ಚಿನ್ನಾಭರಣದ ಮೇಲೆ ಆಷಾಢ ಡಿಸ್ಕೌಂಟ್ ಘೋಷಣೆ; ಯಾವ ಕಂಪನಿಯಿಂದ ಎಷ್ಟು ರಿಯಾಯ್ತಿ, ಏನೆಲ್ಲಾ ಕೊಡುಗೆಗಳು? ವಿವರ ಇಲ್ಲಿದೆ
ಕನ್ನಡ ಸುದ್ದಿ  /  ಜೀವನಶೈಲಿ  /  ಚಿನ್ನಾಭರಣದ ಮೇಲೆ ಆಷಾಢ ಡಿಸ್ಕೌಂಟ್ ಘೋಷಣೆ; ಯಾವ ಕಂಪನಿಯಿಂದ ಎಷ್ಟು ರಿಯಾಯ್ತಿ, ಏನೆಲ್ಲಾ ಕೊಡುಗೆಗಳು? ವಿವರ ಇಲ್ಲಿದೆ

ಚಿನ್ನಾಭರಣದ ಮೇಲೆ ಆಷಾಢ ಡಿಸ್ಕೌಂಟ್ ಘೋಷಣೆ; ಯಾವ ಕಂಪನಿಯಿಂದ ಎಷ್ಟು ರಿಯಾಯ್ತಿ, ಏನೆಲ್ಲಾ ಕೊಡುಗೆಗಳು? ವಿವರ ಇಲ್ಲಿದೆ

ಆಷಾಢ ಮಾಸದಲ್ಲಿ ಯಾವುದೇ ರೀತಿಯ ಶುಭಾ ಸಮಾರಂಭಗಳು ನಡೆಯುವುದಿಲ್ಲ. ಈ ತಿಂಗಳಲ್ಲಿ ಚಿನ್ನಾಭರಣಗಳ ಮೇಳೆ ರಿಯಾಯ್ತಿಗಳನ್ನು ಘೋಷಣೆ ಮಾಡಲಾಗುತ್ತದೆ. ಯಾವ ಕಂಪನಿ ಎಷ್ಟು ಡಿಸ್ಕೌಂಟ್ ನೀಡುತ್ತಿದೆ. ಏನೆಲ್ಲಾ ಆಫರ್‌ಗಳಿವೆ ಅನ್ನೋದನ್ನು ಇಲ್ಲಿ ತಿಳಿಯೋಣ.

ಚಿನ್ನಾಭರಣದ ಮೇಲೆ ಆಷಾಢ ಡಿಸ್ಕೌಂಟ್ ಘೋಷಣೆ; ಯಾವ ಕಂಪನಿಯಿಂದ ಎಷ್ಟು ರಿಯಾಯ್ತಿ, ಏನೆಲ್ಲಾ ಕೊಡುಗೆಗಳು? ವಿವರ ಇಲ್ಲಿದೆ
ಚಿನ್ನಾಭರಣದ ಮೇಲೆ ಆಷಾಢ ಡಿಸ್ಕೌಂಟ್ ಘೋಷಣೆ; ಯಾವ ಕಂಪನಿಯಿಂದ ಎಷ್ಟು ರಿಯಾಯ್ತಿ, ಏನೆಲ್ಲಾ ಕೊಡುಗೆಗಳು? ವಿವರ ಇಲ್ಲಿದೆ

ಸಾಮಾನ್ಯರು ಜನರು ಚಿನ್ನಾಭರಣದ ಬೆಲೆಗಳು ಇಳಿದಾಗ ಖರೀದಿಗೆ ಮುಂದಾಗುತ್ತಾರೆ. ಅದರಂತೆ ಯಾವಾಗ ಚಿನ್ನದ ಮೇಲಿನ ಬೆಲೆ ಇಳಿಕೆಯಾಗಬಹುದು ಎಂದು ಕೆಲವರು ತಿಂಗಳುಗಟ್ಟಲೇ ಕಾಯುತ್ತಾರೆ. ಆಷಾಢ ಮಾಸದಲ್ಲಿ ಹಳದಿ ಲೋಕ ಬೆಲೆ ಕಡಿಮೆಯಾಗುವುದು ವಾಡಿಕೆ. ಅದರಂತೆ 2024ರ ಆಷಾಢದಲ್ಲೂ ವಿವಿಧ ಚಿನ್ನಾಭರಣ ಕಂಪನಿಗಳು ಗ್ರಾಹಕರನ್ನು ಸೆಳೆಯಲು ಚಿನ್ನ, ಬೆಳ್ಳಿ, ವಜ್ರದ ಮೇಲೆ ತಮ್ಮದೇ ಆದ ರಿಯಾಯ್ತಿಗಳನ್ನು ಘೋಷಣೆ ಮಾಡಿವೆ. ಜೊತೆಗೆ ಕೆಲವು ಆಫರ್‌ಗಳನ್ನೂ ನೀಡಿವೆ. ಯಾವ ಚಿನ್ನಾಭರಣ ಕಂಪನಿಯಿಂದ ಏನೆಲ್ಲಾ ಆಫರ್‌ಗಳಿವೆ ಅನ್ನೋದರ ವಿವರ ಇಲ್ಲಿದೆ.

