logo
ಕನ್ನಡ ಸುದ್ದಿ  /  ಮನರಂಜನೆ  /  Roja Selvamani: ಆಸ್ಪತ್ರೆಗೆ ದಾಖಲಾದ ನಟಿ, ಸಚಿವೆ ರೋಜಾ ಸೆಲ್ವಮಣಿ; ಕಲಾವಿದ ಸಿನಿಮಾ ನಾಯಕಿಯ ಆರೋಗ್ಯದ ಬಗ್ಗೆ ವೈದ್ಯರು ಹೇಳಿದ್ದಿಷ್ಟು

Roja Selvamani: ಆಸ್ಪತ್ರೆಗೆ ದಾಖಲಾದ ನಟಿ, ಸಚಿವೆ ರೋಜಾ ಸೆಲ್ವಮಣಿ; ಕಲಾವಿದ ಸಿನಿಮಾ ನಾಯಕಿಯ ಆರೋಗ್ಯದ ಬಗ್ಗೆ ವೈದ್ಯರು ಹೇಳಿದ್ದಿಷ್ಟು

Rakshitha Sowmya HT Kannada

Jun 12, 2023 03:45 PM IST

google News

ಆಸ್ಪತ್ರೆಗೆ ದಾಖಲಾದ ನಟಿ, ಸಚಿವೆ ರೋಜಾ ಸೆಲ್ವಮಣಿ

    • ಸದ್ಯಕ್ಕೆ ರೋಜಾ ಆರೋಗ್ಯ ಪರಿಸ್ಥಿತಿ ಸ್ಥಿರವಾಗಿದ್ದು ಕೆಲವು ದಿನಗಳ ಕಾಲ ರೆಸ್ಟ್‌ನಲ್ಲಿ ಇರಲು ವೈದ್ಯರು ಸೂಚಿಸಿದ್ದಾರೆ ಎಂದು ಟಾಲಿವುಡ್‌ ಮೂಲಗಳು ತಿಳಿಸಿವೆ. ರೋಜಾ ಆದಷ್ಟು ಬೇಗ ಗುಣಮಖರಾಗಲಿ ಎಂದು ಅಭಿಮಾನಿಗಳು ಹಾರೈಸುತ್ತಿದ್ದಾರೆ. 2021ರಲ್ಲಿ ಕೂಡಾ 2 ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು.
ಆಸ್ಪತ್ರೆಗೆ ದಾಖಲಾದ ನಟಿ, ಸಚಿವೆ ರೋಜಾ ಸೆಲ್ವಮಣಿ
ಆಸ್ಪತ್ರೆಗೆ ದಾಖಲಾದ ನಟಿ, ಸಚಿವೆ ರೋಜಾ ಸೆಲ್ವಮಣಿ (PC: Roja Selvamani Facebook)

ನಟಿ, ರಾಜಕಾರಣಿ ರೋಜಾ ಸೆಲ್ವಮಣಿ ಅನಾರೋಗ್ಯದಿಂದ ಆಸ್ಪತ್ರೆ ಸೇರಿಸಿದ್ದಾರೆ. ಒಂದು ಕಾಲದಲ್ಲಿ ಕನ್ನಡ, ತೆಲುಗು, ತಮಿಳು ಸಿನಿಮಾ ರಂಗದಲ್ಲಿ ಸ್ಟಾರ್‌ ನಟಿಯಾಗಿ ಮಿಂಚಿದ್ದ ರೋಜಾ, ಈಗ ಸಿನಿಮಾಗಳಿಂದ ಸಂಪೂರ್ಣ ದೂರ ಉಳಿದಿದ್ದು ರಾಜಕೀಯದಲ್ಲಿ ತೊಡಗಿಸಿಕೊಂಡಿದ್ದಾರೆ, ತಾವು ಇಷ್ಟಪಟ್ಟಂತೆ ಸಚಿವೆ ಕೂಡಾ ಆಗಿದ್ದಾರೆ.

