logo
ಕನ್ನಡ ಸುದ್ದಿ  /  ಮನರಂಜನೆ  /  Naresh -Pavitra Lokesh: ತಮ್ಮದೇ ಕಥೆಯನ್ನು ತೆರೆಮೇಲೆ ತರ್ತಿದ್ದಾರಾ ನರೇಶ್, ಪವಿತ್ರಾ ಲೋಕೇಶ್!? ‘ಮತ್ತೆ ಮದುವೆ’ ಫಸ್ಟ್‌ ಲುಕ್‌ ರಿಲೀಸ್‌

Naresh -Pavitra Lokesh: ತಮ್ಮದೇ ಕಥೆಯನ್ನು ತೆರೆಮೇಲೆ ತರ್ತಿದ್ದಾರಾ ನರೇಶ್, ಪವಿತ್ರಾ ಲೋಕೇಶ್!? ‘ಮತ್ತೆ ಮದುವೆ’ ಫಸ್ಟ್‌ ಲುಕ್‌ ರಿಲೀಸ್‌

HT Kannada Desk HT Kannada

Mar 24, 2023 12:06 PM IST

google News

ತಮ್ಮದೇ ಕಥೆಯನ್ನು ತೆರೆಮೇಲೆ ತರ್ತಿದ್ದಾರಾ ನರೇಶ್, ಪವಿತ್ರಾ ಲೋಕೇಶ್!? ‘ಮತ್ತೆ ಮದುವೆ’ ಫಸ್ಟ್‌ ಲುಕ್‌ ರಿಲೀಸ್‌

  • ಪವಿತ್ರಾ ಲೋಕೇಶ್‌ ಮತ್ತು ನರೇಶ್‌ ಜೋಡಿ ಇದೀಗ ‘ಮತ್ತೆ ಮದುವೆ’ ಸಿನಿಮಾ ಮೂಲಕ ತೆರೆಮೇಲೆ ಬರಲು ಸಿದ್ಧತೆ ನಡೆಸಿದೆ. ಇವರಿಬ್ಬರ ವಿವಾದಗಳೇ ಈ ಚಿತ್ರದ ಕಥೆ ಇರಬಹುದೇ? 

ತಮ್ಮದೇ ಕಥೆಯನ್ನು ತೆರೆಮೇಲೆ ತರ್ತಿದ್ದಾರಾ ನರೇಶ್, ಪವಿತ್ರಾ ಲೋಕೇಶ್!? ‘ಮತ್ತೆ ಮದುವೆ’ ಫಸ್ಟ್‌ ಲುಕ್‌ ರಿಲೀಸ್‌
ತಮ್ಮದೇ ಕಥೆಯನ್ನು ತೆರೆಮೇಲೆ ತರ್ತಿದ್ದಾರಾ ನರೇಶ್, ಪವಿತ್ರಾ ಲೋಕೇಶ್!? ‘ಮತ್ತೆ ಮದುವೆ’ ಫಸ್ಟ್‌ ಲುಕ್‌ ರಿಲೀಸ್‌

Naresh -Pavitra Lokesh: ವಿವಾದ, ಆರೋಪ -ಪ್ರತ್ಯಾರೋಪ, ಕಿತ್ತಾಟ.. ಹೀಗೆ ಹಲವು ವಿಚಾರವಾಗಿ ಸುದ್ದಿಯಾದವರು ನಟಿ ಪವಿತ್ರಾ ಲೋಕೇಶ್‌ ಮತ್ತು ತೆಲುಗು ನಟ ನರೇಶ್‌. ಹಲವು ಏರಿಳಿತಗಳ ಬಳಿಕ ಈ ಜೋಡಿ ಅದ್ದೂರಿಯಾಗಿ ಮದುವೆಯಾಗಿ, ಹನಿಮೂನ್‌ಗೂ ಹೋಗಿ ಬಂದಿತ್ತು. ಅಷ್ಟೇ ಅಲ್ಲ ಸಿನಿಮಾ ಇಂಡಸ್ಟ್ರಿ ಸಹ ಈ ಜೋಡಿಗೆ ಶುಭ ಹಾರೈಸಿತ್ತು. ಆದರೆ, ಇದೆಲ್ಲ ಕೇವಲ ಸಿನಿಮಾ ಸಲುವಾಗಿ ಎಂಬುದು ಕೆಲ ದಿನಗಳ ಹಿಂದಷ್ಟೇ ಬಟಾಬಯಲಾಗಿತ್ತು. ಇದೀಗ ಆ ವಿಚಾರವೇ ಸಿನಿಮಾ ರೂಪದಲ್ಲಿ ಅಧಿಕೃತವಾಗಿ ಘೋಷಣೆ ಆಗಿದೆ. ತೆಲುಗಿನ ಜತೆಗೆ ಕನ್ನಡದಲ್ಲಿ ‘ಮತ್ತೆ ಮದುವೆ’ ಎಂಬ ಶೀರ್ಷಿಕೆಯಲ್ಲಿ ರಿಲೀಸ್‌ ಆಗಲಿದೆ. 