ಜಿಆರ್‌ಟಿ ಜ್ಯುವೆಲರ್ಸ್ ಡಿಸ್ಕೌಂಟ್‌, ಆಫರ್‌ಗಳು

ಆಷಾಢ ಮಾಸ ಆಚರಣೆಯ ಪ್ರಯುಕ್ತವಾಗಿ ಜಿಆರ್‌ಟಿ ಜ್ಯುವೆಲರ್ಸ್ ಪ್ರತಿ ಖರೀದಿಯ ಮೇಲೆ ಹಲವು ಆಫರ್‌ಗಳನ್ನು ನೀಡುತ್ತಿದೆ. ಜೊತೆಗೆ ಖಚಿತವಾದ ಉಡುಗೊರೆಗಳನ್ನು ನೀಡಲಾಗುತ್ತಿದೆ ಎಂದು ಕಂಪನಿ ಹೇಳಿಕೊಂಡಿದೆ. ಆಫರ್‌ಗಳು ಹಾಗೂ ಡಿಸ್ಕೌಂಟ್‌ಗಳು ಎಷ್ಟು ತೂಕದ ಆಭರಣಗಳನ್ನು ಖರೀದಿಸುತ್ತಾರೆ ಎಂಬುದನ್ನೂ ಅವಲಂಬಿಸಿರುತ್ತದೆ. ಈ ಆಷಾಢದಲ್ಲಿ ಗ್ರಾಹಕರು ತಮ್ಮ ಹಳೆಯ ಚಿನ್ನಾಭರಣಗಳನ್ನು ವಿನಿಮಯ ಮಾಡಿಕೊಳ್ಳುವ ಮೂಲಕ ಪ್ರತಿ ಗ್ರಾಂಗೆ ಹೆಚ್ಚುವರಿಯಾಗಿ 50 ರೂಪಾಯಿ ನೀಡಲಾಗುತ್ತದೆ.

ಪ್ರತಿ ವರ್ಷದ ಆಷಾಢ ಮಾಸದಲ್ಲಿ ನಮ್ಮ ಗ್ರಾಹಕರ ಅಗತ್ಯಗಳನ್ನು ಅರ್ಥ ಮಾಡಿಕೊಂಡು ಆದ್ಯತೆಯ ಮೇರೆಗೆ ಹಲವು ರಿಯಾಯ್ತಿಗಳನ್ನು ನೀಡುತ್ತಿದ್ದೇವೆ ಎಂದು ಜಿಆರ್‌ಟಿ ಜ್ಯುವೆಲರ್ಸ್‌ನ ವ್ಯವಸ್ಥಾಪಕ ನಿರ್ದೇಶಕ ಆದಂದ್ ಅನಂತಪದ್ಮನಾಭನ್ ತಿಳಿಸಿದ್ದಾರೆ. ಗ್ರಾಹಕರ ತೃಪ್ತಿಯೇ ನಮ್ಮ ಏಕೈಕ ಉದ್ದೇಶ ಅಂತಲೂ ಹೇಳಿದ್ದಾರೆ.

ಮಲಬಾರ್ ಗೋಲ್ಡ್ ಅಂಡ್ ಡೈಮಂಡ್ಸ್‌ನಿಂದಲೂ ಆಫರ್ಸ್

ಜಾಗತಿಕ ಆಭರಣ ಮಾರಾಟ ಸಂಸ್ಥೆಯಾಗಿರುವ ಮಲಬಾರ್ ಗೋಲ್ಡ್ ಅಂಡ್ ಡೈಮಂಡ್ಸ್ ಬಹು ನಿರೀಕ್ಷಿತ ಆಷಾಢ ಮಾಸದದಲ್ಲಿ ಆಷಾಢ ಶುಭ ಲಾಭ ಉತ್ಸವವನ್ನು ಆರಂಭಿಸಿದ್ದು, ವ್ಯಾಪಕ ಶ್ರೇಣಿಯ ಆಭರಣಗಳ ಮೇಲೆ ಆಕರ್ಷಕ ಕೊಡುಗೆಗಳನ್ನು ನೀಡುತ್ತಿದೆ.

