ಅರರೇ ಪುಟಾಣಿ ರೈಲು, ಮೊದಲ ನೋಟಕ್ಕೆ ಮನಸೆಳೆಯುವ ಇದರ ಕಥೆ ಬೇರೆಯೇ ಇದೆ, ಕಣ್ಣು ಕೂಡ ಮೋಸ ಮಾಡುತ್ತೆ- ವೈರಲ್ ವಿಡಿಯೋ ನೋಡಿ
ಕನ್ನಡ ಸುದ್ದಿ  /  ಕರ್ನಾಟಕ  /  ಅರರೇ ಪುಟಾಣಿ ರೈಲು, ಮೊದಲ ನೋಟಕ್ಕೆ ಮನಸೆಳೆಯುವ ಇದರ ಕಥೆ ಬೇರೆಯೇ ಇದೆ, ಕಣ್ಣು ಕೂಡ ಮೋಸ ಮಾಡುತ್ತೆ- ವೈರಲ್ ವಿಡಿಯೋ ನೋಡಿ

ಅರರೇ ಪುಟಾಣಿ ರೈಲು, ಮೊದಲ ನೋಟಕ್ಕೆ ಮನಸೆಳೆಯುವ ಇದರ ಕಥೆ ಬೇರೆಯೇ ಇದೆ, ಕಣ್ಣು ಕೂಡ ಮೋಸ ಮಾಡುತ್ತೆ- ವೈರಲ್ ವಿಡಿಯೋ ನೋಡಿ

Viral Video; ಸೋಷಿಯಲ್ ಮೀಡಿಯಾದಲ್ಲಿ ಹತ್ತಾರು ವಿಡಿಯೋಗಳು ವೈರಲ್ ಆಗುತ್ತಿರುತ್ತವೆ. ಅವುಗಳಲ್ಲಿ ಕೆಲವು ಬಹು ಬೇಗ ಬಹುತೇಕರ ಗಮನ ಸೆಳೆಯುತ್ತವೆ. ಅಂತಹ ಒಂದು ವಿಡಿಯೋದ ವಿವರ ಇದು. ಅರರೇ ಪುಟಾಣಿ ರೈಲು ಮೊದಲ ನೋಟಕ್ಕೆ ಮನಸೆಳೆಯುವಂತಿದೆ. ಆದರೆ, ಇದರ ಕಥೆ ಬೇರೆಯೇ ಇದೆ, ಕಣ್ಣು ಕೂಡ ಮೋಸ ಮಾಡುತ್ತೆ. ಈ ವೈರಲ್ ವಿಡಿಯೋ ಕುರಿತ ವರದಿ ಗಮನಿಸಿ.

ಅರರೇ ಪುಟಾಣಿ ರೈಲು, ಮೊದಲ ನೋಟಕ್ಕೆ ಮನಸೆಳೆಯುವ ಇದರ ಕಥೆ ಬೇರೆಯೇ ಇದೆ, ಕಣ್ಣು ಕೂಡ ಮೋಸ ಮಾಡುತ್ತೆ- ವೈರಲ್ ವಿಡಿಯೋದ ಚಿತ್ರ.
ಅರರೇ ಪುಟಾಣಿ ರೈಲು, ಮೊದಲ ನೋಟಕ್ಕೆ ಮನಸೆಳೆಯುವ ಇದರ ಕಥೆ ಬೇರೆಯೇ ಇದೆ, ಕಣ್ಣು ಕೂಡ ಮೋಸ ಮಾಡುತ್ತೆ- ವೈರಲ್ ವಿಡಿಯೋದ ಚಿತ್ರ.

ಕೋಝಿಕ್ಕೋಡ್‌: ಅರರೇ ಪುಟಾಣಿ ರೈಲು ಎಷ್ಟು ಆಕರ್ಷಕವಾಗಿದೆ ಅಲ್ವ.. ಹೊಚ್ಚ ಹೊಸ ರೈಲಿನಂತಿದೆ. ಮೊದಲ ನೋಟಕ್ಕೆ ಮನಸೆಳೆಯಿತಲ್ವ. ಇದರ ಕಥೆ ಬೇರೆಯೇ ಇದೆ. ಬಹಳಷ್ಟು ಸಲ ಕಣ್ಣು ಕೂಡ ಮೋಸ ಮಾಡುತ್ತೆ. ಥೇಟ್ ಮಿನಿ ರೈಲಿನಂತೆಯೇ ಕಾಣುವ ಇದು ನಿಜವಾದ ರೈಲಲ್ಲ..

