ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  ಕಾಯ್ದಿರಿಸದ ಟಿಕೆಟ್ ಖರೀದಿಸಲು ರೈಲ್ವೆ ನಿಲ್ದಾಣದಲ್ಲಿ ಸರದಿ ಸಾಲು ನಿಲ್ಲಬೇಡಿ; ಯುಟಿಎಸ್ ಆಪ್ ಡೌನ್‌ಲೋಡ್ ಮಾಡಿ ಬುಕ್ ಮಾಡಿ

ಕಾಯ್ದಿರಿಸದ ಟಿಕೆಟ್ ಖರೀದಿಸಲು ರೈಲ್ವೆ ನಿಲ್ದಾಣದಲ್ಲಿ ಸರದಿ ಸಾಲು ನಿಲ್ಲಬೇಡಿ; ಯುಟಿಎಸ್ ಆಪ್ ಡೌನ್‌ಲೋಡ್ ಮಾಡಿ ಬುಕ್ ಮಾಡಿ

ಕಾಯ್ದಿರಿಸದ ಟಿಕೆಟ್ ಖರೀದಿಸಲು ಇನ್ನು ರೈಲ್ವೆ ನಿಲ್ದಾಣಗಳಲ್ಲಿ ಸರದಿ ಸಾಲು ನಿಲ್ಲಬೇಕಾಗಿಲ್ಲ. ಯುಟಿಎಸ್‌ಆನ್‌ಮೊಬೈಲ್‌ ಆಪ್‌ ಮೂಲಕ ಪೇಪರ್‌ಲೆಸ್ ಟಿಕೆಟ್‌ ಖರೀದಿಗೆ ವಿಧಿಸಲಾಗಿದ್ದ ಭೌಗೋಳಿಕ ಮಿತಿಯನ್ನು ತೆರವುಗೊಳಿಸಿದ್ದು, ಈ ಕುರಿತ ವಿವರ ಈ ವರದಿಯಲ್ಲಿದೆ.

ಕಾಯ್ದಿರಿಸದ ಟಿಕೆಟ್ ಖರೀದಿಸಲು ರೈಲ್ವೆ ನಿಲ್ದಾಣದಲ್ಲಿ ಕ್ಯೂ ನಿಲ್ಲಬೇಕಾಗಿಲ್ಲ, ಇದಕ್ಕಾಗಿ ಭಾರತೀಯ ರೈಲ್ವೆ ಯುಟಿಎಸ್‌ ಆಪ್ ಪರಿಚಯಿಸಿದೆ.
ಕಾಯ್ದಿರಿಸದ ಟಿಕೆಟ್ ಖರೀದಿಸಲು ರೈಲ್ವೆ ನಿಲ್ದಾಣದಲ್ಲಿ ಕ್ಯೂ ನಿಲ್ಲಬೇಕಾಗಿಲ್ಲ, ಇದಕ್ಕಾಗಿ ಭಾರತೀಯ ರೈಲ್ವೆ ಯುಟಿಎಸ್‌ ಆಪ್ ಪರಿಚಯಿಸಿದೆ.

ನವದೆಹಲಿ: ಕಾಯ್ದಿರಿಸದ ಟಿಕೆಟ್ ಪಡೆಯುವುದಕ್ಕೆ ಇನ್ನು ರೈಲು ನಿಲ್ದಾಣಗಳ ಟಿಕೆಟ್ ಕೌಂಟರ್‌ ಬಳಿ ಸರದಿ ಸಾಲಲ್ಲಿ ನಿಲ್ಲಬೇಕಾಗಿಲ್ಲ. ಅನ್ ರಿಸರ್ವ್ಡ್ ಟಿಕೆಟಿಂಗ್ ಸಿಸ್ಟಮ್ (UTS) ಮೊಬೈಲ್ ಅಪ್ಲಿಕೇಶನ್ ಅನ್ನು ಸಾರ್ವತ್ರಿಕವಾಗಿ ಎಲ್ಲರ ಬಳಕೆಗೆ ಸಿಗುವಂತೆ ಮಾಡಿರುವ ಭಾರತೀಯ ರೈಲ್ವೆ, ಅದರ ಪ್ರಯೋಜನ ಪಡೆಯುವಂತೆ ರೈಲ್ವೆ ಪ್ರಯಾಣಿಕರಲ್ಲಿ ಮನವಿ ಮಾಡಿದೆ. ಈ ಮೂಲಕ ಕಾಯ್ದಿರಿಸದ ಟಿಕೆಟ್ ಪಡೆಯುವ ವ್ಯವಸ್ಥೆಯನ್ನು ಸರಳಗೊಳಿಸಿದೆ.

