Bangalore Traffic: ಗಣೇಶ ಮೂರ್ತಿಗಳ ವಿಸರ್ಜನಾ ಮೆರವಣಿಗೆ; ಬೆಂಗಳೂರಿನಲ್ಲಿ ಇಂದಿನಿಂದ 2 ಸಂಚಾರ ಮಾರ್ಗಗಳಲ್ಲಿ ಬದಲಾವಣೆ
Sep 09, 2024 10:17 AM IST
ಬೆಂಗಳೂರಿನಲ್ಲಿ ಗಣೇಶ ವಿಸರ್ಜನೆ ಮೆರವಣಿಗೆ ಕಾರಣಕ್ಕೆ ಎರಡು ದಿನ ಸಂಚಾರದಲ್ಲಿ ಬದಲಾವಣೆಯಾಗಲಿದೆ.
- Bangalore News ಬೆಂಗಳೂರು ನಗರದಲ್ಲಿ ಗಣೇಶ ವಿಸರ್ಜನೆ ಇರುವುದರಿಂದ ಕೆಲವು ಭಾಗದಲ್ಲಿ ಸೋಮವಾರ ಹಾಗೂ ಮಂಗಳವಾರ ಸಂಚಾರದಲ್ಲಿ ಬದಲಾವಣೆ ಮಾಡಲಾಗಿದೆ.
- ವರದಿ: ಎಚ್.ಮಾರುತಿ, ಬೆಂಗಳೂರು
ಬೆಂಗಳೂರು ನಗರ ಸಂಚಾರ ಉತ್ತರ ವಿಭಾಗದ ವ್ಯಾಪ್ತಿಯ ಆರ್.ಟಿ. ನಗರ ಸಂಚಾರ ಪೊಲೀಸ್ ಠಾಣಾ ಸರಹದ್ದಿನ ಚಾಮುಂಡಿ ನಗರದಲ್ಲಿ ಸೆಪ್ಟೆಂಬರ್ 9 ರಂದು ರಾತ್ರಿ ಗಣೇಶ ಮೂರ್ತಿಗಳ ಭವ್ಯ ವಿಸರ್ಜನಾ ಮೆರವಣಿಗೆ ಜರುಗಲಿದೆ. ಈ ಮೆರವಣಿಗೆಯಲ್ಲಿ ಡಿ.ಜೆ, ಟ್ಯಾಬ್ಲೊಗಳು, ಸಂಗೀತ, ಡೊಳ್ಳು ಕುಣಿತ ಹಾಗೂ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಸುಮಾರು 15 ರಿಂದ 20 ಗಣೇಶ ಮೂರ್ತಿಗಳು ಮೆರವಣಿಗೆಯಲ್ಲಿ ಸಾಗಲಿವೆ. ಸುಗಮ ಸಂಚಾರ ಹಿತದೃಷ್ಠಿಯಿಂದ ಈ ಕೆಳಕಂಡ ರಸ್ತೆಗಳಲ್ಲಿ ಸೆಪ್ಟೆಂಬರ್ 9, ಸೋಮವಾರ ಸಂಜೆ 6 ಗಂಟೆಯಿಂದ ಸೆಪ್ಟೆಂಬರ್ 10, ಮಂಗಳವಾರ ಬೆಳಗ್ಗೆ 2 ಗಂಟೆವರೆಗೂ ಮೆರವಣಿಗೆ ಸಾಗುವ ಮಾರ್ಗಗಳಲ್ಲಿ ಎಲ್ಲಾ ಮಾದರಿಯ ವಾಹನಗಳು ಪರ್ಯಾಯ ರಸ್ತೆಯಲ್ಲಿ ಸಂಚರಿಸಲು ಅಗತ್ಯ ಕ್ರಮ ಕೈಗೊಳ್ಳಲಾಗಿದೆ ಎಂದು ಸಂಚಾರಿ ಪೊಲೀಸರು ತಿಳಿಸಿದ್ದಾರೆ.
