Bangalore Crime: ಬೆಂಗಳೂರಿನಲ್ಲಿ ಅಸ್ಸಾಂ ಮೂಲದ ವ್ಲಾಗರ್ ಭೀಕರ ಹತ್ಯೆ; ಇರಿದು ಕೊಲೆ ಮಾಡಿ ಪರಾರಿಯಾದ ಕೇರಳ ಪ್ರಿಯಕರ
Nov 27, 2024 12:04 AM IST
ಬೆಂಗಳೂರಿನಲ್ಲಿ ಅಸ್ಸಾಂ ಮೂಲದ ಯುವತಿಯೊಬ್ಬಳನ್ನು ಭೀಕರವಾಗಿ ಕೊಲೆ ಮಾಡಿರುವ ಘಟನೆ ವರದಿಯಾಗಿದೆ.
- Bangalore Crime News: ಬೆಂಗಳೂರಿನಲ್ಲಿ ಗೃಹಿಣಿಯನ್ನು ಕೊಂದು ತುಂಡು ಮಾಡಿ ಪರಾರಿಯಾಗಿದ್ದ ಘಟನೆ ಮಾಸುವ ಮುನ್ನವೇ ಅಸ್ಸಾಂ ಮೂಲದ ಯುವತಿಯನ್ನು ಕೇರಳದ ಯುವಕ ಕೊಲೆ ಮಾಡಿ ಪರಾರಿಯಾಗಿ ಘಟನೆ ದಾಖಲಾಗಿದೆ.
ಬೆಂಗಳೂರು: 22 ವರ್ಷದ ವ್ಲಾಗರ್ ಮತ್ತು ಖಾಸಗಿ ಕಂಪನಿ ಉದ್ಯೋಗಿಯೊಬ್ಬರನ್ನು ಬೆಂಗಳೂರಿನ ಹೋಟೆಲ್ ವೊಂದರಲ್ಲಿ ಹತ್ಯೆ ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ. ಅಸ್ಸಾಂ ಮೂಲದ ಮಾಯಾ ಗಗೋಯಿ ಹತ್ಯೆಗೀಡಾದ ದುರ್ದೈವಿ. ಖಾಸಗಿ ಕಂಪನಿ ಉದ್ಯೋಗಿಯೂ ಆಗಿರುವ ಈಕೆ ಕೋರಮಮಂಗಲದಲ್ಲಿ ಕಳೆದ ಮೂರು ವರ್ಷಗಳಿಂದ ವಾಸಿಸುತ್ತಿದ್ದರು. ನ.22 ರಂದು ಮಾಯಾ ಅವರು ತಮ್ಮ ಸ್ನೇಹಿತ ಕೇರಳ ಮೂಲದ ಅರ್ನವ್ ಹಾರ್ನೊಯ್ ಅವರೊಂದಿಗೆಇಂದಿರಾನಗರದ ರಾಯಲ್ ಲಿವಿಂಗ್ ಅಪಾರ್ಟ್‌ಮೆಂಟ್‌ಗೆ ಆಗಮಿಸಿದ್ದರು. ಮಂಗಳವಾರ ಸಿಬ್ಬಂದಿ ರೂಂನ ಕಾಲಿಂಗ್ ಬೆಲ್ ಮಾಡಿದಾಗ ಬಾಗಿಲು ತೆರೆದಿಲ್ಲ. ಸಿಬ್ಬಂದಿ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ ಅರ್ನವ್ ಗಡಿಬಿಡಿಯಲ್ಲಿ ಅಲ್ಲಿಂದ ಹೊರಹೋಗಿರುವುದು ಪತ್ತೆಯಾಗಿದೆ. ಇದರಿಂದ ಅನುಮಾನಗೊಂಡ ಹೋಟೆಲ್ ಸಿಬ್ಬಂದಿ ಕೂಡಲೇ ನಕಲಿ ಕೀಯಿಂದ ರೂಮಿನ ಬಾಗಿಲು ತೆರೆದಿದ್ದಾರೆ. ಆಗ ಮಾಯಾ ಅವರ ಹತ್ಯೆಯಾಗಿರುವುದು ಕಂಡು ಬಂದಿದೆ.
