Bigg Boss Kannada: ಮೋಕ್ಷಿತಾ ಹಾಗೂ ಉಗ್ರಂ ಮಂಜುಗೆ ಕಿಚ್ಚನ ಖಡಕ್ ಕ್ಲಾಸ್‌; ನಿಮ್ಮ ಯುದ್ಧ ನಿಮ್ಮದು ಮಾತ್ರ ಎಂದ ಸುದೀಪ್
ಕನ್ನಡ ಸುದ್ದಿ  /  ಮನರಂಜನೆ  /  Bigg Boss Kannada: ಮೋಕ್ಷಿತಾ ಹಾಗೂ ಉಗ್ರಂ ಮಂಜುಗೆ ಕಿಚ್ಚನ ಖಡಕ್ ಕ್ಲಾಸ್‌; ನಿಮ್ಮ ಯುದ್ಧ ನಿಮ್ಮದು ಮಾತ್ರ ಎಂದ ಸುದೀಪ್

Bigg Boss Kannada: ಮೋಕ್ಷಿತಾ ಹಾಗೂ ಉಗ್ರಂ ಮಂಜುಗೆ ಕಿಚ್ಚನ ಖಡಕ್ ಕ್ಲಾಸ್‌; ನಿಮ್ಮ ಯುದ್ಧ ನಿಮ್ಮದು ಮಾತ್ರ ಎಂದ ಸುದೀಪ್

Bigg Boss Kannada: ಬಿಗ್‌ ಬಾಸ್‌ ಮನೆಯಲ್ಲಿ ಈ ವಾರದ ಪಂಚಾಯ್ತಿ ನಡೆಸಿಕೊಡಲು ಸ್ವತಃ ಕಿಚ್ಚ ಸುದೀಪ್ ಬಂದಿದ್ದಾರೆ. ಮೋಕ್ಷಿತಾ ಹಾಗೂ ಉಗ್ರಂ ಮಂಜು ಅವರ ವಿಚಾರವಾಗಿ ಈ ವಾರ ಮಾತುಕತೆ ನಡೆದಿದೆ. ಮೋಕ್ಷಿತಾ ಬದಲಾಗಿದ್ದು ಯಾಕೆ ಎಂಬ ವಿಚಾರವನ್ನು ಇಲ್ಲಿ ಚರ್ಚೆ ಮಾಡಲಾಗುತ್ತಿದೆ.

 ಮೋಕ್ಷಿತಾ ಹಾಗೂ ಉಗ್ರಂ ಮಂಜುಗೆ ಕಿಚ್ಚನ ಖಡಕ್ ಕ್ಲಾಸ್‌
ಮೋಕ್ಷಿತಾ ಹಾಗೂ ಉಗ್ರಂ ಮಂಜುಗೆ ಕಿಚ್ಚನ ಖಡಕ್ ಕ್ಲಾಸ್‌ (ಕಲರ್ಸ್‌ ಕನ್ನಡ)

ಬಿಗ್‌ ಬಾಸ್‌ ಮನೆಯಲ್ಲಿ ಹಿಂದಿನ ವಾರದ ನಾಮಿನೇಷನ್ ನಡೆದಾಗಿನಿಂದ ಒಂದು ರೀತಿಯ ಬದಲಾವಣೆ ಇದೆ. ಹಂಸ ಬಿಗ್‌ ಬಾಸ್‌ ಮನೆಯನ್ನು ಬಿಟ್ಟು ಹೋಗಿದ್ದಾರೆ. ಹೀಗಿರುವಾಗ ಮೋಕ್ಷಿತಾ ಅವರನ್ನೂ ಸಹ ಬಿಗ್ ಬಾಸ್‌ ಮನೆಯಿಂದ ಕಾರ್‌ನಲ್ಲಿ ಕರೆದುಕೊಂಡು ಹೋಗಿರುತ್ತಾರೆ. ಆ ನಂತರದಲ್ಲಿ ಅವರನ್ನು ಮತ್ತೆ ಬಿಗ್‌ ಬಾಸ್‌ ಮನೆಗೆ ವಾಪಸ್ ತಂದು ಬಿಡಲಾಗುತ್ತದೆ. ಈ ಸಂದರ್ಭದಲ್ಲಿ ವಾಪಸ್ ಬರುವ ಹೊತ್ತಿನಲ್ಲಿ ಮೋಕ್ಷಿತಾ ಇನ್ನು ಮುಂದಿನ ದಿನಗಳಲ್ಲಿ ಬೇರೆನೇ ಇದೆ ನನ್ನ ಅಸಲಿ ಆಟ ಅನ್ನುವ ರೀತಿಯಲ್ಲಿ ಮಾತಾಡಿರುತ್ತಾರೆ. ಅದಾದ ನಂತರದಲ್ಲಿ ತ್ರಿವಿಕ್ರಂ ಹಾಗೂ ಪಾರು ನಡುವೆ ಗಲಾಟೆ ಆರಂಭವಾಗುತ್ತದೆ.