ಟ್ರೆಂಡಿಂಗ್​ ಸುದ್ದಿ

ಯುಟಿಎಸ್ ಆನ್ ಮೊಬೈಲ್ (UTSonMobile) ಎಂಬ ಮೊಬೈಲ್ ಅಪ್ಲಿಕೇಶನ್ ಇದಾಗಿದ್ದು, ಜಿಪಿಎಸ್ ಆಧಾರಿತವಾಗಿ ಕೆಲಸ ಮಾಡುತ್ತದೆ. ಇದನ್ನು ಸೆಂಟರ್ ಫಾರ್ ರೈಲ್ವೇ ಇನ್‌ಫಾರ್ಮೇಶನ್‌ ಸಿಸ್ಟಮ್ ಅಭಿವೃದ್ಧಿಪಡಿಸಿದೆ. ಈ ಆಪ್‌ನಲ್ಲಿ ಕಾಯ್ದಿರಿಸದ ಟಿಕೆಟ್ ಖರೀದಿಸಬೇಕಾದರೆ ರೈಲ್ವೆ ನಿಲ್ಧಾಣದ ವ್ಯಾಪ್ತಿಯ ಕನಿಷ್ಠ 15 ಮೀಟರ್ ಮತ್ತು ಗರಿಷ್ಠ 2 ಕಿ.ಮೀ. ಅಂತರದ ಒಳಗೆ ಇರಬೇಕಾದ್ದು ಅಗತ್ಯ. ಆದರೆ, ಇತ್ತೀಚಿನ ಸುತ್ತೋಲೆಯಲ್ಲಿ, ರೈಲ್ವೆ ಮಂಡಳಿಯು ಪ್ರಯಾಣ ಮತ್ತು ಪ್ಲಾಟ್‌ಫಾರ್ಮ್ ಟಿಕೆಟ್‌ಗಳೆರಡಕ್ಕೂ ವಿಧಿಸಲಾಗಿದ್ದ ಗರಿಷ್ಠ ಭೌಗೋಳಿಕ ನಿರ್ಬಂಧವನ್ನು ತೆಗೆದುಹಾಕಲಾಗಿದೆ. ಇದು ತತ್‌ಕ್ಷಣದಿಂದಲೇ ಜಾರಿಗೆ ಬಂದಿದೆ ಎಂದು ಹೇಳಿತ್ತು.

ಗರಿಷ್ಠ ಭೌಗೋಳಿಕ ಮಿತಿ ತೆರವುಗೊಳಿಸಿದ್ದರಿಂದ ಏನಾಯಿತು

ಈ ಬದಲಾವಣೆಯೊಂದಿಗೆ, ಪ್ರಯಾಣಿಕರು ಅವರು ಪ್ರಸ್ತುತ ಇರುವ ಸ್ಥಳವನ್ನು ಲೆಕ್ಕಿಸದೆ ಯಾವುದೇ ಸ್ಥಳದಿಂದ ಯಾವುದೇ ಗಮ್ಯಸ್ಥಾನಕ್ಕೆ ಟಿಕೆಟ್‌ಗಳನ್ನು ಬುಕ್ ಮಾಡಲು ಸಾಧ್ಯವಾಗುತ್ತದೆ. ಉದಾಹರಣೆಗೆ, ಬಂಟ್ವಾಳದಲ್ಲಿರುವವರು ಮಂಗಳೂರಿನಿಂದ ಕಣ್ಣೂರಿಗೆ ಪ್ರಯಾಣಿಸಲು ಈ ಆಪ್‌ ಮೂಲಕ ಟಿಕೆಟ್ ಬುಕ್ ಮಾಡಬಹುದು. ಆದಾಗ್ಯೂ, ಅವರು ನಿಲ್ದಾಣದ ಆವರಣದಲ್ಲಿದ್ದರೆ ಅಥವಾ ರೈಲುಗಳಲ್ಲಿರುವಾಗ ಈ ರೀತಿ ಟಿಕೆಟ್‌ಗಳನ್ನು ಕಾಯ್ದಿರಿಸಲು ಸಾಧ್ಯವಾಗುವುದಿಲ್ಲ. ಅಂದರೆ, ಕನಿಷ್ಠ ಭೌಗೋಳಿಕ ಮಿತಿಯ ನಿಯಮಗಳು ಬದಲಾಗದೆ ಉಳಿದಿದೆ. ನಿಲ್ದಾಣದ ಆವರಣದ ಹೊರಗೆ ಮಾತ್ರ ಟಿಕೆಟ್ ಬುಕಿಂಗ್ ಅನ್ನು ಅನುಮತಿಸುತ್ತದೆ.