ಸೂಕ್ಷ್ಮವಾಗಿ ಗಮನಿಸಿ ನೋಡಿ ಈ ರೈಲು ಹಳಿಯ ಮೇಲೆ ನಿಂತಿಲ್ಲ. ಇದಕ್ಕೆ ಗಾಲಿಗಳೂ ಇಲ್ಲ. ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ವಿಡಿಯೋವನ್ನು ಅನಂತ್ ರೂಪನಗುಡಿ ಎಂಬುವವರು ಮೈಕ್ರೋ ಬ್ಲಾಗಿಂಗ್ ತಾಣ ಎಕ್ಸ್‌ನಲ್ಲಿ ಶೇರ್ ಮಾಡಿಕೊಂಡಿದ್ದಾರೆ.

ವೈರಲ್ ವಿಡಿಯೋದಲ್ಲಿ ಏನಿದೆ

ವೈರಲ್ ವಿಡಿಯೋದ ದೃಶ್ಯ ಶುರುವಾಗುವುದೇ ಪುಟಾಣಿ ರೈಲಿನ ದೂರ ನೋಟದೊಂದಿಗೆ. ಮಲೆಯಾಳ ಭಾಷೆಯಲ್ಲಿ ವಿವರಣೆ ಕೂಡ ಇದೆ. ಆ ವಿವರಣೆಯೊಂದಿಗೆ ವಿಡಿಯೋ ದೃಶ್ಯ ನಿಧಾನವಾಗಿ ರೈಲಿನ ಸಮೀಪ ಹೋಗುತ್ತದೆ. ಆಗ ಅದು ನಿಜವಾದ ಅಥವಾ ಮಿನಿ ರೈಲು ಅಲ್ಲ ಎಂಬುದು ಮನವರಿಕೆಯಾಗುತ್ತದೆ. ಅದಕ್ಕೆ ಗಾಲಿಗಳಿಲ್ಲ ಎಂಬುದು ಗೊತ್ತಾಗುತ್ತದೆ. ಇನ್ನೂ ಸಮೀಪ ಹೋದಾಗ ಅದು ಮನೆಯೊಂದರ ಅಂಗಳದ ಸುತ್ತ ಹಾಕಿರುವ ಆವರಣದ ಗೋಡೆ! ನೋಡುವುದಕ್ಕೆ ರೈಲಿನಂತೆಯೇ ಕಾಣುತ್ತದೆ. ಸೃಜನಶೀಲ ಅಭಿವ್ಯಕ್ತಿಗೆ ಇದೊಂದು ಉದಾಹರಣೆಯಂತಿದೆ.

ಕೇರಳದ ಕೋಝಿಕ್ಕೋಡ್ ಜಿಲ್ಲೆಯ ಪಾಲಂಗಾಡ್‌ ಎಂಬ ಪುಟ್ಟ ಗ್ರಾಮದಲ್ಲಿದೆ ಈ ರೈಲು ಕಾಂಪೌಂಡ್‌. ಇದು ಭಾರತೀಯ ರೈಲ್ವೆ ಉದ್ಯೋಗಿಯೊಬ್ಬರ ಮನೆ. ಕಾಂಪೌಂಡ್ ಗೋಡೆ ಗಮನಿಸುತ್ತ ಹೋದರೆ ರೈಲ್ವೆ ಇಂಜಿನ್ ಮಾತ್ರವಲ್ಲ, ನಿಜವಾದ ಬೋಗಿಯನ್ನೇ ನಿಲ್ಲಿಸಲಾಗಿದೆಯೇನೋ ಎಂಬಂತೆ ಇದೆ. ರೈಲು ಬೋಗಿಯ ಕಿಟಕಿಯನ್ನೇ ಹೋಲುವ ಕಿಟಕಿ ಕೂಡ ಇದೆ. ಸ್ಲೀಪರ್ ಕೋಚ್‌ ವಿನ್ಯಾಸದಲ್ಲಿ ಗೋಡೆ ಇದ್ದರೆ, ಎಸಿ ಕೋಚ್‌ ವಿನ್ಯಾಸದಲ್ಲಿ ಗೇಟ್ ಇದೆ.

