KPTCL Recruitment 2024: ಕೆಪಿಟಿಸಿಎಲ್‌ನಲ್ಲಿ 2975 ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ, ವೇತನ ಎಷ್ಟು, ಕೊನೆ ದಿನ ನವೆಂಬರ್‌ 20
ಕನ್ನಡ ಸುದ್ದಿ  /  ಕರ್ನಾಟಕ  /  Kptcl Recruitment 2024: ಕೆಪಿಟಿಸಿಎಲ್‌ನಲ್ಲಿ 2975 ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ, ವೇತನ ಎಷ್ಟು, ಕೊನೆ ದಿನ ನವೆಂಬರ್‌ 20

KPTCL Recruitment 2024: ಕೆಪಿಟಿಸಿಎಲ್‌ನಲ್ಲಿ 2975 ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ, ವೇತನ ಎಷ್ಟು, ಕೊನೆ ದಿನ ನವೆಂಬರ್‌ 20

kptcl recruitment 2024: ಕರ್ನಾಟಕ ವಿದ್ಯುತ್‌ ಪ್ರಸರಣ ನಿಗಮವು ಕಿರಿಯ ಸ್ಟೇಶನ್ ಅಟೆಂಡಂಟ್, ಕಿರಿಯ ಪವರ್‌ಮ್ಯಾನ್ ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನಿಸಿದೆ. ಅಕ್ಟೋಬರ್‌ 21ರಂದು ಅರ್ಜಿ ಸಲ್ಲಿಕೆ ಪ್ರಕ್ರಿಯೆ ಆರಂಭವಾಗಲಿದ್ದು, ಒಂದು ತಿಂಗಳು ಕಾಲಾವಕಾಶ ಇರಲಿದೆ.

ಕೆಪಿಟಿಸಿಎಲ್‌ ನಾನಾ ಹುದ್ದೆಗಳ ನೇಮಕಕ್ಕೆ ಅರ್ಜಿ ಆಹ್ವಾನಿಸಿದೆ.
ಕೆಪಿಟಿಸಿಎಲ್‌ ನಾನಾ ಹುದ್ದೆಗಳ ನೇಮಕಕ್ಕೆ ಅರ್ಜಿ ಆಹ್ವಾನಿಸಿದೆ.

ಬೆಂಗಳೂರು: ಇಂಧನ ಇಲಾಖೆಯ ಪ್ರಮುಖ ನಿಗಮವಾಗಿರುವ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮವು (KPTCL) ಹಲವು ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ. 2975 ಕಿರಿಯ ಸ್ಟೇಶನ್ ಅಟೆಂಡಂಟ್, ಕಿರಿಯ ಪವರ್‌ಮ್ಯಾನ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅವಕಾಶವಿದೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಕಿರಿಯ ಸ್ಟೇಶನ್ ಅಟೆಂಡಂಟ್, ಕಿರಿಯ ಪವರ್‌ಮ್ಯಾನ್ ಹುದ್ದೆಗಳ ಭರ್ತಿಗಾಗಿ ಅಧಿಕೃತ ಅಧಿಸೂಚನೆಯ ಮೂಲಕ 2024 ಅಕ್ಟೋಬರ್‌ನಲ್ಲಿ ಅರ್ಜಿಗಳನ್ನು ಆಹ್ವಾನಿಸಿದ್ದು, ಅಕ್ಟೋಬರ್21 ರಂದು ಅರ್ಜಿ ಸಲ್ಲಿಸುವ ಚಟುವಟಿಕೆಯು ಶುರುವಾಗಲಿದೆ. ಅಭ್ಯರ್ಥಿಗಳು ಅಗತ್ಯವಿರುವ ವಿದ್ಯಾರ್ಹತೆ, ವಯೋಮಿತಿ ಹಾಗೂ ವೇತನ ಶ್ರೇಣಿಯ ಬಗ್ಗೆ ಸಂಪೂರ್ಣವಾಗಿ ತಿಳಿದುಕೊಳ್ಳಲು ಅವಕಾಶ ನೀಡಲಾಗಿದ್ದು. ನವೆಂಬರ್‌ 20 ಒಳಗಾಗಿ ಅರ್ಜಿಗಳನ್ನು ಸಲ್ಲಿಸಬೇಕು ಎಂದು ಕೆಪಿಟಿಸಿಎಲ್‌ ಆಡಳಿತ ಮತ್ತು ಮಾನವ ಸಂಪನ್ಮೂಲ ವಿಭಾಗದ ನಿರ್ದೇಶಕರು ತಿಳಿಸಿದ್ದಾರೆ.

