logo
ಕನ್ನಡ ಸುದ್ದಿ  /  ಕರ್ನಾಟಕ  /  Agniveer Army Recruitment 2024: ಕೊಪ್ಪಳದಲ್ಲಿ ನವೆಂಬರ್‌ 26 ರಿಂದ ಅಗ್ನಿವೀರ್‌ ನೇಮಕಾತಿ ರ್‍ಯಾಲಿ; ಯಾವ ಜಿಲ್ಲೆಯವರು ಭಾಗಿಯಾಗಲು ಅವಕಾಶ

Agniveer army recruitment 2024: ಕೊಪ್ಪಳದಲ್ಲಿ ನವೆಂಬರ್‌ 26 ರಿಂದ ಅಗ್ನಿವೀರ್‌ ನೇಮಕಾತಿ ರ್‍ಯಾಲಿ; ಯಾವ ಜಿಲ್ಲೆಯವರು ಭಾಗಿಯಾಗಲು ಅವಕಾಶ

Umesha Bhatta P H HT Kannada

Oct 10, 2024 11:22 AM IST

google News

ಕೊಪ್ಪಳದಲ್ಲಿ ಅಗ್ನಿವೀರ್‌ ನೇಮಕಾತಿ ರ್‍ಯಾಲಿ ನಡೆಯಲಿದ್ದು, ಇದಕ್ಕಾಗಿ ಸಿದ್ದತೆ ಮಾಡಿಕೊಳ್ಳಲಾಗುತ್ತಿದೆ.

    • ಕೊಪ್ಪಳ ಜಿಲ್ಲಾ ಕ್ರೀಡಾಂಗಣದಲ್ಲಿ 2024ರ ನವೆಂಬರ್‌26ರಿಂದ ಅಗ್ನಿವೀರ್‌ ನೇಮಕಾತಿ ರ್‍ಯಾಲಿಯು ನಡೆಯಲಿದ್ದು. ಉತ್ತರ ಕರ್ನಾಟಕದ ಆರು ಜಿಲ್ಲೆಯವರು ಭಾಗಿಯಾಗಬಹುದು.
ಕೊಪ್ಪಳದಲ್ಲಿ ಅಗ್ನಿವೀರ್‌ ನೇಮಕಾತಿ ರ್‍ಯಾಲಿ ನಡೆಯಲಿದ್ದು, ಇದಕ್ಕಾಗಿ ಸಿದ್ದತೆ ಮಾಡಿಕೊಳ್ಳಲಾಗುತ್ತಿದೆ.
ಕೊಪ್ಪಳದಲ್ಲಿ ಅಗ್ನಿವೀರ್‌ ನೇಮಕಾತಿ ರ್‍ಯಾಲಿ ನಡೆಯಲಿದ್ದು, ಇದಕ್ಕಾಗಿ ಸಿದ್ದತೆ ಮಾಡಿಕೊಳ್ಳಲಾಗುತ್ತಿದೆ.

ಬೆಂಗಳೂರು: ಕೊಪ್ಪಳದಲ್ಲಿ ಅಗ್ನಿವೀರ್‌ ನೇಮಕಾತಿ ರ್‍ಯಾಲಿಯು 2024ರ ನವೆಂಬರ್ 26 ರಿಂದ ಡಿಸೆಂಬರ್ 08 ರವರೆಗೆ ನಡೆಯಲಿದೆ. ಈಗಾಗಲೇ ಅರ್ಜಿ ಸಲ್ಲಿಸಿ ಸಾಮಾನ್ಯ ಪ್ರವೇಶ ಪರೀಕ್ಷೆ ಎದುರಿಸಿ ಉತ್ತೀರ್ಣರಾದವರು ರ್‍ಯಾಲಿಯಲ್ಲಿ ಭಾಗವಹಿಸಲು ಅವಕಾಶವಿದೆ ಎಂದು ಸೇನಾ ನೇಮಕಾತಿ ಕಚೇರಿ ತಿಳಿಸಿದೆ.

ಕೊಪ್ಪಳ ಜಿಲ್ಲಾ ಕ್ರೀಡಾಂಗಣದಲ್ಲಿ ಅಗ್ನಿವೀರ್ ನೇಮಕಾತಿ ರ್‍ಯಾಲಿಯನ್ನು ಬೆಳಗಾವಿಯ ಸೇನಾ ನೇಮಕಾತಿ ಕಛೇರಿ, ಬೆಳಗಾವಿಯ ಪ್ರಧಾನ ನೇಮಕಾತಿ ವಲಯ, ಬೆಂಗಳೂರು ಮತ್ತು ಸಿವಿಲ್ ಅಡ್ಮಿನಿಸ್ಟ್ರೇಷನ್ ಸಮಿತಿಯಿಂದ ಆಯ್ಕೆಯಾದ ಅಭ್ಯರ್ಥಿಗಳಿಗೆ ಆಯೋಜಿಸಲಾಗಿದೆ.

