AAI Recruitment 2022: ವಿಮಾನ ನಿಲ್ದಾಣಗಳ ಪ್ರಾಧಿಕಾರದಲ್ಲಿ ಜಾಬ್ಸ್, ಕರ್ನಾಟಕದ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನ
Aug 27, 2022 04:03 PM IST
AAI Recruitment 2022: ವಿಮಾನ ನಿಲ್ದಾಣಗಳ ಪ್ರಾಧಿಕಾರದಲ್ಲಿ ಜಾಬ್ಸ್, ಕರ್ನಾಟಕದ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನ, ಅರ್ಜಿ ಸಲ್ಲಿಸುವ ಮೊದಲು ಗಮನಿಸಿ
- ಇದು ದಕ್ಷಿಣ ಭಾರತದ ತಮಿಳುನಾಡು, ಆಂಧ್ರಪ್ರದೇಶ, ತೆಲಂಗಾಣ, ಕರ್ನಾಟಕ, ಕೇರಳ, ಪಾಂಡಿಚೇರಿ ಮತ್ತು ಲಕ್ಷದ್ವೀಪದ ಅಭ್ಯರ್ಥಿಗಳ ನೇಮಕಕ್ಕೆ ಇರುವ AAI Recruitment 2022 ಅಧಿಸೂಚನೆಯಾಗಿದೆ. ಎಎಐನಲ್ಲಿರುವ ವಿವಿಧ ಹುದ್ದೆಗಳ ವಿವರ, ಅರ್ಜಿ ಸಲ್ಲಿಸುವುದು ಹೇಗೆ? ವಿದ್ಯಾರ್ಹತೆ, ವಯೋಮಿತಿ ಸೇರಿದಂತೆ ಹೆಚ್ಚಿನ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ.
ಭಾರತದ ವಿಮಾನ ನಿಲ್ದಾಣಗಳ ಪ್ರಾಧಿಕಾರ (Airports authority of India)ವು ವಿವಿಧ ಹುದ್ದೆಗಳನ್ನು ಭರ್ತಿ ಮಾಡುತ್ತಿದ್ದು, ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ವಿಶೇಷವಾಗಿ ಇದು ದಕ್ಷಿಣ ಭಾರತದ ತಮಿಳುನಾಡು, ಆಂಧ್ರಪ್ರದೇಶ, ತೆಲಂಗಾಣ, ಕರ್ನಾಟಕ, ಕೇರಳ, ಪಾಂಡಿಚೇರಿ ಮತ್ತು ಲಕ್ಷದ್ವೀಪದ ಅಭ್ಯರ್ಥಿಗಳ ನೇಮಕಕ್ಕೆ ಇರುವ ಅಧಿಸೂಚನೆಯಾಗಿದೆ. ಎಎಐನಲ್ಲಿರುವ ವಿವಿಧ ಹುದ್ದೆಗಳ ವಿವರ, ಅರ್ಜಿ ಸಲ್ಲಿಸುವುದು ಹೇಗೆ? ವಿದ್ಯಾರ್ಹತೆ, ವಯೋಮಿತಿ ಸೇರಿದಂತೆ ಹೆಚ್ಚಿನ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ.
ಹುದ್ದೆಗಳ ವಿವರ
ಒಟ್ಟು ಹುದ್ದೆಗಳ ಸಂಖ್ಯೆ: 156
ಅರ್ಜಿ ಸಲ್ಲಿಸಲು ಆರಂಭ: 01/09/2022
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 30/09/2022
ಜೂನಿಯರ್ ಅಸಿಸ್ಟೆಂಟ್ (ಫೈರ್ ಸರ್ವೀಸ್)- 132 ಹುದ್ದೆಗಳಿವೆ. ಇವುಗಳಲ್ಲಿ ಸಾಮಾನ್ಯ ಅಭ್ಯರ್ಥಿಗಳಿಗೆ 88, ಇಡಬ್ಲ್ಯುಎಸ್- 13, ಒಬಿಸಿ-11, ಎಸ್‌ಸಿ-20, ಎಸ್‌ಟಿ-0 ಹುದ್ದೆಗಳಿವೆ. ಜೂನಿಯರ್ ಅಸಿಸ್ಟೆಂಟ್ (ಆಫೀಸ್)- 10 ಹುದ್ದೆಗಳಿವೆ. ಸಾಮಾನ್ಯ ಅಭ್ಯರ್ಥಿಗಳಿಗೆ 5, ಇಡಬ್ಲ್ಯುಎಸ್- 1, ಒಬಿಸಿ-2, ಎಸ್‌ಸಿ-1, ಎಸ್‌ಟಿ-1 ಹುದ್ದೆಗಳಿವೆ. ಸೀನಿಯರ್ ಅಸಿಸ್ಟೆಂಟ್ (ಅಕೌಂಟೆಂಟ್)- 7 ಹುದ್ದೆಗಳಿವೆ. ಸಾಮಾನ್ಯ ಅಭ್ಯರ್ಥಿಗಳಿಗೆ 7, ಇಡಬ್ಲ್ಯುಎಸ್- 1, ಒಬಿಸಿ-3, ಎಸ್‌ಸಿ-1, ಎಸ್‌ಟಿ-1 ಹುದ್ದೆಗಳಿವೆ. ಸೀನಿಯರ್ ಅಸಿಸ್ಟೆಂಟ್ (ಆಫೀಸ್ ಲ್ಯಾಂಗ್ವೇಜ್)- 1 ಹುದ್ದೆಯಿದೆ. ಈ ಒಂದು ಹುದ್ದೆಯು ಎಸ್‌ಸಿ ಅಭ್ಯರ್ಥಿಗಳಿಗೆ ಮೀಸಲು.
