ಕನ್ನಡ ಸುದ್ದಿ  /  Karnataka  /  Vijayapura News Vijayapur Person Took Away Bar Owners Dog From Bar In Drunken Mood He Put Behind Dogs Cage Smu

Vijayapur News: ನಾಯಿ ಕದ್ದಿದ್ದಕ್ಕೆ ಪಂಜರದಲ್ಲಿಯೇ ಇಟ್ಟ ಮಾಲೀಕ, ವಿಜಯಪುರದಲ್ಲಿ ಅಮಾನವೀಯ ಘಟನೆ

ವಿಜಯಪುರದಲ್ಲಿ ಕುಡಿದ ನಿಶೆಯಲ್ಲಿ ಬಾರ್‌ನ ಮಾಲೀಕರ ನಾಯಿ ಕದ್ದು ಹೋಗಿದ್ದ ವ್ಯಕ್ತಿಯನ್ನು ಕರೆ ತಂದು ನಾಯಿ ಇರಿಸುವ ಪಂಜರದಲ್ಲಿ ಇಟ್ಟ ಅಮಾನವೀಯ ಘಟನೆ ನಡೆದಿದೆ.ವರದಿ: ಸಮೀವುಲ್ಲಾ ಉಸ್ತಾದ್‌, ವಿಜಯಪುರ

ನಾಯಿಯ ಪಂಜರದಲ್ಲಿ ವ್ಯಕ್ತಿ ಕೂಡಿ ಹಾಕಲಾಗಿದೆ.
ನಾಯಿಯ ಪಂಜರದಲ್ಲಿ ವ್ಯಕ್ತಿ ಕೂಡಿ ಹಾಕಲಾಗಿದೆ.

ವಿಜಯಪುರ: ಆತ ಕುಡಿದ ಮತ್ತಿನಲ್ಲಿ ಬಾರ್‌ನ ಮಾಲೀಕನ ನಾಯಿಯನ್ನೇ ಕದ್ದ ವ್ಯಕ್ತಿಯೊಬ್ಬನಿಗೆ ನಾಯಿಯನ್ನೇ ಇರಿಸುವ ಪಂಜರದಲ್ಲಿಯೇ ಕೂಡಿ ಹಾಕುವ ಮೂಲಕ ಶಿಕ್ಷಿಸಿರುವ ಘಟನೆ ವಿಜಯಪುರ ನಗರದಲ್ಲಿ ನಡೆದಿದೆ. ಮೂರು ಗಂಟೆಗೂ ಹೆಚ್ಚು ಕಾಲ ಪಂಜರದಲ್ಲಿಯೇ ಕಳೆದ ಆತನ ಸ್ಥಿತಿಯನ್ನು ಕಂಡು ಹಲವರು ಮರುಗಿದರು. ಮತ್ತೆ ಕೆಲವರು ಆಕ್ಷೇಪ ವ್ಯಕ್ತಪಡಿಸಿದ್ದರಿಂದ ಆತನನ್ನು ಬಿಟ್ಟು ಕಳುಹಿಸಲಾಗಿದೆ. ನಾಗರೀಕ ಸಮಾಜದಲ್ಲಿ ಈ ರೀತಿ ನಡೆದುಕೊಂಡಿರುವುದಕ್ಕೆ ತೀವ್ರ ಆಕ್ಷೇಪ ವ್ಯಕ್ತವಾಗಿದೆ.

ವಿಜಯಪುರ ನಗರದ ಬಬಲೇಶ್ವರ ರಸ್ತೆಯಲ್ಲಿರುವ ಸಾಯಿ ಪ್ರಭಾತ ಬಾರ್ ಎದುರು ನಡೆದಿರುವ ಘಟನೆಯಿದು. ಬಾರ್ ಮಾಲೀಕನ ಲ್ಯಾಬ್ರಡಾರ್ ನಾಯಿಯನ್ನು ವಿಜಯಪುರ ನಗರದ ನಿವಾಸಿ ಸೋಮು ಎಂಬಾತ ಬಾರ್ ಗೆ ಬಂದಾಗ ಕುಡಿದ ಮತ್ತಿನಲ್ಲಿ ಕದ್ದು ಪರಾರಿಯಾಗಿದ್ದ.

