logo
ಕನ್ನಡ ಸುದ್ದಿ  /  ಮನರಂಜನೆ  /  ನಾನು ಮದುವೆ ಆದಾಗ ಪವನ್‌ ಕಲ್ಯಾಣ್‌ 5ನೇ ಕ್ಲಾಸ್‌ ಓದುತ್ತಿದ್ದ, ಈಗಲೂ ಆತ ನನಗೆ ಮಗುವಿದ್ದಂತೆ, ಅದಕ್ಕೇ ಪ್ರೀತಿ ಹೆಚ್ಚು;ತೆಲುಗು ನಟ ಚಿರಂಜೀವಿ

ನಾನು ಮದುವೆ ಆದಾಗ ಪವನ್‌ ಕಲ್ಯಾಣ್‌ 5ನೇ ಕ್ಲಾಸ್‌ ಓದುತ್ತಿದ್ದ, ಈಗಲೂ ಆತ ನನಗೆ ಮಗುವಿದ್ದಂತೆ, ಅದಕ್ಕೇ ಪ್ರೀತಿ ಹೆಚ್ಚು;ತೆಲುಗು ನಟ ಚಿರಂಜೀವಿ

Rakshitha Sowmya HT Kannada

Sep 26, 2024 09:58 AM IST

google News

ನಾನು ಮದುವೆ ಆದಾಗ ಪವನ್‌ ಕಲ್ಯಾಣ್‌ 5ನೇ ಕ್ಲಾಸ್‌ ಓದುತ್ತಿದ್ದ, ಈಗಲೂ ಆತ ನನಗೆ ಮಗುವಿದ್ದಂತೆ; ತೆಲುಗು ನಟ ಚಿರಂಜೀವಿ

  • ತೆಲುಗು ನಟ ಚಿರಂಜೀವಿ ಹಾಗೂ ಪವನ್‌ ಕಲ್ಯಾಣ್‌ ತೆಲುಗು ಚಿತ್ರರಂಗದಲ್ಲಿ ಕೋಟ್ಯಂತರ ಅಭಿಮಾನಿಗಳನ್ನು ಹೊಂದಿದ್ದಾರೆ. ಚಿರಂಜೀವಿಗೆ ಮತ್ತೊಬ್ಬ ತಮ್ಮ ನಾಗಬಾಬು ಇದ್ದರೂ ಪವನ್‌ ಕಲ್ಯಾಣ್‌ ಮೇಲೆ ಒಂದು ಪಟ್ಟು ಪ್ರೀತಿ ಹೆಚ್ಚು ಇದಕ್ಕೆ ಕಾರಣ ಏನು ಎಂಬುದನ್ನು ಚಿರಂಜೀವಿ ಕಾರ್ಯಕ್ರಮದಲ್ಲಿ ಹೇಳಿಕೊಂಡಿದ್ದಾರೆ. 

ನಾನು ಮದುವೆ ಆದಾಗ ಪವನ್‌ ಕಲ್ಯಾಣ್‌ 5ನೇ ಕ್ಲಾಸ್‌ ಓದುತ್ತಿದ್ದ, ಈಗಲೂ ಆತ ನನಗೆ ಮಗುವಿದ್ದಂತೆ; ತೆಲುಗು ನಟ ಚಿರಂಜೀವಿ
ನಾನು ಮದುವೆ ಆದಾಗ ಪವನ್‌ ಕಲ್ಯಾಣ್‌ 5ನೇ ಕ್ಲಾಸ್‌ ಓದುತ್ತಿದ್ದ, ಈಗಲೂ ಆತ ನನಗೆ ಮಗುವಿದ್ದಂತೆ; ತೆಲುಗು ನಟ ಚಿರಂಜೀವಿ (PC: Mega Star Chiranjeevi and Power Star Pawan Kalyan)

ಒಂದೇ ಕುಟುಂಬದಿಂದ ಬಂದ ಮೆಗಾ ಸ್ಟಾರ್‌ ಚಿರಂಜೀವಿ ಹಾಗೂ ಪವನ್‌ ಕಲ್ಯಾಣ್‌ ಟಾಲಿವುಡ್‌ನಲ್ಲಿ ದೊಡ್ಡ ಹೆಸರು ಸಂಪಾದಿಸಿದ್ದಾರೆ. ಚಿರಂಜೀವಿ ರಾಜಕೀಯಕ್ಕೆ ಬಂದವರೇ ಅದರಲ್ಲಿ ಯಶಸ್ಸು ಸಾಧಿಸಲಾಗದೆ ದೂರ ಉಳಿದಿದ್ದಾರೆ. ಆದರೆ ಪವನ್‌ ಕಲ್ಯಾಣ್‌ ಜನಸೇನಾ ಪಕ್ಷವನ್ನು ಸ್ಥಾಪಿಸಿ ಅದರಲ್ಲಿ ಸಕ್ಸಸ್‌ ಆಗಿದ್ದಾರೆ.

