logo
ಕನ್ನಡ ಸುದ್ದಿ  /  ಕರ್ನಾಟಕ  /  ಭಾರತದಲ್ಲಿ ಇದೇ ಮೊದಲು, ತೃತೀಯ ಲಿಂಗಿ ತಾಯಿ ಅಕ್ಕೈ ಪದ್ಮಶಾಲಿ ಹೆಸರಿನೊಂದಿಗೆ ಪಾಸ್‌ಪೋರ್ಟ್‌ ಪಡೆದ ಬೆಂಗಳೂರು ಹುಡುಗ ಅವಿನ್‌

ಭಾರತದಲ್ಲಿ ಇದೇ ಮೊದಲು, ತೃತೀಯ ಲಿಂಗಿ ತಾಯಿ ಅಕ್ಕೈ ಪದ್ಮಶಾಲಿ ಹೆಸರಿನೊಂದಿಗೆ ಪಾಸ್‌ಪೋರ್ಟ್‌ ಪಡೆದ ಬೆಂಗಳೂರು ಹುಡುಗ ಅವಿನ್‌

Praveen Chandra B HT Kannada

Nov 12, 2024 02:10 PM IST

google News

ಅಕ್ಕೈ ಪದ್ಮಶಾಲಿ

    • ಅಕ್ಕೈ ಪದ್ಮಶಾಲಿ ತೃತೀಯ ಲಿಂಗಿಯರ ಹಕ್ಕುಗಳಿಗಾಗಿ ಹೋರಾಟ ನಡೆಸುತ್ತಿರುವ ಹೋರಾಟಗಾರ್ತಿ. ಇದೀಗ ಈಕೆಯ ಮಗ ಅವಿನ್‌ಗೆ ತನ್ನ ತಂದೆಯ ಹೆಸರಿಲ್ಲದೆ ಪಾಸ್‌ಪೋರ್ಟ್‌ ದೊರಕಿದೆ. ಅಪ್ಪನ ಹೆಸರಿಲ್ಲದೆ, ಟ್ರಾನ್ಸ್‌ಜೆಂಡರ್‌ ತಾಯಿಯ ಹೆಸರಿನಲ್ಲಿ ಪಾಸ್‌ಪೋರ್ಟ್‌ ನೀಡಿರುವುದು ಇದೇ ಮೊದಲಾಗಿದೆ.
 ಅಕ್ಕೈ ಪದ್ಮಶಾಲಿ
ಅಕ್ಕೈ ಪದ್ಮಶಾಲಿ (instagram)

ಬೆಂಗಳೂರು: ಅಕ್ಕೈ ಪದ್ಮಶಾಲಿ ತೃತೀಯ ಲಿಂಗಿಯರ ಹಕ್ಕುಗಳಿಗಾಗಿ ಹೋರಾಟ ನಡೆಸುತ್ತಿರುವ ಹೋರಾಟಗಾರ್ತಿ. ಇದೀಗ ಈಕೆಯ ಮಗ ಅವಿನ್‌ಗೆ ತನ್ನ ತಂದೆಯ ಹೆಸರಿಲ್ಲದೆ ಪಾಸ್‌ಪೋರ್ಟ್‌ ದೊರಕಿದೆ. ಅಪ್ಪನ ಹೆಸರಿಲ್ಲದೆ, ಟ್ರಾನ್ಸ್‌ಜೆಂಡರ್‌ ತಾಯಿಯ ಹೆಸರಿನಲ್ಲಿ ಪಾಸ್‌ಪೋರ್ಟ್‌ ನೀಡಿರುವುದು ಇದೇ ಮೊದಲಾಗಿದೆ. "ಮಹತ್ವದ ಬೆಳವಣಿಗೆಯೊಂದರಲ್ಲಿ ಬೆಂಗಳೂರಿನ ಪ್ರಾದೇಶಿಕ ಪಾಸ್‌ಪೋರ್ಟ್ ಕಚೇರಿಯು ತೃತೀಯಲಿಂಗಿ ಮಾನವ ಹಕ್ಕುಗಳ ಕಾರ್ಯಕರ್ತೆ ಅಕ್ಕೈ ಪದ್ಮಶಾಲಿ ಅವರ ಪುತ್ರ ಐದು ವರ್ಷದ ಅವಿನ್ ಅಕ್ಕೈ ಪದ್ಮಶಾಲಿಗೆ ತಂದೆಯ ಹೆಸರನ್ನು ನಮೂದು ಮಾಡದೆ ಪಾಸ್‌ಪೋರ್ಟ್ ನೀಡಿದೆ" ಎಂದು ಡೆಕ್ಕನ್‌ ಹೆರಾಲ್ಡ್‌ ವರದಿ ಮಾಡಿದೆ.

ಈ ರೀತಿ ತಂದೆಯ ಹೆಸರನ್ನು ನಮೂದಿಸದೆ, ತೃತೀಯ ಲಿಂಗಿ ತಾಯಿಯ ಹೆಸರಿನಲ್ಲಿ ಪಾಸ್‌ಪೋರ್ಟ್‌ ನೀಡಿರುವುದು ಭಾರತದಲ್ಲಿ ಐತಿಹಾಸಿಕವೂ ಹೌದು. ಈ ಪಾಸ್‌ಪೋರ್ಟ್‌ನಲ್ಲಿ ಅಕ್ಕೈ ಪದ್ಮಶಾಲಿ ಅವರನ್ನು ಪೋಷಕರು ಎಂದು ನಮೂದಿಸಲಾಗಿದೆ ಎಂದು ವರದಿ ತಿಳಿಸಿದೆ.

