ನನ್ನ ಮೇಲೆ 2 ಪ್ರಕರಣಗಳಿವೆ; ಆದರೆ ಅದಕ್ಕೂ ಮುಡಾ ಕೇಸ್‌ಗೂ ವ್ಯತ್ಯಾಸವಿದೆ; ಸಿಎಂ ಸಿದ್ದರಾಮಯ್ಯ ಆರೋಪಕ್ಕೆ ಹೆಚ್‌ಡಿ ಕುಮಾರಸ್ವಾಮಿ ಪ್ರತಿಕ್ರಿಯ-karnataka news former cm hd kumarswamy fire on chief minister siddaramaiah about muda case rsm ,ವಿಡಿಯೋ ಸುದ್ದಿ
ಕನ್ನಡ ಸುದ್ದಿ  /  ವೀಡಿಯೊ ಗ್ಯಾಲರಿ  /  ನನ್ನ ಮೇಲೆ 2 ಪ್ರಕರಣಗಳಿವೆ; ಆದರೆ ಅದಕ್ಕೂ ಮುಡಾ ಕೇಸ್‌ಗೂ ವ್ಯತ್ಯಾಸವಿದೆ; ಸಿಎಂ ಸಿದ್ದರಾಮಯ್ಯ ಆರೋಪಕ್ಕೆ ಹೆಚ್‌ಡಿ ಕುಮಾರಸ್ವಾಮಿ ಪ್ರತಿಕ್ರಿಯ

ನನ್ನ ಮೇಲೆ 2 ಪ್ರಕರಣಗಳಿವೆ; ಆದರೆ ಅದಕ್ಕೂ ಮುಡಾ ಕೇಸ್‌ಗೂ ವ್ಯತ್ಯಾಸವಿದೆ; ಸಿಎಂ ಸಿದ್ದರಾಮಯ್ಯ ಆರೋಪಕ್ಕೆ ಹೆಚ್‌ಡಿ ಕುಮಾರಸ್ವಾಮಿ ಪ್ರತಿಕ್ರಿಯ

Sep 26, 2024 12:49 PM IST Rakshitha Sowmya
twitter
Sep 26, 2024 12:49 PM IST

ರಾಜ್ಯಾದ್ಯಂತ ಮುಡಾ ಹಗರಣ ಸದ್ದು ಮಾಡುತ್ತಿದೆ. ಸೈಟ್ ಹಂಚಿಕೆ ಅವ್ಯವಹಾರಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಹೆಸರು ಕೇಳಿ ಬಂದಿದೆ. ಸಿಎಂ ಪತ್ನಿ ಪಾರ್ವತಿ ಅವರ ಹೆಸರಲ್ಲಿ ಮುಡಾ ನಿವೇಶನಗಳನ್ನು ಅಕ್ರಮವಾಗಿ ಹಂಚಲಾಗಿದೆ ಎಂದು ಆರೋಪಿಸಲಾಗಿದೆ. ಪ್ರಕರಣವನ್ನು ಸಿಬಿಐ ತನಿಖೆಗೆ ನೀಡುವಂತೆ ಪ್ರತಿಪಕ್ಷ ಬಿಜೆಪಿ ಒತ್ತಾಯಿಸುತ್ತಿದೆ. ಇದೀಗ ಮಾಜಿ ಸಿಎಂ ಕುಮಾರಸ್ವಾಮಿ ಈ ವಿಚಾರವಾಗಿ ಪ್ರತಿಕ್ರಿಯಿಸಿದ್ದಾರೆ. ನನ್ನ ಪ್ರಕರಣಕ್ಕೂ ಸಿದ್ದರಾಮಯ್ಯ ಅವರ ಪ್ರಕರಣಕ್ಕೂ ವ್ಯತ್ಯಾಸವಿದೆ. ಬಿಜೆಪಿ, ಜೆಡಿಎಸ್‌ ಎರಡೂ ಸೇರಿ ಸರ್ಕಾರವನ್ನು ಅಸ್ಥಿರಗೊಳಿಸಲು, ನನ್ನ ವರ್ಚಸ್ಸಿಗೆ ಕಪ್ಪು ಮಸಿ ಬಳಿಯಲು ಷಡ್ಯಂತ್ರ ಮಾಡುತ್ತಿದ್ದಾರೆ ಎಂದು ಆರೋಪ ಮಾಡುತ್ತಿದ್ದಾರೆ. ನನ್ನ ಮೇಲೆ ಕಾಂಗ್ರೆಸ್‌ನವರು ಏನು ಆರೋಪ ಮಾಡುತ್ತಿದ್ದಾರೋ ಅದರಿಂದ ಮುಕ್ತನಾದ ನಂತರ ಮಾತನಾಡುತ್ತೇನೆ. ಇಷ್ಟೆಲ್ಲಾ ಮಾಡಿ ನಿಮ್ಮ ಭಂಡತನವನ್ನು ತೋರಿಸಿಕೊಳ್ಳುತ್ತಿದ್ದೀರಿ. ಹೌದು ಇಂದಿಗೂ ನನ್ನ ಮೇಲೆ 2 ಪ್ರಕರಣಗಳಿವೆ.

More