logo
ಕನ್ನಡ ಸುದ್ದಿ  /  ಮನರಂಜನೆ  /  ‘ಧರ್ಮ ಮರುಸ್ಥಾಪನೆಯತ್ತ ಹೆಜ್ಜೆ ಹಾಕುವ ಸಮಯ ಬಂದಿದೆ’ ಎನ್ನುತ್ತಲೇ 11 ದಿನಗಳ ಪ್ರಾಯಶ್ಚಿತ ದೀಕ್ಷೆ ಕೈಗೊಂಡ ಪವನ್‌ ಕಲ್ಯಾಣ್‌

‘ಧರ್ಮ ಮರುಸ್ಥಾಪನೆಯತ್ತ ಹೆಜ್ಜೆ ಹಾಕುವ ಸಮಯ ಬಂದಿದೆ’ ಎನ್ನುತ್ತಲೇ 11 ದಿನಗಳ ಪ್ರಾಯಶ್ಚಿತ ದೀಕ್ಷೆ ಕೈಗೊಂಡ ಪವನ್‌ ಕಲ್ಯಾಣ್‌

Sep 22, 2024 02:16 PM IST

google News

ಪ್ರಾಯಶ್ಚಿತ ದೀಕ್ಷೆ ಪಡೆದ ಆಂಧ್ರ ಪ್ರದೇಶ ಉಪಮುಖ್ಯಮಂತ್ರಿ ಪವನ್‌ ಕಲ್ಯಾಣ್‌

    • Tirupati Laddu Row: ಈ ಹಿಂದಿನ ಸರ್ಕಾರದ ಅವಧಿಯಲ್ಲಿ ತಿರುಮಲ ಶ್ರೀವಾರಿ ಲಡ್ಡುವಿನಲ್ಲಿ ಪ್ರಾಣಿಗಳ ಕೊಬ್ಬು ಮಿಶ್ರಣ ವಿಚಾರ ಇಡೀ ದೇಶವನ್ನೇ ಬೆಚ್ಚಿಬೀಳಿಸಿದೆ. ಈ ನಿಟ್ಟಿನಲ್ಲಿ ಆಂಧ್ರದ ಡಿಸಿಎಂ ಪವನ್‌ ಕಲ್ಯಾಣ್‌ 11 ದಿನಗಳ ಕಾಲ ಪ್ರಾಯಶ್ಚಿತ ದೀಕ್ಷೆ ಪಡೆದುಕೊಂಡಿದ್ದಾರೆ.
ಪ್ರಾಯಶ್ಚಿತ ದೀಕ್ಷೆ ಪಡೆದ ಆಂಧ್ರ ಪ್ರದೇಶ ಉಪಮುಖ್ಯಮಂತ್ರಿ ಪವನ್‌ ಕಲ್ಯಾಣ್‌
ಪ್ರಾಯಶ್ಚಿತ ದೀಕ್ಷೆ ಪಡೆದ ಆಂಧ್ರ ಪ್ರದೇಶ ಉಪಮುಖ್ಯಮಂತ್ರಿ ಪವನ್‌ ಕಲ್ಯಾಣ್‌

Tirupathi Laddu Row: ಆಂಧ್ರಪ್ರದೇಶದ ಉಪ ಮುಖ್ಯಮಂತ್ರಿ ಪವನ್ ಕಲ್ಯಾಣ್ 11 ದಿನಗಳ ಪ್ರಾಯಶ್ಚಿತ್ತ ದೀಕ್ಷೆ ಕೈಗೊಂಡಿದ್ದಾರೆ. ತಿರುಮಲ ಶ್ರೀವಾರಿ ಲಡ್ಡುವಿನಲ್ಲಿ ಪ್ರಾಣಿಗಳ ಕೊಬ್ಬು ಮಿಶ್ರಣ ಆಗಿದ್ದರಿಂದ ಈ ನಿರ್ಧಾರಕ್ಕೆ ಬಂದಿದ್ದಾರೆ. ಈ ನಿಮಿತ್ತ ಭಾನುವಾರ ಬೆಳಗ್ಗೆ ಗುಂಟೂರು ಜಿಲ್ಲೆಯ ನಂಬೂರು ಗ್ರಾಮದ ದಶಾವತಾರ ವೆಂಕಟೇಶ್ವರ ಸ್ವಾಮಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿ ದೀಕ್ಷೆ ಪಡೆದರು. 11 ದಿನಗಳ ದೀಕ್ಷೆಯ ನಂತರ ತಿರುಮಲ ವೆಂಕಟೇಶ್ವರನ ದರ್ಶನ ಮಾಡಲಿದ್ದಾರೆ ಪವನ್‌ ಕಲ್ಯಾಣ್. ಈ ದೀಕ್ಷೆ ಕೈಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಸುದೀರ್ಘವಾದ ಸೋಷಿಯಲ್‌ ಮೀಡಿಯಾ ಪೋಸ್ಟ್‌ ಹಂಚಿಕೊಂಡಿದ್ದಾರೆ.

