logo
ಕನ್ನಡ ಸುದ್ದಿ  /  ಕರ್ನಾಟಕ  /  ಬೆಂಗಳೂರು ಜಾಲಹಳ್ಳಿಯಲ್ಲಿ ಬಾಲಕಿಯನ್ನು ಕಚ್ಚಿ ಎಳೆದಾಡಿದ ಬೀದಿನಾಯಿ; ಕೋಲು ಹಿಡ್ಕೊಂಡು ಓಡಾಡಿ ಎಂದು ಪುಕ್ಕಟೆ ಸಲಹೆ ನೀಡ್ತಿದೆ ಬಿಬಿಎಂಪಿ

ಬೆಂಗಳೂರು ಜಾಲಹಳ್ಳಿಯಲ್ಲಿ ಬಾಲಕಿಯನ್ನು ಕಚ್ಚಿ ಎಳೆದಾಡಿದ ಬೀದಿನಾಯಿ; ಕೋಲು ಹಿಡ್ಕೊಂಡು ಓಡಾಡಿ ಎಂದು ಪುಕ್ಕಟೆ ಸಲಹೆ ನೀಡ್ತಿದೆ ಬಿಬಿಎಂಪಿ

Umesh Kumar S HT Kannada

Oct 15, 2024 11:46 AM IST

google News

ಬೆಂಗಳೂರಿನಲ್ಲಿ ಮತ್ತೆ ಬೀದಿನಾಯಿ ಕಾಟ ಶುರುವಾಗಿದೆ. (ಸಾಂಕೇತಿಕ ಚಿತ್ರ)

  • ಬೆಂಗಳೂರು ಜಾಲಹಳ್ಳಿಯಲ್ಲಿ ಮತ್ತೆ ಬೀದಿ ನಾಯಿ ಕಾಟ ಹೆಚ್ಚಾಗಿದೆ. ಬಾಲಕಿಯನ್ನು ಕಚ್ಚಿ ಎಳೆದಾಡಿ ಬೀದಿನಾಯಿಗಳನ್ನು ಸ್ಥಳೀಯರು ಓಡಿಸಿ ಆಕೆಯನ್ನು ರಕ್ಷಿಸಿದ ವಿಡಿಯೋ ವೈರಲ್ ಆಗಿದೆ. ಈಗ ನಾಯಿಗಳ ಹಬ್ಬ ಆಚರಿಸಲು ಬಿಬಿಎಂಪಿ ಮುಂದಾಗಿರುವ ಕಾರಣ ಮತ್ತು ಕೋಲು ಹಿಡ್ಕೊಂಡು ಓಡಾಡಿ ಎಂದು ಪುಕ್ಕಟೆ ಸಲಹೆ ನೀಡ್ತಾ ಇರುವ ಕಾರಣ ಬೀದಿ ನಾಯಿಗಳ ಕಾಟ ಮತ್ತೆ ಮುನ್ನೆಲೆಗೆ ಬಂದಿದೆ.

ಬೆಂಗಳೂರಿನಲ್ಲಿ ಮತ್ತೆ ಬೀದಿನಾಯಿ ಕಾಟ ಶುರುವಾಗಿದೆ. (ಸಾಂಕೇತಿಕ ಚಿತ್ರ)
ಬೆಂಗಳೂರಿನಲ್ಲಿ ಮತ್ತೆ ಬೀದಿನಾಯಿ ಕಾಟ ಶುರುವಾಗಿದೆ. (ಸಾಂಕೇತಿಕ ಚಿತ್ರ) (Pexels )

ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನ ಜಾಲಹಳ್ಳಿ ಪೂರ್ವ ಪ್ರದೇಶದಲ್ಲಿ ಬೀದಿ ನಾಯಿಗಳ ಗುಂಪು ಇಬ್ಬರು ಮಕ್ಕಳ ಮೇಲೆ ದಾಳಿ ನಡೆಸಿದ್ದು, ಬಾಲಕಿಯ ಕಾಲು ಕಚ್ಚಿ ಎಳೆದಾಡಿದ ದೃಶ್ಯವಿರುವ ವಿಡಿಯೋ ವೈರಲ್ ಆಗಿದೆ. ಈ ಘಟನೆ ಸೆಪ್ಟೆಂಬರ್ 28ಕ್ಕೆ ನಡೆದಿದ್ದು, ಈ ಪ್ರದೇಶದಲ್ಲಿ ಓಡಾಡುವವರು ಕೋಲು ಹಿಡ್ಕೊಂಡು ಓಡಾಡಿ ಎಂದು ಬಿಬಿಎಂಪಿ ಅಧಿಕಾರಿಗಳು ಪುಕ್ಕಟೆ ಸಲಹೆ ನೀಡಿದ ಕಾರಣ ಈ ವಿಚಾರ ಹೆಚ್ಚು ಗಮನಸೆಳೆದಿದೆ. ಈ ನಡುವೆ, ನಾಯಿಗಳ ಹಬ್ಬ ಮಾಡಲು ಬಿಬಿಎಂಪಿ ಮುಂದಾಗಿದ್ದು, ಸಹ ಬಾಳ್ವೆ ಜಾಗೃತಿ ಮೂಡಿಸಲು ಹೊರಟಿರುವ ಕಾರಣ ಈ ವಿಚಾರ ಹೆಚ್ಚು ಚರ್ಚೆಗೆ ಒಳಗಾಗಿದೆ.

