logo
ಕನ್ನಡ ಸುದ್ದಿ  /  ಕರ್ನಾಟಕ  /  Madikeri Pure Air City: ಭಾರತದಲ್ಲೇ ಶುದ್ದ ಗಾಳಿ ಇರುವ ನಗರಗಳ ಪಟ್ಟಿಯಲ್ಲಿ ಕರ್ನಾಟಕದ ಮಡಿಕೇರಿ ಮೊದಲು, ಗದಗಕ್ಕೂ ಸ್ಥಾನ

Madikeri Pure Air City: ಭಾರತದಲ್ಲೇ ಶುದ್ದ ಗಾಳಿ ಇರುವ ನಗರಗಳ ಪಟ್ಟಿಯಲ್ಲಿ ಕರ್ನಾಟಕದ ಮಡಿಕೇರಿ ಮೊದಲು, ಗದಗಕ್ಕೂ ಸ್ಥಾನ

Umesha Bhatta P H HT Kannada

Nov 19, 2024 09:33 PM IST

google News

ಕರ್ನಾಟಕದ ಕಾಶ್ಮೀರ ಖ್ಯಾತಿಯ ಮಡಿಕೇರಿ ನಗರವು ಅತ್ಯಂತ ಶುದ್ದ ಗಾಳಿ ಇರುವ ಭಾರತದ ನಗರಗಳ ಪಟ್ಟಿಯಲ್ಲಿ ಮೊದಲ ಸ್ಥಾನ ಪಡೆದಿದೆ.

    • ಅತ್ಯುತ್ತಮ ಹವಾಮಾನ ಹಾಗೂ ಶುದ್ದಗಾಳಿ ಇರುವ ಭಾರತದ ನಗರಗಳ ಪಟ್ಟಿಯಲ್ಲಿ ಕರ್ನಾಟಕದ ಪ್ರವಾಸಿ ತಾಣ ಹಾಗೂ ಬೆಟ್ಟಗುಡ್ಡಗಳ ನಗರಿ ಮಡಿಕೇರಿ ಮೊದಲ ಸ್ಥಾನ ಪಡೆದುಕೊಂಡಿದೆ.
ಕರ್ನಾಟಕದ ಕಾಶ್ಮೀರ ಖ್ಯಾತಿಯ ಮಡಿಕೇರಿ ನಗರವು ಅತ್ಯಂತ ಶುದ್ದ ಗಾಳಿ ಇರುವ ಭಾರತದ ನಗರಗಳ ಪಟ್ಟಿಯಲ್ಲಿ ಮೊದಲ ಸ್ಥಾನ ಪಡೆದಿದೆ.
ಕರ್ನಾಟಕದ ಕಾಶ್ಮೀರ ಖ್ಯಾತಿಯ ಮಡಿಕೇರಿ ನಗರವು ಅತ್ಯಂತ ಶುದ್ದ ಗಾಳಿ ಇರುವ ಭಾರತದ ನಗರಗಳ ಪಟ್ಟಿಯಲ್ಲಿ ಮೊದಲ ಸ್ಥಾನ ಪಡೆದಿದೆ.

ಬೆಂಗಳೂರು: ಭಾರತದ ಶುದ್ದ ಗಾಳಿ ಇರುವ ನಗರಗಳ ಪಟ್ಟಿಯಲ್ಲಿ ಕರ್ನಾಟಕದ ಮಂಜಿನ ನಗರಿ, ಕರ್ನಾಟಕದ ಕಾಶ್ಮೀರ ಎಂದು ಕರೆಯಿಸಿಕೊಳ್ಳುವ ಮಡಿಕೇರಿ ಸ್ಥಾನ ಪಡೆದಿದೆ. ಅದರಲ್ಲೂ ಇಡೀ ದೇಶದಲ್ಲಿಯೇ ಶುದ್ದ ಗಾಳಿ ಇರುವ ಮೊದಲ ಸ್ಥಾನದಲ್ಲಿ ಮಡಿಕೇರಿ ಇದೆ. ಅಲ್ಲದೇ ಕರ್ನಾಟಕದ ಮುದ್ರಣ ಕಾಶಿ ನಗರ ಗದಗ ಕೂಡ ಟಾಪ್‌ 10 ನಗರಗಳ ಪಟ್ಟಿಯಲ್ಲಿ ಸ್ಥಾನ ಪಡೆದಿದೆ. ಗದಗ ನಗರಕ್ಕೆ ಎಂಟನೇ ಸ್ಥಾನ ಲಭಿಸಿದೆ. ಶುದ್ಧಗಾಳಿ ಹೊಂದಿರುವ ದೇಶದ ಹತ್ತು ಸ್ಥಳಗಳಲ್ಲಿ ಮಡಿಕೇರಿ ಮೊದಲ ಸ್ಥಾನದಲ್ಲಿದ್ದರೆ, ನಂತರ ಸ್ಥಾನಗಳನ್ನು ಕ್ರಮವಾಗಿ ತಮಿಳುನಡಿನ ಪಾಲ್ಕಲೈಪೆರೂರ್, ಕರೂರು, ತಿರುನಲ್ವೇಲಿ, ಆಂಧ್ರಪ್ರದೇಶದ ತಿರುಪತಿ, ಊಟಿ, ವೆಲ್ಲೂರ್, ರಾಣಿಪೇಟ್, ಗದಗ, ತೂತುಕುಡಿ ಹಾಗೂ ಪುದುಚೇರಿ ಪಡೆದುಕೊಂಡಿವೆ.