ಸೂಕ್ತ ಸ್ಥಳಗಳಲ್ಲಿ ಅಧಿಕಾರಿ ಮತ್ತು ಸಿಬ್ಬಂದಿಗಳನ್ನು ನಿಯೋಜಿಸಿ ಸಂಚಾರ ಬಂದೋಬಸ್ತ್ ಮಾಡಲಾಗಿದೆದೆ. ಗಣೇಶ ಮೂರ್ತಿಗಳ ವಿಸರ್ಜನಾ ಮೆರವಣಿಗೆ ಕಾರ್ಯಕ್ರಮದ ಅಂಗವಾಗಿ ಸಂಚಾರ ಬದಲಿ ಮಾರ್ಗಗಳ ವಿವರಗಳು ಹೀಗಿವೆ.
ಮಾರ್ಗ ಬದಲಾವಣೆ ವಿವರಗಳು
1. ಸುಲ್ತಾನ್‌ಪಾಳ್ಯ ಕಡೆಯಿಂದ ದೂರದರ್ಶನ ಕೇಂದ್ರ ಮತ್ತು ಕಂಟೋನ್ ಮೆಂಟ್ ರೈಲು ನಿಲ್ದಾಣದಿಂದ ಬೆಂಗಳೂರು ನಗರದ ಕಡೆಗೆ ಸಂಚರಿಸುವ ವಾಹನಗಳು ಸಂಚರಿಸಬೇಕಾದ ಮಾರ್ಗಗಳು:
ಸುಲ್ತಾನ್ ಪಾಳ್ಯ ಮುಖ್ಯರಸ್ತೆ - ದಿಣ್ಣೂರು ಜಂಕ್ಷನ್ - ಎಡತಿರುವು - ದೇವೆಗೌಡ ಮುಖ್ಯರಸ್ತೆ - ಪಿ.ಆರ್ ಟಿ.ಸಿ ಜಂಕ್ಷನ್- ಬಲ ತಿರುವು - ವಾಟರ್ ಬ್ಯಾಂಕ್ ಜಂಕ್ಷನ್ – ಎಡ ತಿರುವು ಟಿ.ವಿ ಟವರ್ -ಎಡ ತಿರುವು ಜಯಮಹಲ್ ಮುಖ್ಯರಸ್ತೆಯಲ್ಲಿ ನೇರವಾಗಿ ಕಂಟೋನೆಂಟ್ ರೈಲು ನಿಲ್ದಾಣದ ಕಡೆಗೆ ಸಂಚರಿಸಬಹುದಾಗಿದೆ.
2. ಸುಲ್ತಾನ್‌ಪಾಳ್ಯ ಕಡೆಯಿಂದ ಬೆಂಗಳೂರು ನಗರದ ಕಡೆಗೆ ಹಾಗೂ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಕಡೆಗೆ ಸಂಚರಿಸುವ ವಾಹನ ಸವಾರರು ಸಂಚರಿಸಬೇಕಾದ ಮಾರ್ಗಗಳು:
ಸುಲ್ತಾನ್‌ಪಾಳ್ಯ ಮುಖ್ಯರಸ್ತೆ - ದಿಣ್ಣೂರು ಜಂಕ್ಷನ್ - ಎಡತಿರುವು ದೇವೆಗೌಡ ಮುಖ್ಯರಸ್ತೆ - ಪಿ.ಆರ್. ಟಿ.ಸಿ ಜಂಕ್ಷನ್ -ಬಲ ತಿರುವು – ವಾಟರ್ ಟ್ಯಾಂಕ್ ಜಂಕ್ಷನ್ -ಬಲ ತಿರುವು- ಮಠದಹಳ್ಳಿ ಮುಖ್ಯರಸ್ತೆ- ಗುಂಡೂರಾವ್ ಸರ್ಕಲ್ – ಎಡ ತಿರುವು - ತರಳಬಾಳು ರಸ್ತೆ - ಎಡ ತಿರುವು- ಬೆಂಗಳೂರು ಬಳ್ಳಾರಿ ರಸ್ತೆ - ಮೇಖ್ರೀ ಸರ್ಕಲ್ – ಬೆಂಗಳೂರು ನಗರದ ಕಡೆಗೆ ಹಾಗೂ ಮೇಖ್ರೀ ಸರ್ಕಲ್ ಯೂ ಟರ್ನ್ ಪಡೆದು ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಕಡೆಗೆ ಸಂಚರಿಸಬಹುದಾಗಿದೆ.
