ಕರ್ನಾಟಕದ ಸರಕಾರಿ ಉದ್ಯೋಗಿಗಳಿಗೆ ಎಷ್ಟು ರಜೆ ದೊರಕುತ್ತದೆ? ಮಾತೃತ್ವ, ಪಿತೃತ್ವ, ಮಕ್ಕಳ ಕಾಳಜಿ, ಸಂಬಳಸಹಿತ, ಸಂಬಳರಹಿತ ರಜೆಗಳ ವಿವರ
Nov 17, 2024 09:40 AM IST
ಕರ್ನಾಟಕದ ಸರಕಾರಿ ಉದ್ಯೋಗಿಗಳಿಗೆ ಎಷ್ಟು ರಜೆ ದೊರಕುತ್ತದೆ? ಮಾತೃತ್ವ, ಪಿತೃತ್ವ ರಜೆ ವಿವರ
- Karnataka government employees leave rules: ಕರ್ನಾಟಕದ ಸರಕಾರಿ ಉದ್ಯೋಗಿಗಳಿಗೆ ಮಾತೃತ್ವ, ಪಿತೃತ್ವ, ಮಕ್ಕಳ ಕಾಳಜಿ, ಪಿಎಲ್ ಸೇರಿದಂತೆ ಲಭ್ಯವಿರುವ ರಜೆಗಳ ವಿವರ, ರಜೆ ನಿಯಮಗಳ ಮಾಹಿತಿ ಇಲ್ಲಿದೆ.
Karnataka government employees leave rules: ಸರಕಾರಿ ಉದ್ಯೋಗ ದೊರಕಿದರೆ ಜೀವನ ಸುಂದರ ಎಂದು ಬಹುತೇಕರು ಭಾವಿಸುತ್ತಾರೆ. ಗವರ್ನ್‌ಮೆಂಟ್ ಉದ್ಯೋಗ ನೀಡುವ ವೇತನ, ಸೌಕರ್ಯಗಳು ಅದಕ್ಕೆ ಪ್ರಮುಖ ಕಾರಣ. ಖಾಸಗಿ ಕಂಪನಿಗಳಿಗೆ ಹೋಲಿಸಿದರೆ ಸರಕಾರಿ ಉದ್ಯೋಗಿಗಳಿಗೆ ರಜೆ ನಿಯಮಗಳೂ ಉತ್ತಮವಾಗಿರುತ್ತವೆ. ಕರ್ನಾಟಕ ಸರಕಾರದ ಉದ್ಯೋಗಿಗಳಿಗೆ ವರ್ಷಕ್ಕೆ ಎಷ್ಟು ರಜೆ ದೊರಕುತ್ತದೆ? ವೇತನ ಸಹಿತ ರಜೆ ಎಷ್ಟು ದೊರಕುತ್ತದೆ? ಅರ್ಧ ವೇತನದ ರಜೆ ದೊರಕುತ್ತದೆಯೇ? ಉದ್ಯೋಗಕ್ಕೆ ಹಾಜರಾಗದೆ ಎಷ್ಟು ದಿನ ಇರಬಹುದು? ಮಾತೃತ್ವ, ಪಿತೃತ್ವ, ಮಕ್ಕಳ ಕಾಳಜಿಗೆ ತಂದೆ ಮತ್ತು ತಾಯಿಗೆ ಎಷ್ಟು ದಿನಗಳು ರಜೆ ದೊರಕುತ್ತವೆ? ಇತ್ಯಾದಿ ಹಲವು ಪ್ರಶ್ನೆಗಳಿಗೆ ಉತ್ತರ ಪಡೆಯೋಣ ಬನ್ನಿ.
ಕರ್ನಾಟಕ ಸರಕಾರಿ ಉದ್ಯೋಗಿಗಳಿಗೆ ವರ್ಷಕ್ಕೆ ಎಷ್ಟು ರಜೆ ದೊರಕುತ್ತದೆ?
ಕರ್ನಾಟಕದ ಸರಕಾರಿ ಉದ್ಯೋಗಿಗಳಿಗೆ ವರ್ಷಕ್ಕೆ ಪಿಎಲ್, ಡಿಎಲ್ ಎಂದೆಲ್ಲ ಸಾಕಷ್ಟು ರಜೆ ದೊರಕುತ್ತದೆ. ಕರ್ನಾಟಕ ಸರಕಾರವು ತನ್ನ ಉದ್ಯೋಗಿಗಳಿಗೆ ನೀಡುವ ರಜೆ ಮತ್ತು ಅದಕ್ಕೆ ಸಂಬಂಧಪಟ್ಟ ನಿಯಮಗಳನ್ನು ಈ ಮುಂದೆ ನೀಡಲಾಗಿದೆ.
