logo
ಕನ್ನಡ ಸುದ್ದಿ  /  ಕರ್ನಾಟಕ  /  Karnataka Weather Today: ಮೈಸೂರಿನಲ್ಲಿ ಅತಿ ಕಡಿಮೆ ಉಷ್ಣಾಂಶ ದಾಖಲು; ಮುಂದಿನ 48 ಗಂಟೆಗಳಲ್ಲಿ ರಾಜ್ಯದ ಇತರೆಡೆ ಹವಾಮಾನ ಹೇಗಿರಲಿದೆ?

Karnataka Weather Today: ಮೈಸೂರಿನಲ್ಲಿ ಅತಿ ಕಡಿಮೆ ಉಷ್ಣಾಂಶ ದಾಖಲು; ಮುಂದಿನ 48 ಗಂಟೆಗಳಲ್ಲಿ ರಾಜ್ಯದ ಇತರೆಡೆ ಹವಾಮಾನ ಹೇಗಿರಲಿದೆ?

Rakshitha Sowmya HT Kannada

Feb 21, 2024 06:36 AM IST

google News

ಫೆಬ್ರವರಿ 21ರಂದು ಮೈಸೂರಿನಲ್ಲಿ ಅತಿ ಕಡಿಮೆ ಉಷ್ಣಾಂಶ ದಾಖಲು

  • Karnataka Weather Today: ರಾಜ್ಯದಲ್ಲಿ ಬುಧವಾರ ಕೂಡಾ ಒಣಹವೆ ಮುಂದುವರೆದಿದೆ. ಮುಂದಿನ 48 ಗಂಟೆ ಕೂಡಾ ರಾಜ್ಯದಲ್ಲಿ ಇದೇ ವಾತಾವರಣ ಮುಂದುವರೆಯಲಿದೆ. ಫೆಬ್ರವರಿ 21 ರಂದು ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಅತಿ ಕಡಿಮೆ ಉಷ್ಣಾಂಶ ದಾಖಲಾಗಿದೆ. ಇಂದಿನ ಹವಾಮಾನ ಸ್ಥಿತಿಗತಿ ಹೀಗಿದೆ.

ಫೆಬ್ರವರಿ 21ರಂದು ಮೈಸೂರಿನಲ್ಲಿ ಅತಿ ಕಡಿಮೆ ಉಷ್ಣಾಂಶ ದಾಖಲು
ಫೆಬ್ರವರಿ 21ರಂದು ಮೈಸೂರಿನಲ್ಲಿ ಅತಿ ಕಡಿಮೆ ಉಷ್ಣಾಂಶ ದಾಖಲು (PC: Manjunath Kotagunasi)

ಬೆಂಗಳೂರು: ಮಾಘ ಮಾಸ ಮುಗಿದು ಫಾಲ್ಗುಣ ಆರಂಭವಾಗಿದೆ. ವಾತಾವರಣ ದಿನೇ ದಿನೆ ಬದಲಾಗುತ್ತಿದೆ. ಬೆಳಗಿನ ಚಳಿಯ ನಡುವೆ ಜನರಿಗೆ ನಿಧಾನವಾಗಿ ಬೇಸಿಗೆ ಆರಂಭದ ಅನುಭವವಾಗುತ್ತಿದೆ. ಈಗಲೇ ಇಷ್ಟು ಬಿಸಿಲು, ಇನ್ನು ಮಾರ್ಚ್‌ನಿಂದ ಮೇವರೆಗೆ ಇನ್ನೆಷ್ಟು ಬಿಸಿಲು ಇರಲಿದೆಯೋ ಎಂದು ಜನರು ಚರ್ಚಿಸುತ್ತಾ ಕೆಲಸ ಕಾರ್ಯಗಳಲ್ಲಿ ಮಗ್ನರಾಗಿದ್ದಾರೆ. ಈ ನಡುವೆ ಭಾರತೀಯ ಹವಾಮಾನ ಇಲಾಖೆಯ ಮಾಹಿತಿ ಪ್ರಕಾರ ರಾಜ್ಯದ ವಾತಾವರಣ ಹೇಗಿದೆ ನೋಡೋಣ.

