logo
ಕನ್ನಡ ಸುದ್ದಿ  /  ಕರ್ನಾಟಕ  /  ಬೆಂಗಳೂರಿನ 1.4 ಕೋಟಿ ಜನರಿಗೆ ಇರುವುದೇ 803 ಸಾರ್ವಜನಿಕ ಶೌಚಾಲಯಗಳಂತೆ; 1.7 ಲಕ್ಷ ಮಂದಿಗೆ ಒಂದೇ ಟಾಯ್ಲೆಟ್! ಆತಂಕದ ವರದಿ

ಬೆಂಗಳೂರಿನ 1.4 ಕೋಟಿ ಜನರಿಗೆ ಇರುವುದೇ 803 ಸಾರ್ವಜನಿಕ ಶೌಚಾಲಯಗಳಂತೆ; 1.7 ಲಕ್ಷ ಮಂದಿಗೆ ಒಂದೇ ಟಾಯ್ಲೆಟ್! ಆತಂಕದ ವರದಿ

Prasanna Kumar P N HT Kannada

Oct 12, 2024 06:00 AM IST

google News

ಬೆಂಗಳೂರಿನ 1.4 ಕೋಟಿ ಜನರಿಗೆ ಇರುವುದೇ 803 ಸಾರ್ವಜನಿಕ ಶೌಚಾಲಯಗಳಂತೆ; 1.7 ಲಕ್ಷ ಮಂದಿಗೆ ಒಂದೇ ಟಾಯ್ಲೆಟ್

    • Bengalurus Toilet Crisis: ಬೆಂಗಳೂರು ನಗರದಲ್ಲಿ ಸಾರ್ವಜನಿಕ ಶೌಚಾಲಯಗಳ ಅಭಾವ ತುಂಬಾ ಇದೆ ಎಂಬುದು ಆರ್​​ವಿ ವಿಶ್ವವಿದ್ಯಾಲಯ ನಡೆಸಿದ ಸಮೀಕ್ಷೆಯಲ್ಲಿ ಬಹಿರಂಗಗೊಂಡಿದೆ. ಬೆಂಗಳೂರಿನಲ್ಲಿರುವ ಅಂದಾಜು 1.4 ಕೋಟಿ ಜನರಿಗೆ ಇರುವುದೇ ಕೇವಲ 803 ಸಾರ್ವಜನಿಕ ಶೌಚಾಲಯಗಳಂತೆ!
ಬೆಂಗಳೂರಿನ 1.4 ಕೋಟಿ ಜನರಿಗೆ ಇರುವುದೇ 803 ಸಾರ್ವಜನಿಕ ಶೌಚಾಲಯಗಳಂತೆ; 1.7 ಲಕ್ಷ ಮಂದಿಗೆ ಒಂದೇ ಟಾಯ್ಲೆಟ್
ಬೆಂಗಳೂರಿನ 1.4 ಕೋಟಿ ಜನರಿಗೆ ಇರುವುದೇ 803 ಸಾರ್ವಜನಿಕ ಶೌಚಾಲಯಗಳಂತೆ; 1.7 ಲಕ್ಷ ಮಂದಿಗೆ ಒಂದೇ ಟಾಯ್ಲೆಟ್

ಬೆಂಗಳೂರು: ನಿಮಗಿದು ಗೊತ್ತಾ? ಬೆಂಗಳೂರು ನಗರದಲ್ಲಿರುವುದು ಕೇವಲ 803 ಸಾರ್ವಜನಿಕ ಶೌಚಾಲಯಗಳಂತೆ (ಪಬ್ಲಿಕ್ ಟಾಯ್ಲೆಟ್ಸ್)! ಅಂದಾಜು 1.4 ಕೋಟಿ ಜನಸಂಖ್ಯೆ ಹೊಂದಿರುವ ಬೆಂಗಳೂರು, ಭಾರತದ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ನಗರಗಳಲ್ಲಿ ಒಂದು. ಆದರೆ, ಪ್ರಸ್ತುತ ಸಾರ್ವಜನಿಕ ನೈರ್ಮಲ್ಯ ಮೂಲ ಸೌಕರ್ಯದಲ್ಲಿ ಸಾಕಷ್ಟು ಸವಾಲುಗಳನ್ನು ಎದುರಿಸುತ್ತಿರುವುದರ ಜೊತೆಗೆ ಟೀಕೆಗೂ ಗುರಿಯಾಗಿದೆ. ಏಕೆಂದರೆ ಅದಕ್ಕೆ ಆರ್​​ವಿ ವಿಶ್ವವಿದ್ಯಾಲಯ ಇತ್ತೀಚೆಗೆ ಬಿಡುಗಡೆ ಮಾಡಿರುವ ವರದಿಯೇ ಸಾಕ್ಷಿ. ಈ ವರದಿ ಪ್ರಕಾರ ಉದ್ಯಾನ ನಗರದಲ್ಲಿ ಇರುವುದೇ 803 ಸಾರ್ವಜನಿಕ ಶೌಚಾಲಯಗಳಂತೆ!

