logo
ಕನ್ನಡ ಸುದ್ದಿ  /  ಕರ್ನಾಟಕ  /  Hassan News: ಹಾಸನಕ್ಕೆ ಕರೆ ತಂದು ಪ್ರಜ್ವಲ್‌ ರೇವಣ್ಣ ತನಿಖೆ ಚುರುಕು,ಅತ್ಯಾಚಾರ ಆರೋಪದ ಸ್ಥಳಗಳ ಮಹಜರು

Hassan News: ಹಾಸನಕ್ಕೆ ಕರೆ ತಂದು ಪ್ರಜ್ವಲ್‌ ರೇವಣ್ಣ ತನಿಖೆ ಚುರುಕು,ಅತ್ಯಾಚಾರ ಆರೋಪದ ಸ್ಥಳಗಳ ಮಹಜರು

Umesha Bhatta P H HT Kannada

Jun 09, 2024 12:42 AM IST

google News

ಹಾಸನದಲ್ಲಿ ಪ್ರಜ್ವಲ್‌ ರೇವಣ್ಣ ಅವರನ್ನು ಕರೆ ತಂದು ಸ್ಥಳ ಮಹಜರು ನಡೆಸಲಾಯಿತು.

  •  Prajwal Revanna ಲೈಂಗಿಕ ದೌರ್ಜನ್ಯ ಹಾಗೂ ಅತ್ಯಾಚಾರ ಆರೋಪ ಪ್ರಕರಣಗಳಲ್ಲಿ ಸಿಲುಕಿರುವ ಹಾಸನ ಮಾಜಿ ಸಂಸದ ಪ್ರಜ್ವಲ್‌ ರೇವಣ್ಣ ಅವರನ್ನು ಶನಿವಾರ ಹಾಸನಕ್ಕೆ ಕರೆ ತರಲಾಗಿತ್ತು.

ಹಾಸನದಲ್ಲಿ ಪ್ರಜ್ವಲ್‌ ರೇವಣ್ಣ ಅವರನ್ನು ಕರೆ ತಂದು ಸ್ಥಳ ಮಹಜರು ನಡೆಸಲಾಯಿತು.
ಹಾಸನದಲ್ಲಿ ಪ್ರಜ್ವಲ್‌ ರೇವಣ್ಣ ಅವರನ್ನು ಕರೆ ತಂದು ಸ್ಥಳ ಮಹಜರು ನಡೆಸಲಾಯಿತು.

ಹಾಸನ: ಲೈಂಗಿಕ ದೌರ್ಜನ್ಯ ಪ್ರಕರಣ ಎದುರಿಸುತ್ತಿರುವ ಮಾಜಿ ಸಂಸದ ಪ್ರಜ್ವಲ್‌ ರೇವಣ್ಣ ಅವರನ್ನು ಶನಿವಾರ ಹೊಳೆ ನರಸೀಪುರ ಹಾಗೂ ಹಾಸನಕ್ಕೆ ವಿಶೇಷ ತನಿಖಾತಂಡ ಕರೆದುಕೊಂಡು ಬಂದು ಸ್ಥಳ ಮಹಜರು ನಡೆಸಿತು. ಪ್ರಜ್ವಲ್‌ ರೇವಣ್ಣ ನಡೆಸಿದ್ದಾರೆ ಎನ್ನಲಾದ ಅತ್ಯಾಚಾರ ದ ಕುರಿತಾದ ದೂರಿನ ಸ್ಥಳಗಳನ್ನು ಪರಿಶೀಲಿಸಿ ಮಾಹಿತಿ ಹಾಗೂ ಸಾಕ್ಷಿಗಳನ್ನು ತನಿಖಾ ತಂಡದ ಪೊಲೀಸರು ಕಲೆ ಹಾಕಿದರು. ಪ್ರಜ್ವಲ್‌ ಅವರಿಂದಲೂ ಮಾಹಿತಿಯನ್ನು ಸಂಗ್ರಹಿಸಿದರು. ಹೊಳೆನರಸೀಪುರದಲ್ಲಿರುವ ಚನ್ನಮ್ಮಾಂಬಿಕ ನಿವಾಸ ಹಾಗೂ ಪ್ರಜ್ವಲ್‌ ಅವರ ಕಚೇರಿ, ಹಾಸನದಲ್ಲೂ ಕಚೇರಿ ಸಹಿತ ಹಲವು ಸ್ಥಳಗಳಲ್ಲಿ ಕರೆದುಕೊಂಡು ಹೋಗಲಾಗಿತ್ತು.

