪ್ಪಿಕೊಳ್ಳುತ್ತಾರೆ. ದರೆ ಬಿಗ್‌ಬಾಸ್ ಸೀಸನ್ 11 ಆರಂಭವಾಗಿ ಒಂದು ತಿಂಗಳಾದರೂ ಇದುವರೆಗೆ ಕಿಚ್ಚನ ಚಪ್ಪಾಳೆ ಮಾತ್ರ ಯಾರಿಗೂ ಸಿಕ್ಕಿರಲಿಲ್ಲ ಆದರೆ ಈ ಬಾರಿ ಹನುಮಂತ ಅವರಿಗೆ ಈ ಬಾರಿ ಕಿಚ್ಚನ ಚಪ್ಪಾಳೆ ಸಿಕ್ಕಿದೆ.
ಹನುಮಂತ ಅವರು ಕಷ್ಟಪಟ್ಟು ಆಡಿದ್ದಕ್ಕೆ ಅವರು ಕ್ಯಾಪ್ಟನ್ ಆಗ್ತಾರೆ ಎಂದು ಹಲವರು ಹೇಳಿದರೆ. ಇನ್ನು ಕೆಲವರು ಇಲ್ಲ ನಾವು ಮಾಡಿದ ಐಡಿಯಾದಿಂದ ಹನುಮಂತ ಅವರು ಗೆದ್ದಿದ್ದಾರೆ ಎಂದು ಕೆಲವರು ಹೇಳುತ್ತಾರೆ. ಆಗ ಕಿಚ್ಚ ಸುದೀಪ್ ಒಂದು ಮಾತು ಹೇಳುತ್ತಾರೆ. ನಾವು ಪರೀಕ್ಷೆ ಬರೆಯುವಾಗ ಯಾವ ರೀತಿ ಬರೆದರೆ ಹೆಚ್ಚು ಅಂಕ ಪಡೆದುಕೊಳ್ಳಲು ಸಾಧ್ಯವಿದೆ ಎಂದು ತಿಳಿದುಕೊಳ್ಳಬೇಕು ಮತ್ತು ಆ ಕುರಿತು ಪ್ರಯತ್ನ ಮಾಡಬೇಕು. ಅದನ್ನು ಬಿಟ್ಟು ಇನ್ನೊಬ್ಬರನ್ನು ಯಾವ ರೀತಿ ಫೇಲ್ ಮಾಡಬಹುದು ಎಂದು ನಾವು ಪ್ರಯತ್ನ ಪಟ್ಟರೆ ನಮ್ಮ ಅಂಕವೇ ಕೊನೆಗೆ ನಮಗೆ ಸಿಗೋದಿಲ್ಲ ಎಂದು ಹೇಳುತ್ತಾರೆ.
ಇನ್ನು ಹನುಮಂತನಿಗೆ ಕಿಚ್ಚ ಚಪ್ಪಾಳೆ ಸಿಕ್ಕ ತಕ್ಷಣ ಸುದೀಪ್ ಇನ್ನೊಂದು ಮಾತು ಕೇಳುತ್ತಾರೆ. ಹನುಮಂತ ನಿಮಗೆ ಕಿಚ್ಚನ ಚಪ್ಪಾಳೆ ಅಂದ್ರೆ ಏನು ಅಂತ ಗೊತ್ತಿದ್ಯಾ? ಎಂದು ಆಗ ಹನುಮಂತ ಹೌದು ನನಗೆ ಗೊತ್ತಿದೆ ಎಂದು ಹೇಳುತ್ತಾ, ಈ ವಾರ ಯಾರು ಚೆನ್ನಾಗಿ ಆಟ ಆಡಿದ್ದಾರೋ ಅವರಿಗೆ ನೀವು ಕೊಡುವ ಚಪ್ಪಾಳೆ ಇದು ಎಂದು ಹೇಳುತ್ತಾರೆ. ಅದಾದ ನಂತರದಲ್ಲಿ ಅವರನ್ನು ಸ್ಟೋರ್ ರೂಮ್‌ಗೆ ಕಳಿಸುತ್ತಾರೆ. ಕಳಿಸಿ ಏನಿದೆ ಎಂದು ನೋಡಿದಾಗ ವಾಲ್ ಹ್ಯಾಂಗಿಂಗ್ ಫೋಟೋ ಬಂದಿರುತ್ತದೆ. ಅದನ್ನು ತೆಗೆದುಕೊಂಡು ಬರುತ್ತಾರೆ.
ಧನರಾಜ್ ಅವರ ಅಂಗಿಯನ್ನು ಹನುಮಂತ ಅವರು ಧರಿಸಿರುತ್ತಾರೆ. ಆ ಫೋಟೋ ಅಲ್ಲಿ ಬಂದಿರುತ್ತದೆ. ಅದನ್ನು ಎಲ್ಲರಿಗೂ ತೋರಿಸುತ್ತಾರೆ. ನಂತರ ಕಿಚ್ಚನ ಪಂಚಾಯ್ತಿ ಮುಂದುವರೆಯುತ್ತದೆ.