ನಗರದಲ್ಲಿ ಸಾರ್ವಜನಿಕ ಶೌಚಾಲಯಗಳ ಸ್ಥಿತಿಗತಿಗೆ ಸಂಬಂಧಿಸಿ ಆರ್​​ವಿ ವಿಶ್ವವಿದ್ಯಾಲಯವು ನಡೆಸಿದ 1 ತಿಂಗಳ ಸರ್ವೇಯಲ್ಲಿ ಈ ಮಾಹಿತಿ ಬಹಿರಂಗಗೊಂಡಿದೆ ಎಂದು ಎಕಾನಾಮಿಕ್ಸ್ ಟೈಮ್ಸ್ ವರದಿ ಮಾಡಿದೆ. ಪಾರ್ಕ್ಸ್​, ಮೆಟ್ರೋ, ಬಸ್, ರೈಲು ನಿಲ್ದಾಣಗಳು ಮಾರುಕಟ್ಟೆ, ಮತ್ತು ಪ್ರವಾಸಿ ತಾಣಗಳಂತಹ ವಿವಿಧ ಸಾರ್ವಜನಿಕ ಸ್ಥಳಗಳಲ್ಲಿ 65 ಸಾರ್ವಜನಿಕ ಶೌಚಾಲಯಗಳೂ ಸೇರಿದಂತೆ ನಗರದಲ್ಲಿ ಒಟ್ಟು 803 ಶೌಚಾಲಯಗಳು ಇರುವುದು ಕಂಡು ಬಂದಿದೆ. ಆದರೆ ಈ 65 ಶೌಚಾಲಯಗಳ ಸುರಕ್ಷಿತತೆಯ ಬಗ್ಗೆ ಹೆಚ್ಚು ಸಮೀಕ್ಷೆ ನಡೆಸಿದ್ದು, ಮತ್ತಷ್ಟು ಅಚ್ಚರಿ ವಿಚಾರಗಳು ಬಹಿರಂಗಗೊಂದಿವೆ. ಮತ್ತೊಂದು ಸಮಸ್ಯೆ ಏನೆಂದರೆ 65ರ ಪೈಕಿ 52 ಶೌಚಾಲಯಗಳಿಗೆ ರೂಟ್ ಮ್ಯಾಪೇ ಇಲ್ಲ. ಹೀಗಾಗಿ ಅವುಗಳನ್ನು ಹುಡುಕುವುದೇ ಕಷ್ಟಕರವಾಗಿದೆ.

ಮಹಿಳೆಯರಿಗೆ 2 ಪಟ್ಟು ಶುಲ್ಕ

ರೈಲು ನಿಲ್ದಾಣಗಳು, ಬಸ್ ಟರ್ಮಿನಲ್ಸ್​ ಮತ್ತು ಚಿಕ್ಕಪೇಟೆಗಳಂತಹ ಮಾರುಕಟ್ಟೆ ಸ್ಥಳಗಳಂತಹ ಜನನಿಬಿಡ ಪ್ರದೇಶಗಳಲ್ಲಿ ಸಾರ್ವಜನಿಕರು ಶೌಚಾಲಯ ಹುಡುಕುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಮೆಟ್ರೋ ನಿಲ್ದಾಣಗಳಲ್ಲಿಯೂ 8ರಲ್ಲಿ ಒಂದಕ್ಕೆ ರೂಟ್​ಮ್ಯಾಪ್ ಲಭ್ಯವಿದೆ. ಪಾವತಿಸಿ ಉಪಯೋಗಿಸುವ ಶೌಚಾಲಯಗಳೂ ಸಮಸ್ಯೆ ತಂದೊಡ್ಡಿವೆ. ಮಹಿಳೆಯರಿಗೆ ಪುರುಷರಿಗಿಂತ 2 ಪಟ್ಟು ಹೆಚ್ಚು ಶುಲ್ಕ ವಿಧಿಸಲಾಗುತ್ತದೆ ಎಂಬ ದೂರುಗಳಿವೆ. ಮಹಿಳೆಯರು ಯೂರಿನ್​ಗೆ ವಾಟರ್​ ಕ್ಲೋಸೆಟ್​​ ಬಳಸುವ ಹಿನ್ನೆಲೆ ದುಬಾರಿ ಚಾರ್ಜ್ ಮಾಡಲಾಗುತ್ತಿದೆ ಎನ್ನುವುದು ವರದಿಯಲ್ಲಿ ಉಲ್ಲೇಖವಾಗಿದೆ.