ವೇತನ ಎಷ್ಟು?
ಜೂನಿಯರ್ ಅಸಿಸ್ಟೆಂಟ್ ಫೈರ್ ಸರ್ವೀಸ್ ಮತ್ತು ಆಫೀಸ್ ಹುದ್ದೆಗಳಿಗೆ 31000-92000 ರೂ. ವೇತನ ಶ್ರೇಣಿ ನಿಗದಿಪಡಿಸಲಾಗಿದೆ. ಸೀನಿಯರ್ ಅಸಿಸ್ಟೆಂಟ್ ಹುದ್ದೆಗಳಿಗೆ 36000-110000 ವೇತನ ಶ್ರೇಣಿ ನಿಗದಿಪಡಿಸಲಾಗಿದೆ.
ಪರೀಕ್ಷಾ ಕೇಂದ್ರ ಎಲ್ಲಿ?
ಕಂಪ್ಯೂಟರ್ ಆಧರಿತ ಪರೀಕ್ಷೆಗಳನ್ನು ಚೆನ್ನೈ, ಬೆಂಗಳೂರು, ಹೈದರಾಬಾದ್, ಕೊಚ್ಚಿನ್, ವಿಜಯವಾಡದಲ್ಲಿ ನಡೆಸಲಾಗುತ್ತದೆ. ರಾಜ್ಯದ ಅಭ್ಯರ್ಥಿಗಳು ಬೆಂಗಳೂರನ್ನು ಆಯ್ಕೆ ಮಾಡಿಕೊಳ್ಳಬಹುದು.
ಅರ್ಜಿ ಸಲ್ಲಿಸಲು ವಯೋಮಿತಿ
ಕನಿಷ್ಠ 18 ವರ್ಷ ಗರಿಷ್ಠ 30 ವರ್ಷ ವಯೋಮಿತಿ ನಿಗದಿಪಡಿಸಲಾಗಿದೆ. ವಯೋಮಿತಿಯಲ್ಲಿ ಒಬಿಸಿ ಅಭ್ಯರ್ಥಿಗಳಿಗೆ 3 ವರ್ಷ ಮತ್ತು ಎಸ್‌ಸಿ/ಎಸ್‌ಟಿ ಅಭ್ಯರ್ಥಿಗಳಿಗೆ 5 ವರ್ಷ ಸಡಿಲಿಕೆ ನೀಡಲಾಗುತ್ತದೆ.
ವಿದ್ಯಾರ್ಹತೆ ಏನು?
ಫೈರ್ ಸರ್ವೀಸ್ ಜೂನಿಯರ್ ಅಸಿಸ್ಟೆಂಟ್: 10ನೇ ತರಗತಿ ಉತ್ತೀರ್ಣರಾಗಿರಬೇಕು. ಮೆಕ್ಯಾನಿಕಲ್, ಆಟೋಮೊಬೈಲ್ ಅಥವಾ ಫೈರ್‌ನಲ್ಲಿ ಮೂರು ವರ್ಷದ ಡಿಪ್ಲೊಮಾ ಪೂರ್ಣಗೊಳಿಸಿರಬೇಕಕು. ವ್ಯಾಲಿಡ್ ಹೆವಿ ವೆಹಿಕಲ್ ಡ್ರೈವಿಂಗ್ ಲೈಸನ್ಸ್ ಹೊಂದಿರಬೇಕು ಅಥವಾ ಒಂದು ವರ್ಷ ಅಥವಾ ಎರಡು ವರ್ಷ ಹಿಂದೆ ಪಡೆದ ಮಧ್ಯಮ ಅಥವಾ ಹಗುರ ವಾಹನ ಚಾಲನೆ ಲೈಸನ್ಸ್ ಹೊಂದಿರಬೇಕು.