ಅವರನ್ನು ಹಲವಾರು ಬಾರಿ ಇರಿದು ಕೊಲೆ ಮಾಡಲಾಗಿದೆ. ಕೂಡಲೇ ಸಿಬ್ಬಂದಿ ಪೊಲೀಸರಿಗೆ ವಿಷಯ ಮುಟ್ಟಿಸಿದ್ದಾರೆ. ಹತ್ಯೆ ನಡೆದ ಸ್ಥಳದಿಂದ ಮಾಯಾ ಅವರ ಮೊಬೈಲ್ ಅನ್ನು ವಶಪಡಿಸಿಕೊಳ್ಳಲಾಗಿದೆ.
ಆಗಿದ್ದಾದರೂ ಏನು
ಮಂಗಳವಾರ ತಿಂಡಿಯ ಆರ್ಡರ್ ತೆಗೆದುಕೊಳ್ಳಲು ರೂಂನ ಕಾಲಿಂಗ್ ಬೆಲ್ ಮಾಡಿದಾಗ ಬಾಗಿಲು ತೆರೆದಿಲ್ಲ. ಹೋಟೆಲ್ ಸಿಬ್ಬಂದಿ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ ಅರ್ನವ್ ಗಡಿಬಿಡಿಯಲ್ಲಿ ಹೊರಹೋಗಿರುವುದು ಪತ್ತೆಯಾಗಿದೆ. ಇದರಿಂದ ಅನುಮಾನಗೊಂಡ ಸಿಬ್ಬಂದಿ ಕೂಡಲೇ ನಕಲಿ ಕೀಯಿಂದ ರೂಮಿನ ಬಾಗಿಲು ತೆರೆದಿದ್ದಾರೆ. ಆಗ ಮಾಯಾ ಅವರ ಹತ್ಯೆಯಾಗಿರುವುದು ಕಂಡು ಬಂದಿದೆ. ಅವರನ್ನು ಹಲವಾರು ಬಾರಿ ಇರಿದು ಕೊಲೆ ಮಾಡಲಾಗಿದೆ. ಕೂಡಲೇ ಸಿಬ್ಬಂದಿ ಪೊಲೀಸರಿಗೆ ವಿಷಯ ಮುಟ್ಟಿಸಿದ್ದಾರೆ. ಹತ್ಯೆ ನಡೆದ ಸ್ಥಳದಿಂದ ಮಾಯಾ ಅವರ ಮೊಬೈಲ್ ಅನ್ನು ವಶಪಡಿಸಿಕೊಳ್ಳಲಾಗಿದೆ.
ಈ ಹತ್ಯೆ ಸೋಮವಾರ ನಡೆದಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಅರ್ನವ್ ಈ ಕೊಲೆ ಮಾಡಿದ್ದಾನೆ. ಸೋಮವಾರ ಇಡೀ ರಾತ್ರಿ ಮಾಯಾ ಅವರ ಮೃತ ದೇಹದ ಜತೆ ಕಳೆದಿದ್ದಾನೆ.
ಮಂಗಳವಾರ ಬೆಳಗ್ಗೆ ಅರ್ನವ್ ಅಲ್ಲಿಂದ ಹೊರಬಂದ ನಂತರ ಕ್ಯಾಬ್ ಹತ್ತಿರುವುದು ಸಮೀಪದ ಸಿಸಿಟಿವಿ ಗಳಿಂದ ಪತ್ತೆಯಾಗಿದೆ. ಈತನ ಮಾಹಿತಿ ಲಭ್ಯವಾಗಿದ್ದು ಕೂಡಲೇ ಬಂಧಿಸುವುದಾಗಿ ಪೊಲೀಸರು ತಿಳಿಸಿದ್ದಾರೆ. ನ.22 ರಿಂದ 24ರವರೆಗ ಇವರಿಬ್ಬರನ್ನು ಹೊರತುಪಡಿಸಿ ಬೇರೆ ಯಾರೊಬ್ಬರೂ ಇವರ ಕೊಠಡಿಯನ್ನು ಪ್ರವೇಶಿಸಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ವಿದೇಶಿ ಡ್ರಗ್ ಪೆಡ್ಲರ್ ಬಂಧನ; 77 ಲಕ್ಷ ರೂ. ಮೌಲ್ಯದ ಡ್ರಗ್ಸ್ ವಶ
ವ್ಯಾಪಾರಿ ವೀಸಾ ಪಡೆದು ಭಾರತಕ್ಕೆ ಆಗಮಿಸಿ ಮೋಜಿನ ಜೀವನ ನಡೆಸುವ ಸಲುವಾಗಿ ಮಾದಕವಸ್ತು ಮಾರಾಟ ಮಾಡುತ್ತಿದ್ದ ವಿದೇಶಿ ಡ್ರಗ್ ಪೆಡ್ಲರ್ ವೊಬ್ಬನನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಆತನಿಂದ 77 ಲಕ್ಷ ರೂ. ಮೌಲ್ಯದ 515 ಗ್ರಾಂ ಎಂಡಿಎಂಎ ಕ್ರಿಸ್ಟಲ್ ಹಾಗೂ ಮೊಬೈಲ್ ವಶಪಡಿಸಿಕೊಳ್ಳಲಾಗಿದೆ.
