Lakshmi Baramma: ವೈಷ್ಣವ್‌ಗಾಗಿ ಮಾಡಿದ ಎಲ್ಲ ಅಡುಗೆ ಈಗ ಲಕ್ಷ್ಮೀ ಪಾಲು; ಸುಪ್ರಿತಾ ಹೇಳಿದ್ದೇ ನಿಜ
ಲಕ್ಷ್ಮೀ ಬಾರಮ್ಮ ಧಾರಾವಾಹಿಯ ಇಂದಿನ ಎಪಿಸೋಡ್‌ನಲ್ಲಿ ಕಾವೇರಿ ಒಂದು ಹೊಸ ಪ್ಲ್ಯಾನ್ ಮಾಡಿಕೊಂಡು ವೈಷ್ಣವ್ ಜೊತೆ ಹೊರಟಿದ್ದಾಳೆ. ಲಕ್ಷ್ಮೀಯನ್ನು ನೋಡಿಕೊಂಡು ಬರುವ ನೆಪವಷ್ಟೇ ಬಾಕಿ ಇದೆ ಹೊರತಾಗಿ ಇನ್ನೇನೂ ಇಲ್ಲ.
ಲಕ್ಷ್ಮೀ ಬಾರಮ್ಮ ಧಾರಾವಾಹಿಯಲ್ಲಿ ಕಾವೇರಿ ಅಂದುಕೊಂಡಂತೆ ಎಲ್ಲವೂ ನಡೆಯುತ್ತಿದೆ. ಕಾವೇರಿ ಮಾತ್ರ ತುಂಬಾ ಖುಷಿಯಲ್ಲಿದ್ದಾಳೆ. ತನ್ನ ಮಗ ಈಗ ಖುಷಿಯಾಗಿದ್ದಾನೆ ಎಂದು ತನ್ನಷ್ಟಕ್ಕೆ ತಾನೇ ಅಂದುಕೊಂಡಿದ್ದಾಳೆ. ಆದರೆ ವೈಷ್ಣವ್ ಮಾತ್ರ ಬರಿ ಲಕ್ಷ್ಮೀ ನೆನಪಲ್ಲೇ ಕೊರಗುತ್ತಿದ್ದಾನೆ. ಆದರೆ ಬೆಳಿಗ್ಗೆ ಆಗುವಷ್ಟರಲ್ಲಿ ವೈಷ್ಣವ್‌ಗಾಗಿ ನಾನಾ ರೀತಿಯ ಅಡುಗೆಯನ್ನು ಕಾವೇರಿ ಮಾಡಿರುತ್ತಾಳೆ. ಅವನು ಎದ್ದ ತಕ್ಷಣ ಅವನಿಗೆ ಬಡಿಸಬೇಕು ಎಂದುಕೊಂಡಿರುತ್ತಾಳೆ. ಆದ್ರೆ ಇದನ್ನೆಲ್ಲ ನೋಡಿ ಸುಪ್ರಿತಾಗೆ ಕೋಪ ಬರಿತ್ತದೆ. ಮನೆಯಲ್ಲಿ ಲಕ್ಷ್ಮೀ ಇಲ್ಲದೇ ಇರುವ ಸಂದರ್ಭದಲ್ಲಿ ನಿಮಗೆ ಯಾಕೆ ಇಷ್ಟು ಸಡಗರ ಅತ್ಗೆ? ಇಷ್ಟೊಂದು ವೆರೈಟಿ ಅಡುಗೆ ಮಾಡಿದೀರಾ? ನಿಮಗೆ ಅವಳು ಇಲ್ಲ ಅಂದ್ರೆ ತುಂಬಾ ಖುಷಿ ತಾನೇ? ಎಂದು ಪ್ರಶ್ನೆ ಮಾಡುತ್ತಾಳೆ.
ಕಾವೇರಿ ಅಂದುಕೊಂಡಂತೆ ಆಗಲೇ ಇಲ್ಲ
ಆಗ ಕಾವೇರಿ ಬೇಕು ಎಂದೇ ಮೊಸಳೆ ಕಣ್ಣೀರು ಹಾಕುತ್ತಾಳೆ. ಇಲ್ಲ ನೀನು ಅಂದುಕೊಂಡ ಹಾಗೆ ಇಲ್ಲಿ ಏನೂ ಇಲ್ಲ ಎಂದು ಸುಳ್ಳು ಹೇಳುತ್ತಾಳೆ. “ಯಾಕೆ ನೀನು ನನ್ನ ಮೇಲೆ ಈ ರೀತಿ ಅನುಮಾನ ಪಡ್ತೀಯಾ ಅಂತ ಗೊತ್ತೇ ಆಗೋದಿಲ್ಲ. ಯಾವಾಗ ನೋಡಿದ್ರೂ ನನ್ನ ಕೆಟ್ಟವಳನ್ನಾಗಿ ಮಾಡ್ತಾ ಇರ್ತೀಯಾ” ಎಂದು ಕಾವೇರಿ ಸುಪ್ರಿತಾ ಹತ್ತಿರ ಹೇಳುತ್ತಾ ಅಳುತ್ತಾಳೆ. ಆಗ ಕೃಷ್ಣ ಬಂದು ಸಮಾಧಾನ ಮಾಡುತ್ತಾನೆ. ಇನ್ನು ವೈಷ್ಣವ್ ಎದ್ದು ಬಂದು ತಿಂಡಿ ನೋಡಿ ಖುಷಿಯಾಗ್ತಾನೆ.
