logo
ಕನ್ನಡ ಸುದ್ದಿ  /  ಕರ್ನಾಟಕ  /  ರಾತ್ರಿಯಾಗುತ್ತಲೇ ಆಂಜನೇಯನ ದರ್ಶನಕ್ಕೆ ಬರುತ್ತಿದೆಯೇ ಕರಡಿ, ಜಾಂಬವಂತನ ನೆನೆಯುತ್ತಿದ್ದಾರೆ ಈ ಊರ ಜನ!

ರಾತ್ರಿಯಾಗುತ್ತಲೇ ಆಂಜನೇಯನ ದರ್ಶನಕ್ಕೆ ಬರುತ್ತಿದೆಯೇ ಕರಡಿ, ಜಾಂಬವಂತನ ನೆನೆಯುತ್ತಿದ್ದಾರೆ ಈ ಊರ ಜನ!

Umesh Kumar S HT Kannada

Aug 14, 2024 04:22 PM IST

google News

ರಾತ್ರಿಯಾಗುತ್ತಲೇ ಆಂಜನೇಯನ ದರ್ಶನಕ್ಕೆ ಬರುತ್ತಿದೆಯೇ ಕರಡಿ, ಜಾಂಬವಂತನ ನೆನೆಯುತ್ತಿದ್ದಾರೆ ಈ ಊರ ಜನ!

  • ಪ್ರತಿನಿತ್ಯವೂ ಎಂಬಂತೆ ರಾತ್ರಿ ವೇಳೆ ಕರಡಿಯೊಂದು ಹನುಮಂತನ ಗುಡಿಗೆ ಬರುತ್ತಿದೆ. ರಾತ್ರಿಯಾಗುತ್ತಲೇ ಆಂಜನೇಯ ಸ್ವಾಮಿಯ ದರ್ಶನಕ್ಕೆ ಬರುತ್ತಿದೆಯೇ ಕರಡಿ? ಎನ್ನುತ್ತ ಜಾಂಬವಂತನ ನೆನೆಯುತ್ತಿದ್ದಾರೆ ಈ ಊರ ಜನ! ಎಲ್ಲಿ ಯಾವ ಊರು ಎಂಬಿತ್ಯಾದಿ ವಿವರ ತಿಳಿದುಕೊಳ್ಳುವ ಕುತೂಹಲವೇ, ಈ ವರದಿ ಗಮನಿಸಿ.

ರಾತ್ರಿಯಾಗುತ್ತಲೇ ಆಂಜನೇಯನ ದರ್ಶನಕ್ಕೆ ಬರುತ್ತಿದೆಯೇ ಕರಡಿ, ಜಾಂಬವಂತನ ನೆನೆಯುತ್ತಿದ್ದಾರೆ ಈ ಊರ ಜನ!
ರಾತ್ರಿಯಾಗುತ್ತಲೇ ಆಂಜನೇಯನ ದರ್ಶನಕ್ಕೆ ಬರುತ್ತಿದೆಯೇ ಕರಡಿ, ಜಾಂಬವಂತನ ನೆನೆಯುತ್ತಿದ್ದಾರೆ ಈ ಊರ ಜನ! (Social Media)

ಚಿತ್ರದುರ್ಗ: ಆಂಜನೇಯನಿಗೂ ಜಾಂಬವಂತನಿಗೂ ಪುರಾಣ ಕಾಲದ ಸಂಬಂಧ. ಮಹಾಭಾರತ ಮತ್ತು ರಾಮಾಯಣ ಕಾಲದ ಕಥೆಗಳಲ್ಲಿ ಇವರಿಬ್ಬರ ವಿಚಾರಗಳು ಗಮನಸೆಳೆಯುತ್ತವೆ. ಇವೆಲ್ಲವನ್ನೂ ನೆನಪಿಸುವಂತಹ ಘಟನೆ ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ತಾಲೂಕಿನಿಂದ ವರದಿಯಾಗಿದೆ.

