Traffic Rules: ಇವರು ಹೆಲ್ಮೆಟ್ ಇಲ್ಲದೆಯೂ ಬೈಕ್ ಓಡಿಸಬಹುದು: ಟ್ರಾಫಿಕ್ ಪೊಲೀಸರು ಕಂಡರೂ ನಿಲ್ಲಿಸುವುದಿಲ್ಲ
Jul 30, 2024 06:00 AM IST
ಇವರು ಹೆಲ್ಮೆಟ್ ಇಲ್ಲದೆಯೂ ಬೈಕ್ ಓಡಿಸಬಹುದು: ಟ್ರಾಫಿಕ್ ಪೊಲೀಸರು ಕಂಡರೂ ನಿಲ್ಲಿಸುವುದಿಲ್ಲ
- ಭಾರತದಲ್ಲಿ ರಸ್ತೆಯಲ್ಲಿ ಹೆಲ್ಮೆಟ್ ಧರಿಸದಂತೆ ಅವಕಾಶವಿರುವ ಕೆಲವರಿದ್ದಾರೆ ಎಂಬುದು ನಿಮಗೆ ತಿಳಿದಿದೆಯೇ. ಹೌದು, ಈ ಜನರಿಗೆ ಹೆಲ್ಮೆಟ್ ಇಲ್ಲದೆ ವಾಹನ ಚಲಾಯಿಸಲು ಅವಕಾಶ ನೀಡಲಾಗಿದೆ. ಟ್ರಾಫಿಕ್ ಪೊಲೀಸರು ಹೆಲ್ಮೆಟ್ ಇಲ್ಲದೆ ಇವರನ್ನು ಕಂಡರೂ ಹಿಡಿಯುವುದಿಲ್ಲ. (ಬರಹ: ವಿನಯ್ ಭಟ್)
ಜನರ ಸುರಕ್ಷತೆಗಾಗಿ ಸರ್ಕಾರವು ಅನೇಕ ಸಂಚಾರ ನಿಯಮಗಳನ್ನು ಮಾಡಿದೆ. ಯಾರಾದರೂ ಅದನ್ನು ಪಾಲಿಸದಿದ್ದರೆ, ಅವರು ಭಾರೀ ದಂಡ ಪಾವತಿಸಬೇಕಾಗುತ್ತದೆ. ದ್ವಿಚಕ್ರ ವಾಹನಗಳಲ್ಲಿ ಸಂಚರಿಸುವವರಿಗೆ ಹೆಲ್ಮೆಟ್ ಧರಿಸುವಂತೆ ಸೂಚಿಸಲಾಗಿದೆ. ನಾಲ್ಕು ಚಕ್ರದ ವಾಹನ ಚಾಲಕರು ಸೀಟ್ ಬೆಲ್ಟ್ ಧರಿಸಬೇಕು ಎಂಬ ನಿಯಮವಿದೆ. ಅದರಲ್ಲೂ ಹೆಲ್ಮೆಟ್ ಧರಿಸದೇ ಇದ್ದರೆ 5,000 ರೂ. ವರೆಗೆ ದಂಡ ವಿಧಿಸಬಹುದು. ಆದರೆ ಭಾರತದಲ್ಲಿ ರಸ್ತೆಯಲ್ಲಿ ಹೆಲ್ಮೆಟ್ ಧರಿಸದಂತೆ ಅವಕಾಶವಿರುವ ಕೆಲವರಿದ್ದಾರೆ ಎಂಬುದು ನಿಮಗೆ ತಿಳಿದಿದೆಯೇ. ಹೌದು, ಈ ಜನರಿಗೆ ಹೆಲ್ಮೆಟ್ ಇಲ್ಲದೆ ವಾಹನ ಚಲಾಯಿಸಲು ಅವಕಾಶ ನೀಡಲಾಗಿದೆ. ಟ್ರಾಫಿಕ್ ಪೊಲೀಸರು ಹೆಲ್ಮೆಟ್ ಇಲ್ಲದೆ ಇವರನ್ನು ಕಂಡರೂ ಹಿಡಿಯುವುದಿಲ್ಲ.
