ಸ್ಮಾರ್ಟ್ ಟಾಯ್ಲೆಟ್ ಬಳಸುವಾಗ ಸ್ಮಾರ್ಟ್ ಆಗದಿದ್ದರೆ ಶೌಚಕ್ಕೂ ಪರದಾಡಬೇಕಾದೀತು ಇವರಂತೆ, ಈ ವೈರಲ್ ವಿಡಿಯೋ ನೋಡಲು ಮರೆಯಬೇಡಿ
Funny video of using smart Toilet; ಜಗತ್ತು ಸ್ಮಾರ್ಟ್ ಆಗುತ್ತಿದೆ. ಮನುಷ್ಯರೂ ಸ್ಮಾರ್ಟ್ ಆಗಬೇಕಿದೆ. ನಿತ್ಯ ಬದುಕಿನಲ್ಲಿ ಟಾಯ್ಲೆಟ್ ಕೂಡ ಸ್ಮಾರ್ಟ್ ಆಗಿದೆ. ಸ್ಮಾರ್ಟ್ ಟಾಯ್ಲೆಟ್ ಬಳಸುವಾಗ ಸ್ಮಾರ್ಟ್ ಆಗದಿದ್ದರೆ ಶೌಚಕ್ಕೂ ಪರದಾಡಬೇಕಾದೀತು ಇವರಂತೆ. ಏನಾಯಿತು ಎಂಬುದನ್ನು ಅರ್ಥಮಾಡಿಕೊಳ್ಳಲು ಈ ವೈರಲ್ ವಿಡಿಯೋ ನೋಡುವುದನ್ನು ಮರೆಯಬೇಡಿ.
ಬೆಂಗಳೂರು: ನಿತ್ಯ ಬದುಕಿನಲ್ಲಿ ತಂತ್ರಜ್ಞಾನದ ಬಳಕೆ ಹೆಚ್ಚಾಗುತ್ತಿದ್ದು, ಸ್ಮಾರ್ಟ್‌ನೆಸ್ ಜೀವನವನ್ನು ಆವರಿಸುತ್ತಿರುವ ಹೊತ್ತು ಇದು. ಸ್ಮಾರ್ಟ್ ಗ್ಯಾಜೆಟ್‌ಗಳಿಂದ ಹಿಡಿದು ಟಿವಿ, ಫ್ರಿಜ್, ಎಸಿ, ಮನೆಗಳ ತನಕ ಎಲ್ಲವೂ ಸ್ಮಾರ್ಟ್ ಆಗುತ್ತಿದೆ. ಶೌಚಗೃಹದಲ್ಲೂ ಸ್ಮಾರ್ಟ್‌ನೆಸ್ ತುಂಬಲು ಜನ ಪ್ರಯತ್ನಿಸಿದ್ದು, ಟಾಯ್ಲೆಟ್ ಕೂಡ ಈಗ ಸ್ಮಾರ್ಟ್ ಆಗಿದೆ!
ತುಂಬಾ ಸ್ಮಾರ್ಟ್ ಆಗಬೇಡ. ಎಲ್ಲ ಗೊತ್ತಾಗುತ್ತೆ ನೋಡು ಎಂಬ ಆಡುಮಾತಿನಂತೆ ತುಂಬಾ ಸ್ಮಾರ್ಟ್ ಆಗುವುದು ಕೂಡ ಕೆಲವೊಮ್ಮೆ ಅಪಾಯಕಾರಿ ಎಂಬುದು ತಡವಾಗಿ ಮನವರಿಕೆಯಾಗುವುದಿದೆ. ಅಂತಹ ಒಂದು ನಿತ್ಯ ಬದುಕಿನ ಘಟನೆಯ ವಿಡಿಯೋ ಈಗ ವೈರಲ್ ಆಗಿದೆ. ಅದು ಚೀನಾದ ವ್ಯಕ್ತಿಯೊಬ್ಬರ ವಿಡಿಯೋ. ಅವರು ತಮ್ಮ ಮನೆಯ ಶೌಚಗೃಹದಲ್ಲಿ ಸ್ಮಾರ್ಟ್ ಟಾಯ್ಲೆಟ್ ಅಳವಡಿಸಿದ್ದರು. ಅದನ್ನು ಬಳಸುವಾಗ ಆದ ಅವಾಂತರದ ವಿಡಿಯೋ ಈಗ ವೈರಲ್ ಆಗಿದೆ.
ಸ್ಮಾರ್ಟ್ ಟಾಯ್ಲೆಟ್ ಖರೀದಿ ಮೋಸ ಹೋದೆ!
