logo
ಕನ್ನಡ ಸುದ್ದಿ  /  ಕರ್ನಾಟಕ  /  Karnataka Naxal Activity: ಕರ್ನಾಟಕದಲ್ಲಿ ಈವರೆಗೆ ನಡೆದ ನಕ್ಸಲ್ ಎನ್‌ಕೌಂಟರ್‌ಗಳು, ಎಷ್ಟು ಮಂದಿ ಪ್ರಾಣ ತೆತ್ತಿದ್ದಾರೆ

Karnataka Naxal Activity: ಕರ್ನಾಟಕದಲ್ಲಿ ಈವರೆಗೆ ನಡೆದ ನಕ್ಸಲ್ ಎನ್‌ಕೌಂಟರ್‌ಗಳು, ಎಷ್ಟು ಮಂದಿ ಪ್ರಾಣ ತೆತ್ತಿದ್ದಾರೆ

Umesha Bhatta P H HT Kannada

Nov 19, 2024 06:15 PM IST

google News

ಕರ್ನಾಟಕದಲ್ಲಿ ನಕ್ಸಲ್‌ ಚಟುವಟಿಕೆ ಹಿಮ್ಮೆಟ್ಟಿಸಲು ಪೊಲೀಸರು ನಡೆಸಿದ ಎನ್‌ಕೌಂಟರ್‌ಗಳಿಗೆ ಹಲವರು ಬಲಿಯಾಗಿದ್ದಾರೆ.

    • ಕರ್ನಾಟಕದಲ್ಲಿ ಎರಡು ದಶಕದ ಅವಧಿಯಲ್ಲಿ ನಕ್ಸಲ್‌ ಚಟುವಟಿಕೆ ಹಿಂಸೆಯ ಮಾರ್ಗ ಹಿಡಿದ ನಂತರ ಹಲವರು ಪೊಲೀಸರ ದಾಳಿಗೆ ಬಲಿಯಾಗಿದ್ದಾರೆ. ಜನರೂ ಜೀವ ಕಳೆದುಕೊಂಡಿದ್ದಾರೆ. ಸೇವಾ ನಿತರ ಪೊಲೀಸರೂ ಕೂಡ. ಈ ಕುರಿತು ಮಾಹಿತಿ ಇಲ್ಲಿದೆ.
ಕರ್ನಾಟಕದಲ್ಲಿ ನಕ್ಸಲ್‌ ಚಟುವಟಿಕೆ ಹಿಮ್ಮೆಟ್ಟಿಸಲು ಪೊಲೀಸರು ನಡೆಸಿದ ಎನ್‌ಕೌಂಟರ್‌ಗಳಿಗೆ ಹಲವರು ಬಲಿಯಾಗಿದ್ದಾರೆ.
ಕರ್ನಾಟಕದಲ್ಲಿ ನಕ್ಸಲ್‌ ಚಟುವಟಿಕೆ ಹಿಮ್ಮೆಟ್ಟಿಸಲು ಪೊಲೀಸರು ನಡೆಸಿದ ಎನ್‌ಕೌಂಟರ್‌ಗಳಿಗೆ ಹಲವರು ಬಲಿಯಾಗಿದ್ದಾರೆ.

ಕರ್ನಾಟಕದಲ್ಲಿ ನಕ್ಸಲ್‌ ಚಟುವಟಿಕೆಗಳಿಗೆ ಎರಡೂವರೆ ದಶಕದ ಇತಿಹಾಸವಿದೆ. ಅದರಲ್ಲೂ ಕಳೆದ ಎರಡು ದಶಕದಿಂದ ಉಡುಪಿ, ಚಿಕ್ಕಮಗಳೂರು ಜಿಲ್ಲೆ ದಟ್ಟಾರಣ್ಯದಲ್ಲಿ ನಕ್ಸಲ್‌ ಚಟುವಟಿಕೆ ಪ್ರಬಲಗೊಂಡು ಈವರೆಗೂ 17 ಮಂದಿ ಪ್ರಾಣ ತೆತ್ತಿದ್ದಾರೆ. ನಕ್ಸಲ್ ಸಂಬಂಧಿ ಚಟುವಟಿಕೆ ಹಾಗೂ ನಕ್ಸಲರು ಮತ್ತು ಪೊಲೀಸರು-ಎಎನ್ಎಫ್ ಮುಖಾಮುಖಿಯಲ್ಲಿ ಒಟ್ಟು 0 29 ಮಂದಿ ಪ್ರಾಣ ಕಳೆದುಕೊಂಡಿದ್ದು, ಇದರಲ್ಲಿ ನಕ್ಸಲರ ಸಂಖ್ಯೆಯೆ ಅಧಿಕ. ಇವರಲ್ಲಿ 17 ಮಂದಿ ನಕ್ಸಲರು, 9 ಮಂದಿ ನಾಗರಿಕರು ಹಾಗೂ ಮೂವರು ಪೊಲೀಸರು ಸೇರಿದ್ದಾರೆ.