ಸೋಷಿಯಲ್ ಮೀಡಿಯಾದಲ್ಲಿ ಪ್ರತಿಕ್ರಿಯೆ ಹೀಗಿದೆ

ಅನಂತ್ ಅವರ ಎಕ್ಸ್‌ಪೋಸ್ಟ್‌ಗೆ ಹಲವರು ಪ್ರತಿಕ್ರಿಯಿಸಿದ್ದಾರೆ. ಅವರು ಇದನ್ನು ನಿನ್ನೆ ಸಂಜೆ 6 ಗಂಟೆಗೆ ಪೋಸ್ಟ್ ಮಾಡಿದ್ದಾರೆ. ಅದಾಗಲೇ 1.4 ಲಕ್ಷ ವೀಕ್ಷಣೆ ಪಡೆದಿರುವ ವಿಡಿಯೋ, 2 ಸಾವಿರಕ್ಕೂ ಹೆಚ್ಚು ಲೈಕ್ಸ್ ಮತ್ತು 300ಕ್ಕೂ ಹೆಚ್ಚು ರೀಟ್ವೀಟ್‌ ಮತ್ತು 50ಕ್ಕೂ ಹೆಚ್ಚು ಕಾಮೆಂಟ್‌ಗಳನ್ನು ಹೊಂದಿದೆ.

ಆ ರೈಲಿನೊಳಗೆ ರೈಲ್ವೆ ಕುಟುಂಬವೂ ಇದೆಯೇ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಇದಕ್ಕೆ ಇನ್ನೊಬ್ಬರು ಗೊತ್ತಿಲ್ಲ. ಇದ್ದರೂ ಇರಬಹುದು ಎಂದಿದ್ದಾರೆ. ಮತ್ತೊಬ್ಬರು, ಹೌದು ಇದು ರೈಲ್ವೆ ಉದ್ಯೋಗಿಯೊಬ್ಬರ ಮನೆ ಎಂಬುದು ವಿಡಿಯೋದಲ್ಲಿ ನೀಡಿರುವ ವಿವರಣೆಯಿಂದ ಅರ್ಥಮಾಡಿಕೊಳ್ಳಬಹುದು ಎಂದಿದ್ದಾರೆ.

ಇದು ನಮ್ಮ ನಿಜವಾದ ರೈಲುಗಳಂತೆ ಹಳಿ ತಪ್ಪದು ಅಲ್ವೇ ಅಂತ ಮತ್ತೊಬ್ಬರು ಭಾರತೀಯ ರೈಲ್ವೆಯ ಕಾಲೆಳೆದಿದ್ದಾರೆ.

ಜ್ಯೋತಿಶಂಕರ್ ರಾಯ್ ಚೌಧರಿ ಅವರು ಪಶ್ಚಿಮ ಬಂಗಾಳದ ನಿವೃತ್ತ ರೈಲ್ವೆ ಉದ್ಯೋಗಿಯೊಬ್ಬರು ತಮ್ಮ ಮನೆಯ ಗೇಟ್ ಅನ್ನು ರೈಲ್ವೆ ಇಂಜಿನ್‌ನ ಮುಂಭಾಗದಂತೆ ಮಾಡಿಸಿದ್ದರ ಕಡೆಗೆ ಗಮನ ಸೆಳೆದಿದ್ದಾರೆ.

ಇವೆಲ್ಲವೂ ವೃತ್ತಿಯನ್ನು ಬಹಳ ಪ್ರೀತಿಯಿಂದ ಮಾಡುವವರಿಂದ ಮಾತ್ರವೇ ಸಾಧ್ಯ ಎಂದು ಹಲವರು ಕಾಮೆಂಟ್ ಮಾಡಿದ್ದಾರೆ.

Whats_app_banner