logo
ಕನ್ನಡ ಸುದ್ದಿ  /  Entertainment  /  Tiger Prabhakar Birthday Tiger Prabhakar S Third Wife Anju Prabhakar Spoke About Getting Married At The Age Of 17

Tiger prabhakar Birthday: 17ನೇ ವಯಸ್ಸಿಗೆ ಟೈಗರ್‌ ಪ್ರಭಾಕರ್‌ ಜತೆ 3ನೇ ಮದುವೆ; ‘ನನ್ನ ಬದುಕಿನ ಕೆಟ್ಟ ನಿರ್ಧಾರವದು!’ ಎಂದ ಅಂಜು

Mar 30, 2023 12:29 PM IST

ಟೈಗರ್‌ ಪ್ರಭಾಕರ್‌ ಜತೆ 17ನೇ ವಯಸ್ಸಿಗೆ 3ನೇ ಮದುವೆ; ‘ನನ್ನ ಬದುಕಿನ ಕೆಟ್ಟ ನಿರ್ಧಾರವದು!’ ಎಂದ ಅಂಜು ಪ್ರಭಾಕರ್

  • "ನನ್ನದು ಅನಿರೀಕ್ಷಿತವಾಗಿ ನಡೆದ ಮದುವೆ. ಆಗ ನನಗೆ 17 ವಯಸ್ಸು. ಆ ಸಮಯದಲ್ಲಿ ಪ್ರಭಾಕರ್‌ ಅವರು ನೇರವಾಗಿ ನನಗೆ ಅಪ್ರೋಚ್‌ ಮಾಡಲಿಲ್ಲ…

ಟೈಗರ್‌ ಪ್ರಭಾಕರ್‌ ಜತೆ 17ನೇ ವಯಸ್ಸಿಗೆ 3ನೇ ಮದುವೆ; ‘ನನ್ನ ಬದುಕಿನ ಕೆಟ್ಟ ನಿರ್ಧಾರವದು!’ ಎಂದ ಅಂಜು ಪ್ರಭಾಕರ್
ಟೈಗರ್‌ ಪ್ರಭಾಕರ್‌ ಜತೆ 17ನೇ ವಯಸ್ಸಿಗೆ 3ನೇ ಮದುವೆ; ‘ನನ್ನ ಬದುಕಿನ ಕೆಟ್ಟ ನಿರ್ಧಾರವದು!’ ಎಂದ ಅಂಜು ಪ್ರಭಾಕರ್

Tiger prabhakar Birthday: ಸ್ಯಾಂಡಲ್‌ವುಡ್‌ನ ಟೈಗರ್‌ ಎಂದೇ ಖ್ಯಾತರಾದ ನಟ ಟೈಗರ್‌ ಪ್ರಭಾಕರ್‌ ಅವರ ಬರ್ತ್‌ಡೇ ಇಂದು. ಕನ್ನಡದ ಜತೆಗೆ ತೆಲುಗು, ತಮಿಳು ಚಿತ್ರರಂಗದಲ್ಲಿ ನಾಯಕನಾಗಿ ಖಳನಟನಾಗಿ ದೊಡ್ಡ ಮಟ್ಟದ ಹೆಸರು ಮಾಡಿದ್ದರು. ಸಿನಿಮಾ ಹೊರತುಪಡಿಸಿ ವೈಯಕ್ತಿಕ ಜೀವನದ ವಿಚಾರವಾಗಿಯೂ ಅವರು ಹೆಚ್ಚು ಸುದ್ದಿಯಲ್ಲಿದ್ದರು. ಆ ಪೈಕಿ ಇದೀಗ ಟೈಗರ್ ಪ್ರಭಾಕರ್‌ ಅವರ ಮೂರನೇ ಪತ್ನಿ ಅಂಜು ಪ್ರಭಾಕರ್‌, ಏನೂ ಅರಿಯದ ಸಮಯದಲ್ಲಾದ ಮದುವೆಯ ಬಗ್ಗೆ ತೆಲುಗು ಯೂಟ್ಯೂಬ್‌ ಚಾನೆಲ್‌ ಜತೆಗೆ ಮಾತನಾಡಿದ್ದಾರೆ.

ಟ್ರೆಂಡಿಂಗ್​ ಸುದ್ದಿ

ಬಿಗ್‌ಬಾಸ್‌ ಕನ್ನಡ ಸ್ಪರ್ಧಿ ಮೈಕಲ್‌ ಅಜಯ್‌ ದಿನಚರಿ ಏನು, ತೂಕ ಇಳಿಕೆಗೆ ವರ್ಕೌಟ್‌ ಡಯೆಟ್‌ ಹೇಗಿರುತ್ತದೆ? ಫಿಟ್‌ ಆಗಿರಲು ಬಯಸೋರಿಗೆ ಟಿಪ್ಸ್‌

