ವಿಜಯ್ 69 ಸಿನಿಮಾ ಒಟಿಟಿ ಬಿಡುಗಡೆ ದಿನಾಂಕ ಪ್ರಕಟ: ತಾತಾನ ಸೈಕ್ಲಿಂಗ್, ಸ್ವಿಮ್ಮಿಂಗ್, ರನ್ನಿಂಗ್; ಅನುಪಮ್ ಖೇರ್ ಟ್ರಯಥ್ಲಾನ್ ಸಾಹಸ
Oct 14, 2024 05:37 PM IST
ವಿಜಯ್ 69 ಸಿನಿಮಾ ಒಟಿಟಿ ಬಿಡುಗಡೆ ದಿನಾಂಕ ಪ್ರಕಟ: ತಾತಾನ ಟ್ರಯಥ್ಲಾನ್ ಸಾಹಸದ ಸಿನಿಮಾ
- ಅನುಪಮ್ ಖೇರ್ ನಟನೆಯ ವಿಜಯ್ 69 ಸಿನಿಮಾದ ಒಟಿಟಿ ಬಿಡುಗಡೆ ದಿನಾಂಕ ಪ್ರಕಟವಾಗಿದೆ. 69 ವರ್ಷ ವಯಸ್ಸಿನಲ್ಲಿ ಸೈಕ್ಲಿಂಗ್, ಈಜು, ರನ್ನಿಂಗ್ ಕಾಂಬಿನೇಷನ್‌ನ ಟ್ರಯಥ್ಲಾನ್ ಸಾಹಸ, ತರಬೇತಿ ನೀಡುವ ತಾತನ ಕಥೆಯನ್ನು ಈ ಚಿತ್ರ ಹೊಂದಿದೆ.
ನೆಟ್‌ಫ್ಲಿಕ್ಸ್ ಮತ್ತು ವೈಆರ್‌ಎಫ್‌ನ ಮುಂಬರುವ ಸಿನಿಮಾ ವಿಜಯ್ 69 ಒಟಿಟಿಯಲ್ಲಿ ಸದ್ಯದಲ್ಲಿಯೇ ಬಿಡುಗಡೆಯಾಗಲಿದೆ. ಅಕ್ಷಯ್ ರಾಯ್ ನಿರ್ದೇಶನದ, ಮನೀಶ್ ಶರ್ಮಾ ನಿರ್ಮಾಣದ ಈ ಚಿತ್ರದಲ್ಲಿ ಅನುಪಮ್ ಖೇರ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ನೆಟ್‌ಫ್ಲಿಕ್ಸ್ ಒಟಿಟಿಯಲ್ಲಿ ನವೆಂಬರ್ 8ರಂದು ಈ ಚಿತ್ರ ಬಿಡುಗಡೆಯಾಗಲಿದೆ. ಇದು ಡೈರೆಕ್ಟ್ ಆಗಿ ಒಟಿಟಿಯಲ್ಲಿ ರಿಲೀಸ್ ಆಗುವ ಸಿನಿಮಾ. ಹೀಗಾಗಿ, ಥಿಯೇಟರ್‌ನಲ್ಲಿ 69 ವರ್ಷದ ತಾತಾನ ಟ್ರಯಥ್ಲಾನ್ ಸಾಹಸ ನೋಡಲಾಗದದು.
ವಿಜಯ್ 69 ಸಿನಿಮಾದಲ್ಲಿ 69 ವರ್ಷ ವಯಸ್ಸಿನ ವ್ಯಕ್ತಿಯು ಸಮಾಜದ ನಿರೀಕ್ಷೆಗಳಿಗೆ ಸವಾಲು ಹಾಕುವಂತೆ ಟ್ರಯಥ್ಲಾನ್‌ಗೆ ತರಬೇತಿ ನೀಡುತ್ತಾನೆ. ಈ ಸ್ಪೂರ್ತಿದಾಯಕ ಸಿನಿಮಾದಲ್ಲಿ ಹಾಸ್ಯ ಮತ್ತು ಭಾವನಾತ್ಮಕ ಅಂಶಗಲೂ ಸಾಕಷ್ಟು ಇವೆ ಎಂದು ಚಿತ್ರತಂಡ ತಿಳಿಸಿದೆ.
ಈ ಸಿನಿಮಾದ ಒಟಿಟಿ ಬಿಡುಗಡೆ ಕುರಿತು ಸೋಷಿಯಲ್ ಮೀಡಿಯಾಗಳಲ್ಲಿ ನೆಟ್‌ಫ್ಲಿಕ್ಸ್ ಅಧಿಕೃತವಾಗಿ ಘೋಷಿಸಿದೆ. ಜಗತ್ತೇ ಒಂದು ಓಟ, ವಿಜಯ್69 ನವೆಂಬರ್ 8ರಂದು ನೆಟ್‌ಫ್ಲಿಕ್ಸ್‌ನಲ್ಲಿ ರಿಲೀಸ್ ಆಗಲಿದೆ ಎಂದು ಒಟಿಟಿ ವೇದಿಕೆಯು ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದೆ.