ಆಫ್ರಿಕಾ ದೇಶದ ಈ ಡ್ರಗ್ ಪೆಡ್ಲರ್ 2017 ರಲ್ಲಿ ವ್ಯಾಪಾರಿ ವೀಸಾದಡಿ ಭಾರತಕ್ಕೆ ಆಗಮಿಸಿದ್ದ. ಈತ ಕಡಿಮೆ ಸಮಯದಲ್ಲಿ ಹೆಚ್ಚಿನ ಹಣ ಗಳಿಸುವ ದುರುದ್ದೇಶದಿಂದ ಬೆಂಗಳೂರು ನಗರದಲ್ಲಿ ನೆಲೆಸಿರುವ ಪರಿಚಯಸ್ಥರಿಂದ ಕಡಿಮೆ ಬೆಲೆಗೆ ಮಾದಕವಸ್ತು ಖರೀದಿಸಿ ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿದ್ದ. ಒಂದು ಗ್ರಾಂಗೆ 12 ಸಾವಿರದಿಂದ 15 ಸಾವಿರ ರೂ.ಗಳಂತೆ ಹೆಚ್ಚಿನ ಬೆಲೆಗೆ ಐಟಿಬಿಟಿ ಉದ್ಯೋಗಿಗಳಿಗೆ, ಕಾಲೇಜು ವಿದ್ಯಾರ್ಥಿಗಳಿಗೆ ಮಾರಾಟ ಮಾಡುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಮಾದಕ ವಸ್ತುಗಳನ್ನು ಮಾರಾಟ ಮಾಡುತ್ತಿದ್ದಾನೆ ಎಂಬ ಮಾಹಿತಿ ಸಿಸಿಬಿ ಮಾದಕ ದ್ರವ್ಯ ನಿಗ್ರಹ ದಳದ ಪೊಲೀಸರಿಗೆ ಲಭಿಸಿತ್ತು. ತಕ್ಷಣ ಕಾರ್ಯಪ್ರವೃತ್ತರಾದ ಸಿಸಿಬಿ ಪೊಲೀಸರು ಸ್ಥಳಕ್ಕೆ ತೆರಳಿ ವಿದೇಶಿ ಡ್ರಗ್ ಪೆಡ್ಲರ್ ನನ್ನು ಬಂಧಿಸಿ ಆತನ ಬಳಿಯಿದ್ದ 77 ಲಕ್ಷ ರೂ. ಮೌಲ್ಯದ ಎಂಡಿಎಂಎ ಕ್ರಿಸ್ಟಲ್, ತೂಕದ ಯಂತ್ರ ಹಾಗೂ ಮೊಬೈಲ್ ವಶಪಡಿಸಿಕೊಂಡು ಮುಂದಿನ ಕ್ರಮಕ್ಕಾಗಿ ಸೋಲದೇವನಹಳ್ಳಿ ಪೊಲೀಸ್ಠಾ ಣೆಗೆ ಒಪ್ಪಿಸಿದ್ದಾರೆ. ಈತನ ಮೇಲೆ ಈಗಾಗಲೇ ಉತ್ತರ ಪ್ರದೇಶದಲ್ಲಿಯೂ ಪ್ರಕರಣ ದಾಖಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.