“ಅಮ್ಮ ಇಷ್ಟೊಂದೆಲ್ಲ ನೀನೇ ಮಾಡ್ದ್ಯಾ? ನಂಗೊತ್ತಿತ್ತು ಅತ್ತೆ ಸೊಸೆ ಜಗಳ ಎಷ್ಟೊತ್ತೂ ಇರೋದಿಲ್ಲ ಅಂತ. ನೋಡು ನೀನೇ ಈಗ ಮಹಾಲಕ್ಷ್ಮೀಗೆ ತಗೊಂಡು ಹೋಗಿ ಕೊಡೋಖೆ ಅಂತ ಎಷ್ಟೊಂದು ತಿಂಡಿ ಮಾಡಿದಿಯಾ? ಅಲ್ವ?” ಎಂದು ಪ್ರಶ್ನೆ ಮಾಡುತ್ತಾನೆ. ಆಗ ವೈಷ್ಣವ್ ಆಲೋಚನೆಯನ್ನು ನೋಡಿ ಕಾವೇರಿ ಶಾಕ್ ಆಗುತ್ತಾಳೆ. ಅವಳು ಈ ರೀತಿ ಯೋಚನೆ ಮಾಡೇ ಇರೋದಿಲ್ಲ. ನಂತರ ವೈಷ್ಣವ್ ಹೇಳುತ್ತಾನೆ ಈ ತಿಂಡಿನಾ ನಾನು ಲಕ್ಷ್ಮೀ ಅವರಿಗೆ ಕೊಟ್ಟು ಬರ್ತೀನಿ ಅಮ್ಮ ನೀನು ನನ್ನ ಜೊತೆ ಬಾ ಎಂದು. ಈಗ ಇಷ್ಟವಿಲ್ಲದಿದ್ದರೂ ಕಾವೇರಿ ಅವನ ಜೊತೆ ಹೋಗಬೇಕಿದೆ.
ಲಕ್ಷ್ಮೀ ಬಾರಮ್ಮ ಧಾರಾವಾಹಿ
ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ಲಕ್ಷ್ಮೀ ಬಾರಮ್ಮ' ಧಾರಾವಾಹಿ ಪ್ರೇಕ್ಷಕರಿಂದ ಭಾರೀ ಮೆಚ್ಚುಗೆ ಪಡೆದುಕೊಂಡಿತ್ತು. ಪ್ರತಿದಿನ ರಾತ್ರಿ 7:30ಕ್ಕೆ ಈ ಧಾರಾವಾಹಿ ಪ್ರಸಾರವಾಗುತ್ತದೆ. ಮೊದಲು ಒಂದಾಗಿದ್ದ ಭಾಗ್ಯಲಕ್ಷ್ಮೀ ಮತ್ತು ಲಕ್ಷ್ಮೀ ಬಾರಮ್ಮ ಈಗ ಎರಡು ಬೇರೆ ಬೇರೆ ಧಾರಾವಾಹಿಗಳಾಗಿ ಯಶಸ್ವಿಯಾಗಿದೆ. ಟಿಆರ್‌ಪಿ ರೇಟಿಂಗ್ಸ್‌ನಲ್ಲೂ ಈ ಧಾರಾವಾಹಿ ಮುಂದಿದೆ.
ಲಕ್ಷ್ಮೀ ಬಾರಮ್ಮ ಪಾತ್ರವರ್ಗ
ವೈಷ್ಣವ್ ಪಾತ್ರದಲ್ಲಿ ಶಮಂತ್ ಗೌಡ (ಬ್ರೋ ಗೌಡ)
ಕೀರ್ತಿ ಪಾತ್ರದಲ್ಲಿ ತನ್ವಿ ರಾವ್
ಲಕ್ಷ್ಮೀ ಪಾತ್ರದಲ್ಲಿ ಭೂಮಿಕಾ ರಮೇಶ್
ಕಾವೇರಿ ಪಾತ್ರದಲ್ಲಿ ಸುಷ್ಮಾ ನಾಣಯ್ಯ
ಸುಪ್ರಿತಾ ಪಾತ್ರದಲ್ಲಿ ರಜನಿ ಪ್ರವೀಣ್ ಅಭಿನಯಿಸುತ್ತಿದ್ದಾರೆ. ಲಕ್ಷ್ಮೀ ಬಾರಮ್ಮ ಧಾರಾವಾಹಿ ಎಲ್ಲಾ ಎಪಿಸೋಡ್‌ಗಳ ಕಥೆಯನ್ನು ಇಲ್ಲಿ ಓದಬಹುದು.