ಕಲ್ಯಾಣ ಕರ್ನಾಟಕದ ಭಾಗದವರಿಗೆ ಗುಡ್​ನ್ಯೂಸ್; 5267 ಶಿಕ್ಷಕರ ಹುದ್ದೆಗಳ ನೇರ ನೇಮಕಾತಿಗೆ ಶಿಕ್ಷಣ ಇಲಾಖೆ ಆದೇಶ
ಕನ್ನಡ ಸುದ್ದಿ  /  ಕರ್ನಾಟಕ  /  ಕಲ್ಯಾಣ ಕರ್ನಾಟಕದ ಭಾಗದವರಿಗೆ ಗುಡ್​ನ್ಯೂಸ್; 5267 ಶಿಕ್ಷಕರ ಹುದ್ದೆಗಳ ನೇರ ನೇಮಕಾತಿಗೆ ಶಿಕ್ಷಣ ಇಲಾಖೆ ಆದೇಶ

ಕಲ್ಯಾಣ ಕರ್ನಾಟಕದ ಭಾಗದವರಿಗೆ ಗುಡ್​ನ್ಯೂಸ್; 5267 ಶಿಕ್ಷಕರ ಹುದ್ದೆಗಳ ನೇರ ನೇಮಕಾತಿಗೆ ಶಿಕ್ಷಣ ಇಲಾಖೆ ಆದೇಶ

Government Teacher Jobs: ಕಲ್ಯಾಣ ಕರ್ನಾಟಕ ಭಾಗದಲ್ಲಿ ಖಾಲಿ ಇರುವ 6,584 ಶಿಕ್ಷಕರ ಹುದ್ದೆಗಳು ಪೈಕಿ ಶೇ 80ರಷ್ಟು ಭರ್ತಿಗೆ ಸಾರ್ವಜನಿಕ ಶಿಕ್ಷಣ ಇಲಾಖೆ ಆದೇಶ ಹೊರಡಿಸಿದೆ.

ಕಲ್ಯಾಣ ಕರ್ನಾಟಕದ ಭಾಗದವರಿಗೆ ಗುಡ್​ನ್ಯೂಸ್; 5267 ಶಿಕ್ಷಕರ ಹುದ್ದೆಗಳ ನೇರ ನೇಮಕಾತಿಗೆ ಶಿಕ್ಷಣ ಇಲಾಖೆ ಆದೇಶ
ಕಲ್ಯಾಣ ಕರ್ನಾಟಕದ ಭಾಗದವರಿಗೆ ಗುಡ್​ನ್ಯೂಸ್; 5267 ಶಿಕ್ಷಕರ ಹುದ್ದೆಗಳ ನೇರ ನೇಮಕಾತಿಗೆ ಶಿಕ್ಷಣ ಇಲಾಖೆ ಆದೇಶ

ಬೆಂಗಳೂರು: ಸರ್ಕಾರಿ ಉದ್ಯೋಗ ಬಯಸುವ ಮತ್ತು ಶಿಕ್ಷಕರಾಗುವ ಆಕಾಂಕ್ಷಿಗಳಿಗೆ ರಾಜ್ಯ ಸರ್ಕಾರ ಸಿಹಿ ಸುದ್ದಿ ನೀಡಿದೆ. ಕಲ್ಯಾಣ ಕರ್ನಾಟಕ ಭಾಗದ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಿಗೆ ಶಿಕ್ಷಕರ ನೇಮಕಾತಿಗೆ ಶಿಕ್ಷಣ ಇಲಾಖೆ ಆದೇಶ ಹೊರಡಿಸಿದೆ. 5267 ಶಿಕ್ಷಕರ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲು ಆದೇಶ ಹೊರಡಿಸಿದ್ದು, ನೇರ ನೇಮಕಾತಿ ಮೂಲಕ ನೇಮಕಾತಿ ಮಾಡಿಕೊಳ್ಳಲು ಸೂಚಿಸಿದೆ.

1 ರಿಂದ 5ನೇ ತರಗತಿವರೆಗೆ (ಪ್ರಾಥಮಿಕ ಶಾಲಾ ಶಿಕ್ಷಕರು) 4,424 ಶಿಕ್ಷಕರ ನೇಮಕಾತಿ ಮತ್ತು 6 ರಿಂದ 8ನೇ ತರಗತಿವರೆಗೆ (ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರು) 78 ಹಾಗೂ 380 ದೈಹಿಕ ಶಿಕ್ಷಕರು (ಗ್ರೇಡ್) ಸೇರಿದಂತೆ ಒಟ್ಟು 5,267 ಹುದ್ದೆಗಳ ಭರ್ತಿಗೆ ಆದೇಶ ಹೊರಡಿಸಲಾಗಿದೆ. ಹುದ್ದೆಗಳ ನೇಮಕಾತಿಗೂ ಮೊದಲು ಎಲ್ಲಾ ಪ್ರಕ್ರಿಯೆ ಮುಗಿಸಿದ ನಂತರ ಹಾಗೂ ನೇಮಕಾತಿ ಆದೇಶ ನೀಡುವುದಕ್ಕೂ ಮೊದಲು ಹುದ್ದೆಗಳಿಗೆ ತಗಲುವ ಹಣಕಾಸಿನ ವಿವರಗಳ ಆದೇಶಗಳನ್ನು ಸರ್ಕಾರಕ್ಕೆ ಸಲ್ಲಿಸಬೇಕು.

