logo
ಕನ್ನಡ ಸುದ್ದಿ  /  ಕರ್ನಾಟಕ  /  Kalaburagi News: ಗ್ರಾಮೀಣ ಭಾಗದಲ್ಲಿ ಕುಡಿಯುವ ನೀರಿನ ಸಮಸ್ಯೆ, ತಾಲೂಕುವಾರು ಸಹಾಯವಾಣಿ ಸ್ಥಾಪನೆ; ನೋಡಲ್ ಅಧಿಕಾರಿಗಳ ನೇಮಕ

Kalaburagi News: ಗ್ರಾಮೀಣ ಭಾಗದಲ್ಲಿ ಕುಡಿಯುವ ನೀರಿನ ಸಮಸ್ಯೆ, ತಾಲೂಕುವಾರು ಸಹಾಯವಾಣಿ ಸ್ಥಾಪನೆ; ನೋಡಲ್ ಅಧಿಕಾರಿಗಳ ನೇಮಕ

HT Kannada Desk HT Kannada

Jun 26, 2023 01:08 PM IST

google News

ಕಲಬುರಗಿ ಜಿಪಂ ಸಿಇಓ ಭಂವಾರ್ ಸಿಂಗ್ ಮೀನಾ

    • Helpline for Drinking Water Problem: ತಾಲೂಕು ಮಟ್ಟದ ಸಹಾಯವಾಣಿಗೆ ಬರುವ ದೂರವಾಣಿ ಕರೆಗಳನ್ನು ಸ್ವೀಕರಿಸಿ, ಸಂಬಂಧಪಟ್ಟ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು, ತಾಲೂಕು ಪಂಚಾಯತ ಇ.ಓ ಮತ್ತು ಪಿ.ಡಿ.ಓ ಗಳಿಗೆ ತಿಳಿಸಿ ಸಮಸ್ಯೆ ಬಗೆಹರಿಸಬೇಕೆಂದು ಜಿಲ್ಲಾ ಪಂಚಾಯತ್ ಸಿ.ಇ.ಓ ಭಂವಾರ್ ಸಿಂಗ್ ಮೀನಾ ಆದೇಶಿಸಿದ್ದಾರೆ.
ಕಲಬುರಗಿ ಜಿಪಂ ಸಿಇಓ ಭಂವಾರ್ ಸಿಂಗ್ ಮೀನಾ
ಕಲಬುರಗಿ ಜಿಪಂ ಸಿಇಓ ಭಂವಾರ್ ಸಿಂಗ್ ಮೀನಾ

ಕಲಬುರಗಿ: ಜಿಲ್ಲೆಯಾದ್ಯಂತ ಪ್ರಸ್ತುತ 2023-24ನೇ ಸಾಲಿನ ಮುಂಗಾರು ವಿಳಂಬದಿಂದ ಗ್ರಾಮೀಣ ಜನ ವಸತಿಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಕಂಡುಬರುತ್ತಿರುವುದರಿಂದ ನೀರಿನ ಸಮಸ್ಯೆಗಳನ್ನು ಪರಿಣಾಮಕಾರಿಯಾಗಿ ನಿರ್ವಹಿಸಲು ಜಿಲ್ಲಾ ಮತ್ತು ತಾಲೂಕು ಮಟ್ಟದಲ್ಲಿ ಸಹಾಯವಾಣಿ ಸ್ಥಾಪಿಸಿ ಅದಕ್ಕೆ ನೋಡಲ್ ಅಧಿಕಾರಿಗಳನ್ನು ನೇಮಿಸಿ ಜಿಲ್ಲಾ ಪಂಚಾಯತ್ ಸಿ.ಇ.ಓ ಭಂವಾರ್ ಸಿಂಗ್ ಮೀನಾ ಆದೇಶಿಸಿದ್ದಾರೆ.

ತಾಲೂಕು ಮಟ್ಟದ ಸಹಾಯ ವಾಣಿಗೆ ಬರುವ ದೂರವಾಣಿ ಕರೆಗಳನ್ನು ಸ್ವೀಕರಿಸಿ, ಸಂಬಂಧಪಟ್ಟ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು, ತಾಲೂಕು ಪಂಚಾಯತ ಇ.ಓ ಮತ್ತು ಪಿ.ಡಿ.ಓ. ಗಳಿಗೆ ತಿಳಿಸಿ ಸಮಸ್ಯೆ ಬಗೆಹರಿಸಬೇಕೆಂದು ಅವರು ನಿರ್ದೇಶನ ನೀಡಿದ್ದಾರೆ.

ಇದಲ್ಲದೆ ಕಾಲಕಾಲಕ್ಕೆ ಗ್ರಾಮ ಪಂಚಾಯತಿಯಲ್ಲಿ ಪೈಪ್‍ಲೈನ್ ದುರಸ್ತಿ, ಕುಡಿಯುವ ನೀರಿನ ಟಾಕಿಗಳು, ಮತ್ತು ಜಲಮೂಲಗಳ ಸ್ವಚ್ಚಗೊಳಿಸುವುದು ಹಾಗೂ ಪ್ರತಿ ದಿನ ಚರಂಡಿಗಳನ್ನು ಸ್ವಚ್ಚಗೊಳಿಸುವಂತೆ ಸಂಬಂಧಪಟ್ಟವರಿಗೆ ತಿಳಿಸಬೇಕು. ಕುಡಿಯುವ ನೀರುಗಳನ್ನು ಪ್ರಯೋಗಾಲಯದಲ್ಲಿ ಪರೀಕ್ಷಿಸಿ ಸರಬರಾಜು ಮಾಡಬೇಕು ಎಂದು ತಾಲೂಕು ಮಟ್ಟದ ನೋಡಲ್ ಅಧಿಕಾರಿಗಳಿಗೆ ಕೆಲಸದ ಜವಾಬ್ದಾರಿ ನೀಡಲಾಗಿದೆ. ತಾಲೂಕು ಮಟ್ಟದಲ್ಲಿ ಸಮಸ್ಯೆ ಬಗೆಹರಿಯದಿದ್ದರೆ ಜಿಲ್ಲಾ ಮಟ್ಟದ ನೋಡಲ್ ಅಧಿಕಾರಿಗಳನ್ನು ಸಾರ್ವಜನಿಕರು ಸಂಪರ್ಕಿಸಬಹುದಾಗಿದೆ ಎಂದು ತಿಳಿಸಿದ್ದಾರೆ.

