ಚಿಕ್ಕಬಳ್ಳಾಪುರ ಮಡಿಕೇರಿ ಗದಗ ಕಲಬುರಗಿ ಬೆಳಗಾವಿ ಉಡುಪಿ ಗಾಳಿ ಪರಿಶುದ್ಧ ಕಣ್ರೀ; ವಾಯು ಗುಣಮಟ್ಟ ವರದಿಯಲ್ಲಿ ಬಹಿರಂಗ, ಯಾವ ನಗರ ಕಲುಷಿತ?
ಕನ್ನಡ ಸುದ್ದಿ  /  ಕರ್ನಾಟಕ  /  ಚಿಕ್ಕಬಳ್ಳಾಪುರ ಮಡಿಕೇರಿ ಗದಗ ಕಲಬುರಗಿ ಬೆಳಗಾವಿ ಉಡುಪಿ ಗಾಳಿ ಪರಿಶುದ್ಧ ಕಣ್ರೀ; ವಾಯು ಗುಣಮಟ್ಟ ವರದಿಯಲ್ಲಿ ಬಹಿರಂಗ, ಯಾವ ನಗರ ಕಲುಷಿತ?

ಚಿಕ್ಕಬಳ್ಳಾಪುರ ಮಡಿಕೇರಿ ಗದಗ ಕಲಬುರಗಿ ಬೆಳಗಾವಿ ಉಡುಪಿ ಗಾಳಿ ಪರಿಶುದ್ಧ ಕಣ್ರೀ; ವಾಯು ಗುಣಮಟ್ಟ ವರದಿಯಲ್ಲಿ ಬಹಿರಂಗ, ಯಾವ ನಗರ ಕಲುಷಿತ?

Air Quality Index India Best City India: ಅಕ್ಟೊಬರ್‌ 2024ರ ವಾಯು ಗುಣಮಟ್ಟ ಸೂಚ್ಯಂಕದಲ್ಲಿ ಭಾರತದ ಹಲವು ನಗರಗಳು ಅತ್ಯುತ್ತಮ ಸ್ಥಾನ ಪಡೆದಿವೆ. ಈ ನಗರಗಳಲ್ಲಿ ಕರ್ನಾಟಕದ ಆರು ನಗರಗಳು ಇರುವುದು ಖುಷಿಯ ವಿಚಾರ.

ಚಿಕ್ಕಬಳ್ಳಾಪುರ ಮಡಿಕೇರಿ ಗದಗ ಕಲಬುರಗಿ ಬೆಳಗಾವಿ ಉಡುಪಿ ನಗರಗಳ ಗಾಳಿ ಗುಣಮಟ್ಟ ಸೂಚ್ಯಂಕವು ಉತ್ತಮವಾಗಿದೆ.
ಚಿಕ್ಕಬಳ್ಳಾಪುರ ಮಡಿಕೇರಿ ಗದಗ ಕಲಬುರಗಿ ಬೆಳಗಾವಿ ಉಡುಪಿ ನಗರಗಳ ಗಾಳಿ ಗುಣಮಟ್ಟ ಸೂಚ್ಯಂಕವು ಉತ್ತಮವಾಗಿದೆ.

ಬೆಂಗಳೂರು: ಅಕ್ಟೊಬರ್‌ 2024ರ ವಾಯು ಗುಣಮಟ್ಟ ಸೂಚ್ಯಂಕದಲ್ಲಿ (Air Quality Index India) ಭಾರತದ ಹಲವು ನಗರಗಳು ಎಂದಿನಂತೆ ಅತ್ಯಧಿಕ ವಾಯುಮಾಲಿನ್ಯ ಇರುವ ನಗರಗಳು ಎಂದು ಕುಖ್ಯಾತಿಗೆ ಪಾತ್ರವಾಗಿವೆ. ಇದೇ ಸಮಯದಲ್ಲಿ ಹಲವು ನಗರಗಳು ವಾಯು ಗುಣಮಟ್ಟದಲ್ಲಿ ಅತ್ಯುತ್ತಮ ಸ್ಥಾನ ಪಡೆದಿವೆ. ಈ ಪಟ್ಟಿಯಲ್ಲಿ ಕರ್ನಾಟಕದ ಆರು ನಗರಗಳು ಇವೆ. ಅಕ್ಟೋಬರ್‌ 2024ರ ವಾಯು ಗುಣಮಟ್ಟ ಸೂಚ್ಯಂಕ ವರದಿ ಬಿಡುಗಡೆಯಾಗಿದೆ. ಇದರಲ್ಲಿ ಜಗತ್ತಿನಲ್ಲಿಯೇ ಅತ್ಯಧಿಕ ಮಾಲಿನ್ಯವಿರುವ ನಗರ ಪಾಕಿಸ್ತಾನದ ಲಾಹೋರ್‌ ಎಂದು ಬಹಿರಂಗವಾಗಿದೆ. ಭಾರತದ ವಿಷಯಕ್ಕೆ ಬಂದರೆ ಭಾರತದಲ್ಲಿ ಅತ್ಯಧಿಕ ವಾಯು ಗುಣಮಟ್ಟವಿಲ್ಲದ ನಗರ "ದೆಹಲಿ" ಪಾಲಾಗಿದೆ.

