ಇಂದು ಮೈಸೂರು ದಸರಾ ಜಂಬೂಸವಾರಿ; ಉತ್ಸವಮೂರ್ತಿ, ಧ್ವಜಪೂಜೆ, ಜಟ್ಟಿಕಾಳಗ, ವಿಜಯಯಾತ್ರೆ ಎಷ್ಟೊತ್ತಿಗೆ?
- Jamboo Savari: ಮೈಸೂರು ದಸರಾ ಜಂಬೂಸವಾರಿಗೆ ಕ್ಷಣಗಣನೆ ಶುರುವಾಗಿದ್ದು, ಉತ್ಸವಮೂರ್ತಿ, ಧ್ವಜಪೂಜೆ, ಜಟ್ಟಿಕಾಳಗ, ವಿಜಯಯಾತ್ರೆ ಸೇರಿದಂತೆ ವಿವಿಧ ಕಾರ್ಯಕ್ರಮಗಳು ಎಷ್ಟೊತ್ತಿಗೆ ನಡೆಯಲಿವೆ.
- Jamboo Savari: ಮೈಸೂರು ದಸರಾ ಜಂಬೂಸವಾರಿಗೆ ಕ್ಷಣಗಣನೆ ಶುರುವಾಗಿದ್ದು, ಉತ್ಸವಮೂರ್ತಿ, ಧ್ವಜಪೂಜೆ, ಜಟ್ಟಿಕಾಳಗ, ವಿಜಯಯಾತ್ರೆ ಸೇರಿದಂತೆ ವಿವಿಧ ಕಾರ್ಯಕ್ರಮಗಳು ಎಷ್ಟೊತ್ತಿಗೆ ನಡೆಯಲಿವೆ.
(1 / 5)
ನಾಳೆ ಶನಿವಾರ (ಅಕ್ಟೋಬರ್ 12) ನಡೆಯುವ ವಿಜಯದಶಮಿ ಜಂಬೂಸವಾರಿ ಮೆರವಣಿಗೆಗೆ ಕ್ಷಣಗಣನೆ ಆರಂಭವಾಗಿದೆ. ಶನಿವಾರ ಮಧ್ಯಾಹ್ನ 1.41 ರಿಂದ 2.10ರ ನಡುವೆ ಶುಭ ಮಕರ ಲಗ್ನದಲ್ಲಿ ನಂದಿ ಧ್ವಜಪೂಜೆ ನೆರವೇರಲಿದೆ.
(2 / 5)
ಸಂಜೆ 4 ಗಂಟೆಯಿಂದ 4.30ರ ನಡುವೆ ಕುಂಭ ಲಗ್ನದಲ್ಲಿ ವಿಜಯದಶಮಿಯ ಜಂಬೂ ಸವಾರಿಗೆ ಚಾಲನೆ ದೊರೆಯಲಿದೆ. ಜಂಬೂಸವಾರಿ ಹಿನ್ನೆಲೆಯಲ್ಲಿ ಅರಮನೆ ಅಂಗಳದಲ್ಲಿ 40 ಸಾವಿರ ಆಸನಗಳ ವ್ಯವಸ್ಥೆ ಮಾಡಲಾಗಿದೆ.
(3 / 5)
ಚಾಮುಂಡಿ ಬೆಟ್ಟದಿಂದ ಉತ್ಸವಮೂರ್ತಿ ಬೆಳಿಗ್ಗೆ 8 ಗಂಟೆಗೆ ಹೊರಬಂದು ಮೆರವಣಿಗೆ ಮೂಲಕ ಅರಮನೆಯತ್ತ ಸಾಗುತ್ತದೆ. ಬೆಳಿಗ್ಗೆ 10:15ಕ್ಕೆ ಅರಮನೆಯಲ್ಲಿ ಉತ್ತರ ಪೂಜೆ ಆರಂಭ (ಪಟ್ಟದ ಆನೆ, ಪಟ್ಟದ ಹಸು, ಪಟ್ಟದ ಕುದುರೆಗಳು ಸವಾರಿ ತೊಟ್ಟಿಗೆ ಆಗಮನ) ಆಗುತ್ತದೆ.
(4 / 5)
10 ಗಂಟೆಯಿಂದ ಅರಮನೆಯ ಶ್ವೇತವರಾಹಸ್ವಾಮಿ ದೇವಸ್ಥಾನದಲ್ಲಿ ಜಟ್ಟಿಗಳಿಂದ ಸಿದ್ಧತೆ ನಡೆದಿದೆ. ಬೆಳಿಗ್ಗೆ 10:45 ರಿಂದ 11 ಗಂಟೆ ಒಳಗೆ ಸವಾರಿ ತೊಟ್ಟಿಯಲ್ಲಿ ಜಟ್ಟಿ ಕಾಳಗ ನಡೆಯಲಿದೆ.
ಇತರ ಗ್ಯಾಲರಿಗಳು