ಮೊಳಕಾಲ್ಮೂರು ತಾಲೂಕು ಬೊಮ್ಮಲಿಂಗನಹಳ್ಳಿ ಗ್ರಾಮದ ಆಂಜನೇಯ ಸ್ವಾಮಿ ದೇವಸ್ಥಾನ ಮತ್ತು ಕರಡಿ ಸದ್ಯ ಈ ಭಾಗದಲ್ಲಿ ಮನೆಮಾತು. ನಿತ್ಯವೂ ರಾತ್ರಿ ವೇಳೆ ಈ ದೇವಸ್ಥಾನಕ್ಕೆ ಆಗಮಿಸುವ ಕರಡಿ, ಸ್ವಲ್ಪ ಹೊತ್ತು ಅಲ್ಲಿದ್ದು ವಾಪಸ್ ಹೋಗುತ್ತಿದೆ. ಹಾಗೆಂದು ಈ ದೇವಸ್ಥಾನ ಊರ ಹೊರಗಿಲ್ಲ. ಗ್ರಾಮದ ಮುಖ್ಯರಸ್ತೆಯ ಸಮೀಪವೇ ಇದೆ. ಇದು ಆಂಜನೇಯ ಸ್ವಾಮಿ ದರ್ಶನಕ್ಕಾಗಿ ಬರುತ್ತಿದೆಯೇ ಎಂಬುದು ಅನೇಕರ ಸಂದೇಹ. ಈ ಕುರಿತು ಸಂಯುಕ್ತ ಕರ್ನಾಟಕ ಪತ್ರಿಕೆ ವರದಿ ಮಾಡಿದೆ.

ಪುರಾಣ ಕಥೆಗಳನ್ನು ನೆನಪಿಸಿಕೊಳ್ಳುತ್ತಿರುವ ಊರಜನ

ಕೃಷ್ಣ ಪರಮಾತ್ಮ ಮತ್ತು ಶ್ರೀರಾಮ ದೇವರು ಇದ್ದ ಕಾಲದಲ್ಲಿ ಅಂದರೆ ದ್ವಾಪರ ಯುಗ ಹಾಗೂ ತ್ರೇತಾಯುಗಗಳ ಪುರಾಣ ಕಥೆಯಲ್ಲಿ ಜಾಂಬವಂತ ಮತ್ತು ಆಂಜನೇಯನ ವಿಚಾರ ಪ್ರಸ್ತಾಪವಾಗುತ್ತದೆ. ಅವರಿಗೆ ವಿಶೇಷ ಮಹತ್ವವೂ ಇತ್ತು. ಒಂದು ಪುರಾಣ ಕಥೆಯ ಪ್ರಕಾರ, ಶಾಪಗ್ರಸ್ತ ಆಂಜನೇಯ ಸ್ವಾಮಿಗೆ ದೈವಶಕ್ತಿ ನೀಡಿದ್ದು ಜಾಂಬವಂತ ಎಂಬ ಉಲ್ಲೇಖವಿದೆ ಎಂಬುದನ್ನು ಸ್ಥಳೀಯರು ನೆನಪಿಸಿಕೊಳ್ಳುತ್ತಿರುವುದಾಗಿ ವರದಿ ವಿವರಿಸಿದೆ.

ಪುರಾಣ ಕಥೆಗಳನ್ನು ನಂಬುವ ಜನ ಈ ಕರಡಿ ನಿಜವಾಗಿಯೂ ಆಂಜನೇಯ ದೇವರ ದರ್ಶನ ಮಾಡುವುದಕ್ಕಾಗಿಯೇ ನಿತ್ಯವೂ ರಾತ್ರ ಹೊತ್ತು ಬಂದು ಹೋಗುತ್ತಿದೆ ಎಂದು ನಂಬಿದ್ದಾರೆ. ಕರಡಿ ಬರುವ ಹೊತ್ತು ಕೂಡ ಊರ ಜನರಿಗೆ ಗೊತ್ತು. ಕರಡಿ ಇದುವರೆಗೆ ಯಾರಿಗೂ ಕೇಡುಂಟುಮಾಡಿಲ್ಲ. ಅದರ ಪಾಡಿಗೆ ಅದು ಬಂದು ದೇವಸ್ಥಾನದಲ್ಲಿ ಸ್ವಲ್ಪ ಹೊತ್ತು ವಿರಮಿಸಿ ಹೋಗುತ್ತಿದೆ. ಸದ್ಯ ಇದುವೇ ಜನರ ಅಚ್ಚರಿಗೆ ಕಾರಣ. ಆದಾಗ್ಯೂ ಮುನ್ನೆಚ್ಚರಿಕೆ ಕ್ರಮವಾಗಿ ಕರಡಿಯನ್ನು ಸೆರೆಹಿಡಿದು ಸುರಕ್ಷಿತ ಪ್ರದೇಶಕ್ಕೆ ಕಳುಹಿಸಬೇಕು ಎಂದು ಕೆಲವರು ಆರಣ್ಯ ಇಲಾಖೆ ಅಧಿಕಾರಿಗಳಿಗೆ ಮನವಿ ಮಾಡಿದ್ದಾರೆ ಎಂದು ವರದಿ ಹೇಳಿದೆ.

