Hubli News: ಹುಬ್ಬಳ್ಳಿ ನಗರದಲ್ಲಿ ಗುಂಡೇಟಿನ ಸದ್ದು, ಡರೋಡೆಕೋರರನ್ನು ಗುಂಡು ಹಾರಿಸಿ ಸೆರೆ ಹಿಡಿದ ಮಹಿಳಾ ಎಸ್‌ಐ ಸೇರಿ ಮೂವರಿಗೆ ಗಾಯ
ಕನ್ನಡ ಸುದ್ದಿ  /  ಕರ್ನಾಟಕ  /  Hubli News: ಹುಬ್ಬಳ್ಳಿ ನಗರದಲ್ಲಿ ಗುಂಡೇಟಿನ ಸದ್ದು, ಡರೋಡೆಕೋರರನ್ನು ಗುಂಡು ಹಾರಿಸಿ ಸೆರೆ ಹಿಡಿದ ಮಹಿಳಾ ಎಸ್‌ಐ ಸೇರಿ ಮೂವರಿಗೆ ಗಾಯ

Hubli News: ಹುಬ್ಬಳ್ಳಿ ನಗರದಲ್ಲಿ ಗುಂಡೇಟಿನ ಸದ್ದು, ಡರೋಡೆಕೋರರನ್ನು ಗುಂಡು ಹಾರಿಸಿ ಸೆರೆ ಹಿಡಿದ ಮಹಿಳಾ ಎಸ್‌ಐ ಸೇರಿ ಮೂವರಿಗೆ ಗಾಯ

Hubli Crime News: ಹುಬ್ಬಳ್ಳಿ ದರೋಡೆ ಪ್ರಕರಣದಲ್ಲಿ ಸಿಕ್ಕಿಬಿದ್ದಿದ್ದ ಮಂಗಳೂರು ಮೂಲದ ಇಬ್ಬರು ಕುಖ್ಯಾತ ಕಳ್ಳರನ್ನು ಮಹಜರಿಗೆಂದು ಕರೆದುಕೊಂಡು ಬಂದಾಗ ತಪ್ಪಿಸಿಕೊಳ್ಳಲು ಈ ಯತ್ನಿಸಿದ್ದು. ಈ ವೇಳೆ ಗುಂಡು ಹಾರಿಸಿ ಇಬ್ಬರನ್ನೂ ವಶಕ್ಕೆ ಪಡೆಯಲಾಗಿದೆ. ಘಟನೆಯಲ್ಲಿ ಹುಬ್ಬಳ್ಳಿ ಧಾರವಾಡ ಮೂವರು ಪೊಲೀಸರಿಗೆ ಗಾಯಗಳಾಗಿವೆ.

ಹುಬ್ಬಳ್ಳಿ ಪೊಲೀಸರ ಮೇಲೆ ದಾಳಿ ಮಾಡಿದ ಮಂಗಳೂರಿನ ಭರತ್‌ ಶೆಟ್ಟಿ ಹಾಗೂ ಫಾರುಕ್‌. ಗಾಯಗೊಂಡ ಪೊಲೀಸ್‌ ಸಿಬ್ಬಂದಿ
ಹುಬ್ಬಳ್ಳಿ ಪೊಲೀಸರ ಮೇಲೆ ದಾಳಿ ಮಾಡಿದ ಮಂಗಳೂರಿನ ಭರತ್‌ ಶೆಟ್ಟಿ ಹಾಗೂ ಫಾರುಕ್‌. ಗಾಯಗೊಂಡ ಪೊಲೀಸ್‌ ಸಿಬ್ಬಂದಿ

