logo
ಕನ್ನಡ ಸುದ್ದಿ  /  ಕರ್ನಾಟಕ  /  Kptcl Recruitment: ಕೆಪಿಟಿಸಿಎಲ್‌ ಹುದ್ದೆಗಳಿಗೆ ಇಂದಿನಿಂದ ಅರ್ಜಿ ಸಲ್ಲಿಸಿ; ಬೆಸ್ಕಾಂ, ಚೆಸ್ಕಾಂ, ಹೆಸ್ಕಾಂ, ಮೆಸ್ಕಾಂ ನೇಮಕ ವಿವರ

KPTCL Recruitment: ಕೆಪಿಟಿಸಿಎಲ್‌ ಹುದ್ದೆಗಳಿಗೆ ಇಂದಿನಿಂದ ಅರ್ಜಿ ಸಲ್ಲಿಸಿ; ಬೆಸ್ಕಾಂ, ಚೆಸ್ಕಾಂ, ಹೆಸ್ಕಾಂ, ಮೆಸ್ಕಾಂ ನೇಮಕ ವಿವರ

Praveen Chandra B HT Kannada

Oct 21, 2024 09:43 AM IST

google News

KPTCL Recruitment: ಕೆಪಿಟಿಸಿಎಲ್‌ ಹುದ್ದೆಗಳಿಗೆ ಇಂದಿನಿಂದ ಅರ್ಜಿ ಸಲ್ಲಿಸಿ

    • KPTCL Recruitment 2024: ಕರ್ನಾಟಕ ವಿದ್ಯುತ್‌ ಪ್ರಸರಣ ನಿಗಮ ನಿಯಮಿತ(ಕೆಪಿಟಿಸಿಎಲ್‌), ಬೆಂಗಳೂರು ವಿದ್ಯುತ್‌ ಸರಬರಾಜು ಕಂಪನಿ ನಿಯಮಿತ (ಬೆಸ್ಕಾಂ), ಚಾಮುಂಡೇಶ್ವರಿ ವಿದ್ಯುತ್‌ ಸರಬರಾಜು ನಿಗಮ ನಿಯಮಿತ (ಚೆಸ್ಕಾಂ), ಹುಬ್ಬಳ್ಳಿ ವಿದ್ಯುತ್‌ ಸರಬರಾಜು ಕಂಪನಿ ನಿಯಮಿತ (ಹೆಸ್ಕಾಂ), ಮಂಗಳೂರು ಮೆಸ್ಕಾಂ, ಕಲಬುರಗಿ ಚೆಸ್ಕಾಂ ನೇಮಕಾತಿ ವಿವರ ಇಲ್ಲಿದೆ.
KPTCL Recruitment: ಕೆಪಿಟಿಸಿಎಲ್‌ ಹುದ್ದೆಗಳಿಗೆ ಇಂದಿನಿಂದ ಅರ್ಜಿ ಸಲ್ಲಿಸಿ
KPTCL Recruitment: ಕೆಪಿಟಿಸಿಎಲ್‌ ಹುದ್ದೆಗಳಿಗೆ ಇಂದಿನಿಂದ ಅರ್ಜಿ ಸಲ್ಲಿಸಿ

KPTCL Recruitment 2024: ಕರ್ನಾಟಕ ವಿದ್ಯುತ್‌ ಪ್ರಸರಣ ನಿಗಮ ನಿಯಮಿತ(ಕೆಪಿಟಿಸಿಎಲ್‌)ನಲ್ಲಿ ಖಾಲಿ ಇರುವ 411 ಕಿರಿಯ ಸ್ಟೇಷನ್‌ ಪರಿಚಾರಕ ಮತ್ತು 81 ಕಿರಿಯ ಪವರ್‌ಮ್ಯಾನ್‌ ಹುದ್ದೆಗಳಿಗೆ ವಿವಿಧ ವಿದ್ಯುತ್‌ ಸರಬರಾಜು ಕಂಪನಿಗಳಲ್ಲಿ ಇರುವ 2268 ಕಿರಿಯ ಪವರ್‌ಮ್ಯಾನ್‌ ಹುದ್ದೆಗಳಿಗೆ ಇಂದಿನಿಂದ (ಅಕ್ಟೋಬರ್‌ 21) ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಈ ಹುದ್ದೆಗಳಿಗೆ ಅರ್ಜಿ ಸಲ್ಲಿಕೆ ಪ್ರಕ್ರಿಯೆ, ಅರ್ಜಿ ನಮೂನೆ, ವಯೋಮಿತಿ, ವಿದ್ಯಾರ್ಹತೆ, ಸಹನಾ ಪರೀಕ್ಷೆ, ನೇಮಕಾತಿ ಸಿಲೇಬಸ್‌ ಸೇರಿದಂತೆ ಹೆಚ್ಚಿನ ವಿವರವನ್ನು ಎಚ್‌ಟಿ ಕನ್ನಡ ಇಲ್ಲಿ ನೀಡುತ್ತಿದೆ.