ತುಂಬಾ ಶೌಚಾಲಯಗಳು ಸುರಕ್ಷತೆ ಎನ್ನುವ ಪದಕ್ಕೆ ಅರ್ಥವೇ ಗೊತ್ತಿಲ್ಲ ಎಂಬಂತಿವೆ. ಕೆಲವೆಡೆ ನಿರ್ವಹಣೆ ಇಲ್ಲದೆ ಗಬ್ಬು ನಾರುತ್ತಿವೆ. ಹೆಜ್ಜೆ ಇಡಲೂ ಭಯಪಡುವಂತಿವೆ. ಒಂದು ವೇಳೆ ಅಂತಹ ಶೌಚಾಲಯಗಳಿಗೆ ಹೋದರೆ ಅನೇಕ ರೋಗಗಳೊಂದಿಗೆ ವಾಪಸ್ ಆಗುತ್ತೇವೆ ಎನ್ನುವ ಭಯವೂ ಕಾಡುತ್ತದೆ. ಪ್ರಮುಖ 65 ಶೌಚಾಲಯಗಳ ಪೈಕಿ 22 ಸಿಬ್ಬಂದಿ ಅಥವಾ ಭದ್ರತಾ ಸಿಬ್ಬಂದಿ ಕೊರತೆ ಇದೆ. ಕೇವಲ 9 ಕಡೆಗಳಲ್ಲಿ ಮಾತ್ರ ತುರ್ತು ಸಂಪರ್ಕ ಮಾಹಿತಿಯನ್ನು ಒದಗಿಸಿದ್ದಾರೆ. ಕೆಲವು ಶೌಚಾಲಯಗಳು ಪ್ರತ್ಯೇಕ ಪ್ರದೇಶಗಳಲ್ಲಿದ್ದು, ಮಹಿಳೆಯರನ್ನು ಅಂತಹ ಕಡೆ ಹೋಗಲು ಹಿಂಜರಿಯುತ್ತಾರೆ. ಶೇ 63 ಶೌಚಾಲಯಗಳಲ್ಲಿ ಒಳಗಿನಿಂದ ಹಾಕಿಕೊಳ್ಳಲು ಚಿಲಕವೂ ಇರುವುದಿಲ್ಲ. ಇದು ಅಸುರಕ್ಷತೆ ಮತ್ತು ಕಿರಿಕಿರಿ ಉಂಟು ಮಾಡುತ್ತದೆ.

ಈ 65 ಶೌಚಾಲಯಗಳ ಪೈಕಿ 14ರಲ್ಲಿ ಮಾತ್ರ ವಿಕಲಚೇತರು ಬಳಸುವ ಸೌಲಭ್ಯಗಳಿವೆ. ಆದರೆ ಇವುಗಳಲ್ಲಿ 7 ಶೌಚಾಲಯಗಳಿಗೆ ಪ್ರವೇಶಿಸಲು ಸಾಧ್ಯವಾಗುವುದಿಲ್ಲ. ಕೆಎಸ್‌ಆರ್ ರೈಲ್ವೆ ನಿಲ್ದಾಣದಲ್ಲಿ ಕೇವಲ ಒಂದು ಶೌಚಾಲಯದಲ್ಲಿ ಬ್ರೈಲ್-ಎನ್‌ಕೋಡ್ ಮಾಡಿದ ಸೂಚನಾ ಫಲಕ ಇತ್ತು. ಆದರೆ ಇದು ಅಂಧ ವ್ಯಕ್ತಿಗಳ ಪ್ರವೇಶಕ್ಕೆ ಯೋಗ್ಯವಾಗಿಲ್ಲ. ಶೇ 52 ರಷ್ಟು ಸಾರ್ವಜನಿಕ ಶೌಚಾಲಯಗಳು ಮಂದ ಬೆಳಕಿನಿಂದ ಕೂಡಿವೆ. ಸೂರ್ಯಾಸ್ತದ ನಂತರ ಅವುಗಳನ್ನೇ ಬಳಸುವುದೇ ಇಲ್ಲ ಎಂದು ವರದಿ ಹೇಳಿದೆ. ಒಟ್ಟು 24 ಶೌಚಾಲಯಗಳು ಜಾರುವ ಅಥವಾ ಅಶುಚಿಯಿಂದ ಕೂಡಿವೆ. 42% ರಷ್ಟು ಸರಿಯಾದ ವಾತಾವರಣವೇ ಇಲ್ಲ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