Bangalore News: ಬೆಂಗಳೂರು ರಾಮೇಶ್ವರಂ ಹೋಟೆಲ್ ಸ್ಫೋಟ ಸಂಚು ರೂಪಿಸಿದ್ದ ಉಗ್ರರು; ಇಬ್ಬರ ವಿರುದ್ಧ ಚಾರ್ಜ್ ಶೀಟ್ ಸಲ್ಲಿಸಿದ ಎನ್ಐಎ
Aug 20, 2024 07:56 AM IST
ಬೆಂಗಳೂರು ರಾಮೇಶ್ವರಂ ಕೆಫೆ ಸ್ಟೋಟ ಪ್ರಕರಣದ ತನಿಖೆ ಅಂತಿಮ ಹಂತಕ್ಕೆ ಬಂದಿದೆ.
- Bangalore Crime ಬೆಂಗಳೂರಿನ ರಾಮೇಶ್ವರಂ ಕೆಫೆ ಸ್ಪೋಟ( Bangalore Rameswaram cafe Blast) ಪ್ರಕರಣದ ಜಾರ್ಜ್ ಶೀಟ್ ಅನ್ನು ಎನ್‌ಐಎ ( NIA) ಸಲ್ಲಿಸಿದೆ.
- ವರದಿ: ಎಚ್.ಮಾರುತಿ,ಬೆಂಗಳೂರು
ಬೆಂಗಳೂರು: ಜಿಹಾದಿ ಮತ್ತು ಪ್ರಮುಖ ಭಯೋತ್ಪಾದನಾ ಪಿತೂರಿ ಚಟುವಟಿಕೆಗಳಲ್ಲಿ ಭಾಗಿಯಾಗುವ ಸಂಚು ನಡೆಸುತ್ತಿದ್ದ ಆರೋಪದ ಮೇಲೆ ಅಲ್ ಕರ್ನಾಟಕ ಅಲ್ ಹಿಂದ್ ಐಸಿಸ್ ಮಾಡ್ಯೂಲ್ ಸಂಘಟನೆಯ ಇಬ್ಬರು ಭಯೋತ್ಪಾದಕರ ವಿರುದ್ಧ ರಾಷ್ಟ್ರೀಯ ತನಿಖಾ ದಳ ಚಾರ್ಜ್ ಶೀಟ್ ಸಲ್ಲಿಸಿದೆ. ಇವರಿಬ್ಬರೂ ಬೆಂಗಳೂರಿನ ರಾಮೇಶ್ವರಂ ಕೆಫೆಯಲ್ಲಿ ನಡೆದಿದ್ದ ಸ್ಫೋಟದ ಸಂಚಿನಲ್ಲಿ ಬಾಗಿಯಾಗಿದ್ದರು ಎನ್ನುವುದು ಗಮನಾರ್ಹ. ಅಬ್ದುಲ್ ಮಥೀನ್ ಅಹಮದ್ ತಾಹಾ ಮತ್ತು ಮುಸೀರ್ ಹುಸೇನ್ ಶಾಜೀಬ್ ಅವರೇ ಬಂಧಿತಆರೋಪಿಗಳು. ಇವರಿಬ್ಬರೂ ರಾಜ್ಯದ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯ ನಿವಾಸಿಗಳು ಎನ್ನುವುದು ಗಮನಾರ್ಹ.