ಬೈಕಾಟ್‌ ಸಾಯಿ ಪಲ್ಲವಿ ಅಭಿಯಾನ, ಇವ್ರಿಗೆ ರಾಮಾಯಣದ ಸೀತೆಯಾಗುವ ಅರ್ಹತೆ ಇಲ್ವಂತೆ; ಸಹಜ ಸುಂದರಿ ಮೇಲೆ ಏಕೆ ಕೋಪ, ಇಲ್ಲಿದೆ ವಿವರ

ಆದಿತ್ಯ- ರಂಜನಿ ರಾಘವನ್‌ ಅಭಿನಯದ ಕಾಂಗರೂ ಸಿನಿಮಾ ಮೇ 3ರಂದು ಬಿಡುಗಡೆ; ಪೀಣ್ಯ ಇಂಡಸ್ಟ್ರಿ ಸ್ನೇಹಿತರ ಸಾಹಸವಿದು

Thandel Movie: ನಾಗ ಚೈತನ್ಯ, ಸಾಯಿ ಪಲ್ಲವಿ ನಟನೆಯ ತಾಂಡೇಲ್ ಡಿಜಿಟಲ್‌ ಹಕ್ಕು ಬಿಡುಗಡೆಗೆ ಮುನ್ನವೇ ದಾಖಲೆ ಮೊತ್ತಕ್ಕೆ ಮಾರಾಟ

ಅಂಜು ಪ್ರಭಾಕರ್‌ ಓರ್ವ ಬಾಲನಟಿಯಾಗಿ ಚಿತ್ರರಂಗದಲ್ಲಿ ಗುರುತಿಸಿಕೊಂಡವರು. ರಾಜಶೇಖರ್ ಅಭಿನಯದ ಶೇಶು ಚಿತ್ರದ ಮೂಲಕ ಬಾಲನಟಿಯಾದ ಅಂಜು, ಅದಾದ ಬಳಿಕ ತಮಿಳು, ಮಲಯಾಳಂ, ಕನ್ನಡ ಸಿನಿಮಾಗಳಲ್ಲಿಯೂ ನಟಿಸಿದ್ದರು. ತೆಲುಗಿನಲ್ಲಿ ಶೋಭನ್ ಬಾಬು, ಚಿರಂಜೀವಿ, ಮೋಹನ್ ಬಾಬು ಮುಂತಾದ ಸ್ಟಾರ್ ಹೀರೋಗಳ ಸಿನಿಮಾಗಳಲ್ಲಿ ನೆಚ್ಚಿನ ಬಾಲ ಕಲಾವಿದೆಯಾಗಿ ಅಂಜು ಮೋಡಿ ಮಾಡಿದ್ದರು. ಆದರೆ 17ನೇ ವಯಸ್ಸಿನಲ್ಲಿ ತೆಗೆದುಕೊಂಡ ನಿರ್ಧಾರ ಆಕೆಯ ಬದುಕನ್ನೇ ಬದಲಿಸಿತ್ತು!

17 ವಯಸ್ಸಿಗೆ ಮದುವೆ, ಮಕ್ಕಳು, ವಿಚ್ಛೇದನ!

ನಟಿ ಅಂಜು ತಮ್ಮ 17ನೇ ವಯಸ್ಸಿಗೆ ಸಿನಿಮಾ ಅವಕಾಶ ಪಡೆದು ಕನ್ನಡಕ್ಕೆ ಬಂದಾಗ, ಟೈಗರ್‌ ಪ್ರಭಾಕರ್‌ ಅವರ ಪರಿಚಯವಾಗುತ್ತದೆ. ಆ ಪರಿಚಯ ಮುಂದೆ ಮದುವೆ ಹಂತಕ್ಕೂ ಹೋಗುತ್ತದೆ. ಅದನ್ನು ಅಂಜು ಅವರ ಮಾತಿನಲ್ಲಿಯೇ ಓದಿ.. "ನನ್ನದು ಅನಿರೀಕ್ಷಿತವಾಗಿ ನಡೆದ ಮದುವೆ. ಆಗ ನನಗೆ 17 ವಯಸ್ಸು. ಆ ಸಮಯದಲ್ಲಿ ಪ್ರಭಾಕರ್‌ ಅವರು ನೇರವಾಗಿ ನನಗೆ ಅಪ್ರೋಚ್‌ ಮಾಡಲಿಲ್ಲ. ಅವರ ಅಸಿಸ್ಟಂಟ್‌ಗಳಿಂದ ಮದುವೆ ವಿಚಾರವನ್ನು ಪ್ರಸ್ತಾಪಪಡಿಸಿದ್ದರು. ಆ ಸಮಯದಲ್ಲಿ ಅವರಿಗೆ ಮದುವೆ ಆಗಿದೆ, ಮಕ್ಕಳಿದ್ದಾರೆ ಎಂಬ ವಿಚಾರ ಗೊತ್ತಿರಲಿಲ್ಲ. ಆಗ ನನಗೆ ಕನ್ನಡವೂ ಬರುತ್ತಿರಲಿಲ್ಲ. ಕನ್ನಡ ಇಂಡಸ್ಟ್ರಿ ನನಗೆ ಹೊಸದು. ಮದುವೆ ವಿಚಾರ ಬರುತ್ತಿದ್ದಂತೆ ಶಾಕ್‌ ಆದೆ..."