ಹತ್ತು ದಿನದ ಹಿಂದೆಯೇ ವಿದೇಶದಿಂದ ವಾಪಾಸಾಗಿ ಎಸ್‌ಐಟಿಗೆ ಶರಣಾಗಿರುವ ಪ್ರಜ್ವಲ್‌ ರೇವಣ್ಣ ಅವರನ್ನು ಎಸ್‌ಐಟಿ ನಿರಂತರ ವಿಚಾರಣೆಗೆ ಒಳಪಡಿಸಿದೆ. ಈಗಾಗಲೇ ಪ್ರಜ್ವಲ್‌ ರೇವಣ್ಣ ಅವರಿಂದ ಅತ್ಯಾಚಾರ ಹಾಗೂ ಲೈಂಗಿಕ ದೌರ್ಜನ್ಯದ ಪ್ರಕರಣಗಳಲ್ಲಿನ ಪ್ರತೀ ಆರೋಪಗಳ ಮೇಲೆ ಹೇಳಿಕೆ ದಾಖಲಿಸಿಕೊಳ್ಳಲಾಗಿದೆ. ಆನಂತರ ಕಸ್ಟಡಿ ಅವಧಿಯನ್ನು ನ್ಯಾಯಾಲಯ ಸೋಮವಾರದವರೆಗೆ ವಿಸ್ತರಿಸಿದೆ.ಈ ಹಿನ್ನೆಲೆಯಲ್ಲಿ ಎಸ್‌ ಐಟಿ ತಂಡ ಬೆಂಗಳೂರಿನಿಂದ ಭಾರೀ ಭದ್ರತೆಯೊಂದಿಗೆ ಪ್ರಜ್ವಲ್‌ ಅವರನ್ನು ಹೊಳೆ ನರಸೀಪುರ, ಹಾಸನಕ್ಕೆ ಕರೆದುಕೊಂಡು ಬಂದಿತು. ಸುಮಾರು ಆರು ಗಂಟೆಗೂ ಹೆಚ್ಚು ಕಾಲ ಎರಡೂ ಕಡೆಗಳಲ್ಲಿ ಸ್ಥಳ ಮಹಜರು ನಡೆಸಲಾಗಿದೆ.
ಪ್ರಜ್ವಲ್‌ ಅವರನ್ನು ಕರೆ ತರುವ ಮಾಹಿತಿ ತಿಳಿದು ಹೊಳೆನರಸೀಪುರ, ಹಾಸನ ಸಹಿತ ಹಲವು ಕಡೆ ಭಾರೀ ಜನ ಸೇರಿತ್ತು. ಆದರೂ ಪೊಲೀಸ್‌ ಭದ್ರತೆಯಲ್ಲಿ ಪ್ರಜ್ವಲ್‌ ಅವರನ್ನು ಕರೆದೊಯ್ದು ವಿಚಾರಣೆಗೆ ಒಳಪಡಿಸಲಾಯತು. ಈ ವೇಳೆ ಪ್ರಜ್ವಲ್‌ ಘಟನೆಗೆ ಸಂಬಂಧಿಸಿದಂತೆ ಹಾಗೂ ಆರೋಪಗಳ ಕುರಿತಾಗಿ ಎಸ್‌ಐಟಿ ಕೇಳಿದ ಹಲವಾರು ಪ್ರಶ್ನೆಗಳಿಗೆ ಉತ್ತರಿಸಿದರೆ, ಇನ್ನು ಕೆಲವು ಪ್ರಶ್ನೆಗಳಿಗೆ ಮೌನ ವಹಿಸಿದ್ದರು ಎನ್ನಲಾಗಿದೆ.