ನಾಗಬಾಬುಗಿಂತ ಪವನ್‌ ಕಲ್ಯಾಣ್‌ ಮೇಲೆ ಒಂದು ಪಟ್ಟು ಹೆಚ್ಚು ಪ್ರೀತಿ

ಸಿನಿಮಾಗಳಿಗಿಂತ ಹೆಚ್ಚಾಗಿ ರಾಜಕೀಯದಲ್ಲಿ ಬ್ಯುಸಿ ಇದ್ದಾರೆ. ಇತ್ತೀಚೆಗೆ ಆಂಧ್ರ ಪ್ರದೇಶದ ಡಿಸಿಎಂ ಆಗಿ ಕೂಡಾ ಅಧಿಕಾರ ಸ್ವೀಕರಿಸಿದ್ದಾರೆ. ಪವನ್‌ ಕಲ್ಯಾಣ್‌ ಎಲೆಕ್ಷನ್‌ನಲ್ಲಿ ಗೆದ್ದಾಗ ಕೊನಿಡೇಲ ಕುಟುಂಬದವರು ಹಬ್ಬದಂತೆ ಸಂಭ್ರಮಿಸಿದದರು. ನಟ ಚಿರಂಜೀವಿ ಇತ್ತೀಚೆಗೆ ಚಿತ್ರರಂಗದಲ್ಲಿ ಯಾರೂ ಮಾಡಿರದ ಸಾಧನೆ ಮಾಡಿ ದಾಖಲೆ ಬರೆದಿದ್ದಾರೆ. ತಮ್ಮ 46 ವರ್ಷಗಳ ಸಿನಿ ಜರ್ನಿಯಲ್ಲಿ ಮೆಗಾಸ್ಟಾರ್‌ 156 ಸಿನಿಮಾಗಳ 537 ಹಾಡುಗಳಲ್ಲಿ 24,000 ಡಾನ್ಸ್‌ ಸ್ಟೆಪ್ಸ್‌ ಹಾಕಿ ಹೊಸ ದಾಖಲೆ ಬರೆದಿದ್ದಾರೆ. ಇದಕ್ಕಾಗಿ ಇತ್ತೀಚೆಗೆ ಅವರಿಗೆ ಪ್ರಶಸ್ತಿ ಕೂಡಾ ದೊರೆತಿದೆ. ಹೀಗೆ ಅಣ್ಣ ತಮ್ಮ ಇಬ್ಬರೂ ಸಾಧನೆಯ ಶಿಖರವೇರಿದ್ದಾರೆ. ಚಿರಂಜೀವಿಗೆ ಮತ್ತೊಬ್ಬ ತಮ್ಮ ನಾಗಬಾಬು ಇದ್ದಾರೆ, ಆತ ಕೂಡಾ ಚಿತ್ರರಂದಲ್ಲಿ ಗುರುತಿಸಿಕೊಂಡಿದ್ದಾರೆ. ಆದರೂ ಚಿರಂಜೀವಿಗೆ ನಾಗಬಾಬುಗಿಂತ ಪವನ್‌ ಕಲ್ಯಾಣ್‌ ಎಂದರೆ ಏನೋ ಒಂದು ರೀತಿಯ ಪ್ರೀತಿ, ಅದಕ್ಕೆ ಕಾರಣವೇನು ಎಂಬುದನ್ನು ಇತ್ತೀಚೆಗೆ ಚಿರಂಜೀವಿ ರಿವೀಲ್‌ ಮಾಡಿದ್ದಾರೆ.

