ಧೂಳೆಬ್ಬಿಸುತ್ತಿದೆ ಶ್ರೀನಿವಾಸಪುರ ಚಿಂತಾಮಣಿ 3 ಕಿಮೀ ಡೆಮು ರೈಲು ಸಂಚಾರ; ಪ್ರಯಾಣಿಕ ಪ್ರಯಾಸದ ವಿಡಿಯೋ ಇಲ್ಲಿದೆ ನೋಡಿ
ಕನ್ನಡ ಸುದ್ದಿ  /  ಕರ್ನಾಟಕ  /  ಧೂಳೆಬ್ಬಿಸುತ್ತಿದೆ ಶ್ರೀನಿವಾಸಪುರ ಚಿಂತಾಮಣಿ 3 ಕಿಮೀ ಡೆಮು ರೈಲು ಸಂಚಾರ; ಪ್ರಯಾಣಿಕ ಪ್ರಯಾಸದ ವಿಡಿಯೋ ಇಲ್ಲಿದೆ ನೋಡಿ

ಧೂಳೆಬ್ಬಿಸುತ್ತಿದೆ ಶ್ರೀನಿವಾಸಪುರ ಚಿಂತಾಮಣಿ 3 ಕಿಮೀ ಡೆಮು ರೈಲು ಸಂಚಾರ; ಪ್ರಯಾಣಿಕ ಪ್ರಯಾಸದ ವಿಡಿಯೋ ಇಲ್ಲಿದೆ ನೋಡಿ

ಶ್ರೀನಿವಾಸಪುರ ಚಿಂತಾಮಣಿ ನಡುವೆ 3 ಕಿಮೀ ಡೆಮು ರೈಲು ಸಂಚಾರ ಧೂಳೆಬ್ಬಿಸುತ್ತಿದೆ. ಉಸಿರಾಟಕ್ಕೆ ಪರದಾಡುತ್ತ, ಕಣ್ತೆರೆಯಲಾಗದೆ ಪ್ರಯಾಣಿಕರು ಬಹಳ ಪ್ರಯಾಸದಿಂದ ಈ ಭಾಗದಲ್ಲಿ ಪ್ರಯಾಣ ಮಾಡಬೇಕಾಗಿದೆ. ಪ್ರಯಾಣಿಕ ಪ್ರಯಾಸದ ವಿಡಿಯೋ ಇಲ್ಲಿದೆ ನೋಡಿ.

ಶ್ರೀನಿವಾಸಪುರ ಚಿಂತಾಮಣಿ 3 ಕಿಮೀ ಡೆಮು ರೈಲು ಸಂಚಾರ ಧೂಳೆಬ್ಬಿಸುತ್ತಿದೆ. ಇದರಿಂದಾಗಿ ಉಂಟಾಗಿರುವ ಪ್ರಯಾಣಿಕ ಪ್ರಯಾಸದ ವಿಡಿಯೋ ಇಲ್ಲಿದೆ ನೋಡಿ.
ಶ್ರೀನಿವಾಸಪುರ ಚಿಂತಾಮಣಿ 3 ಕಿಮೀ ಡೆಮು ರೈಲು ಸಂಚಾರ ಧೂಳೆಬ್ಬಿಸುತ್ತಿದೆ. ಇದರಿಂದಾಗಿ ಉಂಟಾಗಿರುವ ಪ್ರಯಾಣಿಕ ಪ್ರಯಾಸದ ವಿಡಿಯೋ ಇಲ್ಲಿದೆ ನೋಡಿ. (kumar yadav)

ಬೆಂಗಳೂರು: ಶ್ರೀನಿವಾಸಪುರ ಚಿಂತಾಮಣಿ ನಡುವೆ 3 ಕಿಮೀ ಡೆಮು ರೈಲು ಪ್ರಯಾಣ ಆ ಭಾಗದ ಜನರಿಗೆ ನರಕಯಾತನೆ. ಈ ಪ್ರದೇಶದಲ್ಲಿ ರೈಲು ಸಂಚಾರದ ವೇಳೆ ಭಾರಿ ಪ್ರಮಾಣದ ಧೂಳೇಳುವ ಕಾರಣ, ಉಸಿರಾಟಕ್ಕೆ ಪರದಾಡುತ್ತ, ಕಣ್ತೆರೆಯಲಾಗದೆ ಪ್ರಯಾಣಿಕರು ಬಹಳ ಪ್ರಯಾಸದಿಂದ ಪ್ರಯಾಣ ಮಾಡಬೇಕಾದ ಪರಿಸ್ಥಿತಿ ಇದೆ.

