logo
ಕನ್ನಡ ಸುದ್ದಿ  /  ಕರ್ನಾಟಕ  /  Gold Rate Today; ಚಿನ್ನಾಭರಣ ಖರೀದಿಗೆ ಸೋಮವಾರ ಶುಭವಾರ, ಬಂಗಾರದ ಬೆಲೆ ನೋಡದೆ ದಿನಚರಿ ಶುರುಮಾಡೋದು ಹೇಗೆ ಅಲ್ವ

Gold Rate Today; ಚಿನ್ನಾಭರಣ ಖರೀದಿಗೆ ಸೋಮವಾರ ಶುಭವಾರ, ಬಂಗಾರದ ಬೆಲೆ ನೋಡದೆ ದಿನಚರಿ ಶುರುಮಾಡೋದು ಹೇಗೆ ಅಲ್ವ

Umesh Kumar S HT Kannada

Aug 05, 2024 07:12 AM IST

google News

Gold Rate Today; ಚಿನ್ನಾಭರಣ ಖರೀದಿಗೆ ಸೋಮವಾರ ಶುಭವಾರ, ಬಂಗಾರದ ಬೆಲೆ ವಿವರ. (ಸಾಂಕೇತಿಕ ಚಿತ್ರ)

  • Gold Rate Today in Bengaluru; ಚಿನ್ನಾಭರಣ ಖರೀದಿಗೆ ಇದಕ್ಕಿಂತ ಬೇರೆ ಸಮಯ ಬೇಕಾ?, ಅನ್‌ಸೀಸನ್ ಆಗಿರುವ ಕಾರಣ ಚಿನ್ನಾಭರಣ ಖರೀದಿ ಆಲೋಚನೆ ನಿಜವಾಗಿಯೂ ಒಳ್ಳೆಯದೇ. ಚಿನ್ನ ಬೆಳ್ಳಿ ರೇಟ್ ಕೂಡ ಕಡಿಮೆ ಇದೆ. ನಿನ್ನೆ ಭಾನುವಾರವಾದ ಕಾರಣ ಚಿನ್ನ ಬೆಳ್ಳಿ ದರದಲ್ಲಿ ವ್ಯತ್ಯಾಸವಾಗಿಲ್ಲ.   

Gold Rate Today; ಚಿನ್ನಾಭರಣ ಖರೀದಿಗೆ ಸೋಮವಾರ ಶುಭವಾರ, ಬಂಗಾರದ ಬೆಲೆ   ವಿವರ. (ಸಾಂಕೇತಿಕ ಚಿತ್ರ)
Gold Rate Today; ಚಿನ್ನಾಭರಣ ಖರೀದಿಗೆ ಸೋಮವಾರ ಶುಭವಾರ, ಬಂಗಾರದ ಬೆಲೆ ವಿವರ. (ಸಾಂಕೇತಿಕ ಚಿತ್ರ)

ಬೆಂಗಳೂರು: ಇಂದು ಸೋಮವಾರ. ಸಹಜವಾಗಿಯೇ ರಜಾ ದಿನದ ಮೂಡ್‌ನಿಂದ ಹೊರಬಂದು ನಿತ್ಯದ ಕೆಲಸ ಕಾರ್ಯದ ಕಡೆಗೆ ಗಮನಹರಿಸುವ ದಿನ. ಚಿನಿವಾರ ಪೇಟೆಯ ಕಡೆಗೆ ಗಮನ ಹೋಗುವುದು ಕೂಡ ಸಹಜ. ಚಿನ್ನ ಬೆಳ್ಳಿ ದರ ಏರಿದೆಯೇ ಅಥವಾ ಕಡಿಮೆಯಾಗಿದೆಯಾ? ಎಂಬ ಕುತೂಹಲ ತಣಿಸುವ ವಿವರ ಇಲ್ಲಿದೆ.

ನಿಮ್ಮ ನಗರದಲ್ಲಿ ಇಂದಿನ ಚಿನ್ನದ ಧಾರಣೆ ಎಷ್ಟಿದೆ ತಿಳಿಯಲು ಇಲ್ಲಿ ಕ್ಲಿಕ್ ಮಾಡಿ

ಭಾರತದ ವಿವಿಧ ನಗರಗಳಲ್ಲಿ ಇಂದು (ಆಗಸ್ಟ್ 5) ಆಭರಣ ಚಿನ್ನದ ಅಂದರೆ 22 ಕ್ಯಾರೆಟ್ ಚಿನ್ನದ ದರ 10 ಗ್ರಾಂಗೆ 64,690 ರೂಪಾಯಿ, ಅಪರಂಜಿ ಚಿನ್ನದ ಅಂದರೆ 24 ಕ್ಯಾರೆಟ್ ಚಿನ್ನದ ದರ 10 ಗ್ರಾಂಗೆ 70,570 ರೂಪಾಯಿ ಇದೆ. ಚಿನ್ನದ ದರ 10 ಗ್ರಾಂಗೆ ನಿನ್ನೆಯ ದರಕ್ಕಿಂತ 10 ರೂಪಾಯಿ ದರ ಇಳಿಕೆಯಾಗಿದೆ. ಬೆಳ್ಳಿ ದರವೂ ನಿನ್ನೆಯ ದರಕ್ಕಿಂತ ಕಿಲೋಗೆ 100 ರೂಪಾಯಿ ಕಡಿಮೆಯಾಗಿದೆ.