ನರೇಶ್‌ ಹಾಗೂ ಪವಿತ್ರಾ ಲೋಕೇಶ್‌ ನಿಜವಾಗಿಯೂ ಮದುವೆ ಆಗಿಲ್ಲ. ಈ ಜೋಡಿ ‘ಮತ್ತೆ ಮದುವೆ’ ಎಂಬ ಸಿನಿಮಾದಲ್ಲಿ ನಟಿಸಿದೆ. ಆ ಚಿತ್ರದ ಮೇಕಿಂಗ್‌ ದೃಶ್ಯಗಳನ್ನೇ ಸೋಷಿಯಲ್‌ ಮೀಡಿಯಾದಲ್ಲಿ ಶೇರ್‌ ಮಾಡಿಕೊಂಡ ನರೇಶ್‌, ಎಲ್ಲರಿಗೂ ಅಚ್ಚರಿ ಮೂಡಿಸಿದ್ದರು. ಅಷ್ಟೇ ಅಲ್ಲ ಈ ಚಿತ್ರದಲ್ಲಿ ಮುಖ್ಯಭೂಮಿಕೆ ನಿಭಾಯಿಸುವುದರ ಜತೆಗೆ ವಿಜಯ ಕೃಷ್ಣ ಮೂವೀಸ್ ಬ್ಯಾನರ್ ಅಡಿಯಲ್ಲಿ ಅವರೇ ನಿರ್ಮಾಣ ಮಾಡುತ್ತಿದ್ದಾರೆ. ಅದರಂತೆ ಇದೀಗ ಈ ಚಿತ್ರದ ಫಸ್ಟ್‌ ಲುಕ್‌ ಬಿಡುಗಡೆ ಆಗಿದೆ.

ಕನ್ನಡ, ತೆಲುಗಿನಲ್ಲಿ ರಿಲೀಸ್‌..

ನರೇಶ್‌ ಮತ್ತು ಪವಿತ್ರಾ ಲೋಕೇಶ್‌ ಕಾಂಟ್ರವರ್ಸಿ ತೆಲುಗು ನಾಡಿನಲ್ಲಿ ಸುದ್ದಿಯಾದಷ್ಟು ಕರ್ನಾಟಕದಲ್ಲಿಯೂ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿತ್ತು. ಆ ಕಾರಣಕ್ಕೆ ನಿರ್ದೇಶಕ ಎಂ.ಎಸ್.‌ ರಾಜು ತೆಲುಗಿನ ಜತೆಗೆ ಕನ್ನಡದಲ್ಲಿಯೂ ಈ ಸಿನಿಮಾ ರಿಲೀಸ್‌ ಮಾಡುತ್ತಿದ್ದಾರೆ. ಈಗಾಗಲೇ ಬಹುತೇಕ ಶೂಟಿಂಗ್‌ ಕೆಲಸ ಮುಗಿದು, ಪೋಸ್ಟ್‌ ಪ್ರೊಡಕ್ಷನ್‌ ಕೆಲಸದಲ್ಲಿ ತಂಡ ನಿರತವಾಗಿದೆ. ಎಲ್ಲ ಅಂದುಕೊಂಡಂತೆ ಆದರೆ, ಏಪ್ರಿಲ್‌ ಅಥವಾ ಮೇ ತಿಂಗಳಲ್ಲಿ ಸಿನಿಮಾ ರಿಲೀಸ್‌ ಆಗಲಿದೆ.

ಚಿತ್ರದಲ್ಲಿದೆ ದೊಡ್ಡ ತಾರಾಬಳಗ..

‘ಮತ್ತೆ ಮದುವೆ’ ಫ್ಯಾಮಿಲಿ ಎಂಟರ್ಟೈನ್ಮೆಂಟ್ ಸಿನಿಮಾವಾಗಿದ್ದು ಎಂ.ಎಸ್. ರಾಜು ಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ಜಯಸುಧ ಮತ್ತು ಶರತ್ ಬಾಬು ಚಿತ್ರದ ಪ್ರಮುಖ ಪಾತ್ರಗಳಿಗೆ ಬಣ್ಣಹಚ್ಚಿದ್ದಾರೆ. ವನಿತ ವಿಜಯಕುಮಾರ್, ಅನನ್ಯ ನಾಗೆಲ್ಲ, ರೋಶನ್, ರವಿವರ್ಮ, ಅನ್ನಪೂರ್ಣ, ಭದ್ರಂ, ಯುಕ್ತ, ಪ್ರವೀಣ್ ಯಂಡಮುರಿ ಹಾಗೂ ಮಧೂ ಒಳಗೊಂಡ ಬಹು ದೊಡ್ಡ ತಾರಾಬಳಗ ಚಿತ್ರದಲ್ಲಿದೆ.

ಸುರೇಶ್ ಬೊಬ್ಬಿಲಿ ಸಂಗೀತ ನಿರ್ದೇಶನ, ಅರುಲ್ ದೇವ್ ಹಿನ್ನೆಲೆ ಸಂಗೀತ, ಎಂ.ಎನ್ ಬಾಲ್ ರೆಡ್ಡಿ ಕ್ಯಾಮೆರಾ ವರ್ಕ್, ಜುನೈದ್ ಸಿದ್ದಿಕಿ ಸಂಕಲನ, ಅನಂತ ಶ್ರೀರಾಮ್ ಸಾಹಿತ್ಯ ಚಿತ್ರಕ್ಕಿದೆ. ಶೀಘ್ರದಲ್ಲೇ ಚಿತ್ರತಂಡ ಸಿನಿಮಾ ಬಿಡುಗಡೆಯ ದಿನಾಂಕವನ್ನು ಹಂಚಿಕೊಳ್ಳಲಿದೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