IRCTC Balaji Darshan Package: ಐಆರ್‌ಸಿಟಿಸಿ ಬಾಲಾಜಿ ದರ್ಶನ; ಬೆಂಗಳೂರಿನಿಂದ ನಿತ್ಯ ಉಂಟು ತಿರುಪತಿ ಪ್ರವಾಸ, ವಿವರ ಹೀಗಿದೆ
Oct 10, 2024 01:24 PM IST
ಬೆಂಗಳೂರಿನಿಂದ ತಿರುಪತಿ ತಿರುಮಲ ಬಾಲಾಜಿ ದರ್ಶನ ಐಆರ್‌ಸಿಟಿಸಿ ಪ್ಯಾಕೇಜ್ ಇದೆ.
- IRCTC Balaji Darshan Package ಬೆಂಗಳೂರಿನಿಂದ ತಿರುಪತಿ ತಿರುಮಲ ಬಾಲಾಜಿ ದರ್ಶನಕ್ಕೆ ವಿಶೇಷ ಪ್ಯಾಕೇಜ್ ಅನ್ನು ಭಾರತೀಯ ರೈಲ್ವೆ ಆಹಾರ ಮತ್ತು ಪ್ರವಾಸೋದ್ಯಮ ಕಾರ್ಪೊರೇಷನ್ ( IRCTC ) ನಿರ್ವಹಿಸುತ್ತಿದೆ. ಇದರ ವಿವರ ಇಲ್ಲಿದೆ.
ಬೆಂಗಳೂರು: ಬೆಂಗಳೂರಿನಿಂದ ನೇರವಾಗಿ ತಿರುಪತಿ ತಿರುಮಲಕ್ಕೆ ತೆರಳಿ ಶ್ರೀ ವೆಂಕಟೇಶ್ವರನ ಶೀಘ್ರ ದರ್ಶನ ಮಾಡಬೇಕೇ. ತಿರುಪತಿಯಲ್ಲಿ ಧಾರ್ಮಿಕ ಚಟುವಟಿಕೆ ಕೈಗೊಳ್ಳಬೇಕೇ, ತಿರುಪತಿ ಸುತ್ತಮುತ್ತಲಿನ ಪ್ರವಾಸಿ ತಾಣಗಳನ್ನು ಒಂದೇ ದಿನದಲ್ಲಿ ವೀಕ್ಷಣೆ ಮಾಡಬೇಕೇ. ಇದಕ್ಕಾಗಿ ಭಾರತೀಯ ರೈಲ್ವೆ ಆಹಾರ ಮತ್ತು ಪ್ರವಾಸೋದ್ಯಮ ಕಾರ್ಪೊರೇಷನ್ ( IRCTC ) ಬೆಂಗಳೂರಿನಿಂದ ಶೀಘ್ರ ತಿರುಪತಿ ಬಾಲಾಜಿ ದರ್ಶನ ಪ್ಯಾಕೇಜ್ ಅನ್ನು ಒದಗಿಸಿದೆ. ಭಕ್ತರು ಹಾಗೂ ಪ್ರವಾಸಿಗರು ಬೆಂಗಳೂರಿನಿಂದ ಹೊರಟು ಒಂದೇ ದಿನದಲ್ಲಿ ತಿರುಪತಿ ಬಾಲಾಜಿ ದರ್ಶನ ಪಡೆದುಕೊಂಡು ರಾತ್ರಿ ಹೊತ್ತಿಗೆ ವಾಪಾಸಾಗಬಹುದು ಎಂದು ಐಆರ್‌ಸಿಟಿಸಿ ತಿಳಿಸಿದೆ.
ಭಾರತೀಯ ರೈಲ್ವೆ ಆಹಾರ ಮತ್ತು ಪ್ರವಾಸೋದ್ಯಮ ಕಾರ್ಪೊರೇಷನ್ ( IRCTC ) ಭಾರತೀಯ ಸಾರ್ವಜನಿಕ ವಲಯದ ಉದ್ಯಮವಾಗಿದ್ದು , ಸರ್ಕಾರಿ ಸ್ವಾಮ್ಯದ ಭಾರತೀಯ ರೈಲ್ವೇಗಳಿಗೆ ಟಿಕೆಟ್, ಅಡುಗೆ ಮತ್ತು ಪ್ರವಾಸೋದ್ಯಮ ಸೇವೆಗಳನ್ನು ಒದಗಿಸುತ್ತದೆ. ಭಾರತ ಸರ್ಕಾರವು 1999 ರಲ್ಲಿ ಸ್ಥಾಪಿಸಿದ್ದು ರೈಲ್ವೇ ಸಚಿವಾಲಯದ ಆಡಳಿತಾತ್ಮಕ ನಿಯಂತ್ರಣದಲ್ಲಿ ಕಾರ್ಯನಿರ್ವಹಿಸುತ್ತದೆ.