ಇವರಿಗೆ ಹೆಲ್ಮೆಟ್ ಇಲ್ಲದೇ ಬೈಕ್ ಓಡಿಸಲು ಅವಕಾಶ
ಸಿಖ್ ಸಮುದಾಯದ ಜನರಿಗೆ ಹೆಲ್ಮೆಟ್ ಇಲ್ಲದೆ ಬೈಕ್ ಓಡಿಸಲು ಅವಕಾಶ ನೀಡಲಾಗಿದೆ. ಈ ಸಮುದಾಯದ ಜನರು ತಲೆಯ ಮೇಲೆ ಪೇಟವನ್ನು ಧರಿಸುವ ಕಾರಣ ಹೆಲ್ಮೆಟ್ ಹಾಕಬೇಕು ಎಂಬ ಕಡ್ಡಾಯ ನಿಯಮವಿಲ್ಲ. ತಲೆಯಲ್ಲಿ ಪೇಟ ಇರುವ ಕಾರಣ ಅವರ ತಲೆಗೆ ಹೆಲ್ಮೆಟ್ ಹೊಂದುವುದಿಲ್ಲ. ಸಾಮಾನ್ಯವಾಗಿ ಗಾಯ ಅಥವಾ ಅಪಘಾತದಿಂದ ತಲೆಯನ್ನು ರಕ್ಷಿಸಲು ಹೆಲ್ಮೆಟ್ ಅನ್ನು ಬಳಸಲಾಗುತ್ತದೆ. ಆದರೆ, ಈ ಸಮುದಾಯದ ಜನರ ತಲೆಯ ಮೇಲೆ ಪೇಟ ಇರುವುದರಿಂದ ಅದುಕೂಡ ರಕ್ಷಣೆ ಮಾಡುತ್ತದೆ ಎಂದು ಅಲ್ಲಿನ ಕಾನೂನು ಹೇಳುತ್ತದೆ.
ಇವುಗಳ ಹೊರತಾಗಿ, ಯಾರಾದರೂ ಅನಾರೋಗ್ಯದ ಕಾರಣದಿಂದ ಹೆಲ್ಮೆಟ್ ಧರಿಸದೇ ಇದ್ದರೆ, ಅಂತವರಿಗೆ ವಿನಾಯಿತಿ ನೀಡಲಾಗುತ್ತದೆ. ಆದರೆ ಅದಕ್ಕೆ ಪುರಾವೆ ತೋರಿಸಬೇಕು. ಭಾರತವನ್ನು ಹೊರತುಪಡಿಸಿ, ಪಾಕಿಸ್ತಾನ, ಬ್ರಿಟನ್, ಅಮೆರಿಕ, ಕೆನಡಾ ಮತ್ತು ಆಸ್ಟ್ರೇಲಿಯಾ ಸೇರಿದಂತೆ ಹಲವು ದೇಶಗಳಲ್ಲಿ ಸಿಖ್ಖರಿಗೆ ಹೆಲ್ಮೆಟ್ ಧರಿಸುವುದರಿಂದ ವಿನಾಯಿತಿ ನೀಡಲಾಗಿದೆ.
ಹೆಲ್ಮೆಟ್‌ಗಳ ನಿಯಮಗಳೇನು?
