logo
ಕನ್ನಡ ಸುದ್ದಿ  /  ಕರ್ನಾಟಕ  /  ಧಾರವಾಡ ಡಿಸಿ ದಿವ್ಯ ಪ್ರಭುಗೆ ಕಂದಾಯ ಇಲಾಖೆಯ ವರ್ಷದ ಅತ್ಯುತ್ತಮ ಜಿಲ್ಲಾಧಿಕಾರಿ ಪ್ರಶಸ್ತಿ; ಮತ್ತೊಂದು ಪ್ರಶಸ್ತಿ ಯಾರಿಗೆ?

ಧಾರವಾಡ ಡಿಸಿ ದಿವ್ಯ ಪ್ರಭುಗೆ ಕಂದಾಯ ಇಲಾಖೆಯ ವರ್ಷದ ಅತ್ಯುತ್ತಮ ಜಿಲ್ಲಾಧಿಕಾರಿ ಪ್ರಶಸ್ತಿ; ಮತ್ತೊಂದು ಪ್ರಶಸ್ತಿ ಯಾರಿಗೆ?

Prasanna Kumar P N HT Kannada

Sep 26, 2024 02:57 PM IST

google News

ಧಾರವಾಡ ಡಿಸಿ ದಿವ್ಯ ಪ್ರಭುಗೆ ಕಂದಾಯ ಇಲಾಖೆಯ ವರ್ಷದ ಅತ್ಯುತ್ತಮ ಜಿಲ್ಲಾಧಿಕಾರಿ ಪ್ರಶಸ್ತಿ

  • Dharwad DC Divya Prabhu: ಧಾರವಾಡ ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರಿಗೆ ಕಂದಾಯ ಇಲಾಖೆಯಿಂದ ವರ್ಷದ ಅತ್ಯುತ್ತಮ ಜಿಲ್ಲಾಧಿಕಾರಿ ಪ್ರಶಸ್ತಿ ದೊರೆತಿದೆ. ಹಾಗೂ ಅತ್ಯುತ್ತಮ ಗ್ರಾಮ ಆಡಳಿತ ಅಧಿಕಾರಿ ಪ್ರಶಸ್ತಿ ರಾಕೇಶ್ ತಂಗಡಗಿ ಅವರಿಗೆ ಸಿಕ್ಕಿದೆ.

ಧಾರವಾಡ ಡಿಸಿ ದಿವ್ಯ ಪ್ರಭುಗೆ ಕಂದಾಯ ಇಲಾಖೆಯ ವರ್ಷದ ಅತ್ಯುತ್ತಮ ಜಿಲ್ಲಾಧಿಕಾರಿ ಪ್ರಶಸ್ತಿ
ಧಾರವಾಡ ಡಿಸಿ ದಿವ್ಯ ಪ್ರಭುಗೆ ಕಂದಾಯ ಇಲಾಖೆಯ ವರ್ಷದ ಅತ್ಯುತ್ತಮ ಜಿಲ್ಲಾಧಿಕಾರಿ ಪ್ರಶಸ್ತಿ

ಧಾರವಾಡ: ಕಂದಾಯ ಇಲಾಖೆಯ ವಿವಿಧ ಸೇವೆಗಳನ್ನು ಸಾರ್ವಜನಿಕರಿಗೆ ಅತ್ಯುತ್ತಮ ರೀತಿಯಲ್ಲಿ ತಲುಪಿಸಿದ ಮತ್ತು ಧಾರವಾಡ ಜಿಲ್ಲಾಧಿಕಾರಿಯಾಗಿ ಜನಸ್ನೇಹಿ ಆಡಳಿತ ನೀಡಿರುವ ದಿವ್ಯ ಪ್ರಭು ಜಿಆರ್​​ಜೆ ಅವರು ರಾಜ್ಯ ಸರ್ಕಾರದ ಕಂದಾಯ ಇಲಾಖೆಯ 2023-24ನೇ ಸಾಲಿಗೆ ಉತ್ತಮ ಜಿಲ್ಲಾಧಿಕಾರಿ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಅವರು ಚಿತ್ರದುರ್ಗದ ಜಿಲ್ಲಾಧಿಕಾರಿಯಾಗಿಯೂ ಸೇವೆ ಸಲ್ಲಿಸಿದ್ದಾರೆ.

ರಾಕೇಶ್ ತಂಗಡಗಿ ಅತ್ಯುತ್ತಮ ಗ್ರಾಮ ಆಡಳಿತ ಅಧಿಕಾರಿ: ಧಾರವಾಡ ತಹಶೀಲ್ದಾರ್ ಕಚೇರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಗ್ರಾಮ ಆಡಳಿತ ಅಧಿಕಾರಿ ರಾಕೇಶ್ ತಂಗಡಗಿ ಅವರಿಗೆ 2023-24 ನೇ ಸಾಲಿಗೆ ವರ್ಷದ ಅತ್ಯುತ್ತಮ ಗ್ರಾಮ ಆಡಳಿತ ಅಧಿಕಾರಿ ಪ್ರಶಸ್ತಿ ದೊರೆತಿದೆ. ಜಿಲ್ಲಾಧಿಕಾರಿ ದಿವ್ಯ ಮತ್ತು ಗ್ರಾಮ ಆಡಳಿತಾಧಿಕಾರಿ ರಾಕೇಶ್ ತಂಗಡಗಿ ಅತ್ಯುತ್ತಮ ಕಂದಾಯ ಅಧಿಕಾರಿ ಪ್ರಶಸ್ತಿ ಪುರಸ್ಕೃತರಾಗಿದ್ದಾರೆ.

ಸೆಪ್ಟೆಂಬರ್ 27 ರ ಶುಕ್ರವಾರ ಅಂದರೆ ನಾಳೆ ಬೆಂಗಳೂರಿನ ವಿಕಾಸಸೌಧದಲ್ಲಿ ಕಂದಾಯ ಸಚಿವರ ಅಧ್ಯಕ್ಷತೆಯಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ. ಈ ಬಗ್ಗೆ ಕಂದಾಯ ಇಲಾಖೆ ಪ್ರಕಟಣೆ ಹೊರಡಿಸಿದೆ. ಪ್ರಶಸ್ತಿ ಪುರಸ್ಕೃತ ಜಿಲ್ಲಾಧಿಕಾರಿ ಮತ್ತು ಗ್ರಾಮ ಆಡಳಿತ ಅಧಿಕಾರಿಗೆ ಕಂದಾಯ ಇಲಾಖೆಯ ಅಧಿಕಾರಿಗಳು ಅಭಿನಂದಿಸಿದ್ದಾರೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