ಆಯ್ಕೆ ಪ್ರಕ್ರಿಯೆ ಹೇಗೆ

ಭಾರತ ಸರ್ಕಾರದ ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಯ ವಾಯು ಗುಣಮಟ್ಟಸೂಚ್ಯಂಕ (AQI) ಪ್ರಮಾಣವನ್ನು ನಿಗದಿತವಾಗಿ ತಪಾಸಣೆ ಮಾಡಲಾಗುತ್ತದೆ. ಅದರಲ್ಲಿ ಸೀಮಿತ ಅವಧಿಯಲ್ಲಿ ಆ ಭಾಗದಲ್ಲಿ ಇರುವ ವಾಯುಮಾಲಿನ್ಯ, ಶುದ್ದಗಾಳಿಯ ಪ್ರಮಾಣವನ್ನು ಪರೀಕ್ಷೆ ಮಾಡಲಾಗುತ್ತದೆ.

ಈ ರೀತಿ ಭಾರತದ ಅತಿ ದೊಡ್ಡ, ದೊಡ್ಡ ನಗರಗಳು, ಪಟ್ಟಣಗಳ ಶುದ್ದ ಗಾಳಿ ಪ್ರಮಾಣವನ್ನು ಗಣನೆಗೆ ತೆಗೆದುಕೊಳ್ಳಲಾಗುತ್ತದೆ.

ನವೆಂಬರ್‌ ಎರಡನೇ ವಾರದಲ್ಲಿ ತೆಗೆದುಕೊಂಡಿರುವ ಮಾಹಿತಿಯ ಪ್ರಕಾರ ಕೊಡಗಿನಲ್ಲಿ ಗಾಳಿಯ ಗುಣಮಟ್ಟ ವರ್ಷದ ಬಹುತೇಕ ದಿನಗಳಲ್ಲಿ ಉತ್ತಮ ಎಂದೇ ದಾಖಲಾಗುತ್ತಿದೆ.

ಈ ಬಾರಿ ಮಡಿಕೇರಿ ನಗರವು ಶುದ್ದ ಗಾಳಿ ಇರುವ ನಗರಗಳ ಪಟ್ಟಿಯಲ್ಲಿ ಮೊದಲನೇ ಸ್ಥಾನವನ್ನು ಪಡೆದುಕೊಂಡಿರುವುದು ವಿಶೇಷ. ಕಳೆದ ವರ್ಷ ಇದೇ ಸಮಯದಲ್ಲಿ ಮಡಿಕೇರಿ 5ನೇ ಸ್ಥಾನದಲ್ಲಿತ್ತು.