ಚಿಕ್ಕಮಗಳೂರಿನ ತರೀಕೆರೆಯಲ್ಲಿ ಗ್ರಾಮಸ್ಥರಲ್ಲಿ ಆತಂಕ ಮೂಡಿಸಿದ್ದ ಕರಡಿ ಸೆರೆ

ತರೀಕೆರೆಯಲ್ಲಿ ಗ್ರಾಮಸ್ಥರಲ್ಲಿ ಆತಂಕ ಮೂಡಿಸಿದ್ದ ಕರಡಿ ಸೆರೆ

ಚಿಕ್ಕಮಗಳೂರು ಜಿಲ್ಲೆ ತರೀಕೆರ ತಾಲೂಕಿನ ವಿವಿಧೆಡೆ ಕಳೆದ ಎರಡು ವಾರಗಳಿಂದ ಉಪಟಳ ನೀಡುತ್ತಿದ್ದ ಕರಡಿಯನ್ನು ಅರಣ್ಯ ಇಲಾಖೆ ಅಧಿಕಾರಿಗಳು ಸೆರೆಹಿಡಿದರು. ದುಗ್ಲಾಪುರ, ಜಂಬದಹಳ್ಳ ವ್ಯಾಪ್ತಿಯ ಗ್ರಾಮಸ್ಥರಿಗೆ ಈ ಕರಡಿ ಕಾಟ ಕೊಟ್ಟಿತ್ತು. ಕಳೆದ ವಾರ ಈ ಕರಡಿ ಜಂಬದಹಳ್ಳದ ರೈತರೊಬ್ಬರ ಮೇಲೆ ದಾಳಿ ನಡೆಸಿತ್ತು. ಇದಾದ ಬಳಿಕ ಸಾರ್ವಜನಿಕರಲ್ಲಿ ಭಯ ಉಂಟಾಗಿತ್ತು. ಹೀಗಾಗಿ ಅರಣ್ಯ ಇಲಾಖೆ ಅಧಿಕಾರಿಗಳು ಸೂಕ್ಷ್ಮ ಕಾರ್ಯಾಚರಣೆ ನಡೆಸಿ ಕರಡಿಯನ್ನು ಸೆರೆ ಹಿಡಿದರು.

ಭದ್ರಾವತಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಆಶಿಶ್ ರೆಡ್ಡಿ, ತರೀಕೆರೆ ಉಪ ವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಉಮರ್‌ ಬಾದಷಹ ಮಾರ್ಗದರ್ಶನದಲ್ಲಿ ಲಕ್ಕವಳ್ಳಿ ವಲಯ ಅರಣ್ಯಾಧಿಕಾರಿ ರಾಘವೇಂದ್ರ ಕೆ.ಬಿ. ನೇತೃತ್ವದಲ್ಲಿ ಕಾರ್ಯಾಚರಣೆ ನಡೆಯಿತು. ಕರಡಿಯನ್ನು ಮೀಸಲು ಅರಣ್ಯ ಪ್ರದೇಶಕ್ಕೆ ರವಾನಿಸಲಾಗಿದೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

(ಕನ್ನಡದಲ್ಲಿ ಸ್ಪಷ್ಟ ಸುದ್ದಿ, ನಿಖರ ವಿಶ್ಲೇಷಣೆ, ಸಮಗ್ರ ಮಾಹಿತಿಗೆ ಎಚ್‌ಟಿ ಕನ್ನಡ ಬೆಸ್ಟ್‌. ಕರ್ನಾಟಕದ ತಾಜಾ ವಿದ್ಯಮಾನ, ಅದೇ ರೀತಿ ರಾಜಕೀಯ ವಿಶ್ಲೇಷಣೆ, ದೇಶ ಮತ್ತು ಜಗತ್ತಿನ ವಿದ್ಯಮಾನಗಳ ವರದಿಗಳನ್ನು ಓದಲು kannada.hindustantimes.com/nation-and-world ಕ್ಕೆ ಭೇಟಿ ನೀಡಿ.)

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