ಕುಡುಕನನ್ನು ಬಾರ್ನ ಸಿಬ್ಬಂದಿ ಪತ್ತೆ ಹಚ್ಚಿ ನಾಯಿಯೊಂದಿಗೆ ಕರೆ ತಂದಿದ್ದರು. ಕೊನೆಗೆ ನಾಯಿ ಕದ್ದ ಶಿಕ್ಷೆ ಅನುಭವಿಸುವಂತೆ ಸಿಬ್ಬಂದಿ ತಾಕೀತು ಮಾಡಿದ್ದರು.

ಇನ್ನು ಕಳ್ಳತನವಾದ್ದರಿಂದ ಬಾರ್ ಮಾಲೀಕನ ಕುಟುಂಬದವರು ಹಾಗೂ ಬಾರ್ ಸಿಬ್ಬಂದಿಗಳನ್ನು ನಾಯಿ ಕಳ್ಳನನ್ನು ಪತ್ತೆ ಹಚ್ಚಿ, ನಾಯಿ ಸಹಿತ ಹಿಡಿದುಕೊಂಡು ಬಂದು ಅದೇ ನಾಯಿಯ ಬೋನ್ ನಲ್ಲಿ ಗಂಟೆಗಟ್ಟಲೆ ಕೂಡಿಹಾಕಿ ಶಿಕ್ಷಿಸಿದ್ದರು.

ಇನ್ನು ಬಾರ್‌ಗೆ ಬಂದಿದ್ದ ಬೇರೆ ಗ್ರಾಹಕರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಬಳಿಕ ಗ್ರಾಹಕರ ಸಲಹೆ ಮೇರೆಗೆ ಪಂಜರಲ್ಲಿದ್ದ ಸೋಮುನನ್ನು ಹೊರಗೆ ಬಿಟ್ಟಿದ್ದಾರೆ.

ಬಾರ್‌ ಎದುರು ಇರುವ ನಾಯಿ ಪಂಜರದಲ್ಲಿ ವ್ಯಕ್ತಿಯಿದ್ದ. ಅತನನ್ನು ಕೇಳಿದರೆ ಏನೂ ಹೇಳಲಿಲ್ಲ. ಹಲವರು ಬಂದು ನೋಡಿಕೊಂಡಿ ಹೋಗುತ್ತಿದ್ದರು. ಆನಂತರ ಕಳ್ಳತನ ಮಾಡಿದ್ದಕ್ಕೆ ಇಂತಹ ಶಿಕ್ಷೆ ನೀಡಿದ್ಧಾರೆ ಎನ್ನುವುದು ತಿಳಿಯಿತು. ಕೊನೆಗೆ ಅಲ್ಲಿದ್ದವರು ಮಾತನಾಡಿ ಆತನನ್ನು ಬಿಡಿಸಿದರು ಎಂದು ಪ್ರತ್ಯಕ್ಷ ದರ್ಶಿಗಳು ಮಾಹಿತಿ ನೀಡಿದ್ದಾರೆ.

ಕಳ್ಳತನ ಮಾಡಿದರೇ ಇಲ್ಲವೇ ತಪ್ಪು ಮಾಡಿದರೆ ಪೊಲೀಸರಿಗೆ ದೂರು ನೀಡಲಿ. ಆತನನ್ನು ಕರೆಯಿಸಿ ಪ್ರಶ್ನಿಸಲಿ. ಅದನ್ನು ಬಿಟ್ಟು ನಾಯಿಯ ರೀತಿಯಲ್ಲೇ ಪಂಜರಲ್ಲಿ ಇರಿಸಿದ್ದು ಅಮಾನವೀಯ. ಮನುಷ್ಯ ನಾಯಿಗಿಂತ ಕಡೆ ಎನ್ನುವ ರೀತಿಯಲ್ಲಿ ನಡೆದುಕೊಂಡಿರುವುದನ್ನು ಸಮಾಜ ಒಪ್ಪುವುದಿಲ್ಲ. ಮಾನವ ಹಕ್ಕುಗಳ ಉಲ್ಲಂಘನೆಯಾಗಿದ್ದು, ತಪ್ಪಿತಸ್ಥರ ಮೇಲೆ ಕ್ರಮ ಜರುಗಿಸಲಿ ಎಂದು ವಿಜಯಪುರ ನಾಗರೀಕರು ಆಗ್ರಹಿಸಿದ್ದಾರೆ.

(ವರದಿ: ಸಮೀವುಲ್ಲಾ ಉಸ್ತಾದ್‌, ವಿಜಯಪುರ)

IPL_Entry_Point

ವಿಭಾಗ