ಇದು ಭಾರತದಲ್ಲಿ ಐತಿಹಾಸಿಕ ಕ್ಷಣವನ್ನು ಗುರುತಿಸುತ್ತದೆ, ಅಲ್ಲಿ ಮಗುವಿನ ಪಾಸ್‌ಪೋರ್ಟ್‌ನಲ್ಲಿ ಲಿಂಗಾಯತ ಮಹಿಳೆಯ ಹೆಸರನ್ನು ಮಾತ್ರ ಪೋಷಕ ಎಂದು ನಮೂದಿಸಲಾಗಿದೆ. ಅಕ್ಕೈ ಪದ್ಮಶಾಲಿ ಅವರು ತನ್ನ ಸಿಸ್ಜೆಂಡರ್ ಪತಿ ವಾಸುದೇವ್ ವಿ ಅವರಿಂದ ಡಿವೋರ್ಸ್‌ ಪಡೆದಿದ್ದಾರೆ. ಅವರು ತಮ್ಮ ದತ್ತುಪುತ್ರ ಅವಿನ್ ಪಾಲನೆ ಮಾಡುತ್ತಿದ್ದಾರೆ. ಇದು ಮಹತ್ವದ ಹೆಜ್ಜೆಯಾಗಿದೆ ಎಂದು ಅಕ್ಕೈ ಪದ್ಮಶಾಲಿ ಅವರು ಡೆಕ್ಕನ್‌ ಹೆರಾಲ್ಡ್‌ಗೆ ತಿಳಿಸಿದ್ದಾರೆ. "ವಿಚ್ಛೇದಿತ, ಏಕ-ಪೋಷಕ ಟ್ರಾನ್ಸ್ ವುಮನ್ ಎದುರಿಸುತ್ತಿರುವ ಸವಾಲನ್ನು ಸರಕಾರ ಒಪ್ಪಿಕೊಂಡಿದೆ. ಹೀಗಾಗಿ, ಈ ಮಹತ್ವದ ಕ್ರಮ ಕೈಕೊಂಡಿದೆ" ಎಂದು ಅವರು ಹೇಳಿದ್ದಾರೆ.

ಅಕ್ಕೈ ಪದ್ಮಶಾಲಿ ಮತ್ತು ವಾಸುದೇವ್‌ ಅವರು 2017ರಲ್ಲಿ ಮದುವೆಯಾಗಿದ್ದರು. 2018ರಲ್ಲಿ ತಮ್ಮ ವಿವಾಹವನ್ನು ನೋಂದಣಿ ಮಾಡಿದ್ದರು. 2019ರಲ್ಲಿ ಇವರಿಬ್ಬರು ಮಗುವನ್ನು ದತ್ತು ಪಡೆದಿದ್ದರು. ತನ್ನ ವಿವಾಹವನ್ನು ಕಾನೂನುಬದ್ಧವಾಗಿ ನೋಂದಣಿ ಮಾಡಿರುವ ಭಾರತದ ಮೊದಲ ಟ್ರಾನ್ಸ್‌ಜೆಂಡರ್‌ ಮಹಿಳೆಯೂ ಇವರಾಗಿದ್ದಾರೆ. ಇದೀಗ ತಂದೆಯ ಹೆಸರಿಲ್ಲದೆ ಪಾಸ್‌ಪೋರ್ಟ್‌ ನೀಡಿರುವುದು ದೇಶದಲ್ಲಿ ತೃತೀಯ ಲಿಂಗಿಯ ಪೋಷಕರ ಹಕ್ಕುಗಳು ಗುರುತಿಸುವಲ್ಲಿ ಪ್ರಗತಿಶೀಲ ಬೆಳವಣಿಗೆ ಎನ್ನಲಾಗುತ್ತಿದೆ.

ಅಕಾಡೆಮಿ ನೇಮಕ ನಿರಾಕರಿಸಿದ್ರು ಅಕ್ಕೈ

ಈ ವರ್ಷ ಮಾರ್ಚ ತಿಂಗಳಲ್ಲಿ ಅಕ್ಕೈ ಪದ್ಮಶಾಲಿ ಅವರನ್ನು ರಾಜ್ಯ ಸರಕಾರವು ಕರ್ನಾಟಕ ಸಾಹಿತ್ಯ ಅಕಾಡೆಮಿ ನೇಮಿಸಿತ್ತು. ಅಕಾಡೆಮಿ ಹುದ್ದೆಯಿಂದ ತಮ್ಮ ಹೆಸರನ್ನು ಕೈಬಿಡುವಂತೆ ಇವರು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್‌ಗೆ ಮನವಿ ಮಾಡಿದ್ದರು. "ತಮ್ಮನ್ನು ಅಕಾಡೆಮಿಗೆ ನೇಮಿಸಿದ್ದಕ್ಕೆ ಧನ್ಯವಾದಗಳು. ತೃತೀಯ ಲಿಂಗಿಗಳ ಮೇಲಿರುವ ಸಾಮಾಜಿಕ ಕಳಂಕದ ವಿರುದ್ಧ ಹೋರಾಟ ನಡೆಯಲು ಆದ್ಯತೆ ನೀಡುತ್ತಿದ್ದೇನೆ. ನನ್ನನ್ನು ಕರ್ನಾಟಕ ಶಾಸಕಾಂಗ ಅಥವಾ ಸಂಸತ್ತಿನ ಮೇಲ್ಮನೆಗೆ ನಾಮನಿರ್ದೇಶನ ಮಾಡಿ" ಎಂದು ಒತತಾಯಿಸಿದ್ದರು. ಇವರು ಕಾಂಗ್ರೆಸ್‌ ಸದಸ್ಯೆಯೂ ಹೌದು.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