3. ಕಂಟೋನ್ ಮೆಂಟ್ ರೈಲು ನಿಲ್ದಾಣ ಕಡೆಯಿಂದ ಆರ್.ಟಿ.ನಗರ - ಸುಲ್ತಾನ್ ಪಾಳ್ಯ - ಕಾವಲ್ ಬೈರಸಂದ್ರ ಕಡೆಗೆ ಸಂಚರಿಸುವ ವಾಹನಗಳು ಸಂಚರಿಸಬೇಕಾದ ಮಾರ್ಗಗಳು:
ಜಯಮಹಲ್ ರಸ್ತೆ- ಜೆ.ಸಿ ನಗರ ಪಿ.ಎಸ್ ಜಂಕ್ಷನ್ - ಟಿವಿ ಟವರ್ (ಸಿ.ಕ್ಯೂ.ಎ.ಎಲ್ ಕ್ರಾಸ್ ಬಲ ತಿರುವು)
ವಾಟರ್ ಟ್ಯಾಂಕ್ ಜಂಕ್ಷನ್ – ಬಲ ತಿರುವು ಪಿ.ಆರ್.ಟಿ.ಸಿ ಜಂಕ್ಷನ್ - ಎಡ ತಿರುವು ದೇವೇಗೌಡ ರಸ್ತೆ - ದಿಣ್ಣೂರು ಜಂಕ್ಷನ್ ಬಲ ತಿರುವು ಸುಲ್ತಾನ್ ಪಾಳ್ಯ - ಕಾವಲ್ ಭೈರಸಂದ್ರ ಕಡೆಗೆ ಸಂಚರಿಸಬಹುದು.
4. ಯಶವಂತಪುರ ಕಡೆಯಿಂದ ಆರ್.ಟಿ. ನಗರ - ಸುಲ್ತಾನ್ ಪಾಳ್ಯ- ಕಾವಲ್ ಬೈರಸಂದ್ರ ಕಡೆಗೆ ಸಂಚರಿಸುವ ವಾಹನಗಳು ಸಂಚರಿಸಬೇಕಾದ ಮಾರ್ಗಗಳು:
ಮೇಖ್ರಿ ಸರ್ಕಲ್ - ಜಯಮಹಲ್ ಮುಖ್ಯರಸ್ತೆ - ಟಿ.ವಿ ಟವರ್ (ಸಿ.ಕ್ಯೂ.ಎ.ಎಲ್ ಕ್ರಾಸ್) ಎಡತಿರುವು ವಾಟರ್ ಬ್ಯಾಂಕ್ ಜಂಕ್ಷನ್ ಪಿ.ಆರ್.ಟಿ.ಸಿ ಜಂಕ್ಷನ್ – ಎಡ ತಿರುವು ದೇವೇಗೌಡ ರಸ್ತೆ - ದಿಣ್ಣೂರು ಜಂಕ್ಷನ್ ಬಲ ತಿರುವು ಸುಲ್ತಾನ್ ಪಾಳ್ಯ - ಕಾವಲ್ ಭೈರಸಂದ್ರ ಕಡೆಗೆ ಸಂಚರಿಸಬಹುದು.