ಹುದ್ದೆಗಳ ವರ್ಗೀಕರಣ,ಮೀಸಲಾತಿ ವಿವರ, ಕಲ್ಯಾಣ ಕರ್ನಾಟಕ ಪ್ರದೇಶ ಮೀಸಲಾತಿ, ವಯೋಮಿತಿ, ನೇಮಕಾತಿ ವಿಧಾನ, ಪರೀಕ್ಷಾ ವಿಧಾನ,ಅರ್ಜಿಯ ನಮೂನೆ ಹಾಗೂ ಇತರೆ ವಿವರಗಳನ್ನು ಒಳಗೊಂಡ ಉದ್ಯೋಗ ಪ್ರಕಟಣೆಯನ್ನು ನಿಗಮದ ವೆಬ್‌ಸೈಟ್‌ಗಳಲ್ಲಿ ಪ್ರಕಟಿಸಲಾಗಿದೆ ಎಂದು ಹೇಳಿದ್ದಾರೆ.

ವಿದ್ಯಾರ್ಹತೆ,ಅರ್ಜಿ ಸಲ್ಲಿಕೆ ಹೇಗೆ

ಆನ್‌ಲೈನ್‌ ಅರ್ಜಿ ಸಲ್ಲಿಕೆ ಹೇಗೆ

ಕೆಪಿಟಿಸಿಎಲ್‌ ವೆಬ್‌ಸೈಟ್‌ ಇಲ್ಲವೇ ಕರ್ನಾಟಕದ ವಿದ್ಯುತ್‌ ವಿತರಣಾ ಸಂಸ್ಥೆಗಳಾ ಬೆಸ್ಕಾಂ, ಸೆಸ್ಕ್‌, ಗೆಸ್ಕಾಂ, ಹೆಸ್ಕಾಂ, ಮೆಸ್ಕಾಂ ವೆಬ್‌ಸೈಟ್‌ ಮೂಲಕ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬೇಕು.

ವೆಬ್‌ಸೈಟ್‌ ತೆರೆದರೆ ಅದರಲ್ಲಿ ಎರಡೂ ಹುದ್ದೆಯ ಲಿಂಕ್‌ ಸಿಗಲಿದೆ. ಅಲ್ಲಿ ಮಾಹಿತಿಯನ್ನು ನೀಡಿ ಕೆಲವು ದಾಖಲೆ ಅಪ್‌ಲೋಡ್‌ ಮಾಡಬೇಕು. ಆನಂತರ ಪರೀಕ್ಷಾ ದಿನಾಂಕ ತಿಳಿಸಿ ಪ್ರವೇಶ ಪತ್ರ ನೀಡಲಾಗುತ್ತದೆ.

ವೆಬ್‌ಸೈಟ್‌ನಲ್ಲಿಯೇ ಮಾಹಿತಿಗಳನ್ನು ನೀಡಲಾಗಿದ್ದು. ಅದನ್ನು ನಿಖರವಾಗಿ ಪಡೆದುಕೊಳ್ಳಬಹುದು.

ವೆಬ್‌ಸೈಟ್‌ ವಿವರ

https://kptcl.karnataka.gov.in

https://bescom .karnataka.gov.in

https://cescmysore.karnataka.gov.in

https://hescom.karnataka.gov.in

https://mecom.karnataka.gov.in

Whats_app_banner