Ramoji Rao Passed away; 'ಚಿತ್ರ' ಸಿನಿಮಾ ನಿರ್ಮಾಪಕ, ಈ ಟಿವಿ ನೆಟ್‌ವರ್ಕ್ ಮುಖ್ಯಸ್ಥ ರಾಮೋಜಿ ರಾವ್ ಇನ್ನು ನೆನಪು ಮಾತ್ರ
Jun 08, 2024 08:47 AM IST
ಚಿತ್ರ ಸಿನಿಮಾ ನಿರ್ಮಾಪಕ, ಈ ಟಿವಿ ನೆಟ್‌ವರ್ಕ್ ಮುಖ್ಯಸ್ಥ ರಾಮೋಜಿ ರಾವ್ ಇನ್ನು ನೆನಪು ಮಾತ್ರ
Ramoji Rao Passed away: ಈಟಿವಿ ನೆಟ್‌ವರ್ಕ್ ಮುಖ್ಯಸ್ಥ, ಖ್ಯಾತ ಟಾಲಿವುಡ್ ನಿರ್ಮಾಪಕ ರಾಮೋಜಿ ರಾವ್ ಇಂದು ಬೆಳಗ್ಗೆ ಕೊನೆಯುಸಿರೆಳೆದಿದ್ದಾರೆ. ಅವರಿಗೆ 87 ವರ್ಷ ವಯಸ್ಸಾಗಿತ್ತು. ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಅವರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು.
ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಖ್ಯಾತ ಸಿನಿಮಾ ನಿರ್ಮಾಪಕ ರಾಮೋಜಿ ಸಮೂಹ ಸಂಸ್ಥೆಗಳ ಅಧ್ಯಕ್ಷ ರಾಮೋಜಿ ರಾವ್ ಇಂದು ಬೆಳಗ್ಗೆ ನಿಧನರಾಗಿದ್ದಾರೆ. ಅವರಿಗೆ 87 ವರ್ಷ ವಯಸ್ಸಾಗಿತ್ತು. ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ರಾಮೋಜಿ ರಾವ್, ಶನಿವಾರ ಬೆಳಗ್ಗೆ 4.50ಕ್ಕೆ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.
ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ರಾಮೋಜಿ ರಾವ್
ವಯೋಸಹಜ ಕಾಯಿಕೆಯಿಂದ ಬಳಲುತ್ತಿದ್ದ ರಾಮೋಜಿರಾವ್ ಅವರನ್ನು ಹೈದರಾಬಾದ್‌ನ ನಾನಾಕರಮ್‌ಗುಡದಲ್ಲಿ ಇರುವ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ತಜ್ಙ ವೈದ್ಯರು ಅವರಿಗೆ ಚಿಕಿತ್ಸೆ ನೀಡುತ್ತಿದ್ದರು. ಆದರೆ ಚಿಕಿತ್ಸೆಗೆ ಸ್ಪಂದಿಸದ ರಾಮೋಜಿರಾವ್ ಇಂದು ಬೆಳಗ್ಗೆ ಆಸ್ಪತ್ರೆಯಲ್ಲೇ ಕೊನೆಯುಸಿರೆಳೆದಿದ್ದಾರೆ. ರಾಮೋಜಿರಾವ್ ಅವರ ಪಾರ್ಥಿವ ಶರೀರವನ್ನು ರಾಮೋಜಿ ಫಿಲ್ಮ್ ಸಿಟಿಯಲ್ಲಿರುವ ಅವರ ನಿವಾಸಕ್ಕೆ ಕೊಂಡೊಯ್ಯಲಾಗಿದೆ. ಅವರ ನಿವಾಸದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ.
ಸಿನಿಮಾ ನಿರ್ಮಾಣದಲ್ಲೂ ಎತ್ತಿದ ಕೈ
ರಾಮೋಜಿ ರಾವ್ ಈನಾಡು ದಿನ ಪತ್ರಿಕೆ, ಈ ಟಿವಿ ಭಾರತ್ ಸೇರಿದಂತೆ ಮುಂತಾದ ಸಂಸ್ಥೆಗಳನ್ನು ಹುಟ್ಟುಹಾಕುವ ಮೂಲಕ ಮಾಧ್ಯಮ ಕ್ಷೇತ್ರದಲ್ಲಿ ಸಂಚಲನ ಮೂಡಿಸಿದ್ದಾರೆ. ಸಿನಿಮಾ ನಿರ್ಮಾಪಕನಾಗಿ ಗುರುತಿಸಿಕೊಂಡಿದ್ದಾರೆ. ತೆಲುಗು, ಕನ್ನಡ ಹಾಗೂ ಇತರ ಭಾಷೆಗಳಲ್ಲಿ ಅನೇಕ ಸಿನಿಮಾಗಳನ್ನು ನಿರ್ಮಿಸಿದ್ದಾರೆ. 2001ರಲ್ಲಿ ತೆರೆ ಕಂಡ ಚಿತ್ರ ಕನ್ನಡ ಸಿನಿಮಾವನ್ನು ರಾಮೋಜಿ ರಾವ್ ನಿರ್ಮಿಸಿದ್ದರು. ಪ್ರಸಾದ್ , ರೇಖಾ ಅಭಿನಯದ ಈ ಚಿತ್ರವನ್ನು ದಿನೇಶ್ ಬಾಬು ನಿರ್ದೇಶನ ಮಾಡಿದ್ದರು. ಇದು ತೆಲುಗಿನ ಚಿತ್ರಂ ಸಿನಿಮಾ ರೀಮೇಕ್ ಆಗಿದ್ದು ತೆಲುಗಿನಲ್ಲಿ ಕೂಡಾ ರಾಮೋಜಿ ರಾವ್ ನಿರ್ಮಿಸಿದ್ದರು.
