logo
ಕನ್ನಡ ಸುದ್ದಿ  /  ಕರ್ನಾಟಕ  /  ಡಿಸೆಂಬರ್‌ನಿಂದಲೇ ಬೆಂಗಳೂರು ವಿಮಾನ ನಿಲ್ದಾಣಕ್ಕೆ 320 ಎಸಿ ಎಲೆಕ್ಟ್ರಿಕ್ ಬಸ್‌ ಸಂಚಾರ; ಬಿಎಂಟಿಸಿ ಸಿದ್ಧತೆ

ಡಿಸೆಂಬರ್‌ನಿಂದಲೇ ಬೆಂಗಳೂರು ವಿಮಾನ ನಿಲ್ದಾಣಕ್ಕೆ 320 ಎಸಿ ಎಲೆಕ್ಟ್ರಿಕ್ ಬಸ್‌ ಸಂಚಾರ; ಬಿಎಂಟಿಸಿ ಸಿದ್ಧತೆ

Umesh Kumar S HT Kannada

Nov 28, 2024 02:39 PM IST

google News

ಡಿಸೆಂಬರ್‌ನಿಂದಲೇ ಬೆಂಗಳೂರು ವಿಮಾನ ನಿಲ್ದಾಣಕ್ಕೆ 320 ಎಸಿ ಎಲೆಕ್ಟ್ರಿಕ್ ಬಸ್‌ ಸಂಚಾರಕ್ಕೆ ಬಿಎಂಟಿಸಿ ಸಿದ್ಧತೆ ನಡೆಸಿದೆ.

  • Bengaluru Airport Travel: ಡಿಸೆಂಬರ್‌ನಿಂದಲೇ ಬೆಂಗಳೂರು ವಿಮಾನ ನಿಲ್ದಾಣಕ್ಕೆ 320 ಎಸಿ ಎಲೆಕ್ಟ್ರಿಕ್ ಬಸ್‌ ಸಂಚಾರ ನಡೆಸಲಿವೆ. ಅಶೋಕ್‌ ಲೇಲ್ಯಾಂಡ್ ಇ ಬಸ್‌ಗಳನ್ನು ಒದಗಿಸಲಿದ್ದು, ಇದರ ಕಾರ್ಯಾಚರಣೇಗೆ ಬಿಎಂಟಿಸಿ ಸಿದ್ಧತೆ ನಡೆಸಿದೆ.

ಡಿಸೆಂಬರ್‌ನಿಂದಲೇ ಬೆಂಗಳೂರು ವಿಮಾನ ನಿಲ್ದಾಣಕ್ಕೆ 320 ಎಸಿ ಎಲೆಕ್ಟ್ರಿಕ್ ಬಸ್‌ ಸಂಚಾರಕ್ಕೆ ಬಿಎಂಟಿಸಿ ಸಿದ್ಧತೆ ನಡೆಸಿದೆ.
ಡಿಸೆಂಬರ್‌ನಿಂದಲೇ ಬೆಂಗಳೂರು ವಿಮಾನ ನಿಲ್ದಾಣಕ್ಕೆ 320 ಎಸಿ ಎಲೆಕ್ಟ್ರಿಕ್ ಬಸ್‌ ಸಂಚಾರಕ್ಕೆ ಬಿಎಂಟಿಸಿ ಸಿದ್ಧತೆ ನಡೆಸಿದೆ.

ಬೆಂಗಳೂರು: ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಾರ್ವಜನಿಕ ಸಾರಿಗೆ ಪೈಕಿ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ)ಯ ವಾಯು ವಜ್ರ ಬಸ್‌ಗಳು ಗಮನ ಸೆಳೆಯುತ್ತಿರುತ್ತವೆ. ಬಹಳಷ್ಟು ವಾಯು ವಜ್ರ ಬಸ್‌ಗಳು ವೋಲ್ವೋ ಕಂಪನಿ ನಿರ್ಮಿತ ಬಸ್‌ಗಳಾಗಿದ್ದು ಇವುಗಳ ಬದಲಿಗೆ ಎಲೆಕ್ಟ್ರಿಕ್‌ ಬಸ್‌ಗಳನ್ನು ಓಡಿಸಲು ಬಿಎಂಟಿಸಿ ನಿರ್ಧರಿಸಿದೆ. ಮುಂದಿನ ತಿಂಗಳಿಂದಲೇ ಪರಿಸರ ಸ್ನೇಹಿ ಎಲೆಕ್ಟ್ರಿಕ್ ಬಸ್‌ಗಳು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಮಾರ್ಗದಲ್ಲಿ ಸಂಚರಿಸಲಿವೆ. ವೋಲ್ವೋ ಬಸ್‌ಗಳ ಕಾರ್ಯಾಚರಣೆಯಿಂದ ನಷ್ಟವಾಗುತ್ತಿರುವ ಬಗ್ಗೆ ಕಳವಳ ಹೆಚ್ಚಿದ ಹಿನ್ನೆಲೆಯಲ್ಲಿ ನಷ್ಟ ನಿಯಂತ್ರಿಸುವ ಕೆಲಸಕ್ಕೆ ಬಿಎಂಟಿಸಿ ಮುಂದಾಗಿದೆ. ವೋಲ್ವೋ ಬಸ್‌ಗಳ ಕಾರ್ಯಾಚರಣೆಯಿಂದ ಬಿಎಂಟಿಸಿಗೆ ಲಾಭಕ್ಕಿಂತ ನಷ್ಟವೇ ಹೆಚ್ಚು ಎಂಬುದು ತಜ್ಞರ ಅಭಿಪ್ರಾಯ ಎಂದು ಬಿಎಂಟಿಸಿ ಮೂಲಗಳು ತಿಳಿಸಿವೆ.