ಕೆಪಿಟಿಸಿಎಲ್‌ ನೇಮಕ: ಪ್ರಮುಖ ದಿನಾಂಕಗಳು

ಅರ್ಜಿ ಸಲ್ಲಿಸಲು ಆರಂಭಿಕ ದಿನಾಂಕ: ಅಕ್ಟೋಬರ್‌ 21, 2024

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: ನವೆಂಬರ್‌ 25, 2024

ಒಟ್ಟು ಹುದ್ದೆಗಳ ಸಂಖ್ಯೆ: 2268+411

ಹುದ್ದೆಗಳ ವಿವರ ಮತ್ತು ಹುದ್ದೆಗಳ ವರ್ಗೀಕರಣ (ಕೆಪಿಟಿಸಿಎಲ್‌)

ಕಿರಿಯ ಸ್ಟೇಷನ್‌ ಪರಿಚಾರಕ: ಸಾಮಾನ್ಯ ಅಭ್ಯರ್ಥಿಗಳಿಗೆ 40, ಗ್ರಾಮೀಣ ಮೀಸಲಾತಿ 22, ಮಾಜಿ ಸೈನಿಕ-5, ಕನ್ನಡ ಮಾಧ್ಯಮ ಅಭ್ಯರ್ಥಿ-1, ಯೋಜನೆ ನಿರಾಶ್ರಿತ ಅಭ್ಯರ್ಥಿ-1, ವಿಶೇಷ ಚೇತನ ಅಭ್ಯರ್ಥಿ-5, ಶ್ರವಣ ದೋಷ ಅಭ್ಯರ್ಥಿ-1 ಸೇರಿದಂತೆ 75 ಹುದ್ದೆಗಳಿವೆ. ಬ್ಯಾಕ್‌ಲಾಗ್‌ ಹುದ್ದೆಗಳು: ಸಾಮಾನ್ಯ-23, ಗ್ರಾಮೀಣ ಮೀಸಲಾತಿ 3, ಮಾಜಿ ಸೈನಿಕ-2, ಯೋಜನೆ ನಿರಾಶ್ರಿತ-1, ವಿಕಲ ಚೇತನ ಅಭ್ಯರ್ಥಿ-2 ಸೇರಿದಂತೆ ಒಟ್ಟು 31 ಹುದ್ದೆಗಳಿವೆ. ಒಟ್ಟು 106 ಕಿರಿಯ ಸ್ಟೇಷನ್‌ ಪರಿಚಾರಕ ಹುದ್ದೆಗಳಿವೆ.

ಕಿರಿಯ ಪವರ್‌ಮ್ಯಾನ್‌: ಸಾಮಾನ್ಯ 4, ಮಾಜಿ ಸೈನಿಕ 1, ಕನ್ನಡ ಮಾಧ್ಯಮ ಅಭ್ಯರ್ಥಿ 1 ಸೇರಿದಂತೆ 6 ಕಿರಿಯ ಪವರ್‌ ಮ್ಯಾನ್‌ ಹುದ್ದೆಗಳು ಕೆಪಿಟಿಸಿಎಲ್‌ನಲ್ಲಿದೆ.

ಕೆಪಿಟಿಸಿಎಲ್‌ ಹುದ್ದೆಗಳ ವಿವರ
ಕೆಪಿಟಿಸಿಎಲ್‌ ಬ್ಯಾಕ್‌ಲಾಗ್‌ ಹುದ್ದೆಗಳ ವಿವರ

ಬೆಸ್ಕಾಂನಲ್ಲಿ ಎಷ್ಟು ಹುದ್ದೆಗಳಿವೆ?

ಬೆಂಗಳೂರು ವಿದ್ಯುತ್‌ ಸರಬರಾಜು ಕಂಪನಿ ನಿಯಮಿತದಲ್ಲಿ ಪರಿಶಿಷ್ಟ ಜಾತಿ-105, ಪರಿಶಿಷ್ಟ ವರ್ಗ-44, ಸಾಮಾನ್ಯ-272, ಪ್ರವರ್ಗ 1- 25, ಪ್ರವರ್ಗ 2ಎ- 92, ಪ್ರವರ್ಗ 2b 25, ಪ್ರವರ್ಗ 3ಎ-25, 2ಬಿ-20 ಸೇರಿದಂತೆ ಒಟ್ಟು 618 ಹುದ್ದೆಗಳಿವೆ. ಬ್ಯಾಕ್‌ಲಾಗ್‌ನಲ್ಲಿ 288 ಹುದ್ದೆಗಳಿವೆ.

ಬೆಸ್ಕಾಂ ಹುದ್ದೆಗಳ ವಿವರ

ಚೆಸ್ಕಾಂನಲ್ಲಿ ಎಷ್ಟು ಹುದ್ದೆಗಳಿವೆ?