ಏಕೆಂದರೆ ಪ್ರಜ್ವಲ್‌ ವಿರುದ್ದ ಕೇಳಿಬಂದಿರುವ ಲೈಂಗಿಕ ದೌರ್ಜನ್ಯ ಪ್ರಕರಣಗಳ ಪ್ರಮುಖ ಘಟನಾವಳಿಗಳು ನಡೆದಿರುವುದು ಹೊಳೆ ನರಸೀಪುರದಲ್ಲಿಯೇ. ಈ ಕಾರಣದಿಂದಲೇ ಅಲ್ಲಿಯೇ ಹೆಚ್ಚು ಹೊತ್ತು ಪ್ರಜ್ವಲ್‌ ವಿಚಾರಣೆ ನಡೆದಿದೆ. ಹಾಸನದಲ್ಲಿಯೂ ಮಹಜರು ಕಾರ್ಯ ಮುಂದುವರೆಸಲಾಗಿದೆ.

ಹೊಳೆ ನರಸೀಪುರದಲ್ಲಿ ಹಾಸನ ಜಿಲ್ಲಾ ಹೆಚ್ಚುವರಿ ಎಸ್ಪಿ ವೆಂಕಟೇಶ್‌ ನಾಯ್ಡು ನೇತೃತ್ವದಲ್ಲಿ ಭದ್ರತೆ ವಹಿಸಲಾಗಿತ್ತು. ಆನಂತರ ಹಾಸನದಲ್ಲೂ ಭದ್ರತೆ ಮುಂದುವರಿದಿತ್ತು. ತಮ್ಮದೇ ಕ್ಷೇತ್ರದಲ್ಲಿ ವಿಚಾರಣೆ ನಡೆಸುವಾಗ ಪ್ರಜ್ವಲ್‌ ಮೊಗದಲ್ಲಿ ನಗುವಾಗಲಿ, ಗೆಲುವಿನ ವಾತಾವರಣವಾಗಲಿ ಇರಲಿಲ್ಲ. ಬೇಸರದಲ್ಲಿಯೇ ಪ್ರಜ್ವಲ್‌ ಇದ್ದರು ಎನ್ನಲಾಗಿದೆ.

ಭಾನುವಾರವೂ ಪ್ರಜ್ವಲ್‌ ಅವರ ವಿಚಾರಣೆ, ಧ್ವನಿ ಪರೀಕ್ಷೆಗಳನ್ನು ಕೈಗೊಳ್ಳುವ ಸಾಧ್ಯತೆಯಿದೆ. ಸೋಮವಾರ ನ್ಯಾಯಾಲಯದ ಮುಂದೆ ಹಾಜರುಪಡಿಸಿ ಇನ್ನಷ್ಟು ದಿನ ಕಸ್ಟಡಿಗೆ ನೀಡುವಂತೆ ಎಸ್‌ಐಟಿ ಪರ ಸರ್ಕಾರಿ ಅಭಿಯೋಜಕರು ಕೇಳುವ ಸಾಧ್ಯತೆಯಿದೆ.

ಈ ನಡುವೆ ಭವಾನಿ ರೇವಣ್ಣ ಬಂಧನಕ್ಕೆ ಸಂಬಂಧಿಸಿದ ಚಟುವಟಿಕೆ ನಡೆಸದಂತೆ ಹೈಕೋರ್ಟ್‌ ಸೂಚನೆ ನೀಡಿದೆ. ವಿಚಾರಣೆ ನಡೆಸಿದರೆ ಹೇಳಿಕೆಯನ್ನು ಅವರು ನೀಡಲಿದ್ಧಾರೆ ಎನ್ನುವ ಸೂಚನೆಯನ್ನು ಹೈಕೋರ್ಟ್‌ ನೀಡಿದ್ದಾರೆ.ಇದರಿಂದಾಗಿ ಭವಾನಿ ರೇವಣ್ಣ ಕೂಡ ವಕೀಲರೊಂದಿಗೆ ಎಸ್‌ಐಟಿ ಎದುರು ಹಾಜರಾಗಿ ವಿಚಾರಣೆ ಎದುರಿಸಿದ್ದಾರೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