ಪ್ರಾಯಶ್ಚಿತ ದೀಕ್ಷೆ ಪಡೆದ ಪವನ್‌ ಕಲ್ಯಾಣ್‌

“ಪವಿತ್ರವೆಂದು ಪರಿಗಣಿಸಲ್ಪಟ್ಟಿರುವ ತಿರುಮಲ ಲಡ್ಡು ಪ್ರಸಾದ... ಹಿಂದಿನ ಆಡಳಿತರೂಢ ಸರ್ಕಾರದ ಹೀನ ಪ್ರವೃತ್ತಿಯ ಫಲವಾಗಿ ಅಶುದ್ಧವಾಗಿದೆ. ಪ್ರಾಣಿಗಳ ಅವಶೇಷಗಳಿಂದ ಕಲುಷಿತಗೊಂಡಿದೆ. ಮುಕ್ತ ಮನಸ್ಸಿನವರು ಮಾತ್ರ ಇಂತಹ ಪಾಪಕ್ಕೆ ಬಲಿಯಾಗುತ್ತಾರೆ. ಈ ಪಾಪವನ್ನು ಆರಂಭದಲ್ಲೇ ಪತ್ತೆ ಹಚ್ಚಲು ಸಾಧ್ಯವಾಗದಿರುವುದು ಹಿಂದೂ ಜಾತಿಗೇ ಕಳಂಕ!”

ತಪ್ಪಿತಸ್ಥ ಭಾವನೆ ನನ್ನನ್ನು ಕಾಡುತ್ತಿದೆ..

“ಲಡ್ಡು ಪ್ರಸಾದದಲ್ಲಿ ಪ್ರಾಣಿಗಳ ಕೊಬ್ಬು ಮಿಶ್ರಣವಿದೆ ಎಂದು ತಿಳಿದ ಕ್ಷಣವೇ ನನ್ನ ಮನಸ್ಸು ಛಿದ್ರವಾಯಿತು. ತಪ್ಪಿತಸ್ಥ ಭಾವನೆ. ಜನರ ಹಿತಕ್ಕಾಗಿ ಹೋರಾಟ ನಡೆಸುತ್ತಿರುವ ನನಗೆ ಆರಂಭದಲ್ಲೇ ಇಂತಹ ತೊಂದರೆ ಗಮನಕ್ಕೆ ಬಾರದಿರುವುದು ನೋವು ತಂದಿದೆ. ಕಲಿಯುಗದ ದೇವರಾದ ಬಾಲಾಜಿಗೆ ಆದ ಈ ಘೋರ ಅನ್ಯಾಯಕ್ಕೆ ಸನಾತನ ಧರ್ಮದಲ್ಲಿ ನಂಬಿಕೆ ಇರುವ ಪ್ರತಿಯೊಬ್ಬರೂ ಪ್ರಾಯಶ್ಚಿತ್ತ ಮಾಡಿಕೊಳ್ಳಬೇಕು. ಅದರ ಭಾಗವಾಗಿ ನಾನು ಪ್ರಾಯಶ್ಚಿತ್ತ ದೀಕ್ಷೆಯನ್ನು ಮಾಡಲು ನಿರ್ಧರಿಸಿದ್ದೇನೆ”