ಇದನ್ನೂ ಓದಿ: ಟಾಲಿವುಡ್‌ ಜಕ್ಕಣ್ಣ ಈಗ ಹೀರೋ; ವೈರಲ್‌ ಆಗ್ತಿದೆ ಸ್ಟಾರ್‌ ನಿರ್ದೇಶಕ ರಾಜಮೌಳಿ ಸ್ಟೈಲಿಷ್‌ ಲುಕ್‌ ವಿಡಿಯೋ, ನೀವೂ ನೋಡಿಬಿಡಿ

ಆಂಧ್ರಪ್ರದೇಶ ಸಿಎಂ ಜಗನ್‌ ಮೋಹನ್‌ ರೆಡ್ಡಿ ಸಚಿವ ಸಂಪುಟದಲ್ಲಿ ರೋಜಾ ಪ್ರವಾಸೋದ್ಯಮ, ಸಂಸ್ಕೃತಿ ಮತ್ತು ಯುವಜನ ಅಭಿವೃದ್ಧಿ ಸಚಿವೆಯಾಗಿದ್ದಾರೆ. ಸದಾ ನೇರ ಮಾತುಗಳು, ದಿಟ್ಟ ವ್ಯಕ್ತಿತ್ವದಿಂದ ಸುದ್ದಿಯಾಗಿದ್ದ ರೋಜಾ, ಕಳೆದ ಮೂರು ದಿನಗಳ ಹಿಂದೆ ಆಸ್ಪತ್ರೆಗೆ ದಾಖಲಾಗಿದ್ದಾರೆ. ರೋಜಾ ವಿಚಾರ ಕೇಳಿ ಅಭಿಮಾನಿಗಳು ಗಾಬರಿ ಆಗಿದ್ದಾರೆ. ಪರಿಚಯದವರಿಗೆ ಕರೆ ಮಾಡಿ ವಿಚಾರಿಸುತ್ತಿದ್ದಾರೆ. ಕೆಲವರಂತೂ ರೋಜಾ ಚಿಕಿತ್ಸೆ ಪಡೆಯುತ್ತಿರುವ ಹೈದರಾಬಾದ್‌ನ ಅಪೋಲೊ ಆಸ್ಪತ್ರೆ ಬಳಿ ಜಮಾಯಿಸಿದ್ದು ರೋಜಾ ಹೆಲ್ತ್‌ ಅಪ್‌ಡೇಟ್‌ ತಿಳಿಯಲು ಕಾಯುತ್ತಿದ್ದಾರಂತೆ.

ಹಿರಿಯ ಮಗನನ್ನು ಕಳೆದುಕೊಂಡಿದ್ದ ನಟ ಪ್ರಭುದೇವ ಬಾಳಲ್ಲಿ ಲಕ್ಷ್ಮಿಯ ಆಗಮನ; ಹೆಣ್ಣು ಮಗುವಿಗೆ ಜನ್ಮ ನೀಡಿದ ಹಿಮಾನಿ ಸಿಂಗ್‌

ಅಷ್ಟಕ್ಕೂ ರೋಜಾಗೆ ಏನಾಯ್ತು ಎಂದು ಫ್ಯಾನ್ಸ್‌ ತಮ್ಮ ತಮ್ಮಲ್ಲೇ ಚರ್ಚೆ ಮಾಡುತ್ತಿದ್ದಾರೆ. ಅಸಲಿಗೆ ರೋಜಾ ಕಾಲು ನೋವಿನಿಂದ ಬಳಲುತ್ತಿದ್ದಾರೆ. ಕಾಲು ನೋವಿನಿಂದ ನಡೆಯಲು ಬಹಳ ಕಷ್ಟವಾಗುತ್ತಿರುವ ಕಾರಣ ರೋಜಾ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದಿದ್ದಾರೆ. ಸದ್ಯಕ್ಕೆ ರೋಜಾ ಆರೋಗ್ಯ ಪರಿಸ್ಥಿತಿ ಸ್ಥಿರವಾಗಿದ್ದು ಶೀಘ್ರದಲ್ಲೇ ಡಿಸ್ಜಾರ್ಜ್‌ ಮಾಡಲಾಗುವುದು. ಮನೆಗೆ ಹೋದ ಬಳಿಕ ಕೆಲವು ದಿನಗಳ ಕಾಲ ರೆಸ್ಟ್‌ನಲ್ಲಿ ಇರಲು ವೈದ್ಯರು ಸೂಚಿಸಿದ್ದಾರೆ ಎಂದು ಟಾಲಿವುಡ್‌ ಮೂಲಗಳು ತಿಳಿಸಿವೆ. ರೋಜಾ ಆದಷ್ಟು ಬೇಗ ಗುಣಮಖರಾಗಲಿ ಎಂದು ಅಭಿಮಾನಿಗಳು ಹಾರೈಸುತ್ತಿದ್ದಾರೆ. 2021ರಲ್ಲಿ ಕೂಡಾ 2 ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು.