ವೈರಲ್ ವಿಡಿಯೋದಲ್ಲಿ ಏನಿದೆ

ಜಾಲಹಳ್ಳಿಯಲ್ಲಿ ಇಬ್ಬರು ಮಕ್ಕಳು ನಡೆದುಕೊಂಡು ಹೋಗುತ್ತಿದ್ದ ವೇಳೆ ಬೀದಿ ನಾಯಿಗಳು ಆಕ್ರಮಿಸಿದ್ದು, ಬಾಲಕಿಯ ಕಾಲನ್ನು ಕಚ್ಚಿ ಎಳೆದಾಡಿದ ಘಟನೆ ಸ್ಥಳೀಯ ಸಿಸಿ ಕ್ಯಾಮೆರಾದಲ್ಲಿ ದಾಖಲಾಗಿದೆ. ಬಾಲಕಿಯ ಕಾಲನ್ನು ಕಚ್ಚಿದ ಬೀದಿನಾಯಿಗಳ ಏಕೆಯನ್ನು ಸ್ವಲ ದೂರ ಎಳೆದೊಯ್ದಿವೆ. ಅಷ್ಟಕ್ಕೆ ಆಕೆಯ ಕಿರುಚಾಡಿದ್ದಾಳೆ. ಜತೆಗಿದ್ದ ಬಾಲಕನೂ ರಕ್ಷಣೆಗಾಗಿ ಕೂಗಿದ್ದಾನೆ. ಕೂಡಲೇ ಅಲ್ಲಿದ್ದ ಸ್ಥಳೀಯರು ಸ್ಪಂದಿಸಿದ್ದು ನಾಯಿಗಳನ್ನು ಓಡಿಸಿದ ದೃಶ್ಯ ವಿಡಿಯೋದಲ್ಲಿದೆ. ಈ ಘಟನೆ ನಡೆದ ಕೂಡಲೇ ಸ್ಥಳೀಯರು ಆ ಬಾಲಕಿಯನ್ನು ರಕ್ಷಿಸಿ ಸ್ಥಳೀಯ ಆಸ್ಪತ್ರೆಗೆ ಕರೆದೊಯ್ದು ಅವರ ಮನೆಯವರಿಗೆ ವಿಷಯ ಮುಟ್ಟಿಸಿದ್ದಾರೆ ಎಂದು ಕನ್ನಡ ಪ್ರಭ ವರದಿ ಮಾಡಿದೆ.

ಜಾಲಹಳ್ಳಿ ಪ್ರದೇಶದಲ್ಲಿ ಆಗಸ್ಟ್ 28 ರಂದು ಬೆಳಗ್ಗೆ ವಾಕಿಂಗ್ ಮಾಡುತ್ತಿದ್ದಾಗ ಬೀದಿ ನಾಯಿಗಳ ಗುಂಪೊಂದು ದಾಳಿ ಮಾಡಿದ ಕಾರಣ 76 ವರ್ಷದ ಮಹಿಳೆ ಮೃತಪಟ್ಟಿದ್ದರು. ರಾಜ್‌ ದುಲ್ಹಾರಿ ಸಿನ್ಹಾ ಎಂದು ಗುರುತಿಸಲಾಗಿದೆ. ತಾಯಿ- ಜಾಲಹಳ್ಳಿ ಪ್ರದೇಶದಲ್ಲಿ ವಾಸವಾಗಿರುವ ಏರ್‌ಮ್ಯಾನ್‌ನ ಅತ್ತೆ. ಬೆಳಗ್ಗೆ ವಾಕಿಂಗ್ ಮಾಡುತ್ತಿದ್ದಾಗ ಕನಿಷ್ಠ 10-12 ನಾಯಿಗಳು ಆಕೆಯ ಮೇಲೆ ದಾಳಿ ನಡೆಸಿದ್ದವು. ಆಕೆಯ ದೇಹದ ಮೇಲೆ ತೀವ್ರ ಗಾಯಗಳಾಗಿದ್ದವು. ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆ ಸಿನ್ಹಾ ಮೃತಪಟ್ಟಿದ್ದಾರೆ. ಈ ಕುರಿತು ಬೆಂಗಳೂರಿನ ಗಂಗಮ್ಮಗುಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಇದಾದ ಬೆನ್ನಿಗೆ ಆ ಪ್ರದೇಶದಲ್ಲಿದ್ದ 100ಕ್ಕೂ ಹೆಚ್ಚು ನಾಯಿಗಳನ್ನು ಕಳೆದ ತಿಂಗಳು ಬಿಬಿಎಂಪಿ ಸಿಬ್ಬಂದಿ ಅಲ್ಲಿಂದ ಹಿಡಿದು ಸ್ಥಳಾಂತರಿಸಿದ್ದರು.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