- ಜೂನಿಯ್ ಅಸಿಸ್ಟೆಂಟ್ (ಆಫೀಸ್): ಪದವಿ ಮತ್ತು ಇಂಗ್ಲಿಷ್‌ನಲ್ಲಿ ನಿಮಿಷಕ್ಕೆ 30 ಪದ ಟೈಪಿಂಗ್ ವೇಗ ಹೊಂದಿರಬೇಕು. ಎರಡು ವರ್ಷ ಕೆಲಸದ ಅನುಭವ ಇರಬೇಕು.
- ಸೀನಿಯರ್ ಅಸಿಸ್ಟೆಂಟ್ ಅಕೌಂಟ್ಸ್- ಬಿಕಾಂ ಪದವಿ ಪಡೆದಿರಬೇಕು. ಕಂಪ್ಯೂಟರ್ ತರಬೇತಿ ಕೋರ್ಸ್ ಪಡೆದಿರಬೇಕು. ಎರಡು ವರ್ಷ ಕೆಲಸದ ಅನುಭವ.
- ಸೀನಿಯರ್ ಅಸಿಸ್ಟೆಂಟ್ (ಆಫೀಸ್ ಲ್ಯಾಂಗ್ವೇಜ್): ಹಿಂದಿಯಲ್ಲಿ ಸ್ನಾತಕೋತ್ತರ, ಪದವಿಯಲ್ಲಿ ಇಂಗ್ಲಿಷ್ ವಿಷಯವಾಗಿ ಓದಿರಬೇಕು ಅಥವಾ ಸ್ನಾತಕೋತ್ತರದಲ್ಲಿ ಹಿಂದಿ ಅಥವಾ ಇಂಗ್ಲಿಷ್ ಹೊರತುಪಡಿಸಿ ಯಾವುದೇ ವಿಷಯದಲ್ಲಿ ಪದವಿ ಪಡೆದಿರಬೇಕು ಮತ್ತು ಪದವಿಯಲ್ಲಿ ಹಿಂದಿ ಮತ್ತು ಇಂಗ್ಲಿಷ್ ಅನ್ನು ಕಡ್ಡಾಯ/ಐಚ್ಛಿಕ ವಿಷಯವಾಗಿ ಓದಿರಬೇಕು. ೨ ವರ್ಷದ ಕೆಲಸದ ಅನುಭವ ಬಯಸಲಾಗಿದೆ.
ಅರ್ಜಿ ಸಲ್ಲಿಸುವುದು ಹೇಗೆ?
ಆನ್‌ಲೈನ್ ಮೂಲಕ ಮಾತ್ರ ಅರ್ಜಿ ಸಲ್ಲಿಸಲು ಅವಕಾಶವಿದೆ. ಅರ್ಜಿ ಸಲ್ಲಿಸಲು 1000 ರೂಪಾಯಿ ಅರ್ಜಿ ಶುಲ್ಕ ನಿಗದಿಪಡಿಸಲಾಗಿದೆ. ಎಸ್‌ಸಿ/ಎಸ್‌ಟಿ/ಮಹಿಳಾ ಅಭ್ಯರ್ಥಿಗಳು ಯಾವುದೇ ಅರ್ಜಿ ಶುಲ್ಕ ಪಾವತಿಸಬೇಕಿಲ್ಲ. ಎಲ್ಲಾ ಕೆಟಗರಿಯ ಅಭ್ಯರ್ಥಿಗಳು 90 ರೂ. ಕೋವಿಡ್-೧೯ ಹೆಲ್ತ್ ಆಂಡ್ ಹೈಜಿನ್ ಅರೇಂಜ್‌ಮೆಂಟ್‌ಗೆ ಹಣ ಪಾವತಿಸಬೇಕು. ಅರ್ಜಿ ಶುಲ್ಕವನ್ನು ಆನ್‌ಲೈನ್ ಪಾವತಿ ವಿಧಾನಗಳ ಮೂಲಕವೇ ಪಾವತಿಸಬೇಕು.