- ವೇತನ ಸಹಿತ ರಜೆ: ವೈಯಕ್ತಿಕ ಅಥವಾ ವೈದ್ಯಕೀಯ ಕೃಣದಿಂದ ಗರಿಷ್ಠ 180 ದಿನಗಳ ಕಾಲ ವೇತನ ಸಹಿತ ರಜೆ ಪಡೆಯಬಹುದಾಗಿದೆ.
- ಅರ್ಧ ವೇತನ ರಜೆ: ವೈಯಕ್ತಿಕ ಅಥವಾ ವೈದ್ಯಕೀಯ ಕಾರಣಗಳಿಂದ ನಿರ್ದಿಷ್ಟ ದಿನಗಳಲ್ಲಿ ಹತ್ತು ಅರ್ಧ ವೇತನದ ರಜೆಗಳನ್ನೂ ಪಡೆಯಬಹುದು.
- ಕಮ್ಯುಟೇಡ್ ಲೀವ್: ಅರ್ಧ ವೇತನದ ರಜೆ ಮುಗಿದ ಬಳಿಕ ಕಮ್ಯುಟೇಡ್ ಲೀವ್ ಪಡೆಯುವ ಅವಕಾಶವೂ ಇದೆ.
- ಲೀವ್ ನಾಟ್ ಡ್ಯೂ: ಒಟ್ಟಾರೆ ಸೇವಾ ಅವಧಿಯಲ್ಲಿ 360 ದಿನಗಳಿಗಿಂತ ಹೆಚ್ಚಿಲ್ಲದಂತೆ (ವೈದ್ಯಕೀಯ ಸರ್ಟಿಫಿಕೇಟ್ ಆಧಾರದಲ್ಲಿ) ರಜೆ ಪಡೆಯುವ ಅವಕಾಶವಿದೆ.
- ಸ್ಪೆಷಲ್ ಡಿಸೆಬಲಿಟಿಟಿ ಲೀವ್: ಇತರೆ ರಜೆಗಳ ಜತೆ ಕಂಬೈನ್ಡ್ ಮಾಡಿ ಪಡೆಯಲು ಅವಕಾಶವಿದೆ.
- ಮಾತೃತ್ವ ರಜೆ: 180 ದಿನಗಳ ಕಾಲ ಮಾತೃತ್ವ ರಜೆ ದೊರಕುತ್ತದೆ.
- ಪಿತೃತ್ವ ರಜೆ: ಮಗು ಜನಿಸಿದ ಆರು ತಿಂಗಳೊಳಗೆ 15 ದಿನಗಳ ಕಾಲ ಪಿತೃತ್ವ ರಜೆ ಪಡೆಯಲು ಅವಕಾಶವಿದೆ. ಇಬ್ಬರು ಮಕ್ಕಳಿಗೆ ಮಾತ್ರ ಅವಕಾಶ.
- ಮಗು ದತ್ತು ಪಡೆದರೆ, ಪಿತೃತ್ವ ರಜೆ: ಆರು ತಿಂಗಳೊಳಗೆ 15 ದಿನಗಳ ಕಾಲ ಪಿತೃತ್ವ ರಜೆ ಪಡೆಯಲು ಅವಕಾಶವಿದೆ.
- ಮಕ್ಕಳ ಕಾಳಜಿ ರಜೆ: ಮಹಿಳಾ ಅಧಿಕಾರಿಗಳಿಗೆ ಇಬ್ಬರು ಮಕ್ಕಳಿಗೆ ಸೇರಿದಂತೆ ಮಕ್ಕಳ 18 ವರ್ಷದವರೆಗೆ ಒಟ್ಟು 730 ದಿನಗಳ ಕಾಲ ಮಕ್ಕಳ ಕಾಳಜಿ ರಜೆ ಪಡೆಯಲು ಅವಕಾಶವಿದೆ.
- ಎಷ್ಟು ದಿನ ಸರಕಾರಿ ಉದ್ಯೋಗಿಗಳು ಕೆಲಸಕ್ಕೆ ರಜೆ ಹಾಕಬಹುದು?: ಐದು ವರ್ಷಕ್ಕಿಂತ ಹೆಚ್ಚು ಕಾಲ ರಜೆ ಹಾಕಲು ಅವಕಾಶವಿಲ್ಲ. ಅಷ್ಟು ದಿನ ಕಚೇರಿಗೆ ಬಾರದೆ ಇದ್ದರೆ ಅವರನ್ನು ಉದ್ಯೋಗದಿಂತ ತೆಗೆದುಹಾಕಬಹುದು.
ಕರ್ನಾಟಕ ಸರಕಾರದ ಉದ್ಯೋಗಿಗಳಿಗೆ ಇರುವ ರಜೆ ನಿಯಮಗಳ ಕುರಿತು ಹೆಚ್ಚಿನ ವಿವರ ಪಡೆಯಲು ಕರ್ನಾಟಕ ಸರಕಾರದ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ ಸೇವೆಗಳ ವೆಬ್‌ಸೈಟ್‌ಗೆ ಭೇಟಿ ನೀಡಿ.