ಕರ್ನಾಟಕದಲ್ಲಿ ಬೆಂಗಳೂರು, ಮಂಗಳೂರು, ಹುಬ್ಬಳ್ಳಿ ಸೇರಿದಂತೆ ಹಲವು ನಗರಗಳಲ್ಲಿ ವಾಹನಗಳ ದಟ್ಟಣೆ ಹೆಚ್ಚುತ್ತಿದೆ. ಬೆಂಗಳೂರಿನಂತಹ ನಗರಗಳಲ್ಲಿ ಕೈಗಾರಿಕೆಗಳು, ವಾಹನಗಳು ಸೇರಿದಂತೆ ಹಲವು ಕಾರಣಗಳಿಂದ ಮಾಲಿನ್ಯ ಹೆಚ್ಚುತ್ತಿದೆ. ಈ ಕಾರಣದಿಂದ ಬೆಂಗಳೂರಿನ ವಾಯು ಗುಣಮಟ್ಟ ಉತ್ತಮ ಎನ್ನುವಂತೆ ಇಲ್ಲ. ಎಕ್ಯುಐ ಲೈವ್‌ ವೆಬ್‌ಸೈಟ್‌ಗೆ ಹೋಗಿ ನೋಡಿದರೆ ಬೆಂಗಳೂರಿನ ಗಾಳಿ ಗುಣಮಟ್ಟ ಮಾಡರೇಟ್‌ ಎಂದು ಇದೆ.

ಪ್ರತಿವರ್ಷದಂತೆ ಈ ವರ್ಷವೂ ವಾಯು ಗುಣಮಟ್ಟ ಸೂಚ್ಯಂಕ ಆಧರಿತ ವರದಿ ಬಂದಿದೆ. ವಾಹನ, ಕೈಗಾರಿಕಾ ಮಾಲಿನ್ಯವು ವಾಯು ಮಾಲಿನ್ಯ ಹೆಚ್ಚಿಸುವ ಪ್ರಮುಖ ಅಂಶಗಳಾಗಿವೆ. ಇದರ ಜತೆಗೆ ಪ್ರತಿವರ್ಷ ಕೃಷಿ ಕಾರ್ಯಗಳಿಗೆ ಸಂಬಂಧಪಟ್ಟಂತೆ ಸುಡುವಿಕೆಯು ಮಾಲಿನ್ಯ ಹೆಚ್ಚಲು ಪ್ರಮುಖ ಕಾರಣವಾಗಿದೆ. ಭಾರತದ ಹಲವು ನಗರಗಳಲ್ಲಿ ವಾಯು ಗುಣಮಟ್ಟ ಕುಸಿಯುತ್ತ ಹೋಗುತ್ತಿದೆ.