ಯುಟಿಎಸ್‌ನಲ್ಲಿ ಗರಿಷ್ಠ ಭೌಗೋಳಿಕ ಮಿತಿಯ ವ್ಯತಿರಿಕ್ತ ಪರಿಣಾಮ

ಯುಟಿಎಸ್ ಆ್ಯಪ್ ಮೂಲಕ ಪೇಪರ್‌ಲೆಸ್ ಟಿಕೆಟ್ ಬುಕಿಂಗ್‌ಗಾಗಿ ಹಿಂದಿನ 20 ಮತ್ತು 50-ಕಿಲೋಮೀಟರ್ ಹೊರಗಿನ ಮಿತಿ ನಿರ್ಬಂಧ ಇತ್ತು. ಈ ಈ ನಿರ್ಧಾರದಿಂದಾಗಿ ಈ ಹೊರಗಿನ ಮಿತಿ ರದ್ದುಗೊಂಡಿದೆ. ಈ ಕ್ರಮವು ಪ್ರಯಾಣಿಕ ಅನುಕೂಲ ಹೆಚ್ಚಿಸುವಲ್ಲಿ, ಅವರ ಟಿಕೆಟ್ ಖರೀದಿ ಪ್ರಕ್ರಿಯೆಯನ್ನು ಸರಳಗೊಳಿಸಿದೆ. ಇದಕ್ಕೂ ಮೊದಲು ಯುಟಿಎಸ್‌ ಆಪ್‌ನಲ್ಲಿ ಪೇಪರ್‌ಲೆಸ್ ಟಿಕೆಟ್‌ಗಳನ್ನು ಕಾಯ್ದಿರಿಸುವುದಕ್ಕಾಗಿ 20 (ಉಪನಗರ ಟಿಕೆಟ್) ಕಿಮೀ ಮತ್ತು 50 (ಉಪನಗರವಲ್ಲದ ಟಿಕೆಟ್) ಕಿಲೋಮೀಟರ್‌ಗಳ ಗರಿಷ್ಠ ಭೌಗೋಳಿಕ ಮಿತಿಯನ್ನು ಹೇರಲಾಗಿತ್ತು. ಈ ನಿರ್ಬಂಧ ಕಾರಣ ಈ ಮಿತಿಗಿಂತ ಹೊರಗೆ ಇರುವ ಪ್ರಯಾಣಿಕರು ಪೇಪರ್‌ಲೆಸ್ ಟಿಕೆಟ್ ಖರೀದಿಸುವುದು ಸಾಧ್ಯವಿರಲಿಲ್ಲ.