ಹುಬ್ಬಳ್ಳಿ : ಪೊಲೀಸ್ ಸಿಬ್ಬಂದಿಗಳ ಮೇಲೆ ಹಲ್ಲೆ ನಡೆಸಿ ತಪ್ಪಿಸಿಕೊಳ್ಳಲು ಯತ್ನಿಸಿದ ಅಂತರರಾಜ್ಯ ದರೋಡೆಕೋರರಿಬ್ಬರ ಮೇಲೆ ಸಿಸಿಬಿ ಇನ್ಸಪೆಕ್ಟರ್ ಮಾರುತಿ ಗುಳ್ಳಾರಿ ಗುಂಡು ಹಾರಿಸಿ ಮತ್ತೆ ವಶಕ್ಕೆ ಪಡೆದಿದ್ದಾರೆ. ಕಾರು ಅಡ್ಡಗಟ್ಟಿ ಹಣ ದರೋಡೆ ಮಾಡಿದ ಪ್ರಕರಣದಲ್ಲಿ ಭಾಗಿಯಾದ ಆರೋಪಿಗಳಾದ ದಕ್ಷಿಣ ಕನ್ನಡ ಮೂಲಕ ಫಾರೂಕ್ ಮತ್ತು ಭರತ್‌ ಶೆಟ್ಟಿ ಎಂಬುವವರ ಮೇಲೆಯೆ ಗುಂಡು ಹಾರಿಸಲಾಗಿದೆ. ಈ ವೇಳೆ ಮಹಿಳಾ ಎಸ್‌ಐ ಹಾಗೂ ಮತ್ತಿಬ್ಬರು ಅಧಿಕಾರಿಗಳಿಗೆ ಗಾಯಗಳಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ.

ಏನಿದು ಘಟನೆ

ಇತ್ತೀಚೆಗೆ ಸುಮಾರು ಹತ್ತರಿಂದ ಹನ್ನೆರಡು ಜನರು ಎರಡು ವಾಹನದಲ್ಲಿ ಬಂದು ರಾಹುಲ್ ಕಾರ್ ಅಡ್ಡಗಟ್ಟಿ ಸುಮಾರು 6.50 ಲಕ್ಷ ರೂ. ನಗದು ಹಣ ಹಾಗೂ ಮೊಬೈಲ್ ಹಾಗೂ ಇತರ ಪರಿಕರಗಳನ್ನು ದರೋಡೆ ಮಾಡಿದ್ದು,ಈ ಪ್ರಯುಕ್ತ ಹುಬ್ಬಳ್ಳಿ ನಗರ ಠಾಣೆಯಲ್ಲಿ ದರೋಡೆ ಪ್ರಕರಣ ದಾಖಲಾಗಿತ್ತು. ಈ ಪ್ರಕರಣದ ತನಿಖೆ ಕೈಗೊಂಡು ಆರೋಪಿಗಳ ಪತ್ತೆ ಹಚ್ಚಲು ಸಿಸಿಬಿ ಇನ್ಸಪೆಕ್ಟರ್ ಗುಳ್ಳಾರಿ ನೇತೃತ್ವದಲ್ಲಿ ತಂಡ ರಚಿಸಲಾಗಿತ್ತು.

ಈ ಪ್ರಕರಣದಲ್ಲಿ ಕರ್ನಾಟಕ ಮಾತ್ರವಲ್ಲದೇ ಮಹಾರಾಷ್ಟ್ರ, ಕೇರಳದ ಕೆಲವರು ಭಾಗಿಯಾಗಿರುವ ಶಂಕೆಯ ಮೇಲೆ ಹುಬ್ಬಳ್ಳಿ ಧಾರವಾಡ ಪೊಲೀಸರು ತನಿಖೆಯನ್ನು ಚುರುಕುಗೊಳಿಸಿದ್ದರು. ಇಡೀ ಪ್ರಕರಣದ ತನಿಖೆಯನ್ನು ಸಿಸಿಬಿಗೆ ವಹಿಸಲಾಗಿತ್ತು. ಸಿಸಿಬಿಯಿಂದ ತನಿಖೆಗೆ ತಂಡಗಳನ್ನು ರಚಿಸಲಾಗಿತ್ತು.

ಬಂಧಿಸಿದ ಪೊಲೀಸರು

ಖಚಿತ ಮಾಹಿತಿ ಮೇರೆಗೆ ಹುಬ್ಬಳ್ಳಿ ಪೊಲೀಸರ ತಂಡವು ಮಂಗಳೂರಿನಲ್ಲಿ ಇಬ್ಬರನ್ನು ಬಂಧಿಸಿತ್ತು. ಹುಬ್ಬಳ್ಳಿಯಲ್ಲಿ ಕೃತ್ಯ ನಡೆದ ಸ್ಥಳ ಮಹಜರು ನಡೆಸಲು ಪಂಚರೊಂದಿಗೆ ತೆರಳಿದಾಗ ಆರೋಪಿಗಳು ಪೊಲೀಸರ ಹಲ್ಲೆ ನಡೆಸಿ ಪರಾರಿಯಾಗುವ ಯತ್ನದಲ್ಲಿ ಗುಂಡು ಹಾರಿಸಲಾಗಿದೆ. ಈ ವೇಳೆ ಎರಡೂ ಕಡೆಯಿಂದಲೂ ಗುಂಡಿನ ದಾಳಿಯಾಗಿದೆ.ಮೊದಲು ದರೋಡೆಕೋರರು ಗುಂಡು ಹಾರಿಸಿದ್ದು ಪ್ರತಿಯಾಗಿ ಪೊಲೀಸರು ದಾಳಿ ಮಾಡಿದ್ದಾರೆ. ಈ ವೇಳೆ ಪೊಲೀಸರಿಗೆ ಗಾಯಗಳಾದರೂ ಲೆಕ್ಕಿಸದೇ ಆರೋಪಿಗಳನ್ನು ಹಿಡಿದಿದ್ದರು.