ಪ್ರತಿ ವರ್ಷ ಭಾರತ, ವಿದೇಶದ ಪ್ರವಾಸಗಳು, ಪರಿಸರ, ಧಾರ್ಮಿಕ ಪ್ರವಾಸೋದ್ಯಮ ಚಟುವಟಿಕೆಗಳನ್ನು ನಿರ್ವಹಿಸುತ್ತಿದೆ. ಲಕ್ಷಾಂತರ ಮಂದಿ ಐಆರ್‌ಸಿಟಿಸಿ ಅಡಿ ಪ್ರವಾಸ ಮಾಡುತ್ತಾರೆ ಎನ್ನುವುದು ನಿಗಮದ ಅಧಿಕಾರಿಗಳ ವಿವರಣೆ.
ತಿರುಪತಿ ಬಾಲಾಜಿ ದರ್ಶನ ಪ್ರವಾಸ ವಿವರ ಹೀಗಿದೆ
- ಪ್ರತಿದಿನ ರಾತ್ರಿ 09:30 ಕ್ಕೆ ಬೆಂಗಳೂರು ನಗರದ ಆನಂದ ರಾವ್ ಸರ್ಕಲ್, ಹೋಟೆಲ್ ಸಂಧ್ಯಾ ರೆಸಿಡೆನ್ಸಿ ಎದುರಿನಿಂದ ತಿರುಪತಿ ಬಾಲಾಜಿ ದರ್ಶನ ಪ್ಯಾಕೇಜ್ ಆರಂಭವಾಗಲಿದೆ. ಇಲ್ಲಿಂದಲೇ ಬಸ್ ನಿರ್ಗಮಿಸಲಿದೆ.
- ಆರು ಗಂಟೆ ಪ್ರವಾಸದ ನಂತರ ಬೆಳಗಿನ ಜಾವ 03.30ಗಂಟೆಗೆ ತಿರುಪತಿಗೆ ಬಸ್ ಆಗಮಿಸಲಿದೆ. ತಿರುಪತಿ ಹೋಟೆಲ್‌ನಲ್ಲಿ ಫ್ರೆಶ್ ಅಪ್ ಗೆ ಅವಕಾಶ ಮಾಡಿಕೊಡಲಾಗುತ್ತದೆ.
- ಅಲ್ಲಿಂದ ತಿರುಚಾನೂರ್ ದೇವಸ್ಥಾನಕ್ಕೆ ಭೇಟಿ ನೀಡಲು ಪ್ರವಾಸ ಆರಂಭವಾಗಲಿದೆ. ಬಳಿಕ ಅಲಮೇಲು ಮಂಗಾಪುರದ ಪದ್ಮಾವತಿ ದೇವಿಯ ದರ್ಶನಕ್ಕೂ ಅವಕಾ ಮಾಡಿಕೊಡಲಾಗುತ್ತಿದೆ.
- ಬೆಳಿಗ್ಗೆ 08ರ ಸುಮಾರಿಗೆ ತಿರುಪತಿಯಿಂದ ತಿರುಮಲಕ್ಕೆ ನಾನ್ ಎಸಿ ಬಸ್‌ನಲ್ಲಿ ಪ್ರಯಾಣ ಆರಂಭವಾಗಲಿದೆ.
ಇದನ್ನೂ ಓದಿರಿ: ಐಆರ್‌ಸಿಟಿಸಿ ಹನಿಮೂನ್ ಪ್ಯಾಕೇಜ್ - ಕೇಶ ಮುಂಡನಕ್ಕೆ ಬೆಳಿಗ್ಗೆ ಅವಕಾಶ ಮಾಡಿಕೊಡಲಾಗುತ್ತದೆ.
- ಸ್ನಾನದ ನಂತರ ಬೆಳಿಗ್ಗೆ 10.30 ರಿಂದ ಮಧ್ಯಾಹ್ನ 01.30 ರವರೆಗೆ ವೆಂಕಟೇಶ್ವರನ ಶೀಘ್ರ ದರ್ಶನವನ್ನು ಮಾಡಿ. ನಂತರ ಲಡ್ಡು ಪ್ರಸಾದವನ್ನು ಸಂಗ್ರಹಿಸಿ ಮಧ್ಯಾಹ್ನ 02 ರ ಸುಮಾರಿಗೆ ತಿರುಪತಿಗೆ ಹಿಂತಿರುಗಲಾಗುತ್ತದೆ. ಅಲ್ಲಿ ಊಟದ ಬಿಡುವು ಇರಲಿದೆ.