ಕಡಿಮೆ ವಾಯುಗುಣಮಟ್ಟವಿರುವ ಭಾರತದ 10 ನಗರಗಳು

ಈ ಪಟ್ಟಿಯಲ್ಲಿ ಕರ್ನಾಟಕದ ನಗರಗಳು ಇಲ್ಲದೆ ಇರುವುದು ಖುಷಿಯ ಸಂಗತಿ. ವಾಯು ಗುಣಮಟ್ಟ ಸೂಚ್ಯಂಕದಲ್ಲಿ ಅತ್ಯಧಿಕ ಮಾಲಿನ್ಯಕಾರಕಗಳಿಂದ ದೆಹಲಿ ಭಾರತದಲ್ಲಿ ಅಗ್ರ ಸ್ಥಾನದಲ್ಲಿದೆ. ನಂತರದ ಸ್ಥಾನವನ್ನು ಸಿಂಗ್ರುಲಿ (ಮಧ್ಯಪ್ರದೇಶ), ಭಿವಾನಿ (ಹರ್ಯಾಣ), ರೋಹ್‌ತಕ್‌ (ಹರ್ಯಾಣ), ಜಿಂದ್‌ (ಹರ್ಯಾಣ), ಗಾಝಿಯಾಬಾದ್‌ (ಉತ್ತರ ಪ್ರದೇಶ), ಬಹದುರ್ಗರ್‌ (ಹರ್ಯಾಣ), ನೋಯ್ಡಾ (ಉತ್ತರ ಪ್ರದೇಶ), ಕೈತಾಲ್‌ (ಹರ್ಯಾಣ), ಹಿಜಾಪುರ್‌ (ಬಿಹಾರ್‌), ಹಿಜಾಪುರ್‌ (ಬಿಹಾರ್)‌, ಚರ್ಕಿ ದಾದ್ರಿ) ಟಾಪ್‌ ಹತ್ತರಲ್ಲಿವೆ. ಇದು ಸೆಂಟ್ರಲ್‌ ಪೊಲ್ಯುಷನ್‌ ಕಂಟ್ರೋಲ್‌ ಬೋರ್ಡ್‌ ವರದಿ ಆಧರಿತ.

ಪರಿಶುದ್ಧ ಗಾಳಿಯ ಕರ್ನಾಟಕದ ನಗರಗಳು

ಈ ವಾಯು ಗುಣಮಟ್ಟ ಸೂಚ್ಯಂಕದಲ್ಲಿ ಕಡಿಮೆ ಮಾಲಿನ್ಯದ ಹತ್ತು ನಗರಗಳಲ್ಲಿ ಕರ್ನಾಟಕದ ಆರು ನಗರಗಳು ಸ್ಥಾನ ಪಡೆದಿವೆ. ಈ ಪಟ್ಟಿಯಲ್ಲಿ ವಾಯು ಗುಣಮಟ್ಟದಲ್ಲಿ ಉತ್ತಮವಿರುವ ಟಾಪ್‌ ಒನ್‌ ನಗರವಾಗಿ ತಮಿಳುನಾಡಿನ ಮಧುರೈ ಹೊರಹೊಮ್ಮಿದೆ. ಎರಡನೇ ಸ್ಥಾನವನ್ನು 25 ಎಕ್ಯುಐ ಇರುವ ಚಿಕ್ಕಬಳ್ಳಾಪುರ ಪಡೆದಿದೆ. ಎಕ್ಯುಐ ಅಂದರೆ ಏರ್‌ಕ್ವಾಲಿಟಿ ಇಂಡೆಕ್ಸ್‌. ಮೂರನೇ ಸ್ಥಾನವನ್ನು ತಮಿಳುನಾಡಿನ ಊಟಿ ಪಡೆದಿದೆ.

ನಾಲ್ಕು, ಐದು, ಆರನೇ ಸ್ಥಾನವನ್ನು ಎಕ್ಯುಐ 28 ಪಡೆಯುವ ಮೂಲಕ ಕ್ರಮವಾಗಿ ಮಡಿಕೇರಿ, ಗದಗ್‌, ಕಲಬುರಗಿ ನಗರಗಳು ಪಡೆದಿವೆ. ಏಳು ಮತ್ತು ಎಂಟನೇ ಸ್ಥಾನಗಳನ್ನು ತಮಿಳುನಾಡಿನ ಪಾಲ್ಕಲೈಪೆರೂರು ಮತ್ತು ತಂಜಾವೂರ್‌ ಪಡೆದಿವೆ. ಎಂಟನೇ ಸ್ಥಾನವನ್ನು ಅಸ್ಸಾಂನ ನಾಗಾವನ್‌ ಪಡೆದಿದೆ. 9 ಮತ್ತು 10ನೇ ಸ್ಥಾನಗಳನ್ನು ಕ್ರಮವಾಗಿ ಬೆಳಗಾವಿ ಮತ್ತು ಉಡುಪಿ ಪಡೆದಿವೆ.

Whats_app_banner