ಚಾಮುಂಡೇಶ್ವರಿ ವಿದ್ಯುತ್‌ ಸರಬರಾಜು ನಿಗಮ ನಿಯಮಿತದಲ್ಲಿ 270 ಕಿರಿಯ ಪವರ್‌ಮ್ಯಾನ್‌ ಹುದ್ದೆಗಳಿವೆ. 39 ಬ್ಯಾಗ್‌ಲ್ಯಾಗ್‌ ಹುದ್ದೆಗಳಿವೆ.

ಚೆಸ್ಕಾಂ ನೇಮಕಾತಿ: ಹುದ್ದೆಗಳ ವರ್ಗೀಕರಣ

ಹೆಸ್ಕಾಂನಲ್ಲಿ ಉದ್ಯೋಗಾವಕಾಶ

ಹುಬ್ಬಳ್ಳಿ ವಿದ್ಯುತ್‌ ಸರಬರಾಜು ಕಂಪನಿ ನಿಯಮಿತದಲ್ಲಿ 500 ಕಿರಿಯ ಪವರ್‌ಮ್ಯಾನ್‌ ಹುದ್ದೆಗಳಿವೆ. 60 ಬ್ಯಾಕ್‌ಲಾಗ್‌ ಹುದ್ದೆಗಳಿವೆ.

ಹುಬ್ಬಳ್ಳಿ ವಿದ್ಯುತ್‌ ಸರಬರಾಜು ಕಂಪನಿ ನಿಯಮಿತದಲ್ಲಿ ಉದ್ಯೋಗಾವಕಾಶ

ಮೆಸ್ಕಾಂ ಹುದ್ದೆಗಳ ವಿವರ ಮತ್ತು ವರ್ಗೀಕರಣ

ಮಂಗಳೂರು ವಿದ್ಯುತ್‌ ಸರಬರಾಜು ಕಂಪನಿ ನಿಯಮಿತದಲ್ಲಿ 415 ಹುದ್ದೆಗಳು ಮತ್ತು 34 ಬ್ಯಾಕ್‌ಲಾಗ್‌ ಹುದ್ದೆಗಳಿವೆ.

 

ಮಂಗಳೂರು ವಿದ್ಯುತ್‌ ಸರಬರಾಜು ಕಂಪನಿ ನಿಯಮಿತ ನೇಮಕಾತಿ 2024

ಜೆಸ್ಕಾಂ ಗುಲ್ಬಾರ್ಗಾದಲ್ಲಿ ಎಷ್ಟು ಹುದ್ದೆಗಳಿವೆ?

ಗುಲ್ಬರ್ಗಾ ವಿದ್ಯುತ್‌ ಸರಬರಾಜು ಕಂಪನಿ ನಿಯಮಿತದಲ್ಲಿ 15 ಹುದ್ದೆಗಳು ಮತ್ತು 29 ಬ್ಯಾಕ್‌ಲಾಗ್‌ ಹುದ್ದೆಗಳಿವೆ.

ಕಲಬುರಗಿ ಉದ್ಯೋಗ

ಅರ್ಜಿ ಸಲ್ಲಿಸಲು ವಯೋಮಿತಿ ಎಷ್ಟು?

ಕರ್ನಾಟಕ ಪವರ್ ಟ್ರಾನ್ಸ್‌ಮಿಷನ್ ಕಾರ್ಪೊರೇಶನ್ ಲಿಮಿಟೆಡ್ ನೇಮಕಾತಿ ಅಧಿಸೂಚನೆಯ ಪ್ರಕಾರ 2024 ನವೆಂಬರ್ 20ರಂತೆ ಅಭ್ಯರ್ಥಿಯ ಕನಿಷ್ಠ ವಯಸ್ಸು 18 ವರ್ಷ ಮತ್ತು ಗರಿಷ್ಠ ವಯಸ್ಸು 35 ವರ್ಷವಾಗಿರಬೇಕು. ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅರ್ಜಿ ಶುಲ್ಕ ಎಷ್ಟು? ಅರ್ಜಿ ಸಲ್ಲಿಸಲು ವೆಬ್‌ ವಿಳಾಸ ಮತ್ತು ಇತರೆ ಮಾಹಿತಿ ಪಡೆಯಲು ಹಿಂದೂಸ್ತಾನ್‌ ಟೈಮ್ಸ್‌ ಕನ್ನಡದ ಈ ಹಿಂದಿನ ವರದಿ “KPTCL Recruitment 2024: ಕೆಪಿಟಿಸಿಎಲ್‌ನಲ್ಲಿ 2975 ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ, ವೇತನ ಎಷ್ಟು, ಕೊನೆ ದಿನ ನವೆಂಬರ್‌ 20”ಗೆ ಭೇಟಿ ನೀಡಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