ನಿಯಮದ ಪ್ರಕಾರ ಎಲ್ಲಾ ದ್ವಿಚಕ್ರ ವಾಹನ ಸವಾರರು ಕಡ್ಡಾಯವಾಗಿ ಹೆಲ್ಮೆಟ್ ಧರಿಸಬೇಕು. ಸೆಕ್ಷನ್ 129 ರ ಪ್ರಕಾರ, ಹೆಲ್ಮೆಟ್ ಇಲ್ಲದೆ ಸಿಕ್ಕಿಬಿದ್ದರೆ, 5,000 ರೂ. ವರೆಗೆ ಚಲನ್ ವಿಧಿಸಬಹುದು. ಬೈಕ್‌ನಲ್ಲಿ ಮಗು ಇದ್ದರೆ, ಅದರ ವಯಸ್ಸು 4 ವರ್ಷಕ್ಕಿಂತ ಹೆಚ್ಚಾಗಿದ್ದರೆ ಹೆಲ್ಮೆಟ್ ಧರಿಸುವುದು ಅವಶ್ಯಕ. ಇದಲ್ಲದೇ ಸಹ ಪ್ರಯಾಣಿಕರು ಹೆಲ್ಮೆಟ್ ಧರಿಸುವುದು ಕಡ್ಡಾಯವಾಗಿದೆ. ನಿಯಮ ಮೀರಿದರೆ ಚಾಲನಾ ಪರವಾನಗಿಯನ್ನು ಮೂರು ತಿಂಗಳವರೆಗೆ ರದ್ದುಗೊಳಿಸಬಹುದು.
ಭಾರತದಲ್ಲಿ ಐಫೋನ್‌ನ ಎಲ್ಲ ಮಾದರಿಗಳ ಬೆಲೆ ಇಳಿಕೆ
ಐಫೋನ್ ಖರೀದಿದಾರರಿಗೆ ಶುಭ ಸುದ್ದಿ. ಆಪಲ್ ಭಾರತದಲ್ಲಿ ತನ್ನ ಎಲ್ಲಾ ಐಫೋನ್ ಮಾದರಿಗಳ ಬೆಲೆಯನ್ನು ಕಡಿಮೆ ಮಾಡಿದೆ. ಭಾರತದಲ್ಲಿ ಇತ್ತೀಚೆಗೆ ಮಂಡಿಸಿದ ಬಜೆಟ್‌ನಲ್ಲಿ ಮಾಡಿದ ಬದಲಾವಣೆಗಳ ನಂತರ ಐಫೋನ್ ಬೆಲೆಯನ್ನು ಕಡಿಮೆ ಮಾಡಲು ಆಪಲ್ ನಿರ್ಧಾರ ತೆಗೆದುಕೊಂಡಿದೆ. ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ತಮ್ಮ ಬಜೆಟ್ ಭಾಷಣದಲ್ಲಿ ಆಮದು ಮಾಡಿಕೊಳ್ಳುವ ಮೊಬೈಲ್ ಫೋನ್‌ಗಳು ಮತ್ತು ಅವುಗಳ ಬಿಡಿಭಾಗಗಳ ಮೇಲಿನ ಮೂಲ ಕಸ್ಟಮ್ ಸುಂಕವನ್ನು (ಬಿಸಿಡಿ) ಶೇ. 20 ರಿಂದ ಶೇ. 15 ಕ್ಕೆ ಇಳಿಸಲಾಗುವುದು ಎಂದು ಘೋಷಿಸಿದ್ದರು.
ಆಪಲ್ ತನ್ನ ಪ್ರೊ ಮಾದರಿಗಳ ಬೆಲೆಯನ್ನು ಭಾರತೀಯ ಮಾರುಕಟ್ಟೆಯಲ್ಲಿ ಕಡಿಮೆ ಮಾಡಿರುವುದು ಇದೇ ಮೊದಲು. ಆಪಲ್‌ನ ಆನ್‌ಲೈನ್ ಸ್ಟೋರ್‌ನಲ್ಲಿ ಬೆಲೆಗಳನ್ನು ಪರಿಶೀಲಿಸಲಾಗಿದೆ ಅಧಿಕೃತವಾಗಿ ಕಡಿಮೆ ಮಾಡಲಾಗಿದೆ ಎಂದು ಹೇಳಲಾಗಿದೆ. ಆಪಲ್ ತನ್ನ ಹೊಸ ಐಫೋನ್ ಆವೃತ್ತಿಯ ಬಿಡುಗಡೆಗೆ ಕೆಲವೇ ತಿಂಗಳುಗಳುಗಳಿರುವಾಗ ಹಳೆಯ ಮಾದರಿಯ ಬೆಲೆಗಳನ್ನು ಕಡಿಮೆ ಮಾಡಿರುವುದು ಇದೇ ಮೊದಲು. ಐಫೋನ್ 16 ಸೆಪ್ಟೆಂಬರ್ 2024 ರಲ್ಲಿ ಆಗಮಿಸುವ ನಿರೀಕ್ಷೆಯಿದೆ.