ಇದನ್ನೂ ಓದಿರಿ: ನಕ್ಸಲ್‌ ನಾಯಕ ವಿಕ್ರಂಗೌಡ ವಿರುದ್ಧ 61 ಕೇಸ್ ಇತ್ತು; ಸರೆಂಡರ್ ಆಗೋದಕ್ಕೆ ಕೇಳಿದ್ವಿ, ಫೈರ್ ಮಾಡಿದ್ರು: ರೂಪಾ ಐಪಿಎಸ್ ಹೇಳಿಕೆ

ಎನ್‌ಕೌಂಟರ್‌ ಲೆಕ್ಕ

  • 2003 ನವೆಂಬರ್ 17 ಉಡುಪಿ ಜಿಲ್ಲೆ ಕಾರ್ಕಳ ತಾಲ್ಲೂಕಿನ ಈದು ಬಳಿ ನಡೆದ ಮೊದಲ ಎನ್‌ಕೌಂಟರ್‌ನಲ್ಲಿ ರಾಯಚೂರು ಜಿಲ್ಲೆಯ ಹಾಜಿಮಾ ಮತ್ತು ಶಿವಮೊಗ್ಗ ಜಿಲ್ಲೆಯ ಸೊರಬದ ಪಾರ್ವತಿ ಎಂಬಿಬ್ಬರು ಪೊಲೀಸರ ಗುಂಡಿಗೆ ಬಲಿ.
  • 2005ರ ಫೆಬ್ರವರಿ 6ರಂದು ನಕ್ಸಲ್ ಚಳವಳಿಗೆ ನಾಯಕತ್ವ ನೀಡಿದ್ದ ಸಾಕೇತ್ ರಾಜನ್‌ ಎನ್‌ಕೌಂಟರ್‌ಗೆ ಬಲಿ. ಇವರ ಜೊತೆಗೆ ರಕ್ಷಕನಾಗಿದ್ದ ಶಿವಲಿಂಗು ಎಂಬಾತನ ಮೇಲೂ ಪೊಲೀಸರು ಗುಂಡಿಕ್ಕಿದಾಗ ಆತ ಮೃತಪಟ್ಟಿದ್ದ.
  • 2005 ಜೂನ್ 23: ಉಡುಪಿ ಜಿಲ್ಲೆ ಕುಂದಾಪುರ ತಾಲೂಕು ಹಳ್ಳಿಹೊಳೆ ಸಮೀಪದ ದೇವರಬಾಳು ಎಂಬಲ್ಲಿನ ಎನ್ಕೌಂಟರ್ನಲ್ಲಿ ಪೊಲೀಸರ ಗುಂಡಿಗೆ ಬೆಳಗಾವಿಯ ಅಜಿತ್ ಕುಸುಬಿ ಮತ್ತು ಮೂಡಿಗೆರೆಯ ಉಮೇಶ್ ಬಣಕಲ್ ಎಂಬಿಬ್ಬರ ಸಾವು
  • 2006 ಡಿಸೆಂಬರ್ 25- ಚಿಕ್ಕಮಗಳೂರು ಜಿಲ್ಲೆ ಶೃಂಗೇರಿ ಬಳಿಯ ಕಿಗ್ಗದಲ್ಲಿ ನಕ್ಸಲ್ ದಿನಕರ ಎನ್‌ಕೌಂಟರ್‌. ಎಎನ್‌ಎಫ್‌ ರಚನೆಗೊಂಡ ನಂತರದ ದಾಳಿಗೆ ಮೊದಲ ಸಾವು
  • 2007 ಜುಲೈ 10: ಚಿಕ್ಕಮಗಳೂರು ಜಿಲ್ಲೆಕೊಪ್ಪ ತಾಲೂಕಿನ ಗುಡ್ಡೆತೋಟ ಗ್ರಾಪಂ ವ್ಯಾಪ್ತಿಯ ಒಡೆಯರಮಠದಲ್ಲಿ ಎಎನ್‌ಎಫ್‌ನ ಪೊಲೀಸ್ ಎನ್ಕೌಂಟರ್. ನಕ್ಸಲ್ ಯುವಕ ಸಿಂಧನೂರಿನ ಗೌತಮ್, ಕುದುರೆ ಮುಖ ರಾಷ್ಟ್ರೀಯ ಉದ್ಯಾನ ವಿರೋಧಿ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಪರಮೇಶ್ವರ, ಕಾರ್ಮಿಕ ಸುಂದರೇಶ್, ಮನೆಯ ಯಜಮಾನ ರಾಮೇಗೌಡ್ಲು, ಹಾಗೂ ಸ್ಥಳೀಯರಾದ ಕಾವೇರಿ ಬಲಿ.
  • 2008 ನವೆಂಬರ್ 20: ಚಿಕ್ಕಮಗಳೂರು ಜಿಲ್ಲೆಯ ಹೊರನಾಡು ಸಮೀಪ ಮಾವಿನಹೊಲ ಬಳಿ ಎನ್ಕೌಂಟರ್. ನಕ್ಸಲ್‌ ಚಟುವಟಿಕೆಯಲ್ಲಿ ಸಕ್ರಿಯರಾಗಿದ್ದ ಸೊರಬದ ಮನೋಹರ್, ಸಹಚರರಾದ ನವೀನ್, ಅಭಿಲಾಷ್ ಹತ್ಯೆ
  • 2010 ಮಾರ್ಚ್ 1: ಕಾರ್ಕಳ ತಾಲೂಕಿನ ಮುನಿಯಾಲು ಮುಟ್ಲುಪಾಡಿಯ ಮೈರೋಳಿ ಎಂಬಲ್ಲಿ ಪೊಲೀಸರ ಎನ್ಕೌಂಟರ್ ಗೆ ಬೆಳ್ತಂಗಡಿ ತಾಲೂಕು ಕುತ್ಲೂರಿನ ವಸಂತ ಗೌಡ್ಲು ಬಲಿ.
  • 2024 ನವೆಂಬರ್ 18: ಕಾರ್ಕಳ ತಾಲೂಕಿನ ಹೆಬ್ರಿ ಸಮೀಪದ ಕಬ್ಬಿನಾಲೆಯಲ್ಲಿ ಎಎನ್​​ಎಫ್ ಹಾಗೂ ನಕ್ಸಲರ ನಡುವೆ ನಡೆದ ಗುಂಡಿನ ಕಾಳಗದಲ್ಲಿ ನಕ್ಸಲ್ ಮುಖಂಡ ವಿಕ್ರಂ ಗೌಡ ಬಲಿ.