ವಯಸ್ಸಲ್ಲಿ ನನ್ನ ಅಪ್ಪನಿಗಿಂತ ದೊಡ್ಡವರು

"ನಾನು ಮದುವೆಗೆ ಮೆಂಟಲಿ ಸಿದ್ಧಳಿರಲಿಲ್ಲ. ಆಗ ನಾನು ಸಿನಿಮಾ ಮಾಡಬೇಕು, ಅದರಲ್ಲೇ ಮುಂದುವರಿಯಬೇಕು ಎಂದು ಹೇಳಿದ್ದೆ. ಪದೇಪದೆ ಮದುವೆ ವಿಚಾರ ಕೇಳುತ್ತಿದ್ದಾಗ, ಅಮ್ಮನ ಹತ್ತಿರ ಕೇಳಿ ಹೇಳುವುದಾಗಿ ಹೇಳಿದ್ದೆ. ಅಮ್ಮನಿಗೆ ಈ ವಿಚಾರ ಹೇಳಿದ ಕೂಡಲೇ ಶಾಕ್‌ ಆದರು. ಏಕೆಂದರೆ, ಪ್ರಭಾಕರ್‌ ಅವರು ವಯಸ್ಸಿನಲ್ಲಿ ನನ್ನ ತಂದೆಗಿಂತ ದೊಡ್ಡವರು. ಇದು ಆಗಲ್ಲ. ಮದುವೆ ಬೇಡ ಎಂದೇ ಮನೆಯಲ್ಲಿ ಹೇಳಿದ್ದರು. ನಾನೇ ಮನೆಗೆ ಬಂದು ಮದುವೆಯ ಅಪ್ರೋಚ್‌ ಮಾಡಿದೆ. ಕೊನೆಗೆ ಪೋಷಕರ ಮನೆಯವರ ಒಪ್ಪಿಗೆ ಪಡೆಯದೇ ಅವರೊಂದಿಗಿದ್ದೆ"

ನಾನು ಪ್ರಭಾಕರ್‌ ಅವರನ್ನು ಮದುವೆ ಆಗಿಲ್ಲ..

"ಅಂದಹಾಗೆ ನನ್ನ ಮತ್ತು ಪ್ರಭಾಕರ್‌ ಅವರ ಮದುವೆ ಆಗಿಲ್ಲ. ಆದರೆ, ಒಟ್ಟಿಗೆ ಒಂದೇ ಮನೆಯಲ್ಲಿದ್ದೇವು. ದಿನ ಕಳೆದಂತೆ ಅಂದರೆ ಆರೇಳು ತಿಂಗಳ ನಂತರ, ನಾನು ಪ್ರಶ್ನೆ ಮಾಡುತ್ತ ಹೋದೆ. ಕೊನೆಗೆ ನಾನು ತಪ್ಪು ನಿರ್ಧಾರ ತೆಗೆದುಕೊಂಡೆ ಎಂದು ಅನಿಸಿದ್ದೂ ಉಂಟು. ಅವರೇ ಬೇಕು, ಅವರೊಂದಿಗೇ ಇರಬೇಕು ಎಂದು ಹೋದ ನಾನು, ಕೊನೆಗೆ ಅಲ್ಲಿ ಹೋದಮೇಲೆ ಜೀವನವೇ ಸಾಕೆನಿಸಿತು. ಇದು ನನಗೆ ಸರಿಹೊಂದುವ ಲೈಫ್‌ ಅಲ್ಲ ಅನಿಸಿತು. ಆ ಸಮಯದಲ್ಲಿ ಗರ್ಭಿಣಿ ಆದೆ. ಮಗುವನ್ನು ತೆಗೆದುಕೊಂಡು ಹೊರಬಂದೆ. ಅಪ್ಪ ಅಮ್ಮನ ಮನೆಯಲ್ಲಿಯೇ ಉಳಿದೆ. ಮನೆಗೆ ಬಂದು ಏಳೆಂಟು ತಿಂಗಳ ಬಳಿಕ ಮತ್ತೆ ಸಿನಿಮಾ ಕೆಲಸಗಳಲ್ಲಿ ಬಿಜಿಯಾದೆ" ಎಂದು ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ.

ಸಿನಿಮಾ, ಕನ್ನಡ ಕಿರುತೆರೆ, ರಿಯಾಲಿಟಿ ಶೋ ಮತ್ತು ಒಟಿಟಿ ಕುರಿತ ಅಪ್‌ಡೇಟ್‌ಗಳಿಗಾಗಿ, "ಹಿಂದೂಸ್ತಾನ್ ಟೈಮ್ಸ್ ಕನ್ನಡ" ವೆಬ್‌ಸೈಟ್ ನೋಡಿ

    ಹಂಚಿಕೊಳ್ಳಲು ಲೇಖನಗಳು