ಮಡಿಕೇರಿ ಸೊಬಗು

ಮಡಿಕೇರಿ ಮೊದಲಿನಿಂದಲೂ ಪ್ರವಾಸಿ ತಾಣವೇ. ಇಲ್ಲಿನ ಪರಿಸರ, ಬೆಟ್ಟಗುಡ್ಡಗಳ ಸಾಲು, ಮಂಜಿನ ವಾತಾವರಣದಿಂದ ಮಡಿಕೇರಿ ಲಕ್ಷಾಂತರ ಪ್ರವಾಸಿಗರನ್ನುಆಕರ್ಷಿಸುತ್ತದೆ. ಇದರ ನಡುವೆಯೂ ಇಲ್ಲಿನ ವಾತಾವರಣ ಮಾತ್ರ ಚೆನ್ನಾಗಿದೆ. ಈ ಬಾರಿಯ ದೀಪಾವಳಿ ಸಮಯದಲ್ಲಿ ಕೊಂಚ ವ್ಯತ್ಯಾಸವಾಗಿದ್ದರೂ ಆನಂತರ ಮತ್ತೆ ಮಡಿಕೇರಿ ನಗರದ ಶುದ್ದಗಾಳಿಯ ವಾತಾವರಣ ಸಹಜ ಸ್ಥಿತಿಗೆ ಬಂದಿರುವುದು ಗುಣಮಟ್ಟ ಸೂಚ್ಯಂಕ ವರದಿ ಮೂಲಕ ತಿಳಿದಿದೆ.

ಭಾರತದ ರಾಜಧಾನಿ ದೆಹಲಿಯಲ್ಲಿ ವಾಯು ಮಾಲಿನ್ಯ ಜನರ ಉಸಿರುಗಟ್ಟಿಸುತ್ತಾ ಅಪಾಯ ಮಟ್ಟ ಮೀರಿದೆ. ದಿನದಿಂದ ದಿನಕ್ಕೆ ಹವಾಮಾನದಗುಣಮಟ್ಟ ಕ್ಷೀಣಿಸುತ್ತಲೇ ಇದೆ. ಇದಲ್ಲದೇ ಉತ್ತರ ಭಾರತದ ಹಲವು ನಗರಗಳು, ಕರ್ನಾಟಕದ ಕೆಲವು ನಗರಗಳಲ್ಲೂ ಶುದ್ದಗಾಳಿಯ ಸನ್ನಿವೇಶ ಇಲ್ಲ. ಧೂಳಿನ ಕಣಗಳ ಕಾರಣಕ್ಕೆ ಗಾಳಿಯ ವಾತಾವರಣದಲ್ಲಿ ವ್ಯತ್ಯಾಸ ಆಗುತ್ತಲೇ ಇರುತ್ತದೆ. ಆದರೆ ದೆಹಲಿಯ ರೀತಿಯಲ್ಲಿ ಕರ್ನಾಟಕದಲ್ಲಿ ಆತಂಕ ಪಡುವ ನಗರಗಳು ಯಾವುದೂ ಇಲ್ಲ.

ಗದಗವೂ ಬದಲು

ಉತ್ತರ ಕರ್ನಾಟಕದ ಮುದ್ರಣ ಕಾಶಿ ಗದಗ ನಗರದಲ್ಲೂ ಇತ್ತೀಚಿನ ದಿನಗಳಲ್ಲಿ ರಸ್ತೆಗಳ ಸುಧಾರಣೆಯಿಂದ ಹವಾಮಾನವೂ ಸುಧಾರಿಸಿದೆ. ಏಕೆಂದರೆ ಬಹುತೇಕ ಗದಗ ನಗರದ ರಸ್ತೆಗಳು ಸಿಮೆಂಟ್‌ ರಸ್ತೆಗಳಾಗಿ ಬದಲಾಗಿವೆ. ಇದರಿಂದ ಧೂಳಿನ ಪ್ರಮಾಣ ಕಡಿಮೆಯಾಗಿದೆ. ಕಳೆದ ವರ್ಷವೂ ಗದಗ ಶುದ್ದ ಗಾಳಿ ನಗರಗಳ ಪಟ್ಟಿಯಲ್ಲಿ ಸ್ಥಾನ ಪಡೆದಿತ್ತು. ಈ ಬಾರಿಯೂ ಮತ್ತೆ ಉತ್ತಮ ಸ್ಥಾನ ಪಡೆದುಕೊಂಡಿದೆ.

ದೀಪಾವಳಿ ವೇಳೆ ನಡೆಸಿದ್ದ ಗಾಳಿಯ ಗುಣಮಟ್ಟ ಪರೀಕ್ಷೆಯಲ್ಲ ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ಮೂರನೇ ಸ್ಥಾನ ಪಡೆದಿತ್ತು. ಬೇಲೂರು ಹಾಗೂ ಹಾಸನ ನಗರಗಳೂ ಹತ್ತನೇ ಸ್ಥಾನದೊಳಗೆ ಇದ್ದವು.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