    ಇದನ್ನೂ ಓದಿರಿ: ಕಬ್ಬಿನಾಲೆ ಎನ್‌ಕೌಂಟರ್‌: ಹತ ನಕ್ಸಲ್ ನಾಯಕ ವಿಕ್ರಂ ಗೌಡ ಯಾರು, ಆತ ಹೇಗೆ ನಕ್ಸಲ್ ಚಳವಳಿ ಸೇರಿದ

ನಕ್ಸಲರ ದಾಳಿಗಳು

  • 2005 ಮೇ17 ಕೊಪ್ಪ ತಾಲ್ಲೂಕಿನ ಮೆಣಸಿನ ಹಾಡ್ಯದಲ್ಲಿ ಗಿರಿಜನ ಮುಖಂಡ ಶೇಷಪ್ಪಗೌಡ್ಲು ಬರ್ಬರ ಹತ್ಯೆ
  • 2007 ಜೂನ್ 3: ಶೃಂಗೇರಿ ಕಿಗ್ಗ ಸಮೀಪ ಗುಂಡಘಟ್ಟದಲ್ಲಿ ನಕ್ಸಲರಿಂದ ಅಂಗಡಿ ಮಾಲೀಕ ವೆಂಕಟೇಶ ಹತ್ಯೆ.
  • 2008 ಮೇ 15: ಹೆಬ್ರಿ ಸಮೀಪದ ಸೀತಾನದಿ ಬಳಿ ನಕ್ಸಲರ ಗುಂಡಿಗೆ ಶಿಕ್ಷಕ ಭೋಜ ಶೆಟ್ಟಿ ಹಾಗೂ ಅವರ ಗೆಳೆಯ ಕೃಷಿಕ ಸುರೇಶ್ ಶೆಟ್ಟಿ ಬಲಿ.
  • 2008 ಡಿಸೆಂಬರ್ 7: ಹಳ್ಳಿಹೊಳೆ ಸಮೀಪದ ಕೃಷಿಕ ಜಮೀನ್ದಾರ ಕೇಶವ ಯಡಿಯಾಳರನ್ನು ಪೊಲೀಸರ ಮಾಹಿತಿದಾರನೆಂಬ ಆರೋಪದಲ್ಲಿ ಮನೆಗೆ ನುಗ್ಗಿ ನಕ್ಸಲರು ಹತ್ಯೆಗೈದರು.
  • 2011 ಡಿಸೆಂಬರ್ 28: ತೆಂಗಿನಮಾರುವಿನಿಂದ ಎರಡು ಕಿ.ಮೀ. ದೂರ ದಟ್ಟಾರಣ್ಯದಲ್ಲಿ ಸದಾಶಿವ ಗೌಡ ಎಂಬವರ ಶವ ಕೈಕಾಲು ಕಟ್ಟಿ ಸ್ಥಿತಿಯಲ್ಲಿ ಗೋಳಿಮರದಡಿ ಪತ್ತೆ. ನಕ್ಸಲರ ಬರಹವೂ ಸಮೀಪದಲ್ಲಿ ದೊರಕಿತ್ತು.