ಕರ್ನಾಟಕದ ಬೆಳಗಾವಿ, ಬೀದರ್‌, ಕಲಬುರ್ಗಿ, ಯಾದಗಿರಿ, ರಾಯಚೂರು ಮತ್ತು ಕೊಪ್ಪಳ ಜಿಲ್ಲೆಗಳ ಅಭ್ಯರ್ಥಿಗಳು ರ್‍ಯಾಲಿಯಲ್ಲಿ ಭಾಗಿಯಾಗಬಹುದು.

ಅಗ್ನಿವೀರ್ ಜನರಲ್ ಡ್ಯೂಟಿ, ಅಗ್ನಿವೀರ್ ಟೆಕ್ನಿಕಲ್, ಅಗ್ನಿವೀರ್ ಟ್ರೇಡ್ಸ್‌ಮ್ಯಾನ್ 10 ನೇ ತೇರ್ಗಡೆ, ಅಗ್ನಿವೀರ್ ಟ್ರೇಡ್ಸ್‌ಮ್ಯಾನ್ 8 ನೇ ತೇರ್ಗಡೆ, ಅಗ್ನಿವೀರ್ ಕ್ಲರ್ಕ್/ ಸ್ಟೋರ್ ಕೀಪರ್ ಟೆಕ್ನಿಕಲ್ ವಿಭಾಗಗಳು/ ಸೇನೆಗೆ ಪ್ರವೇಶಕ್ಕಾಗಿ ರ್‍ಯಾಲಿಯನ್ನು ಆಯೋಜಿಸಲಾಗಿದೆ.

12 ಫೆಬ್ರವರಿ 2024 ರಂದು ಬೆಳಗಾವಿಯ ಸೇನಾ ನೇಮಕಾತಿ ಕಛೇರಿಯು ಪ್ರಕಟಿಸಿದ ರ್ಯಾಲಿ ಅಧಿಸೂಚನೆಯ ಪ್ರಕಾರ, ವಯಸ್ಸು, ಶಿಕ್ಷಣ ಅರ್ಹತೆ ಮತ್ತು ಸೇನೆಯಲ್ಲಿ ನಿಗದಿತ ವಿಭಾಗಗಳಲ್ಲಿ ದಾಖಲಾತಿಗಾಗಿ ಇತರ ಮಾನದಂಡಗಳ ವಿವರಗಳನ್ನು ನೀಡಲಾಗಿದೆ.

ಇದಲ್ಲೇ ಈಗಾಗಲೇ ನಡೆಸಲಾದ ಆನ್‌ಲೈನ್ ಸಾಮಾನ್ಯ ಪ್ರವೇಶ ಪರೀಕ್ಷೆಯ ಫಲಿತಾಂಶವನ್ನುwww.joinindianarmy.nic.in. ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗಿದೆ.

10 ಅಕ್ಟೋಬರ್ 2024 ರಿಂದ ಜಾರಿಗೆ ಬರುವಂತೆ ಶಾರ್ಟ್‌ಲಿಸ್ಟ್ ಮಾಡಿದ ಅಭ್ಯರ್ಥಿಗಳಿಗೆ ಪ್ರವೇಶ ಕಾರ್ಡ್‌ಗಳನ್ನು ನೀಡಲಾಗುತ್ತದೆ. ಇದು ಅವರ ವೈಯಕ್ತಿಕ ಖಾತೆ ಮತ್ತು ನೋಂದಾಯಿತ ಇಮೇಲ್ ಐಡಿಗೆ ಲಾಗ್ ಇನ್ ಮಾಡುವ ಮೂಲಕ ಪ್ರವೇಶಿಸುವ ಭಾರತೀಯ ಸೇನೆಯ ಸೇರ್ಪಡೆಯ ವೆಬ್‌ಸೈಟ್‌ನಲ್ಲಿಯೂ ಸಹ ಲಭ್ಯವಿರಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಅಗ್ನೀವೀರ್‌ ನೇಮಕಾತಿ ರ್‍ಯಾಲಿಗೆ ಆಯ್ಕೆಯಾದ ಅಭ್ಯರ್ಥಿಗಳು ಯಾವುದೇ ದುಶ್ಚಟಗಳಿಗೆ ಅಥವಾ ಮಧ್ಯವರ್ತಿಗಳಿಗೆ ಬಲಿಯಾಗದಂತೆ ಸೂಚಿಸಲಾಗಿದೆ. ಆನ್‌ಲೈನ್ ಸಿಇಇ ಸಮಯದಲ್ಲಿ ಅಭ್ಯರ್ಥಿಗಳ ಕಾರ್ಯಕ್ಷಮತೆ, ನೇಮಕಾತಿ ರ್‍ಯಾಲಿಯಲ್ಲಿ ನಡೆಸಿದ ಪರೀಕ್ಷೆಗಳು ಮತ್ತು ಅಂತಿಮ ಅರ್ಹತೆಯ ಮೇಲೆ ಆಯ್ಕೆಯಾಗಿರುವುದರಿಂದ ಯಾವುದೇ ಹಣದ ಆಮಿಷ ಅಥವಾ ಒತ್ತಡಗಳಿಗೆ ಅಭ್ಯರ್ಥಿಗಳು ಬಲಿಯಾಬಾರದು ಎಂದು ಸೂಚಿಸಲಾಗಿದೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