ಇವರಿಬ್ಬರೂ ಭಾರಿ ಭಯೋತ್ಪಾದನಾ ಕೃತ್ಯಗಳನ್ನು ನಡೆಸಲು ಸಂಚು ರೂಪಿಸಿದ್ದರು. ಅಂದಿನಿಂದಲೂ ಇವರು ಪೊಲೀಸರಿಂದ ತಪ್ಪಿಸಿಕೊಂಡಿದ್ದರು. ರಾಮೇಶ್ವರಂ ಸ್ಫೋಟ ಪ್ರಕರಣದಲ್ಲಿ ಇವರಿಬ್ಬರನ್ನೂ 12 ಏಪ್ರಿಲ್ 2024ರಂದು ಬಂಧಿಸಲಾಗಿತ್ತು. ಇವರಿಬ್ಬರ ವಿರುದ್ಧ ಎನ್ ಐಎ ತನ್ನ ಚಾರ್ಜ್ ಶೀಟ್ ನಲ್ಲಿ ಅನೇಕ ಆರೋಪಗಳನ್ನು ಹೊರಿಸಿದ್ದು, ಭಾರತೀಯ ದಂಡ ಸಂಹಿತೆ ಮತ್ತು ಯುಎಪಿಎ ಅಡಿಯಲ್ಲಿ ಪ್ರಕರಣಗಳನ್ನು ದಾಖಲಿಸಲಾಗಿದೆ. 20 ಜನವರಿ 2024ರಂದು ಬೆಂಗಳೂರು ಪೊಲೀಸರಿಂದ ಎನ್ ಐ ಎ ಈ ಪ್ರಕರಣದ ವಿಚಾರಣೆಯನ್ನು ವಹಿಸಿಕೊಂಡಿತ್ತು.
ಎನ್ ಐಎ ತನಿಖೆಗಳ ಪ್ರಕಾರ ಅಬ್ದುಲ್ ಮಥೀನ್ ಅಹಮದ್ ತಾಹಾ ಸ್ವಯಂ ಪ್ರೇರಣೆಯಿಂಧ ಭಯೋತ್ಪಾದಕನಾಗಿದ್ದು ನಂತರ ಮುಸೀರ್ ಹುಸೇನ್ ಶಾಜೀಬ್ ಮತ್ತು ಇತರರನ್ನು ಭಯೋತ್ಪಾದನಾ ಸಂಘಟನೆಗೆ ಸೇರ್ಪಡೆ ಮಾಡಿಕೊಂಡಿದ್ದ ಎಂದು ತಿಳಿದು ಬಂದಿದೆ.
2018ರಲ್ಲಿ ತಾಹಾನನ್ನು ಆನ್ ಲೈನ್ ಮೂಲಕ ಸಂಚು ರೂಪಿಸುತ್ತಿದ್ದ ಆನ್ ಲೈನ್ ಭಾಯಿ ಆಲಿಯಾಸ್ ಲ್ಯಾಪ್ ಟಾಪ್ ಭಾಯಿಗೆ ಪರಿಚಯಿಸಲಾಗಿತ್ತು. ನಂತರ ಈತನ ಮೂಲಕ ತಾಹಾನನ್ನು ಅಲ್ ಹಿಂದ್ ಟ್ರಸ್ಟ್ ಸಂಸ್ಥಾಪಕ ಮೆಹಬೂಬ್ ಪಾಷಾಗೆ ಪರಿಚಯಿಸಲಾಗಿತ್ತು.
ಮೆಹಬೂಬ್ ಪಾಷಾ ತನ್ನ ಕುಟುಂಬದ ಸದಸ್ಯರೊಂದಿಗೆ ಬೆಂಗಳೂರಿನ ಗುರಪ್ಪನಪಾಳ್ಯದಲ್ಲಿ ನೆಲೆಸಿದ್ದ. ಪಾಷಾ ಆನ್ ಲೈನ್ ಲಿಂಕ್ ಗಳನ್ನು ಖಾಜಾ ಮೊಹಿದ್ದೀನ್ ಗೆ ಕಳುಹಿಸುತ್ತಿದ್ದ. ಈತ ಭಾರತದಲ್ಲಿ ಐಸಿಸ್ ಭಯೋತ್ಪಾದನಾ ಚಟುವಟಿಕೆಗಳನ್ನು ನಡೆಸಲು ತನ್ನ ಸಹಚರರೊಂದಿಗೆ ಅಲ್ ಹಿಂದ್ ಟ್ರಸ್ಟ್ ಸೇರ್ಪಡೆಯಾಗಿದ್ದ.