ಚಿಕ್ಕ ವಯಸ್ಸಿನಲ್ಲೇ ಪತಿಯನ್ನು ಕಳೆದುಕೊಂಡು ಸಾಕಷ್ಟು ನೋವುಂಡ ಪುಟಾಣಿ ಏಜೆಂಟ್‌ 123 ಬಾಲನಟಿ ಬೇಬಿ ಇಂದಿರಾ ಈಗ ಹೇಗಿದ್ದಾರೆ

ರೋಜಾ ಸೆಲ್ವಮಣಿ 1998ರಲ್ಲಿ ರಾಜಕೀಯ ಪಯಣ ಆರಂಭಿಸಿದರು. 2014 ಹಾಗೂ 2019ರಲ್ಲಿ ಆಂಧ್ರ ಪ್ರದೇಶದ ನಗರಿ ವಿಧಾನಸಭಾ ಕ್ಷೇತ್ರದ ಮೂಲಕ ಸ್ಪರ್ಧಿಸಿ ಶಾಸಕಿಯಾಗಿ ಆಯ್ಕೆ ಆದರು. ರಾಜಕೀಯಕ್ಕೆ ಬಂದ ನಂತರ ಸಿನಿಮಾಗಳಿಂದ ದೂರ ಉಳಿದರೂ ಕಿರುತೆರೆಯಲ್ಲಿ ಗುರುತಿಸಿಕೊಂಡಿದ್ದರು. ರಿಯಾಲಿಟಿ ಶೋನಲ್ಲಿ ಜಡ್ಜ್‌ ಆಗಿದ್ದರು. ಆದರೆ ಜಗನ್‌ ಮೋಹನ್‌ ರೆಡ್ಡಿ ಸರ್ಕಾರದಲ್ಲಿ ಸಚಿವೆ ಸ್ಥಾನ ದೊರೆತ ಕಾರಣ ಜಬರ್ದಸ್ತ್‌ ಶೋಗೆ ಗುಡ್‌ ಬೈ ಹೇಳಿದರು. ರೋಜಾ ಈಗ ಫುಲ್‌ ಟೈಂ ರಾಜಕಾರಣಿ ಆಗಿ ಬ್ಯುಸಿ ಆಗಿದ್ದಾರೆ.

ಕೋಳಿ ರಮ್ಯಾ ಈಗ ಏನು ಮಾಡ್ತಿದ್ದಾರೆ; ಮಿಥುನ ರಾಶಿ ಧಾರಾವಾಹಿ ನಟಿ ಪತಿಯಿಂದ ದೂರಾಗಿದ್ದೇಕೆ, ಮತ್ತೆ ಮದುವೆ ಆಯ್ತಾ?

ರೋಜಾ ಕನ್ನಡ ಸಿನಿಮಾದಲ್ಲಿ ಮೊದಲು ನಟಿಸಿದ ಸಿನಿಮಾ ಗಡಿಬಿಡಿ ಗಂಡ. ನಂತರ ಕಲಾವಿದ, ಪ್ರೇಮೋತ್ಸವ, ಇಂಡಿಪೆಂಡೆನ್ಸ್‌ ಡೇ, ಭಾರತ ನಾರಿ, ಗ್ರಾಮ ದೇವತೆ, ಸುಂದರ ಕಾಂಡ, ಪರ್ವ, ಮೌರ್ಯ ಸಿನಿಮಾಗಳಲ್ಲಿ ನಟಿಸಿದ್ದಾರೆ. ರೋಜಾ ಇದೀಗ ಮಗಳು ಅನ್ಷು ಮಲಿಕಾನನ್ನು ಕೂಡಾ ಚಿತ್ರರಂಗಕ್ಕೆ ಕರೆತರಲು ಪ್ಲಾನ್‌ ಮಾಡುತ್ತಿದ್ದಾರೆ ಎಂಬ ಮಾತು ಕೆಲವು ದಿನಗಳಿಂದ ಹರಿದಾಡುತ್ತಿದೆ. ಆದರೆ ರೋಜಾ ಈ ಸುದ್ದಿಯನ್ನು ಅಧಿಕೃತವಾಗಿ ಅನೌನ್ಸ್‌ ಮಾಡಿಲ್ಲ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