    ಇದನ್ನೂ ಓದಿರಿ: ಉಡುಪಿ ಹೆಬ್ರಿಯ ಅರಣ್ಯದಲ್ಲಿ ಎಎನ್‌ಎಫ್ ಗುಂಡಿಗೆ ಬಲಿಯಾದ ನಕ್ಸಲೈಟ್ ವಿಕ್ರಂ ಗೌಡ

ಅಧಿಕಾರಿಗಳ ಸಾವು

  • 2007 ಜುಲೈ 17: ಆಗುಂಬೆ ಸಮೀಪದ ಹುಲ್ಲಾರಬೈಲಿನಲ್ಲಿ ಗುಂಡಿನ ಚಕಮಕಿ, ಎಸ್ಐ ವೆಂಕಟೇಶ ಹತ್ಯೆ.
  • 2008 ನವೆಂಬರ್ 20: ಹೊರನಾಡು ಸಮೀಪ ಮಾವಿನಹೊಲ ಬಳಿ ಎನ್ಕೌಂಟರ್ ವೇಳೆ ಪೇದೆ ಗುರುಪ್ರಸಾದ್ ಸಾವು.
  • 2011 ಅಗಸ್ಟ್ 9: ಬೆಳ್ತಂಗಡಿ ತಾಲೂಕು ಇಂದಬೆಟ್ಟು ಗ್ರಾಪಂ ವ್ಯಾಪ್ತಿಯ ನಾವೂರ ಗ್ರಾಮದ ಮಂಜಲದಲ್ಲಿ ಬೆಳಗಿನ ಜಾವ ನಕ್ಸಲ್ ನಿಗ್ರಹದಳದ ಪೊಲೀಸರ ಗನ್ ಮಿಸ್ ಫೈರ್ ಆಗಿ ಎಎನ್ಎಫ್ ಸಿಬ್ಬಂದಿ ಮಹಾದೇವ ಮಾನೆ ಬಲಿ.

ಶರಣು

  • ಕೊಪ್ಪ ತಾಲೂಕು ಹಾಗಲಗಂಚಿ ಗ್ರಾಮದ ವೆಂಕಟೇಶ್‌ 2010 ಸೆಪ್ಟಂಬರ್‌ 28ರಂದು ಶರಣಾಗಿದ್ದು, 2010 ಅಕ್ಟೋಬರ್‌ 15ರಂದು ಗ್ರೀನ್‌ ಕೆಟಗರಿಯಲ್ಲಿದ್ದ ಕೊಪ್ಪ ತಾಲೂಕು ದೂಬಳದ ಮಲ್ಲಿಕಾ, ಮೇಗೂರು ಗ್ರಾಮದ ಹೊರಲೆ ಜಯ ಹಾಗೂ ಯಡಗುಂದ ಗ್ರಾಮದ ಕೋಮಲ ಶರಣಾಗಿದ್ದಾರೆ.
  • ಕನ್ಯಾಕುಮಾರಿ, ಶಿವು ದಂಪತಿ ಹಾಗೂ ಚೆನ್ನಮ್ಮ ಎಂಬುವವರು 2017ರಲ್ಲಿ ಚಿಕ್ಕಮಗಳೂರು ಪೊಲೀಸರಿಗೆ ಶರಣಾದರು.
  • ಆನಂತರ ಸಿರಿಮನೆ ನಾಗರಾಜು, ಕೃಷ್ಣಮೂರ್ತಿ, ನೂರ್‌ ಶ್ರೀಧರ್‌ ಸಹಿತ ಐವರು ಚಿಕ್ಕಮಗಳೂರಲ್ಲಿ ಶರಣು.
     

 

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