ಅಬ್ದುಲ್ ಮಥೀನ್ ಅಹಮದ್ ತಾಹಾ ಮತ್ತು ಮುಸೀರ್ ಹುಸೇನ್ ಶಾಜೀಬ್ ತೌಫಿಕ್ ಮತ್ತು ಅಬ್ದುಲ್ ಶಮೀಮ್ ಅವರೊಂದಿಗೆ ಸಂಪರ್ಕ ಸಾಧಿಸಿದ್ದರು ಎನ್ನುವುದು ಎನ್ ಐಎ ತನಿಖೆಯಿಂದ ತಿಳಿದು ಬಂದಿದೆ. ತೌಫಿಕ್ ಮತ್ತು ಶಮೀಮ್ ಇಬ್ಬರೂ ಕೇರಳ-ತಮಿಳುನಾಡು ಗಡಿಯಲ್ಲಿ ಪೊಲೀಸ್ ಅಧಿಕಾರಿ ವಿಲ್ಸ ನ್ ಎಂಬುವರನ್ನು ಹತ್ಯೆ ಮಾಡಿದ್ದರು.
ಇತ್ತೀಚೆಗೆ ರಾಮೇಶ್ವರಂ ಕೆಫೆಗೆ ಶಂಕಿತ ಇಬ್ಬರು ಉಗ್ರರನ್ನು ಕರೆ ತಂದು ಮಹಜರು ನಡೆಸಲಾಗಿತ್ತು.
ಏಪ್ರಿಲ್ 12ರಂದು ಎನ್ ಐಎ ಇಬ್ಬರು ಪ್ರಮುಖ ಆರೋಪಿಗಳು ಮತ್ತು ಈ ಸಂಚಿನ ರೂವಾರಿಗಳಾದ ಅಬ್ದುಲ್ ಮಥೀನ್ ಅಹಮದ್ ತಾಹಾ ಮತ್ತು ಮುಸೀರ್ ಹುಸೇನ್ ಶಾಜೀಬ್ ಎಂಬುವರನ್ನು ಬಂಧಿಸಲಾಗಿತ್ತು. ಮಾರ್ಚ್ 1ರಂದು ಶಾಜಿಬ್ ಎಂಬಾತ ಸುಧಾರಿತ ಸ್ಫೋಟಕ ವಸ್ತುವಿದ್ದ ಬ್ಯಾಗ್ ಅನ್ನು ಹೋಟೆಲ್‌ನಲ್ಲಿ ಇರಿಸಿ ಸ್ಫೋಟಿಸಿದ್ದ. ಬಾಂಬ್ ಸ್ಪೋಟಗೊಂಡು ಹೋಟೆಲ್ ನಲ್ಲಿ ಊಟಕ್ಕೆ ಆಗಮಿಸಿದ್ದ 10 ಮಂದಿ ಗಾಯಗೊಂಡಿದ್ದರು.
ಆರೋಪಿಗಳ ಪತ್ತೆಗಾಗಿ ಎನ್ ಐಎ ಕರ್ನಾಟಕ, ತಮಿಳುನಾಡು, ಪಶ್ಚಿಮ ಬಂಗಾಳ ಸೇರಿದಂತೆ ಹಲವು ರಾಜ್ಯಗಳ 29 ಸ್ಥಳಗಳಲ್ಲಿ ಹುಡುಕಾಟ ನಡೆಸಿತ್ತು. ಮಾರ್ಚ್ 3ರಂದು ತನಿಖೆಗಾಗಿ ಪ್ರಕರಣವನ್ನು ಎನ್ ಐಎ ಗೆ ಹಸ್ತಾಂತರಿಸಲಾಗಿತ್ತು. ಇಬ್ಬರೂ ಆರೋಪಿಗಳನ್ನು ಕೊಲ್ಕತ್ತಾದಲ್ಲಿ ಬಂಧಿಸಲಾಗಿತ್ತು. ವಿವಿಧ ಹೆಸರುಗಳಲ್ಲಿ ಇವರು ಹಲವು ರಾಜ್ಯಗಳಲ್ಲಿ ತಲೆ ಮರೆಸಿಕೊಳ್ಳುತ್ತಿದ್ದರು. ಈ ಸ್ಪೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಇದುವರೆಗೂ ಎನ್ ಐಎ 5 ಮಂದಿ ಶಂಕಿತರನ್ನು ಬಂಧಿಸಿದೆ.
ವರದಿ: ಎಚ್.ಮಾರುತಿ,ಬೆಂಗಳೂರು