ಘಟನೆಯಲ್ಲಿ ಗಾಯಗೊಂಡ ಶಹರ ಪೊಲೀಸ್ ಠಾಣೆಯ ಪಿಎಸ್‌ಐ ಸ್ವಾತಿ ಮುರಾರಿ, ಸಿಸಿಬಿಯ ಮಹಾಂತೇಶ್ ಮಾದರ್, ಶ್ರೀಕಾಂತ ತಲ್ಲೂರ ಹಾಗೂ ಗಾಯಗೊಂಡ ಆರೋಪಿಗಳನ್ನ ಕಿಮ್ಸ್ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಕುಖ್ಯಾತರ ತಂಡ

ಆರೋಪಿತ ಫಾರುಕ್ ಮೇಲೆ ಕೊಲೆ, ದರೋಡೆ,ಸುಲಿಗೆ ಸೇರಿದಂತೆ ಒಟ್ಟು14 ಪ್ರಕರಣಗಳು ಹಾಗೂ ಭರತ್ ಕುಮಾರ್ ಶೆಟ್ಟಿ ಮೇಲೆ ದರೋಡೆ,ಕೊಲೆ ಯತ್ನ ಸೇರಿ ಇತರೆ 3 ಪ್ರಕರಣ ದಾಖಲಾಗಿವೆ.ರಾಜ್ಯ ಹಾಗೂ ಹೊರ ರಾಜ್ಯದ ವಿವಿಧ ಠಾಣೆಗಳಲ್ಲಿ ಇಬ್ಬರ ಮೇಲೆ ಪ್ರಕರಣ ದಾಖಲಾಗಿವೆ.

ಘಟನೆಯಲ್ಲಿ ಇಬ್ಬರನ್ನು ಬಂಧಿಸಿ ಸ್ಥಳ ಮಹಜರು ಮಾಡುವ ವೇಳೆ ಗುಂಡು ಹಾರಿಸಿದ್ದಾರೆ. ಅವರ ಮೇಲೆ ದಾಳಿ ಮಾಡಲಾಗಿದೆ. ಈ ವೇಳೆ ಪೊಲೀಸರಿಗೆ ಗಾಯಗಳಾಗಿವೆ. ಇಡೀ ಪ್ರಕರಣದಲ್ಲಿ ಹೊರ ರಾಜ್ಯದ ಕೆಲವು ಕುಖ್ಯಾತರೂ ಭಾಗಯಾಗಿರುವ ಶಂಕೆಯಿದೆ. ಪ್ರಕರಣದ ತನಿಖೆ ಮುಂದುವರೆದಿದ್ದು. ಇನ್ನಷ್ಟು ಆರೋಪಿಗಳನ್ನು ಬಂಧಿಸಲಾಗುತ್ತದೆ ಎಂದು ಹುಬ್ಬಳ್ಳಿ ಧಾರವಾಡ ನಗರ ಪೊಲೀಸ್‌ ಆಯುಕ್ತ ಶಶಿಕುಮಾರ್‌ ತಿಳಿಸಿದ್ದಾರೆ.

ಇನ್ನು ಹುಧಾ ಪೊಲೀಸ್ ಕಮೀಷನರ್ ಎನ್ ಶಶಿಕುಮಾರ್, ಡಿಸಿಪಿಗಳಾದ ರವೀಶ್, ಮಾಹಾನಿಂಗ ನಂದಗಾವಿ ಕಿಮ್ಸ್ ಗೆ ಭೇಟಿ ನೀಡಿ ಗಾಯಾಳು ಪೊಲೀಸ್ ಸಿಬ್ಬಂದಿ ಆರೋಗ್ಯ ವಿಚಾರಿಸಿದರು.

Whats_app_banner