5. ಬೆಂಗಳೂರು ನಗರದ (ಬಿಬಿ ರಸ್ತೆ) ಮೇಖ್ರಿ ಸರ್ಕಲ್ ಕಡೆಯಿಂದ ಆರ್.ಟಿ.ನಗರ ಕಡೆಗೆ ಸಂಚರಿಸುವ ವಾಹನಗಳು ಅನುಸರಿಸಬೇಕಾದ ಮಾರ್ಗಗಳು:
ಮೇಖ್ರಿ ಸರ್ಕಲ್ - ಸಿಬಿಐ ಜಂಕ್ಷನ್ - ಬಲತಿರುವು
ಸಂಜಯ್ ನಗರ ಕ್ರಾಸ್ ಸರ್ವಿಸ್ ರಸ್ತೆ- ತರಳಬಾಳು ರಸ್ತೆ - ಎಡತಿರುವು -ಗುಂಡೂರಾವ್ ಸರ್ಕಲ್ - ಬಲತಿರುವು - ಮಠದಹಳ್ಳಿ ರಸ್ತೆ ವಾಟರ್ ಟ್ಯಾಂಕ್ ಜಂಕ್ಷನ್ - ಎಡ ತಿರುವು- ಪಿ.ಆರ್.ಟಿ.ಸಿ ಜಂಕ್ಷನ್ – ಎಡ ತಿರುವು ದೇವೇಗೌಡ ರಸ್ತೆ - ದಿಣ್ಣೂರು ಜಂಕ್ಷನ್ ಎಡ ತಿರುವು -ಆರ್.ಟಿ. ನಗರ ಮುಖ್ಯ ರಸ್ತೆ
6. ಹೆಬ್ಬಾಳ ಪಿ.ಎಸ್ ಜಂಕ್ಷನ್ ನಿಂದ ಸುಲ್ತಾನ್ ಪಾಳ್ಯ - ಕಾವಲ್‌ಭೈರಸಂದ್ರ ಕಡೆಗೆ ಸಂಚರಿಸುವ ವಾಹನಗಳು ಸಂಚರಿಸಬೇಕಾದ ಮಾರ್ಗಗಳು:
ಹೆಬ್ಬಾಳ ಪಿ.ಎಸ್ ಜಂಕ್ಷನ್ ನಿಂದ - ಬೆಂಗಳೂರು ಬಳ್ಳಾರಿ ರಸ್ತೆ- ಸಿಬಿಐ ಜಂಕ್ಷನ್ - ಸಂಜಯನಗರ ಕ್ರಾಸ್- ತರಳಬಾಳು ರಸ್ತೆ - ಎಡ ತಿರುವು -ಗುಂಡೂರಾವ್ ಸರ್ಕಲ್ - ಬಲತಿರುವು- ಮಠದಹಳ್ಳಿ ರಸ್ತೆ ವಾಟರ್ ಟ್ಯಾಂಕ್ ಜಂಕ್ಷನ್ - ಎಡ ತಿರುವು -ಪಿ.ಆರ್.ಟಿ.ಸಿ ಜಂಕ್ಷನ್ – ಎಡ ತಿರುವು ದೇವೇಗೌಡ ರಸ್ತೆ - ದಿಣ್ಣೂರು ಜಂಕ್ಷನ್ ಬಲ ತಿರುವು ಸುಲ್ತಾನ್ ಪಾಳ್ಯ- ಕಾವಲ್ ಭೈರಸಂದ್ರ ಕಡೆಗೆ ಸಂಚರಿಸಬಹುದು.
ಈ ಮುಖ್ಯ ರಸ್ತೆಗಳಲ್ಲಿ ಸೆಪ್ಟೆಂಬರ್ 9, ಸೋಮವಾರ ಸಂಜೆ 6 ಗಂಟೆಯಿಂದ ಸೆಪ್ಟೆಂಬರ್ 10, ಬೆಳಗ್ಗೆ 2 ಗಂಟೆಯವರೆಗೆ ಈ ಸಂಚಾರ ಮಾರ್ಗದ ಮಾರ್ಪಾಡು ಜಾರಿಯಲ್ಲಿರಲಿದೆ ಎಂದು ಸಂಚಾರ ಪೊಲೀಸರು ತಿಳಿಸಿದ್ದಾರೆ.
(ವರದಿ:ಎಚ್. ಮಾರುತಿ, ಬೆಂಗಳೂರು)