ಬಹಳ ಸಮಯದಿಂದ ಈ ತೊಂದರೆ ಅನುಭವಿಸುತ್ತಿರುವ ಇದನ್ನು ಭಾರತೀಯ ರೈಲ್ವೆಯ ಗಮನಕ್ಕೆ ತರುವ ಪ್ರಯತ್ನ ನಡೆದಿದೆ. ಪ್ರಯಾಣಿಕ ಕುಮಾರ್ ಯಾದವ್ ಇದರ ವಿಡಿಯೋ ಮಾಡಿ ಭಾರತೀಯ ರೈಲ್ವೆ, ಸಂಸದ ತೇಜಸ್ವಿ ಸೂರ್ಯ ಅವರ ಗಮನಸೆಳೆಯುವ ಪ್ರಯತ್ನ ಮಾಡಿದ್ದಾರೆ.

ಒಂದು ನಿಮಿಷ 18 ಸೆಕೆಂಡ್‌ನ ಸಣ್ಣ ವಿಡಿಯೋ ಚಿತ್ರಣ ನೀಡಿರುವ ಕುಮಾರ್ ಯಾದವ್, ಸಮಸ್ಯೆಯನ್ನು ನೇರವಾಗಿ ಪ್ರಸ್ತುತಿ ಮಾಡುವ ಪ್ರಯತ್ನ ನಡೆಸಿದ್ದಾರೆ. ಫೆ.17ರಂದು ಅವರು ಟ್ವೀಟ್ ಮಾಡಿದ್ದಾರೆ.

ಶ್ರೀನಿವಾಸಪುರ ಚಿಂತಾಮಣಿ ನಡುವೆ 3 ಕಿಮೀ ಡೆಮು ರೈಲು ಪ್ರಯಾಣದ ವಿಡಿಯೋ ಹೀಗಿದೆ ನೋಡಿ

ಅದರಲ್ಲಿ ಅವರು ಸ್ಪಷ್ಟವಾಗಿ ಸಮಸ್ಯೆಯ ಚಿತ್ರಣ ನೀಡಿದ್ದಾರೆ. ತಮ್ಮ ಹೆಸರು, ಪರಿಚಯವನ್ನು ಮಾಡಿಕೊಂಡ ಕುಮಾರ್ ಯಾದವ್‌, ಶ್ರೀನಿವಾಸಪುರ - ಚಿಂತಾಮಣಿ ನಡುವಿನ ಪ್ರಯಾಣದ ವೇಳೆ ಭಾರಿ ಪ್ರಮಾಣದ ಧೂಳು ರೈಲಿನೊಳಗೆ ಸೇರಿ ಪ್ರಯಾಣಿಕರಿಗೆ ತೊಂದರೆ ಆಗುತ್ತಿರುವುದನ್ನು ತೋರಿಸಿದ್ದಾರೆ.

ರೈಲಿನ ಸೀಟುಗಳ ಮೇಲೆ ಕುಳಿತ ಧೂಳು, ಉಸಿರಾಡಲು ಒದ್ದಾಡುತ್ತಿರುವ ಪ್ರಯಾಣಿಕರು, ಕಣ್ತೆರೆಯಲಾಗದೆ ಮುಖ ಮುಚ್ಚಿಕೊಂಡವರು ಹೀಗೆ ಎಲ್ಲ ಚಿತ್ರಣವೂ ವಿಡಿಯೋದಲ್ಲಿದೆ. ಈ ಮಾರ್ಗದಲ್ಲಿ ಸಂಚರಿಸುವ ಪ್ರಯಾಣಿಕರು ಎದುರಿಸಬಹುದಾದ ಆರೋಗ್ಯ ಸಮಸ್ಯೆಗಳ ಬಗ್ಗೆಯೂ ಅವರು ಗಮನ ಸೆಳೆದಿದ್ದಾರೆ.