ಪ್ರಿಯಾ ಫುಡ್ಸ್ ಸಂಸ್ಥೆ ಒಡೆತನ
ಉಷೋದಯ ಎಂಟರ್‌ಪ್ರೈಸರ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯಡಿ ಅನೇಕ ಬ್ಯುಸ್ನೆಸ್ ಹೊಂದಿರುವ ರಾಮೋಜಿ ರಾವ್ ಅವರು ಪ್ರಿಯಾ ಫುಡ್ ಮಾಲೀಕರು ಕೂಡಾ ಹೌದು. ಕೆಲವು ವರ್ಷಗಳ ಹಿಂದೆ ಈಟಿವಿ ಭಾರತ್ ಮಾಧ್ಯಮ ಸಂಸ್ಥೆ ಆರಂಭವಾಗಿತ್ತು. ಕನ್ನಡ, ಹಿಂದಿ, ತಮಿಳು, ತೆಲುಗು, ಮರಾಠಿ, ಕೇರಳ, ಇಂಗ್ಲೀಷ್, ಬಾಂಗ್ಲಾ ಸೇರಿದಂತೆ ಸುಮಾರು 13 ಭಾಷೆಗಳಲ್ಲಿ ಈಟಿವಿ ಭಾರತ್ ಕಾರ್ಯ ನಿರ್ವಹಿಸುತ್ತಿದೆ. ಮಾಧ್ಯಮ, ಸಿನಿಮಾ, ಕಾರ್ಪೊರೇಟ್ ಸಂಸ್ಥೆಯಲ್ಲಿ ಹೆಸರು ಮಾಡಿರುವ ರಾಮೋಜಿ ರಾವ್ ಯುವ ಜನತೆಗೆ ಮಾದರಿಯಾಗಿದ್ದಾರೆ.
ರಾಮೋಜಿ ಫಿಲ್ಮ್ ಸಿಟಿ
ಇವರ ಖ್ಯಾತ ಫಿಲ್ಮ್ ಸ್ಟುಡಿಯೋ ರಾಮೋಜಿ ಫಿಲ್ಮ್ ಸಿಟಿ ವಿಶ್ವದಲ್ಲೇ ಅತಿ ದೊಡ್ಡ ಫಿಲ್ಮ್ ಸಿಟಿ ಎಂದು ಹೆಸರಾಗಿದೆ. ಪ್ರತಿದಿನ ಸಾವಿರಾರು ಜನರು ರಾಮೋಜಿ ಫಿಲ್ಮ್ ಸಿಟಿ ನೋಡಲು ದೂರದಿಂದ ಬರುತ್ತಾರೆ. ಅನೇಕ ಸಿನಿಮಾಗಳು, ಧಾರಾವಾಹಿಗಳನ್ನು ಇಲ್ಲಿ ಚಿತ್ರೀಕರಿಸಲಾಗಿದೆ. ಬಾಹುಬಲಿ, ಚೆನ್ನೈ ಎಕ್ಸ್‌ಪ್ರೆಸ್, ಕೆಜಿಎಫ್, ದಿ ಡರ್ಟಿ ಪಿಕ್ಚರ್, ಹೆಬ್ಬುಲಿ, ಜಾಗ್ವಾರ್, ಕುರುಕ್ಷೇತ್ರ, ಮಗಧೀರ, ಪುಷ್ಪ, ಆರ್‌ಆರ್‌ಆರ್, ಪೊಗರು ಸೇರಿದಂತೆ ವಿವಿಧ ಭಾಷೆಗಳ ಅನೇಕ ಸಿನಿಮಾಗಳು ರಾಮೋಜಿ ಫಿಲ್ಮ್ ಸಿಟಿಯಲ್ಲಿ ಚಿತ್ರೀಕರಣವಾಗಿದೆ.
ರಾಮೋಜಿ ರಾವ್ ಅವರ ನಿಧನಕ್ಕೆ ಸಿನಿಮಾ ಗಣ್ಯರು, ಅಭಿಮಾನಿಗಳು ಸಂತಾಪ ಸೂಚಿಸಿದ್ದಾರೆ. ಅಂತಿಮ ದರ್ಶನ ಪಡೆಯಲು ಅವರ ನಿವಾಸದತ್ತ ಧಾವಿಸುತ್ತಿದ್ದಾರೆ.