ಐಫೋನ್‌ನ ಹೊಸ ಬೆಲೆಗಳು
ಐಫೋನ್ 15 ಪ್ರೊ ಮತ್ತು ಐಫೋನ್ 15 ಪ್ರೊ ಮ್ಯಾಕ್ಸ್ ಅನ್ನು ರೂ. 1,34,900 ಮತ್ತು ರೂ. 1,59,900 ಆರಂಭಿಕ ಬೆಲೆಯಲ್ಲಿ ಬಿಡುಗಡೆ ಮಾಡಲಾಗಿತ್ತು. ಇದೀಗ ಐಫೋನ್ 15 ಪ್ರೊ ಮಾದರಿಯು 1,29,800 ರೂ. ಗಳಿಗೆ ಲಭ್ಯವಿದೆ ಮತ್ತು ಐಫೋನ್ 15 ಪ್ರೊ ಮ್ಯಾಕ್ಸ್ ಮಾದರಿಯು 1,54,000 ರೂ. ಗಳಿಗೆ ಲಭ್ಯವಿದೆ. ಐಫೋನ್ 15 ಪ್ರೊ ಬೆಲೆ 5,100 ರೂಪಾಯಿ ಇಳಿಕೆಯಾಗಿದ್ದು, ಐಫೋನ್ 15 ಪ್ರೊ ಮ್ಯಾಕ್ಸ್ ಬೆಲೆ 5,900 ರೂಪಾಯಿ ಕಡಿಮೆಯಾಗಿದೆ.
ಹಾಗೆಯೆ, ಐಫೋನ್ 15 ಮತ್ತು ಐಫೋನ್ 15 ಪ್ಲಸ್ ಮಾದರಿಗಳ ಬೆಲೆಯಲ್ಲಿ ಕೂಡ ಕೊಂಚ ಇಳಿಕೆ ಕಂಡುಬಂದಿದೆ. ಐಫೋನ್ 15 ಮತ್ತು ಐಫೋನ್ 15 ಪ್ಲಸ್ ಬೆಲೆಗಳನ್ನು 300 ರೂ. ಕಡಿಮೆ ಮಾಡಲಾಗಿದೆ. ಈಗ ಈ ಫೋನ್‌ಗಳು ರೂ. 79,600 ಮತ್ತು ರೂ. 89,600 ಕ್ಕೆ ಲಭ್ಯವಿದೆ.
ಐಫೋನ್ 13 ಮತ್ತು ಐಫೋನ್ 14 ಬೆಲೆಗಳನ್ನು ಸಹ 300 ರೂಪಾಯಿಗಳಷ್ಟು ಕಡಿಮೆ ಮಾಡಲಾಗಿದೆ. ಬೆಲೆಯನ್ನು ಕಡಿಮೆ ಮಾಡಿದ ನಂತರ, ಈ ಫೋನ್‌ಗಳು ಕ್ರಮವಾಗಿ ರೂ. 59,600 ಮತ್ತು ರೂ. 69,600 ಕ್ಕೆ ಲಭ್ಯವಿದೆ. ಅಗ್ಗದ ಐಫೋನ್ ಎಸ್ಇ ಬೆಲೆ 2,300 ರೂಪಾಯಿ ಇಳಿಕೆಯಾಗಿದೆ. ಈಗ ಈ ಮಾದರಿಯು ರೂ. 47,600 ಕ್ಕೆ ಲಭ್ಯವಿದೆ, ಈ ಹಿಂದೆ ಇದರ ಬೆಲೆ ರೂ. 49,900 ಆಗಿತ್ತು.
ವಿಭಾಗ