ಕಲ್ಯಾಣ ಕರ್ನಾಟಕ ಭಾಗದ ಶಾಲೆಗಳಿಗೆ ಶೇಕಡಾ 80ರಷ್ಟು ಹುದ್ದೆಗಳು ಖಾಲಿ ಇವೆ. ಇಲ್ಲಿ 6,584 ಶಿಕ್ಷಕರ ಹುದ್ದೆಗಳು ಖಾಲಿಯಿದ್ದು, ಅವುಗಳಲ್ಲಿ ಶೇಕಡಾ 80ರಷ್ಟನ್ನು ಭರ್ತಿ ಮಾಡಲಾಗುತ್ತಿದೆ. 2024-25ನೇ ಸಾಲಿನ ಆರ್ಥಿಕ ವರ್ಷದ ಭಾಷಣದಲ್ಲಿ ಘೋಷಿಸಿದಂತೆ ಸರ್ಕಾರ ಈ ನಿರ್ಧಾರ ತೆಗೆದುಕೊಂಡಿದೆ.

ಮೈಸೂರು ದಸರಾ ಜಂಬೂ ಸವಾರಿಗೆ ಜನಸಾಗರ

ಮೈಸೂರು: ಮೈಸೂರು ದಸರಾ ಎಂದರೆ ಜನಜಂಗುಳಿ, ಜಂಬೂ ಸವಾರಿ ಹೋಗುವ ಮಾರ್ಗದಲ್ಲಿ ಎಲ್ಲಿಯೂ ಕಾಲಿಡಲು ಜಾಗವಿರದಷ್ಟು ಜನಸಾಗರ. ಜಂಬೂ ಸವಾರಿಯನ್ನು ಹತ್ತಿರದಿಂದ ನೋಡಬೇಕು ಎನ್ನುವ ಭಾವನೆ. ಅದಕ್ಕಿಂತ ತಾಯಿ ಚಾಮುಂಡೇಶ್ವರಿಯನ್ನು ನೋಡಬೇಕು. ನಮಸ್ಕರಿಸಿ ಉಘೇ ಚಾಮುಂಡಿ ಎಂದರೆ ಅದೇನೋ ಸಮಾಧಾನ. ಬೆಳಿಗ್ಗೆಯಿಂದಲೇ ಜಾಗ ಹಿಡಿದುಕೊಂಡು ತಿಂಡಿ, ಊಟವಿಲ್ಲದೇ ಮಕ್ಕಳನ್ನು ಹಿಡಿದು ಕೂಡಿಸಿಕೊಂಡವರಿಗೆ ಏನೋ ನೆಮ್ಮದಿ. ಇದು ಮೈಸೂರು ದಸರಾದ ಭಕ್ತಭಾವದ ಕ್ಷಣ. ಮೈಸೂರು ದಸರಾವನ್ನೂ ಈ ಬಾರಿ ವಿಜೃಂಭಣೆಯಿಂದ ಆಚರಿಸುವುದಾಗಿ ಸರ್ಕಾರ ಘೋಷಿಸಿದ್ದರಿಂದ ಹೆಚ್ಚಿನ ಜನರೇ ಮೈಸೂರಿಗೆ ಬಂದಿದ್ದರು. ಲಕ್ಷಾಂತರ ಸಂಖ್ಯೆಯಲ್ಲಿ ಅರಮನೆಯಿಂದ ಆರಂಭಗೊಂಡು ಬನ್ನಿಮಂಟಪದವರೆಗೂ ಸೇರಿದ್ದರು.

ವಿದೇಶದಲ್ಲಿ ಎಂಬಿಎ ಮಾಡಲು ಎಷ್ಟು ವೆಚ್ಚವಾಗುತ್ತದೆ?

ವಿದೇಶದಲ್ಲಿರುವ ಜನಪ್ರಿಯ ವಿಶ್ವವಿದ್ಯಾಲಯದಲ್ಲಿ ಎಂಬಿಎ ಅಧ್ಯಯನ ಮಾಡುವ ಯೋಜನೆ ಹಾಕುವಾಗ ಮೊದಲು ಅದಕ್ಕಾಗಿ ಆಗುವ ಖರ್ಚು ವೆಚ್ಚಗಳ ಬಗ್ಗೆ ಲೆಕ್ಕ ಹಾಕಲಾಗುತ್ತದೆ. ಹಲವು ವರ್ಷಗಳಿಂದಲೂ ಭಾರತೀಯ ವಿದ್ಯಾರ್ಥಿಗಳು ಉನ್ನತ ಶಿಕ್ಷಣಕ್ಕಾಗಿ ಹೆಚ್ಚಾಗಿ ಆಯ್ಕೆ ಮಾಡುವ ರಾಷ್ಟ್ರಗಳೆಂದರೆ ಯುಎಸ್ ಮತ್ತು ಯುಕೆ. ಎಂಬಿಎ ಅಥವಾ ಎಂಎಸ್‌ನಂತಹ ಉನ್ನತ ಶಿಕ್ಷಣದ ಕೋರ್ಸ್‌ ವಿಷಯ ಬಂದಾಗ ಭಾರತೀಯ ವಿದ್ಯಾರ್ಥಿಗಳು ಹೆಚ್ಚಾಗಿ ಯುಎಸ್ ಆಯ್ಕೆ ಮಾಡುತ್ತಾರೆ. ಆದರೆ, ಖರ್ಚುವೆಚ್ಚದ ವಿಷಯ ಬಂದಾಗ ತುಸು ಕಡಿಮೆ ಖರ್ಚಿನಲ್ಲಿ ಓದಬಹುದಾದ ರಾಷ್ಟ್ರಗಳನ್ನು ಆಯ್ಕೆ ಮಾಡಲಾಗುತ್ತದೆ. ಹಾಗಾದರೆ ಎಷ್ಟು ಖರ್ಚಾಗಬಹುದು ಎಂಬುದರ ವಿವರಕ್ಕಾಗಿ ಈ ಲಿಂಕ್ ಮೇಲೆ ಕ್ಲಿಕ್ ಮಾಡಿ

Whats_app_banner