ಪವನ್‌ ಕಲ್ಯಾಣ್‌ ನನಗೆ ಇನ್ನೂ ಪುಟ್ಟ ಮಗು ಇದ್ದಂತೆ

ನಾನು ಚಿತ್ರರಂಗಕ್ಕೆ ಬಂದಾಗ ಪವನ್‌ ಕಲ್ಯಾಣ್‌ ಬಹಳ ಚಿಕ್ಕವನು. ನಾನು ಸುರೇಖಾ ಮದುವೆ ಆದಾಗ ಪವನ್‌, 5 ನೇ ತರಗತಿಯಲ್ಲಿ ಓದುತ್ತಿದ್ದ, ಮದ್ರಾಸ್‌ನಲ್ಲಿ ಓದಿಕೊಂಡು ನಮ್ಮ ಮನೆಯಲ್ಲಿ ಇರುತ್ತಿದ್ದ. ಆಗ ಅವನು ನನ್ನ ಪುಟ್ಟ ಮಗುವಿನಂತೆ ತುಂಟಾಟ ಮಾಡಿಕೊಂಡು ಇದ್ದ. ತಮ್ಮ ಎನ್ನುವುದಕ್ಕಿಂತ ಹೆಚ್ಚಾಗಿ ಅವನು ನನಗೆ ಮಗ ಇದ್ದಂತೆ. ಮತ್ತೊಬ್ಬ ತಮ್ಮ ನಾಗಬಾಬು, ತಂಗಿ ವಿಜಯ ದುರ್ಗಾ ಜೊತೆಯಾಗಿ ಬೆಳೆದೆವು. ಆದರೆ ಮಾಧವಿ ಹಾಗೂ ಪವನ್‌ ಕಲ್ಯಾಣ್‌ ಹುಟ್ಟುವ ವೇಳೆಗೆ ನಾನು ಬೇರೆ ಕಡೆ ಓದುತ್ತಿದ್ದೆ, ರಜೆ ಸಿಕ್ಕಾಗ ಮಾತ್ರ ಊರಿಗೆ ಹೋಗಿ ಅವರನ್ನು ನೋಡಿ ಬರುತ್ತಿದ್ದೆ. ಆದ್ದರಿಂದ ನನಗೆ ಅವರೆಂದರೆ ಬಹಳ ಇಷ್ಟ. ಅವರನ್ನು ಆಗ ಬಹಳ ಮಿಸ್‌ ಮಾಡಿಕೊಳ್ಳುತ್ತಿದ್ದೆ, ಈಗಲೂ ಪವನ್‌ ಕಲ್ಯಾಣ್‌ ನನ್ನ ಹಿರಿಯ ಮಗನಂತೆ ಫೀಲ್‌ ಆಗುತ್ತಾನೆ. ಅದೇ ಕಾರಣಕ್ಕೆ ನನಗೆ ಅವನ ಬಗ್ಗೆ ಸ್ವಲ್ಪ ಹೆಚ್ಚು ಪ್ರೀತಿ ಎಂದು ಹೇಳಿಕೊಂಡಿದ್ದಾರೆ.

ಅಣ್ಣನನ್ನು ಗೌರವಿಸುವ ಪವನ್‌ ಕಲ್ಯಾಣ್

ಪವನ್‌ ಕಲ್ಯಾಣ್‌ ಕೂಡಾ ಹಿರಿಯಣ್ಣನನ್ನು ದೇವರಂತೆ ನೋಡುತ್ತಾರೆ. ಚುನಾವಣೆಯಲ್ಲಿ ಗೆದ್ದಾಗ ಅಮ್ಮನೊಂದಿಗೆ ಅಣ್ಣನ ಕಾಲಿಗೆ ಬಿದ್ದು ಕೂಡಾ ನಮಸ್ಕರಿಸಿದ್ದರು. ಈ ವಿಡಿಯೋ ವೈರಲ್‌ ಆಗಿತ್ತು. ಇಂದು ನಾನು ಈ ಸ್ಥಾನದಲ್ಲಿರಲು ಕೋಟ್ಯಂತರ ಅಭಿಮಾನಿಗಳನ್ನು ಗಳಿಸಲು ಅಣ್ಣನೇ ಕಾರಣ ಎಂದು ಅನೇಕ ಬಾರಿ ಹೇಳಿಕೊಂಡಿದ್ದಾರೆ. ನನಗೆ ಸಿನಿಮಾದಲ್ಲಿ ಹೀರೋ ಆಗಬೇಕೆಂಬ ಆಸೆ ಇರಲಿಲ್ಲ. ಅಣ್ಣನಿಗಾಗಿ ನಾನು ಚಿತ್ರರಂಗಕ್ಕೆ ಬಂದೆ ಎಂದು ಹೇಳಿಕೊಳ್ಳುವ ಪವನ್‌ ಕಲ್ಯಾಣ್‌, ಈಗ ತಮ್ಮದೇ ಮ್ಯಾನಸಿರಂ ಕ್ರಿಯೇಟ್‌ ಮಾಡಿದ್ದಾರೆ. ಚಿರಂಜೀವಿಗಿಂತ ಪವನ್‌ ಕಲ್ಯಾಣ್‌ಗೆ ಅಭಿಮಾನಿಗಳು ಹೆಚ್ಚು ಎನ್ನಬಹುದು.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