ಕುಮಾರ್ ಯಾದವ್ ಹೇಳಿರುವುದು ಇಷ್ಟು -

“ಪ್ರತಿ ವಾರ, ನಾನು ಈ ಮಾರ್ಗದಲ್ಲಿ ಪ್ರಯಾಣಿಸುತ್ತೇನೆ. ರೈಲು ಹೋಗುವಾಗ ಏಳುವ ಧೂಳಿನಿಂದಾಗಿ ಪ್ರಯಾಣಿಕರು ಸಾಕಷ್ಟು ತೊಂದರೆ ಅನುಭವಿಸುತ್ತಿದ್ದಾರೆ. ಎರಡು ಪಾಯಿಂಟ್‌ಗಳಲ್ಲಿ ಒಟ್ಟು 6 ಕಿಮೀ ದೂರ ಪ್ರಯಾಣಿಕರು ಚಲಿಸುವ ರೈಲಿನೊಳಗೆ ಧೂಳು ತುಂಬಿಕೊಂಡಿರುತ್ತದೆ. ಈ ಧೂಳನ್ನು ಸಹಿಸಿಕೊಳ್ಳಬೇಕಾಗುತ್ತದೆ. ನಾನು ಸಹಾಯವಾಣಿಗೆ ಡಯಲ್ ಮಾಡಿ ರೈಲ್ವೆ ಅಧಿಕಾರಿಗಳಿಗೆ ದೂರು ನೀಡಿದ್ದೇನೆ. ಸಾಮಾನ್ಯ ಪ್ರಯಾಣಿಕರಿಗೆ ಆರಾಮದಾಯಕ ಪ್ರಯಾಣವನ್ನು ಮಾಡಲು ಅವರು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುತ್ತಾರೆ ಎಂದು ನಾನು ಭಾವಿಸುತ್ತೇನೆ”.

ಸಾಮಾನ್ಯನಿಗೆ ಸ್ಪಂದಿಸದ ಭಾರತೀಯ ರೈಲ್ವೆ

ರೈಲ್ ಮದದ್‌, ರೈಲ್ವೆ ಸಚಿವಾಲಯ ಮತ್ತು ಸಂಸದ ತೇಜಸ್ವಿ ಸೂರ್ಯ ಅವರನ್ನು ಈ ಟ್ವೀಟ್‌ನಲ್ಲಿ ಟ್ಯಾಗ್ ಮಾಡಲಾಗಿದೆ. ಆದರೆ ಕುಮಾರ್ ಯಾದವ್ ಅವರ ಟ್ವೀಟ್‌ಗೆ ಈ ಮೂರೂ ಹ್ಯಾಂಡಲ್‌ನಿಂದ ಪ್ರತಿಸ್ಪಂದನೆ ಸಿಕ್ಕಿಲ್ಲ.

ಆದಾಗ್ಯೂ, ಈ ವಿಷಯ ಗಮನದಲ್ಲಿದೆ. ಥಂಪಿಂಗ್ ಯಂತ್ರ ಬಳಸಿಕೊಂಡು ಧೂಳು ಮೇಲೇಳದಂತೆ ತಡೆಯಲು ಅಗತ್ಯ ಕ್ರಮ ತೆಗೆದುಕೊಂಡಿದ್ದಾರೆ ಎಂದು ನೈಋತ್ಯ ರೈಲ್ವೆ ಅಧಿಕಾರಿಗಳು ತಿಳಿಸಿದ್ದಾಗಿ ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.

ಸಿಟಿಜನ್ಸ್ ಫಾರ್ ಸಿಟಿಜೆನ್ಸ್ (ಸಿ4ಸಿ) ಎಂಬ ವೇದಿಕೆಯು ಶ್ರೀನಿವಾಸಪುರ - ಚಿಕ್ಕಬಳ್ಳಾಪುರ ಮಾರ್ಗದಲ್ಲಿ ಡೆಮು ರೈಲು ಪ್ರಯಾಣದ ವೇಳೆ ಯಾತ್ರಿಕರು ಅನುಭವಿಸುವ ಈ ಸಮಸ್ಯೆಯನ್ನು ಭಾರತೀಯ ರೈಲ್ವೆ ಅಧಿಕಾರಿಗಳ ಗಮನಕ್ಕೆ ತಂದಿದೆ. ಈ ರೈಲುಗಳಲ್ಲಿ ಪ್ರಯಾಣಿಕರಿಗೆ ಅಗತ್ಯ ಮೂಲಸೌಕರ್ಯವನ್ನೇ ಒದಗಿಸಿಲ್ಲ. ಸ್ವಚ್ಛತೆಯ ಕಡೆಗೂ ಗಮನಹರಿಸಿಲ್ಲ. ಇದಲ್ಲದೆ, ಮೆಮು ರೈಲು ಸೇವೆ ಕೋಲಾರಕ್ಕೆ ವಿಸ್ತರಿಸುವುದಕ್ಕೂ ಮೀನ ಮೇಷ ಎಣಿಸುತ್ತಿದ್ದಾರೆ ಎಂದು ಟೀಕಿಸಿದ್ದಾರೆ.

(This copy first appeared in Hindustan Times Kannada website. To read more like this please logon to kannada.hindustantimes.com)

Whats_app_banner