ವೈರಲ್ ವಿಡಿಯೋದ ದೃಶ್ಯ ಗಮನಿಸಿದರೆ, ಅದರಲ್ಲಿ ಒಬ್ಬ ವ್ಯಕ್ತಿಯು ತನ್ನ ಸ್ಮಾರ್ಟ್ ಟಾಯ್ಲೆಟ್ ಎದುರು ನಿಂತು ಅದರ ಮುಚ್ಚಳ ತೆರೆಯುವಂತೆ ಕೇಳುತ್ತಾನೆ. ಶೌಚಕ್ಕೆ ಬಳಸಬೇಕಾಗಿದೆ ಎಂದು ಹೇಳುತ್ತಾನೆ. ಆದರೆ, ತನಗೆ ಅರ್ಥವಾಗುವಂತೆ ವಿವರಿಸಲು ಆ ಸ್ಮಾರ್ಟ್ ಟಾಯ್ಲೆಟ್ ಹೇಳುತ್ತದೆ. ಆ ವ್ಯಕ್ತಿ ಮತ್ತೆ ಮತ್ತೆ ತಾನು ಶೌಚಕ್ಕೆ ಹೋಗಬೇಕು ಎನ್ನುತ್ತಾನೆ. ಬೇರೆ ಬೇರೆ ರೀತಿಯಲ್ಲಿ ಹೇಳುತ್ತಾನೆ. ಆದರೆ ಅದು ಕೇಳುವುದಿಲ್ಲ. ಸ್ಮಾರ್ಟ್ ಟಾಯ್ಲೆಟ್ ಅವನಿಗೆ ಮತ್ತೆ ಮತ್ತೆ ವಿವಿಧ ಆಯ್ಕೆಗಳನ್ನು ನೀಡುತ್ತಲೇ ಇರುತ್ತದೆಯೇ ಹೊರತು ಮುಚ್ಚಳವನ್ನು ತೆರೆಯುವುದಿಲ್ಲ. ಅಂತಹ ಪರಿಸ್ಥಿತಿಯಲ್ಲಿ, ವ್ಯಕ್ತಿಯು ಕೋಪಗೊಳ್ಳುತ್ತಿದ್ದನು. ಆತನಿಗೆ ತನ್ನ ಒತ್ತಡವನ್ನು ನಿಯಂತ್ರಿಸಲು ಸಾಧ್ಯವಾಗಲಿಲ್ಲ. ಅಂತಿಮವಾಗಿ ಶೌಚಾಲಯ ತೆರೆಯಲು ಯತ್ನಿಸಿ ಸುಸ್ತಾಗುತ್ತಾನೆ. ಕೊನೆಗೆ ಕೋಪಗೊಂಡು ನೆಲಕ್ಕೆ ಒದೆಯುತ್ತಿರುವ ದೃಶ್ಯ ಕಂಡುಬರುತ್ತದೆ. ಇಷ್ಟಾದರೂ ಆ ಸ್ಮಾರ್ಟ್ ಟಾಯ್ಲೆಟ್ ಮುಚ್ಚಳ ತೆರೆಯುವುದಿಲ್ಲ! ಇಲ್ಲಿದೆ ನೋಡಿ ಆ ವಿಡಿಯೋ-
ಶೌಚಕ್ಕೂ ಸ್ಮಾರ್ಟ್ ಆಗಬೇಕಾದ ಸ್ಥಿತಿ ನೋಡಿ ಜನರಿಗೆ ನಗು ತಡೆಯಲಾಗಿಲ್ಲ
ಸ್ಮಾರ್ಟ್ ಟಾಯ್ಲೆಟ್ ಸಮಸ್ಯೆ ಮತ್ತು ಒತ್ತಡವನ್ನು ನಿಯಂತ್ರಿಸಲು ಸಾಧ್ಯವಾಗದ ವ್ಯಕ್ತಿಯ ವಿಡಿಯೋ ನೋಡಿ ಜನ ವಿಭಿನ್ನ ರೀತಿಯಲ್ಲಿ ಸ್ಪಂದಿಸುತ್ತಿದ್ದಾರೆ. ಈ ವಿಡಿಯೋ ಇನ್‌ಸ್ಟಾಗ್ರಾಂನ @chineseteacher_lindy ಎಂಬ ಖಾತೆಯಲ್ಲಿ ಶೇರ್ ಆಗಿದೆ. ಈ ವಿಡಿಯೋವನ್ನು ಇದುವರೆಗೆ 34 ಲಕ್ಷಕ್ಕೂ ಹೆಚ್ಚು ಮಂದಿ ವೀಕ್ಷಿಸಿದ್ದು, 2.3 ಲಕ್ಷಕ್ಕೂ ಹೆಚ್ಚು ಮಂದಿ ಲೈಕ್ ಮಾಡಿದ್ದಾರೆ.
ಇದೇ ವೇಳೆ, ಮನುಷ್ಯನ ಸಂಕಷ್ಟದ ಸನ್ನಿವೇಶದ ಕುರಿತು ಅನೇಕರು ಕಾಮೆಂಟ್ ಮಾಡಿದ್ದಾರೆ. ಇನ್ನು ಕೆಲವರು ಕಾಮಿಡಿ ಮಾಡಿದ್ದಾರೆ. ಕಚೇರಿಗೆ ತಡವಾಗಿ ಬಂದವನ ಬಳಿಕ ಮ್ಯಾನೇಜರ್ ತಡ ಯಾಕೆ ಎಂದು ಕೇಳಿದ. ಅದಕ್ಕೆ ಆತ, ಟಾಯ್ಲೆಟ್ ಮುಚ್ಚಳ ತೆರೆದಿಲ್ಲ ಎಂಬ ಕಾರಣ ನೀಡಬಹುದು ಎಂದು ಒಬ್ಬ ವ್ಯಕ್ತಿ ಬರೆದಿದ್ದಾರೆ. ಮತ್ತೊಬ್ಬ ವ್ಯಕ್ತಿ, ಟಾಯ್ಲೆಟ್ ಎಷ್ಟು ಸ್ಮಾರ್ಟ್ ಎಂದರೆ ಮನುಷ್ಯನಿಗೇ ಪಾಠ ಮಾಡುವಷ್ಟು ಎಂದು ಬರೆದುಕೊಂಡಿದ್ದಾರೆ. ಇನ್ನೊಬ್ಬರು, ಸ್ಮಾರ್ಟ್ ಟಾಯ್ಲೆಟ್‌ಗೆ ರೀಚಾರ್ಜ್ ಮಾಡಿಲ್ಲವೆಂದು ತೋರುತ್ತದೆ ಎಂದು ಕಾಮೆಂಟ್ ಮಾಡಿದ್ದಾರೆ.