ತಾಲೂಕು ಮಟ್ಟದಲ್ಲಿ ಸಹಾಯವಾಣಿ ಸಂಖ್ಯೆ ಮತ್ತು ನೋಡಲ್ ಅಧಿಕಾರಿಗಳ ವಿವರ

ಅಫಜಲಪೂರ: ಪಂಚಾಯತ್ ರಾಜ್ ಸಹಾಯಕ ನಿರ್ದೇಶಕ ರಮೇಶ-9611812220 ಮತ್ತು ತಾಲೂಕು ಯೋಜನಾಧಿಕಾರಿ ರೇಣುಕಾ-9606399633.

ಆಳಂದ: ಪಂಚಾಯತ್ ರಾಜ್ ಸಹಾಯಕ ನಿರ್ದೇಶಕ ಸಂತೋಷ-9901335151 ಮತ್ತು ತಾಲೂಕು ಯೋಜನಾಧಿಕಾರಿ ಶರಣಬಸಪ್ಪ-8971411985.

ಚಿಂಚೋಳಿ: ಪಂಚಾಯತ್ ರಾಜ್ ಸಹಾಯಕ ನಿರ್ದೇಶಕ ನಾಗೀಂದ್ರಪ್ಪಾ-9880380830 ಮತ್ತು ತಾಲೂಕು ಯೋಜನಾಧಿಕಾರಿ ಮಲ್ಲಿಕಾರ್ಜುನ-8147485400.

ಚಿತ್ತಾಪೂರ: ಪಂಚಾಯತ್ ರಾಜ್ ಸಹಾಯಕ ನಿರ್ದೇಶಕ ಶ್ರೀಮಂತ-9945812896 ಮತ್ತು ತಾಲೂಕಾ ಯೋಜನಾಧಿಕಾರಿ ಮುಬಾಶಿರ ಅಲಿ 8310063078.

ಜೇವರ್ಗಿ: ಪಂಚಾಯತ್ ರಾಜ್ ಸಹಾಯಕ ನಿರ್ದೇಶಕ ಸೋಮಶೇಖರ-9972130506 ಮತ್ತು ತಾಲೂಕು ಯೋಜನಾಧಿಕಾರಿ ಶ್ರೀಶೈಲ್-9741741986.

ಕಲಬುರಗಿ: ಪಂಚಾಯತ್ ರಾಜ್ ಸಹಾಯಕ ನಿರ್ದೇಶಕ ವಿಶ್ವನಾಥ-8197578488 ಮತ್ತು ತಾಲೂಕು ಯೋಜನಾಧಿಕಾರಿ ಜಯಶ್ರೀ-9535821480.

ಸೇಡಂ: ಪಂಚಾಯತ್ ರಾಜ್ ಸಹಾಯಕ ನಿರ್ದೇಶಕ ಶಂಕರ-7760251677 ಮತ್ತು ತಾಲೂಕು ಯೋಜನಾಧಿಕಾರಿ ರವಿಕುಮಾರ-7829532628.

ಶಹಾಬಾದ: ಪಂಚಾಯತ್ ರಾಜ್ ಸಹಾಯಕ ನಿರ್ದೇಶಕ ನಾಗಚಿತ್ರ-9535230522 ಮತ್ತು ತಾಲೂಕು ಯೋಜನಾಧಿಕಾರಿ ಈರಣ್ಣಾ-9845867939.

ಕಾಳಗಿ: ಪಂಚಾಯತ್ ರಾಜ್ ಸಹಾಯಕ ನಿರ್ದೇಶಕ ಗಂಗಾಧರ-9741479617 ಮತ್ತು ತಾಲೂಕು ಯೋಜನಾಧಿಕಾರಿ ವಿಶ್ವರಾಜ-9972164939.

ಯಡ್ರಾಮಿ: ಪಂಚಾಯತ್ ರಾಜ್ ಸಹಾಯಕ ನಿರ್ದೇಶಕ ಮಲ್ಲಿಕಾರ್ಜುನ-9900209680 ಮತ್ತು ತಾಲೂಕು ಯೋಜನಾಧಿಕಾರಿ ವಿಶ್ವನಾಥ ರೆಡ್ಡಿ-9731262052.

ಕಮಲಾಪೂರ: ಪಂಚಾಯತ್ ರಾಜ್ ಸಹಾಯಕ ನಿರ್ದೇಶಕ ರಾಮಪ್ರಕಾಶ-9740099913.

ಜಿಲ್ಲಾ ಸಹಾಯವಾಣಿ

ಜಿಲ್ಲಾ ಪಂಚಾಯತಿಯ ಪಿಎ ಮತ್ತು ಇಓ ಮಧುಮತಿ-9740217227 ಮತ್ತು ಸಹಾಯಕ ಯೋಜನಾಧಿಕಾರಿ-1 ಚೆನ್ನಪ್ಪ ಆರ್.-8277617666.

ವರದಿ: ಎಸ್‌.ಬಿ.ರೆಡ್ಡಿ, ಕಲಬುರಗಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