ಗುಂಟೂರಿನ ನಂಬೂರಲ್ಲಿ ದೀಕ್ಷೆ

“ಸೆಪ್ಟೆಂಬರ್ 22 ರಂದು, ಭಾನುವಾರ ಬೆಳಗ್ಗೆ, ನಾನು ಗುಂಟೂರು ಜಿಲ್ಲೆಯ ನಂಬೂರು ಶ್ರೀ ದಶಾವತಾರ ವೆಂಕಟೇಶ್ವರ ಸ್ವಾಮಿ ದೇವಸ್ಥಾನದಲ್ಲಿ ದೀಕ್ಷೆಯನ್ನು ತೆಗೆದುಕೊಳ್ಳುತ್ತೇನೆ. 11 ದಿನಗಳ ಕಾಲ ದೀಕ್ಷೆ ಮುಂದುವರಿಸಿದ ಬಳಿಕ ತಿರುಮಲ ಶ್ರೀ ವೆಂಕಟೇಶ್ವರ ಸ್ವಾಮಿಯ ದರ್ಶನ ಮಾಡುತ್ತೇನೆ. ‘ದೇವರೇ...ಹಿಂದಿನ ಸರ್ಕಾರ ನಿಮ್ಮ ವಿರುದ್ಧ ಮಾಡಿದ ಪಾಪವನ್ನು ತೊಳೆದುಕೊಳ್ಳುವ ಶಕ್ತಿ ಕೊಡು’ ಎಂದು ಬೇಡಿಕೊಳ್ಳುತ್ತೇನೆ”

“ದೇವರಲ್ಲಿ ನಂಬಿಕೆಯಿಲ್ಲದ ಮತ್ತು ಪಾಪದ ಭಯವಿಲ್ಲದವರು ಮಾತ್ರ ಇಂತಹ ಅಪರಾಧಗಳಲ್ಲಿ ತೊಡಗುತ್ತಾರೆ. ತಿರುಮಲ ತಿರುಪತಿ ದೇವಸ್ತಾನಂ ವ್ಯವಸ್ಥೆಯ ಅಂಗವಾಗಿರುವ ಪಾಲಿಕೆ ಸದಸ್ಯರು, ನೌಕರರು ಕೂಡ ಅಲ್ಲಿನ ತಪ್ಪುಗಳನ್ನು ಪತ್ತೆ ಹಚ್ಚಲು ಸಾಧ್ಯವಾಗುತ್ತಿಲ್ಲ, ಗೊತ್ತಿದ್ದರೂ ಅದರ ಬಗ್ಗೆ ಮಾತನಾಡುತ್ತಿಲ್ಲ ಎಂಬುದು ನನ್ನ ನೋವು. ಆ ಕಾಲದ ರಾಕ್ಷಸ ದೊರೆಗಳಿಗೆ ಅವರು ಹೆದರುತ್ತಿದ್ದರು ಎಂದು ತೋರುತ್ತದೆ”

ಧರ್ಮ ಮರುಸ್ಥಾಪನೆಯತ್ತ ಹೆಜ್ಜೆ ಹಾಕುವ ಸಮಯ

“ವೈಕುಂಠ ಧಾಮವೆಂದೇ ಪರಿಗಣಿತವಾಗಿರುವ ತಿರುಮಲದ ಪಾವಿತ್ರ್ಯತೆ, ಬೋಧನೆ ಮತ್ತು ಧಾರ್ಮಿಕ ಕರ್ತವ್ಯಗಳಿಗೆ ದೂಷಣೆಯ ಕೃತ್ಯ ಎಸಗಿರುವ ಹಿಂದಿನ ಆಡಳಿತಗಾರರ ವರ್ತನೆಯು ಹಿಂದೂ ಧರ್ಮವನ್ನು ಅನುಸರಿಸುವ ಎಲ್ಲರಿಗೂ ನೋವುಂಟು ಮಾಡಿದೆ. ಮತ್ತು ಲಡ್ಡು ಪ್ರಸಾದ ತಯಾರಿಕೆಯಲ್ಲಿ ಪ್ರಾಣಿಗಳ ಅವಶೇಷಗಳಿರುವ ತುಪ್ಪವನ್ನು ಬಳಸಿರುವುದು ಭಾರೀ ಕೋಲಾಹಲಕ್ಕೆ ಕಾರಣವಾಗಿತ್ತು. ಧರ್ಮ ಮರುಸ್ಥಾಪನೆಯತ್ತ ಹೆಜ್ಜೆ ಹಾಕುವ ಸಮಯ ಬಂದಿದೆ. ಧರ್ಮೋ ರಕ್ಷತಿ ರಕ್ಷಿತಃ” ಎಂದು ಪವನ್‌ ಕಲ್ಯಾಣ್‌ ಪೋಸ್ಟ್‌ ಮಾಡಿದ್ದಾರೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