ಯುಟಿಎಸ್ ಆ್ಯಪ್ ಡೌನ್‌ಲೋಡ್ ಲಿಂಕ್‌

ರೈಲು ನಿಲ್ದಾಣಗಳಲ್ಲಿ ಕಾಯ್ದಿರಿಸದ ಟಿಕೆಟ್ ಖರೀದಿಗೆ ಪ್ರಯಾಣಿಕರು ಸರದಿ ನಿಲ್ಲುವುದನ್ನು ತಪ್ಪಿಸಲು ಈಗ ಯುಟಿಎಸ್ ಆಪ್‌ ಅನ್ನು ಎಲ್ಲಿದ್ದರೂ ಬಳಸಬಹುದು. ಇದಕ್ಕೆ ಸಂಬಂಧಿಸಿದ ಗರಿಷ್ಠ ಭೌಗೋಳಿಕ ಮಿತಿಯನ್ನು ತೆರವುಗೊಳಿಸಲಾಗಿದೆ. ಈ ಯುಟಿಎಸ್ ಆಪ್ ಅನ್ನು ಡೌನ್‌ಲೋಡ್ ಮಾಡುವುದಕ್ಕೆ ಅಗತ್ಯವಾದ ಲಿಂಕ್‌ಗಳನ್ನು ರೈಲ್ವೆ ಸಚಿವಾಲಯ ಟ್ವೀಟ್ ಮಾಡಿದೆ.

ಯುಟಿಎಸ್ ಆಪ್‌ ಡೌನ್‌ಲೋಡ್ ಲಿಂಕ್‌ ಆಂಡ್ರಾಯ್ಡ್ ಗೂಗಲ್‌ ಪ್ಲೇಸ್ಟೋರ್‌ - https://play.google.com/store/apps/details?id=com.cris.utsmobile&hl=en_IN&gl=US&pli=1

ಯುಟಿಎಸ್ ಆಪ್‌ ಡೌನ್‌ಲೋಡ್ ಲಿಂಕ್‌ ಆಪಲ್‌ - ಐಒಎಸ್‌ -

https://apps.apple.com/in/app/uts/id1357055366

ಯುಟಿಎಸ್‌ ಮೊಬೈಲ್ ಆಪ್‌ - ಗೇಮ್‌ಚೇಂಜರ್‌

"ಯುಟಿಎಸ್ ಮೊಬೈಲ್ ಅಪ್ಲಿಕೇಶನ್ ಪೇಪರ್‌ಲೆಸ್ ಟಿಕೆಟ್ ಖರೀದಿ ಪ್ರಕ್ರಿಯೆಯನ್ನು ಸರಳಗೊಳಿಸುವಲ್ಲ, ಆಧುನೀಕರಿಸುವಲ್ಲಿ ಗೇಮ್-ಚೇಂಜರ್ ಆಗಿ ಹೊರಹೊಮ್ಮಿದೆ. ಪ್ರಯಾಣಿಕರಿಗೆ ಟಿಕೆಟ್‌ಗಳನ್ನು ಖರೀದಿಸಲು ಅನುಕೂಲಕರ ಮತ್ತು ಪರಿಣಾಮಕಾರಿ ಮಾರ್ಗವನ್ನು ನೀಡುತ್ತದೆ. ಭೌತಿಕ ಟಿಕೆಟ್‌ಗಳು ಮತ್ತು ದೀರ್ಘ ಸರದಿ ಸಾಲು ನಿಲ್ಲುವ ಅಗತ್ಯವನ್ನು ತೆಗೆದುಹಾಕುತ್ತದೆ. ಹೊರಗಿನ ಮಿತಿ ನಿರ್ಬಂಧಗಳನ್ನು ಹಿಂತೆಗೆದುಕೊಳ್ಳುವುದರೊಂದಿಗೆ, ಪ್ರಯಾಣಿಕರು ಈಗ ಆನಂದಿಸಬಹುದು. ಕಡಿಮೆ ದೂರದ ಉಪನಗರ ಪ್ರಯಾಣ ಅಥವಾ ದೀರ್ಘಾವಧಿಯ ಉಪನಗರವಲ್ಲದ ಮಾರ್ಗಗಳಿಗಾಗಿ ಅವರ ಪ್ರಯಾಣವನ್ನು ಯೋಜಿಸುವಲ್ಲಿ ಹೆಚ್ಚಿನ ನಮ್ಯತೆ ಮತ್ತು ಸ್ವಾತಂತ್ರ್ಯ, ”ಎಂದು ಹಿರಿಯ ಅಧಿಕಾರಿಯೊಬ್ಬರು ಹೇಳಿದರು.

IPL_Entry_Point