ಗ್ರಾಹಕರಿಗೆ ಚಿನ್ನದ ಆಭರಣಗಳ ಮೇಕಿಂಗ್ ಚಾರ್ಜ್‌ನಲ್ಲಿ 25 ರಷ್ಟು ರಿಯಾಯಿತಿ, ಸ್ಟಡ್ಡ್ ಆಭರಣಗಳ ಮೇಕಿಂಗ್ ಚಾರ್ಜ್‌ನಲ್ಲಿ ಫ್ಲಾಟ್ 25 ರಷ್ಟು ರಿಯಾಯಿತಿ ಮತ್ತು ವಜ್ರದ ಮೇಲೆ ಶೇಕಡಾ 25 ರಷ್ಟು ರಿಯಾಯಿತಿ ಪಡೆಯಬಹುದು. ನೀಡುತ್ತಿರುವ ಕೊಡುಗೆಗಳು ಶೇಕಡಾ 100 ರಷ್ಟು ನೈಜವಾಗಿವೆ ಎಂದು ಕಂಪನಿ ಹೇಳಿಕೊಂಡಿದೆ.

ಖಜಾನಾ ಜ್ಯುವೆಲರ್ಸ್ ಡಿಸ್ಕೌಂಟ್ ಮತ್ತು ಆಫರ್ಸ್

ಮತ್ತೊಂದೆಡೆ ಖಜಾನಾ ಜ್ಯುವೆಲರ್ಸ್ ಕೂಡ ಕೆಲವು ಆಫರ್‌ಗಳನ್ನು ಘೋಷಣೆ ಮಾಡಿ. ಚಿನ್ನದ ಆಭರಣಗಳ ಮೇಲೆ ಪ್ರತಿ ಗ್ರಾಂಗೆ 275 ರೂಪಾಯಿ ರಿಯಾಯಿತಿ ನೀಡಲಾಗಿದೆ. ಅದೇ ರೀತಿಯಾಗಿ ವಜ್ರಗಳ ಮೇಲೆ ಶೇಕಡಾ 20 ವರೆಗೆ ರಿಯಾಯಿತಿ ಮತ್ತು ಮೇಕಿಂಗ್ ಶುಲ್ಕದಲ್ಲಿ ಡಿಸ್ಕೌಂಡ್ ನೀಡಲಾಗುತ್ತಿದೆ.

ಈ ಕಂಪನಿಗಳು ಮಾತ್ರವಲ್ಲದೆ, ಇನ್ನೂ ಹಲವಾರು ಚಿನ್ನಾಭರಣ ಸಂಸ್ಥೆಗಳು ತಮ್ಮದೇ ಆದ ಕೊಡುಗೆಗಳನ್ನು ನೀಡುತ್ತಿದೆ. ಚಿನ್ನಭಾರಣ ಖರೀದಿಸುವ ಮುನ್ನ ನಿಮ್ಮ ವಿವೇಚನೆಯನ್ನು ಬಳಸಿ ನಿಮಗೆ ಎಲ್ಲಿ ಸೂಕ್ತ ಎನಿಸುತ್ತದೆಯೇ ಅಲ್ಲಿ ಖರೀದಿಸಿ. ಅಗತ್ಯಬಿದ್ದರೆ ಮಾರುಕಟ್ಟೆ ತಜ್ಞರನ್ನು ಸಂಪರ್ಕಿಸುವುದು ಉತ್ತಮ ನಡೆಯಾಗಿರುತ್ತದೆ.

(ಕನ್ನಡದಲ್ಲಿ ಕ್ರಿಕೆಟ್, ಎಚ್‌ಟಿ ಕನ್ನಡ ಬೆಸ್ಟ್‌. ಐಪಿಎಲ್, ಟಿ20 ವರ್ಲ್ಡ್‌ಕಪ್ ಸೇರಿದಂತೆ ಕ್ರಿಕೆಟ್ ಲೋಕದ ಸಮಗ್ರ ಮಾಹಿತಿ, ತಾಜಾ ವಿದ್ಯಮಾನ, ರನ್-ವಿಕೆಟ್, ಪ್ಲೇಆಫ್, ಟೀಮ್ ಸ್ಟಾಟ್ ವಿಶ್ಲೇಷಣೆಗಳಿಗಾಗಿ kannada.hindustantimes.com/cricket ಕ್ಕೆ ಭೇಟಿ ನೀಡಿ.)