ನಿಮ್ಮ ನಗರದ ಹವಾಮಾನ ತಿಳಿಯಲು ಇಲ್ಲಿ ಕ್ಲಿಕ್ ಮಾಡಿ

ಮುಂದುವರೆದ ಒಣಹವೆ

ಹವಾಮಾನ ಇಲಾಖೆಯ ಪ್ರಕಾರ, ಫೆ 20, ಮಂಗಳವಾರ ರಾಜ್ಯಾದ್ಯಂತ ಒಣಹವೆ ಇತ್ತು. ಯಾವುದೇ ಮುಖ್ಯ ಮಳೆಯ ಪ್ರಮಾಣ ವರದಿಯಾಗಿಲ್ಲ. ಕನಿಷ್ಠ ಉಷ್ಣಾಂಶ ಉತ್ತರ ಒಳನಾಡಿನ ಒಂದೆರಡು ಕಡೆಗಳಲ್ಲಿ ಅತ್ಯಂತ ಗಮನಾರ್ಹವಾಗಿ ಏರಿಕೆ ಆಗಿದೆ. ಕರಾವಳಿ ಮತ್ತು ದಕ್ಷಿಣ ಒಳನಾಡಿನಲ್ಲಿ ಉತ್ತರ ಒಳನಾಡಿನ ಬಹುತೇಕ ಕಡೆಗಳಲ್ಲಿ ಹೆಚ್ಚಿನ ಬದಲಾವಣೆ ಇಲ್ಲ. ಉತ್ತರ ಒಳನಾಡಿನ ಒಂದೆರಡು ಕಡೆಗಳಲ್ಲಿ ಗಮನಾರ್ಹವಾಗಿ ಇಳಿಕೆ ಕಂಡಿದೆ. ರಾಜ್ಯದ ಸಮತಟ್ಟಾದ ಪ್ರದೆೇಶಗಳಲ್ಲಿಅತಿ ಕಡಿಮೆ ಕನಿಷ್ಠ ಉಷ್ಣಾಂಶ 13.9 ಡಿಗ್ರಿ ಸೆಲ್ಸಿಯಸ್‌ನಷ್ಟು ಮೈಸೂರಿನಲ್ಲಿ ದಾಖಲಾಗಿದೆ.

21ನೇ ಫೆಬ್ರವರಿ ರಾಜ್ಯದಲ್ಲಿ ಮಳೆಯ ಮುನ್ಸೂಚನೆ

ಮುಂದಿನ 24 ಗಂಟೆಗಳು ರಾಜ್ಯಾದ್ಯಂತ ಒಣಹವೆ ಇರುವ ಸಾಧ್ಯತೆ ಇದೆ. ಗುರುವಾರ ಕೂಡಾ ಇದೇ ವಾತಾವರಣ ಮುಂದುವರೆಯುವ ಸಾಧ್ಯತೆ ಇದೆ. ಗುಡುಗು ಮುನ್ನೆಚರಿಕೆ ಇಲ್ಲ, ಮಳೆಯ ಮುನ್ಸೂಚನೆ ಹಾಗೂ ಮೀನುಗಾರರಿಗೂ ಯಾವುದೇ ಮುನ್ಸೂಚನೆ ನೀಡಿಲ್ಲ. ರಾಜ್ಯಾದ್ಯಂತ ಒಂದೆರಡು ಕಡೆಗಳಲ್ಲಿ ಗರಿಷ್ಠ ತಾಪಮಾನವು ಸಾಮಾನ್ಯಕ್ಕಿಂತ 2 ಡಿಗ್ರಿ ಸೆಲ್ಲಿಯಸ್ ಹೆಚ್ಚಾಗಿರುವ ಸಾಧ್ಯತೆ ಇದೆ. ಕರಾವಳಿ ಮತ್ತು ಉತ್ತರ ಒಳನಾಡಿನ ಒಂದೆರಡು ಕಡೆಗಳಲ್ಲಿ ಕನಿಷ್ಠ ತಾಪಮಾನವು ಸಾಮಾನ್ಯಕ್ಕಿಂತ 2-3 ಡಿಗ್ರಿ ಸೆಲ್ಸಿಯಸ್‌ ಹೆಚ್ಚಾಗಿರುವ ಸಾಧ್ಯತೆ ಇದೆ.

ಫೆ 21, ಬೆಂಗಳೂರು ಮತ್ತು ಸುತ್ತಮುತ್ತಲಿನ ಪ್ರದೇಶಗಳ ಮುನ್ಸೂಚನೆ

ಮುಂದಿನ 24 ಗಂಟೆಗಳು ಬೆಂಗಳೂರು ನಗರದಲ್ಲಿ ಮುಖ್ಯವಾಗಿ ನಿರ್ಮಲ ಆಕಾಶವಿರುತ್ತದೆ. ಕೆಲವು ಕಡೆಗಳಲ್ಲಿ ಬೆಳಗಿನ ಜಾವ ಮಂಜು ಮುಸುಕುವ ಬಹಳಷ್ಟು ಸಾಧ್ಯತೆಗಳಿರುತ್ತದೆ. ಮೇಲ್ಮೈ ಮಾರುತಗಳು ಕೆಲವೊಮ್ಮೆ ಪ್ರಬಲವಾಗಿರುವ ಸಾಧ್ಯತೆಯಿದೆ. ಗರಿಷ್ಠ ಉಷ್ಣಾಂಶ 33ಮತ್ತು ಕನಿಷ್ಠ ಉಷ್ಣಾಂಶ 19 ಡಿಗ್ರಿ ಸೆಲ್ಲಿಯಸ್ ಇರುವ ಬಹಳಷ್ಟು ಸಾಧ್ಯತೆಗಳಿವೆ. ಮುಂದಿನ 48 ಗಂಟೆಗಳು ಕೂಡಾ ಇದೇ ವಾತಾವರಣ ಮುಂದುವರೆಯುವ ಸಾಧ್ಯತೆ ಇದೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