ಇದರಲ್ಲಿ ಉಗ್ರಂ ಮಂಜು ಅವರ ಪಾತ್ರವೂ ಇದೆ. ಉಗ್ರಂ ಮಂಜು ಮತ್ತು ತ್ರಿವಿಕ್ರಂ ಮಾತನಾಡಿಕೊಂಡಿರುವ ಒಂದು ವಿಚಾರವನ್ನು ತಂದು ಉಗ್ರಂ ಮಂಜು ಅವರು ಮೋಕ್ಷಿತಾ ಹೇಳಿಕೊಂಡಿರುತ್ತಾರೆ. ಅದೇನೆಂದರೆ ಇನ್ನು ಹತ್ತುವಾರಗಳ ನಂತರ ಇವರ ಅವಶ್ಯಕತೆ ಈ ಮನೆಯಲ್ಲಿ ಇಲ್ಲ ಎಂಬುದಾಗಿ. ನಾನು ಎಷ್ಟು ವಾರ ಇರ್ತೀನಿ ಎಂದು ನಿರ್ಧಾರ ಮಾಡುವುದಕ್ಕೆ ಇವರು ಯಾರು ಎಂದು ಮೋಕ್ಷಿತಾ ರೇಗುತ್ತಾರೆ.

ಇನ್ನು ಬಿಗ್‌ ಬಾಸ್‌ ಮನೆಯ ಹೊರಗಡೆ ತ್ರಿವಿಕ್ರಂ ಪರ ನಿಂತವರು ಹಲವರಿದ್ದಾರೆ. ಮೋಕ್ಷಿತಾ ಹಾಗೂ ಉಗ್ರಂ ಮಂಜು ಮಾಡಿರುವುದು ತಪ್ಪು ಎಂದು ಎಲ್ಲರೂ ಹೇಳುತ್ತಾರೆ. ಇದೇ ವಿಚಾರವನ್ನು ಇಂದಿನ ಪಂಚಾಯ್ತಿಯಲ್ಲಿ ಹೇಳಲಾಗಿದೆ.

ಬಿಗ್‌ ಬಾಸ್‌ ಮನೆಯಲ್ಲಿ ಈ ಎಲ್ಲ ವಿಚಾರ ನಡೆಯಲು ಏನು ಕಾರಣ ಆ ಡ್ರೈವರ್ ನಿಮ್ಮ ಬಳಿ ಏನ್ ಮಾತಾಡಿದ್ರು ಎಂದು ಸುದೀಪ್ ವಿಚಾರಿಸುತ್ತಾರೆ. ಆಗ ಮೋಕ್ಷಿತಾ ಇಲ್ಲ ಸರ್ ಹಾಗೇನಿಲ್ಲ. ಒಂದು ವಾರದಿಂದ ನನ್ನೊಳಗಡೆಯೇ ಇದ್ದ ಮಾತು ಆಚೆ ಬಂತು ಅಷ್ಟೇ ಎಂದು ಹೇಳುತ್ತಾರೆ.

ಆಗ “ಯಾಕೆ ಒಂದು ವಾರದಿಂದ ಆ ಮಾತು ನಿಮ್ಮಲ್ಲೇ ಉಳಿದುಕೊಂಡಿತ್ತು” ಎಂದು ಕಿಚ್ಚ ಕೇಳುತ್ತಾರೆ. ಆಗ ಮೋಕ್ಷಿತಾ “ಇಲ್ಲ ಸರ್ ಈ ಮಾತನ್ನು ಮತ್ತೆ ಹೇಳೋದು ಬೇಡ ಇದು ನಮ್ಮೊಳಗಡೆನೇ ಇರ್ಲಿ ಅನ್ನೋತರ ಮಂಜು ಅವರ ಮಾತು ಇತ್ತು” ಎಂದು ಹೇಳುತ್ತಾರೆ. ಆಗ ಸುದೀಪ್ ಮಂಜು ಅವರಿಗೆ ಒಂದು ಮಾತು ಹೇಳ್ತಾರೆ. “ನಾನು ಹಿಂಗಂದೆ ಅಂತ ಕೇಳ್ಬೇಡ ಅಲ್ಲ, ನಾನಿದಿನಿ ಕೇಳು ಅನ್ಬೇಕು” ಎನ್ನುತ್ತಾರೆ.

Whats_app_banner