ನಟ ಅನುಪಮ್ ಖೇರ್‌ಈ ಸಿನಿಮಾ ಬಿಡುಗಡೆಯ ಖುಷಿಯನ್ನು ಹಂಚಿಕೊಂಡಿದ್ದಾರ. "ವಿಜಯ್ 69 ಎನ್ನುವುದು ಕೇವಲ ಚಿತ್ರವಲ್ಲ, ಅದಕ್ಕೂ ಮಿಗಿಲಾದದ್ದು. ಇದು ಉತ್ಸಾಹ, ಪರಿಶ್ರಮ ಮತ್ತು ಮನುಷ್ಯನ ಅಚಲ ಆತ್ಮಕ್ಕೆ ಸಾಕ್ಷಿಯಾಗಿದೆ. ನಮ್ಮ ಕನಸುಗಳನ್ನು ಮುಂದುವರೆಸಲು ವಯಸ್ಸು ಎಂದಿಗೂ ಅಡ್ಡಿಯಾಗುವುದಿಲ್ಲ ಎಂಬ ಸ್ಪೂರ್ತಿದಾಯಕ ಕಥೆಯನ್ನು ಇದು ಹೊಂದಿದೆ" ಎಂದು ಅನುಪಮ್ ಖೇರ್ ಹೇಳಿದ್ದಾರೆ.
ಇದು ನೆಟ್‌ಫ್ಲಿಕ್ಸ್ ಮತ್ತು ವೈಆರ್‌ಎಫ್ ಎಂಟರ್‌ಟೇನ್‌ಮೆಂಟ್‌ನ ನಾಲ್ಕನೇ ಸಹಭಾಗಿತ್ವದ ಸಿನಿಮಾ. ಎಲ್ಲಾ ವಯಸ್ಸಿನ ಪ್ರೇಕ್ಷಕರನ್ನು ಗಮನದಲ್ಲಿಟ್ಟುಕೊಂಡು ಈ ಚಿತ್ರ ರಚಿಸಲಾಗಿದೆ. ನವೆಂಬರ್ 8ರಂದು ಅಂದರೆ, ದೀಪಾವಳಿಯ ನಂತರದ ವಾರದಲ್ಲಿ ಈ ಸ್ಪೂರ್ತಿದಾಯಕ ಚಿತ್ರವು ಆನ್‌ಲೈನ್‌ನಲ್ಲಿ ಸ್ಟ್ರೀಮಿಂಗ್ ಆಗಲಿದೆ.
ಟ್ರಯಥ್ಲಾನ್ ಎಂದರೇನು?
ಟ್ರಯಥ್ಲಾನ್ ಎನ್ನುವುದು ಈಜು , ಸೈಕ್ಲಿಂಗ್ ಮತ್ತು ನಿರ್ದಿಷ್ಟ ದೂರದ ಓಟವನ್ನು ಒಳಗೊಂಡಿರುವ ಸಹಿಷ್ಣುತೆಯ ಬಹುಕ್ರೀಡಾ ಓಟವಾಗಿದೆ. ಈ ಸ್ಪರ್ಧಿಗಳು ಈ ಮೂರು ವಿಭಾಗದಲ್ಲಿ ಸ್ಪರ್ಧಿಸಬೇಕಾಗುತ್ತದೆ. ಇದಕ್ಕಾಗಿ ನಿರಂತರ ತರಬೇತಿ ಅಗತ್ಯವಿರುತ್ತದೆ. ಇದು ಒಂದು ಸ್ಪರ್ಧೆಯಲ್ಲ. ಸ್ಪರ್ಧಿಯು ಮೂರು ಸ್ಪರ್ಧೆಗೆ ಸಿದ್ಧತೆ ನಡೆಸಬೇಕಾಗುತ್ತದೆ. ಮೊದಲನೆಯದಾಗಿ ಅತ್ಯುತ್ತಮ ಈಜು ಪಟುವಾಗಿರಬೇಕು. ಒಳ್ಳೆಯ ಓಟಗಾರ ಆಗಿರಬೇಕು. ಸೈಕ್ಲಿಂಗ್‌ನಲ್ಲೂ ಅತ್ಯುತ್ತಮ ಪರಿಣತಿ ಹೊಂದಿರಬೇಕು.