ಡಿಸೆಂಬರ್‌ನಿಂದಲೇ ಬೆಂಗಳೂರು ವಿಮಾನ ನಿಲ್ದಾಣಕ್ಕೆ 320 ಎಸಿ ಎಲೆಕ್ಟ್ರಿಕ್ ಬಸ್‌ ಸಂಚಾರ

ಬೆಂಗಳೂರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಮಾರ್ಗದಲ್ಲಿ ವೋಲ್ವೋ ಬಸ್ಸುಗಳು ದೀರ್ಘಕಾಲದಿಂದ ಸಂಚರಿಸುತ್ತಿವೆ. ಇವು ಅನುಕೂಲಕರ ಮತ್ತು ವಿಶ್ವಾಸಾರ್ಹ ಪ್ರಯಾಣವನ್ನು ಬೆಂಗಳೂರಿಗರಿಗೆ ಒದಗಿಸುತ್ತ ಬಂದಿದ್ದಚವು. ಆದರೆ, ಹೆಚ್ಚಿನ ನಿರ್ವಹಣಾ ವೆಚ್ಚ ಮತ್ತು ಖರ್ಚು ವೆಚ್ಚಗಳ ಕಾರಣ ವೋಲ್ವೋ ಬಸ್‌ಗಳ ನಿರ್ವಹಣೆ ಬಿಎಂಟಿಸಿಗೆ ಲಾಭದಾಯಕವಾಗಿಲ್ಲ. ಇದೇ ವೇಳೆ, ಅಶೋಕ್‌ ಲೇಲ್ಯಾಂಡ್ ಒದಗಿಸುವ ಎಲೆಕ್ಟ್ರಿಕ್ ಬಸ್‌ಗಳ ಕಾರ್ಯಾಚರಣೆಯಿಂದ ಬಿಎಂಟಿಸಿಗೆ ಲಾಭವಾಗಲಿದೆ ಎಂಬುದು ದೃಢಪಟ್ಟ ಕಾರಣ, ಅದರ ಕಡೆಗೆ ಬಿಎಂಟಿಸಿ ಒಲವು ತೋರಿದೆ. ಅದೂ ಅಲ್ಲದೆ, ಬೆಂಗಳೂರಿನ ಇಂಗಾಲದ ಹೆಜ್ಜೆಗುರುತನ್ನು ಕಡಿಮೆ ಮಾಡಲು ಕೊಡುಗೆ ನೀಡುತ್ತದೆ ಎಂದು ನಿರೀಕ್ಷೆಯೊಂದಿಗೆ ಬಿಎಂಟಿಸಿ ಮುಂದುವರಿದಿದೆ.

ಆದ್ದರಿಂದ ಐಷಾರಾಮಿ ವೋಲ್ವೋ ಬಸ್‌ಗಳ ಬದಲಿಗೆ, ಬಿಎಂಟಿಸಿಯು 320 ಹೊಸ ಹವಾನಿಯಂತ್ರಿತ ಎಲೆಕ್ಟ್ರಿಕ್ ಬಸ್‌ಗಳನ್ನು ಪರಿಚಯಿಸಲಿದೆ. ಈ ಬಸ್ಸುಗಳನ್ನು ಅಶೋಕ್ ಲೇಲ್ಯಾಂಡ್ ಕಂಪನಿಯು ಒದಗಿಸಲಿದೆ. ಇದು ಸುಸ್ಥಿರ ಮತ್ತು ಪರಿಸರ ಸ್ನೇಹಿ ಸಾರ್ವಜನಿಕ ಸಾರಿಗೆಯತ್ತ ಗಮನಾರ್ಹ ಬದಲಾವಣೆಯನ್ನು ಸೂಚಿಸುತ್ತದೆ. ಪರಿವರ್ತನೆಯು ನಿಗಮದ ಕಾರ್ಯಾಚರಣೆಯ ವೆಚ್ಚವನ್ನು ಕಡಿಮೆ ಮಾಡುತ್ತದೆ ಮತ್ತು ಮಾಲಿನ್ಯವನ್ನು ಕಡಿಮೆ ಮಾಡುವ ಬೆಂಗಳೂರು ನಗರಾಡಳಿತದ ಪ್ರಯತ್ನಗಳಿಗೆ ಕೊಡುಗೆ ನೀಡುತ್ತದೆ ಎಂದು ನಿರೀಕ್ಷಿಸಲಾಗಿದೆ.