- ತಿರುಪತಿಯಿಂದ ಮಧ್ಯಾಹ್ನ 03 ರ ಸುಮಾರಿಗೆ ಹೊರಟು ಮತ್ತು ರಾತ್ರಿ 09 ರ ಸುಮಾರಿಗೆ ಬೆಂಗಳೂರು ನಗರಕ್ಕೆ ತಲುಪಲಿದೆ. ಅಲ್ಲಿಗೆ ತಿರುಪತಿ ಬಾಲಾಜಿ ಪ್ರವಾಸ ಕೊನೆಗೊಳ್ಳುತ್ತದೆ.
- ಈ ಪ್ಯಾಕೇಜ್ ನಡಿ ಪ್ರತಿಯೊಬ್ಬರಿಗೆ 1,930 ದರ ನಿಗದಿಪಡಿಸಲಾಗಿದೆ.
ಇದನ್ನೂ ಓದಿರಿ: Indian Railways: ಮುರ್ಡೇಶ್ವರ, ಕುಂದಾಪುರ, ಉಡುಪಿಯಿಂದ ತಿರುಪತಿಗೆ ರೈಲು: ಮಂಗಳೂರು ರೈಲು ಸೇವೆ ವಿಸ್ತರಣೆಗೆ ಸಮ್ಮತಿ
ಪ್ಯಾಕೇಜ್‌ನಲ್ಲಿ ಏನೇನಿದೆ
- ಮಲ್ಟಿ ಆಕ್ಸಲ್ ಎಸಿ ಬಸ್‌ನಲ್ಲಿ ಪ್ರಯಾಣ.
- ಸ್ನಾನಕ್ಕಾಗಿ ಹೋಟೆಲ್‌ನಲ್ಲಿ ಮೂವರು ಶೇರಿಂಗ್ ಆಧಾರದಲ್ಲಿ ವ್ಯವಸ್ಥೆ.
- ಎಪಿಎಸ್‌ಆರ್‌ಟಿಸಿ ನಾನ್ ಎಸಿ ಲಿಂಕ್ ಬಸ್ ಮೂಲಕ ತಿರುಪತಿಯಿಂದ ತಿರುಮಲಕ್ಕೆ ಪಯಣ
- ತಿರುಮಲ ಬಾಲಾಜಿ ಶೀಘ್ರ ದರ್ಶನ ಟಿಕೆಟ್
- ತಿರುಪತಿಯಲ್ಲಿ ಪ್ರವಾಸಿ ಮಾರ್ಗದರ್ಶಿಯ ಸೇವೆಗಳು
- ಪ್ರಯಾಣದ ಪ್ರಕಾರ ದೇವಾಲಯಗಳಿಗೆ ಭೇಟಿ ನೀಡಿ
- 500 ಮಿಲಿ ಪ್ಯಾಕ್ ಎರಡು ಕುಡಿಯುವ ನೀರು
- ಪ್ರಯಾಣ ವಿಮೆ ಹಾಗೂ ಜಿಎಸ್ಟಿ ಇದರಲ್ಲಿ ಸೇರಿದೆ.
ಇಲ್ಲಿಗೆ ಕರೆ ಮಾಡಿ
ಊಟ, ಕೇಶಮುಂಡನ, ಈ ಪ್ರವಾಸ ಹೊರತುಪಡಿಸಿ ಇತರೆಡೆಗೆ ಭೇಟಿಯ ಖರ್ಚುಗಳನ್ನು ಪ್ರವಾಸಿಗರೇ ಭರಿಸಬೇಕಾಗುತ್ತದೆ. ಪ್ರವಾಸದ ಪ್ಯಾಕೇಜ್ ಅನ್ನು ಬುಕ್ ಮಾಡುವ ಮೊದಲು ಐಆರ್‌ಸಿಟಿಸಿ ಪ್ರವಾಸೋದ್ಯಮದಲ್ಲಿ ಒದಗಿಸಲಾದ ಎಲ್ಲಾ ಮಾಹಿತಿಯನ್ನು ಸರಿಯಾಗಿ ಪಡೆದುಕೊಳ್ಳಬೇಕು. ಮಾಹಿತಿಗಾಗಿ ಐಆರ್‌ಸಿಟಿಸಿ ಪ್ರವಾಸೋದ್ಯಮ 1800-110-139 ಸಹಾಯವಾಣಿಗೆ ಕರೆ ಮಾಡಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.