ಬೆಂಗಳೂರಿನ ಚಿನಿವಾರ ಪೇಟೆಯಲ್ಲಿ ಭಾನುವಾರ ರಜಾದಿನವಾದ ಕಾರಣ ಚಿನ್ನ, ಬೆಳ್ಳಿ ದರದಲ್ಲಿ ಬದಲಾವಣೆ ಆಗಿಲ್ಲ. ಬೆಂಗಳೂರು ಚಿನಿವಾರ ಪೇಟೆಯಲ್ಲಿ ಶನಿವಾರ (ಆಗಸ್ಟ್ 3)ದ ವಹಿವಾಟಿನ ಕೊನೆಗೆ 10 ಗ್ರಾಂ ಅಪರಂಜಿ ಚಿನ್ನದ ದರ 71,820 ರೂಪಾಯಿ ಇತ್ತು. ಇನ್ನು ಆಭರಣ ಚಿನ್ನದ ದರ 10 ಗ್ರಾಂಗೆ 66,430 ರೂಪಾಯಿ ಇತ್ತು. ಅದೇ ರೀತಿ ಬೆಳ್ಳಿಯ ಸ್ಪಾಟ್‌ ದರ ಕಿಲೋಗೆ 84,800 ರೂಪಾಯಿ ಇತ್ತು.

ಬೆಂಗಳೂರು, ಮಂಗಳೂರು, ಮೈಸೂರುಗಳಲ್ಲಿ 22 ಕ್ಯಾರೆಟ್‌ ಆಭರಣ ಚಿನ್ನದ ದರ (22 carat gold rate)

ಗುಡ್ ರಿಟರ್ನ್ಸ್​ ಮಾಹಿತಿ ಪ್ರಕಾರ, ಬೆಂಗಳೂರು, ಚೆನ್ನೈ, ಹೈದರಾಬಾದ್ ಸೇರಿ ದೇಶದ ಪ್ರಮುಖ ನಗರಗಳಲ್ಲಿ 22 ಕ್ಯಾರೆಟ್ ಆಭರಣ ಚಿನ್ನದ ಇಂದಿನ ಬೆಲೆ 10 ಗ್ರಾಂಗೆ ಹೀಗಿದೆ.

ಬೆಂಗಳೂರು- 64,690 ರೂಪಾಯಿ.

ಮಂಗಳೂರು- 64,690 ರೂಪಾಯಿ.

ಮೈಸೂರು-64,690 ರೂಪಾಯಿ.

ಚೆನ್ನೈ- 64,490 ರೂಪಾಯಿ.

ಮುಂಬೈ- 64,690 ರೂಪಾಯಿ.

ದೆಹಲಿ- 64,840 ರೂಪಾಯಿ.

ಕೋಲ್ಕತ- 64,690 ರೂಪಾಯಿ.

ಹೈದರಾಬಾದ್- 64,690 ರೂಪಾಯಿ.

ಕೇರಳ- 64,690 ರೂಪಾಯಿ.

ಪುಣೆ- 64,690 ರೂಪಾಯಿ.

ಬೆಂಗಳೂರು, ಮಂಗಳೂರು, ಮೈಸೂರುಗಳಲ್ಲಿ ಇಂದು ಅಪರಂಜಿ ಚಿನ್ನ (24 carat gold rate)ದ ದರ

ಬೆಂಗಳೂರು- 70,570 ರೂಪಾಯಿ.

ಮಂಗಳೂರು- 70,570 ರೂಪಾಯಿ.

ಮೈಸೂರು- 70,570 ರೂಪಾಯಿ.

ಚೆನ್ನೈ- 70,350 ರೂಪಾಯಿ.

ಮುಂಬೈ- 70,570 ರೂಪಾಯಿ.

ದೆಹಲಿ- 70,720ರೂಪಾಯಿ.

ಕೋಲ್ಕತ- 70,570 ರೂಪಾಯಿ.

ಹೈದರಾಬಾದ್- 70,570 ರೂಪಾಯಿ.

ಕೇರಳ- 70,570 ರೂಪಾಯಿ.

ಪುಣೆ- 70,570 ರೂಪಾಯಿ.

ದೇಶದ ಪ್ರಮುಖ ನಗರಗಳಲ್ಲಿ ಒಂದು ಕಿಲೋ ಬೆಳ್ಳಿಯ ದರ (Silver Rate Today):

ಬೆಂಗಳೂರು- 85,750 ರೂಪಾಯಿ, ಮೈಸೂರು- 85,750 ರೂಪಾಯಿ, ಮಂಗಳೂರು- 85,750 ರೂಪಾಯಿ, ಮುಂಬೈ- 85,500 ರೂಪಾಯಿ, ಚೆನ್ನೈ- 90,900 ರೂಪಾಯಿ, ದೆಹಲಿ- 85,500 ರೂಪಾಯಿ, ಹೈದರಾಬಾದ್- 90,900 ರೂಪಾಯಿ, ಕೋಲ್ಕತ್ತ-85,500 ರೂಪಾಯಿ ಇದೆ.

ಭಾನುವಾರ ರಜಾದಿನವಾದ ಕಾರಣ ಬೆಳ್ಳಿ ದರದಲ್ಲಿ ಬದಲಾವಣೆ ಆಗಿಲ್ಲ. ಬೆಂಗಳೂರು- 85,650 ರೂಪಾಯಿ, ಮೈಸೂರು- 85,650 ರೂಪಾಯಿ, ಮಂಗಳೂರು- 85,650 ರೂಪಾಯಿ, ಮುಂಬೈ- 85,400 ರೂಪಾಯಿ, ಚೆನ್ನೈ- 90,800 ರೂಪಾಯಿ, ದೆಹಲಿ- 85,400 ರೂಪಾಯಿ, ಹೈದರಾಬಾದ್- 90,800 ರೂಪಾಯಿ, ಕೋಲ್ಕತ್ತ-85,400 ರೂಪಾಯಿ ಇದೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