ಫೇಮ್‌ 2ರ ಪ್ರಕಾರ ಬಸ್‌ಗಳ ಆಧುನೀಕರಣಕ್ಕೆ ಮುಂದಾಗಿದೆ ಬಿಎಂಟಿಸಿ

ಬೆಂಗಳೂರಿನಲ್ಲಿ ಎಲೆಕ್ಟ್ರಿಕ್‌ ಬಸ್‌ಗಳ ಸಂಚಾರಕ್ಕೆ ಬಿಎಂಟಿಸಿ ಕ್ರಮ ತೆಗೆದುಕೊಂಡಿದ್ದು, ಈ ಉಪಕ್ರಮವು ಫೇಮ್‌ 2 ರೀತಿಯ ರಾಷ್ಟ್ರೀಯ ಯೋಜನೆಗಳಂತೆ ತನ್ನ ಫ್ಲೀಟ್ ಅನ್ನು ಆಧುನೀಕರಿಸಲು ಮುಂದಾಗಿದೆ. ಇದು ಬಿಎಂಟಿಸಿಯ ವಿಸ್ತೃತ ಕಾರ್ಯಾಚರಣೆಯ ಕಾರ್ಯತಂತ್ರದ ಭಾಗವಾಗಿದೆ. ಇದರಂತೆ, ಬೆಂಗಳೂರು ನಗರದಾದ್ಯಂತ 1,751 ಎಲೆಕ್ಟ್ರಿಕ್ ಬಸ್‌ಗಳನ್ನು ನಿಯೋಜಿಸುವ ಗುರಿಯನ್ನು ಹೊಂದಿದೆ. ವಿಮಾನ ನಿಲ್ದಾಣದ ಮಾರ್ಗಗಳಲ್ಲಿ ಎಲೆಕ್ಟ್ರಿಕ್ ಬಸ್‌ಗಳ ಪರಿಚಯವು ಸುಸ್ಥಿರ ಮತ್ತು ಪರಿಣಾಮಕಾರಿ ಸಾರಿಗೆ ಜಾಲವನ್ನು ರಚಿಸುವತ್ತ ಒಂದು ಹೆಜ್ಜೆಯಾಗಿದೆ ಎಂದು ಏಷ್ಯಾನೆಟ್ ಸುವರ್ಣ ವರದಿ ಹೇಳಿದೆ.

ವೆಚ್ಚ-ಪರಿಣಾಮಕಾರಿ ಎಲೆಕ್ಟ್ರಿಕ್ ಬಸ್‌ಗಳು ಮಾಲಿನ್ಯವನ್ನು ಕಡಿಮೆ ಮಾಡುವುದರ ಮೂಲಕ ಪರಿಸರ ಸ್ನೇಹಿ ಕಾರ್ಯಾಚರಣೆಗೆ ಬಿಎಂಟಿಸಿಗೆ ಸಹಕರಿಸಲಿವೆ. ಅಷ್ಟೇ ಅಲ್ಲ, ದೈನಂದಿನ ಪ್ರಯಾಣಿಕರಿಗೆ ಮತ್ತು ಪ್ರಯಾಣಿಕರಿಗೆ ಸಾರ್ವಜನಿಕ ಸಾರಿಗೆಯನ್ನು ಹೆಚ್ಚು ಆಕರ್ಷಕ ಆಯ್ಕೆಗೂ ನೆರವಾಗಲಿದೆ. ಬಿಎಂಟಿಸಿಯ ಈ ಉಪಕ್ರಮಗಳು ಗ್ರೀನ್ ಫ್ಲೀಟ್‌ ಬೆಂಬಲಿಸುವ ಚಾರ್ಜಿಂಗ್ ಸ್ಟೇಷನ್‌ಗಳನ್ನು ಸ್ಥಾಪಿಸುವ ಯೋಜನೆಗಳನ್ನೂ ಒಳಗೊಂಡಿವೆ ಎಂದು ವರದಿ ಹೇಳಿದೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